ಬಂಟ್ವಾಳ: ಹೊಂಡಗಳು ತುಂಬಿದ ರಾ.ಹೆ.ಯಲ್ಲಿ ಸಂಚಾರ ಸರ್ಕಸ್!
Team Udayavani, Jun 30, 2018, 2:35 AM IST
ಬಂಟ್ವಾಳ: ಭಾರೀ ಮಳೆಯಿಂದ ಮಂಗಳೂರು -ಬೆಂಗಳೂರು ರಾ.ಹೆ. ಚಿಂದಿ ಎದ್ದು ಹೋಗಿದೆ. ಹೊಂಡಗಳನ್ನು ತಪ್ಪಿಸಿ ವಾಹನ ಚಲಾಯಿಸಲು ಸಾಧ್ಯವೇ ಇಲ್ಲದಂತಹ ಪರಿಸ್ಥಿತಿ ನಿರ್ಮಾಣ ಆಗಿದೆ. ಫರಂಗಿಪೇಟೆಯಿಂದ ಆರಂಭಿಸಿ ತುಂಬೆ, ಶಾಂತಿಅಂಗಡಿ, ಬಿ.ಸಿ. ರೋಡ್, ಪಾಣೆಮಂಗಳೂರು, ಮೆಲ್ಕಾರ್, ಕಲ್ಲಡ್ಕ, ಮಾಣಿ ತನಕ ಹೆದ್ದಾರಿಯಲ್ಲಿ ಬೃಹತ್ ಹೊಂಡಗಳು ಸೃಷ್ಟಿಯಾಗಿದ್ದು, ನಡೆದು ಹೋಗುವುದೂ ಕಷ್ಟ ಸಾಧ್ಯವಾಗಿದೆ. ಬಿ.ಸಿ. ರೋಡ್ ಫ್ಲೈ ಓವರ್ ಅಡಿಯ ಸರ್ವಿಸ್ ರಸ್ತೆಯಲ್ಲಿ ಹಳ್ಳವೇ ಆಗಿದೆ.
ಹೊಂಡಕ್ಕೆ ಬಿದ್ದ ಮೊಬೈಲ್!
ಮೆಲ್ಕಾರ್ ಸಂಚಾರ ಠಾಣೆಯ ಎದುರು ಆಗಿರುವ ಬೃಹತ್ ಹೊಂಡಕ್ಕೆ ಎರಡು ದಿನಗಳ ಹಿಂದೆ ರಾತ್ರಿ ರಿಕ್ಷಾ ಇಳಿದ ಸಂದರ್ಭ ಪ್ರಯಾಣಿಕರ ಕಿಸೆಯಿಂದ ಮೊಬೈಲ್ ಹೊಂಡಕ್ಕೆ ಹಾರಿ ಬಿದ್ದಿತ್ತು. ಮಳೆಯಿಂದಾಗಿ ವಿದ್ಯುತ್ ಇಲ್ಲದಿದ್ದು, ಹುಡುಕಿದರೂ ಮೊಬೈಲ್ ಸಿಕ್ಕಿರಲಿಲ್ಲ. ಅನಂತರ ಠಾಣೆಯ ಜೀಪ್ ನ ಬೆಳಕು ಹಾಯಿಸಿ ಹುಡುಕಿದಾಗ ಹತ್ತಿಪ್ಪತ್ತು ನಿಮಿಷಗಳಲ್ಲಿ ಪ್ರಯತ್ನ ಯಶಸ್ವಿಯಾಯಿತು.
ಮನವಿಗೆ ಸ್ಪಂದನವಿಲ್ಲ
ಸಾರ್ವಜನಿಕರು, ವಾಹನ ಚಾಲಕರು, ಸಂಘಟನೆಗಳು ಇಲ್ಲಿನ ಹೊಂಡಗಳನ್ನು ಮುಚ್ಚುವಂತೆ ಮಾಡಿದ ಮನವಿಗೆ ಸಂಬಂಧಪಟ್ಟ ಇಲಾಖೆಯಿಂದ ಸ್ಪಂದನವಿಲ್ಲ. ಕೆಲವರು ಸ್ವಯಂ ಪ್ರೇರಿತವಾಗಿ ಕಲ್ಲು ಮಣ್ಣು ತುಂಬಿಸಿದರೂ ಅದು ಕೆಲವೇ ಗಂಟೆಗಳಲ್ಲಿ ಕೆಸರು ನೀರಾಗಿ ಹರಿದು ಬಿಡುತ್ತಿದೆ.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
MUST WATCH
ದೈವ ನರ್ತಕರಂತೆ ಗುಳಿಗ ದೈವದ ವೇಷ ಭೂಷಣ ಧರಿಸಿ ಕೋಲ ಕಟ್ಟಿದ್ದ ಅನ್ಯ ಸಮಾಜದ ಯುವಕ
ಹಕ್ಕಿಗಳಿಗಾಗಿ ಕಲಾತ್ಮಕ ವಸ್ತುಗಳನ್ನು ತಯಾರಿಸುತ್ತಿರುವ ಪಕ್ಷಿ ಪ್ರೇಮಿ
ಮಂಗಳೂರಿನ ನಿಟ್ಟೆ ವಿಶ್ವವಿದ್ಯಾನಿಲಯದ ತಜ್ಞರ ಅಧ್ಯಯನದಿಂದ ಬಹಿರಂಗ
ಈ ಹೋಟೆಲ್ ಗೆ ಪೂರಿ, ಬನ್ಸ್, ಕಡುಬು ತಿನ್ನಲು ದೂರದೂರುಗಳಿಂದಲೂ ಜನ ಬರುತ್ತಾರೆ
ಹರೀಶ್ ಪೂಂಜ ಪ್ರಚೋದನಾಕಾರಿ ಹೇಳಿಕೆ ವಿರುದ್ಧ ಪ್ರಾಣಿ ಪ್ರಿಯರ ಆಕ್ರೋಶ
ಹೊಸ ಸೇರ್ಪಡೆ
Kundapura: ಕಾರು ಢಿಕ್ಕಿ; ಸ್ಕೂಟರ್ ಸವಾರನಿಗೆ ಗಾಯ
Jammu and Kashmir; ಉಗ್ರವಾದ ಪರಿಸರ ವ್ಯವಸ್ಥೆ ಬಹುತೇಕ ಕೊನೆಗೊಂಡಿದೆ: ಶಾ
Bhadravathi:ಬಾಯ್ಲರ್ ಸ್ಫೋ*ಟದಿಂದ ರೈಸ್ಮಿಲ್ ಕುಸಿತ:7 ಮಂದಿಗೆ ಗಾಯ
Sringeri; ಅಸ್ಸಾಂ ಕಾರ್ಮಿಕನಿಂದ ಅಪ್ರಾಪ್ತ ಬಾಲಕಿ ಮೇಲೆ ಲೈಂಗಿ*ಕ ದೌರ್ಜನ್ಯ
BJP vs Congress; ಸಂಸತ್ತಿನಲ್ಲಿ ಕೋಲಾಹಲ: ಪೊಲೀಸರಿಗೆ ದೂರು,ಕಾಂಗ್ರೆಸ್ ಪ್ರತಿದೂರು
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.