18 ವರ್ಷಗಳಿಂದ ಡಾಮರು ಕಾಣದ ಪಾಂಡವರಕಲ್ಲು ರಸ್ತೆ
Team Udayavani, Jun 26, 2018, 2:45 AM IST
ಪುಂಜಾಲಕಟ್ಟೆ: ಬಂಟ್ವಾಳ- ಬೆಳ್ತಂಗಡಿ ತಾಲೂಕುಗಳ ಎರಡು ಗ್ರಾಮಗಳನ್ನು ಸಂಪರ್ಕಿಸುವ ಪಾಂಡವರಕಲ್ಲು- ಬೆರ್ಕಳ ಗ್ರಾಮೀಣ ಸಂಪರ್ಕ ರಸ್ತೆ ಸಂಪೂರ್ಣ ಹದಗೆಟ್ಟಿದೆ. ಬಂಟ್ವಾಳ ತಾಲೂಕಿನ ಬಡಗಕಜೆಕಾರು ಮತ್ತು ಬೆಳ್ತಂಗಡಿ ತಾಲೂಕಿನ ಕುಕ್ಕಳ ಗ್ರಾಮವನ್ನು ಸಂಪರ್ಕಿಸುವ ಈ ರಸ್ತೆ ಸುಮಾರು 4 ಕಿ.ಮೀ. ಉದ್ದವಿದ್ದು, ನೀರಾರಿಯಿಂದ ಬೆರ್ಕಳವನ್ನು ಸೇರುತ್ತದೆ. ಇದಕ್ಕೆ ಸಂಪೂರ್ಣ ಡಾಮರು ಕಾಮಗಾರಿಯಾಗಿ ಸುಮಾರು 18 ವರ್ಷಗಳು ಕಳೆದಿವೆ ಎಂದು ಸಾರ್ವಜನಿಕರು ಹೇಳುತ್ತಿದ್ದಾರೆ. ಈ ರಸ್ತೆ ಜನ ಹಾಗೂ ವಾಹನ ಸಂಚಾರಕ್ಕೆ ಅಯೋಗ್ಯವಾಗಿದ್ದು, ಪರಸ್ಪರ ಸಂಪರ್ಕ ಶೋಚನೀಯವಾಗಿದೆ.
ಕಾಂಕ್ರೀಟ್ ಸೂಕ್ತ
18 ವರ್ಷಗಳ ಹಿಂದೆ ಕೆ.ಎ. ಸತೀಶ್ಚಂದ್ರ ಬಂಟ್ವಾಳ ತಾಲೂಕು ಪಂಚಾಯತ್ ಅಧ್ಯಕ್ಷರಾಗಿದ್ದಾಗ ಈ ರಸ್ತೆ ಡಾಮರು ಕಂಡಿತ್ತು. ಕಳೆದ ಬಾರಿ ನೀರಾರಿಯಿಂದ ಮಿತ್ತೂಟ್ಟುವರೆಗೆ ಸ್ವಲ್ಪ ತೇಪೆ ಕಾರ್ಯ ನಡೆದಿತ್ತು. ನಾಲ್ಕು ವರ್ಷಗಳ ಹಿಂದೆ ಈ ರಸ್ತೆ ಅಭಿವೃದ್ಧಿಗಾಗಿ ವಿಸ್ತರಣೆ ಕಾಮಗಾರಿಗಾಗಿ ರಸ್ತೆ ಬದಿಯ ಮರಗಳನ್ನು ತೆಗೆಯಲಾಗಿತ್ತು. ಆದರೆ ರಸ್ತೆ ಅಭಿವೃದ್ಧಿಯಾಗಿಲ್ಲ, ಇದೀಗ ಕಲ್ಲಿನ ಕೋರೆಗಳ ಘನ ವಾಹನಗಳ ಸಂಚಾರ, ಮಳೆ ನೀರಿನ ಕಾರಣದಿಂದ ಡಾಮರು ಕಿತ್ತು ಹೋಗಿ ರಸ್ತೆ ಹೊಂಡ- ಗುಂಡಿಗಳಿಂದ ತುಂಬಿದೆ. ರಸ್ತೆಗೆ ಪೂರ್ಣವಾಗಿ ಕಾಂಕ್ರೀಟ್ ಅಳವಡಿಸಿದರೆ ಮಾತ್ರ ಮುಂದೆ ಸಂಚಾರಕ್ಕೆ ಅನುಕೂಲವಾಗಬಹುದು ಎನ್ನುವುದು ಸಾರ್ವಜನಿಕರ ಅಭಿಪ್ರಾಯ.
ಹತ್ತಿರದ ದಾರಿ
ಈ ರಸ್ತೆಯಲ್ಲಿ ದಿನ ನಿತ್ಯ ವಿದ್ಯಾರ್ಥಿಗಳು, ಸಾರ್ವಜನಿಕರು ಪ್ರಯಾಣಿಸುತ್ತಿದ್ದು, ಕೆಸರು, ಹೊಂಡಗಳಿಂದಾಗಿ ರಿಕ್ಷಾದವರೂ ಸಂಚರಿಸಲು ಹಿಂದೇಟು ಹಾಕುತ್ತಿದ್ದಾರೆ. ಕಟ್ಟದಪಡ್ಪು ಕಡೆಯಿಂದ ಮಡಂತ್ಯಾರಿಗೆ, ಕಕ್ಯಪದವಿಗೆ ಇದು ಹತ್ತಿರದ ದಾರಿಯಾಗಿದ್ದು, ಸರಿಪಡಿಸಿದಲ್ಲಿ ಬಹಳ ಅನುಕೂಲವಾಗುತ್ತದೆ ಎಂದು ಗ್ರಾಮಸ್ಥರು ಅಭಿಪ್ರಾಯಿಸಿದ್ದಾರೆ.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
MUST WATCH
ಹೊಸ ಸೇರ್ಪಡೆ
Review Meeting: ಉನ್ನತ ಶಿಕ್ಷಣಕ್ಕೆ ಬೋಧಕರ ಕೊರತೆ: ಸಿಎಂ ಸಿದ್ದರಾಮಯ್ಯ ಗರಂ
ನಕ್ಸಲರನ್ನು ಅಮಿತ್ ಶಾ ಸ್ವಾಗತಿಸಿದಾಗ ಏಕೆ ಬೆಚ್ಚಿ ಬಿದ್ದಿಲ್ಲ?: ಸಿಎಂ ತಿರುಗೇಟು
Naxal Package: “ಮೊದಲೇ ಪ್ಯಾಕೇಜ್ ನೀಡಿದ್ದರೆ ವಿಕ್ರಂಗೌಡ ಪ್ರಾಣ ಉಳಿಯುತ್ತಿತ್ತು’: ಸಹೋದರ
Belagavi: ಜೀವಂತ ವ್ಯಕ್ತಿ ಹೆಸರಿನಲ್ಲಿ ಮರಣ ಪ್ರಮಾಣ ಪತ್ರ ನೀಡಿದ ಅಧಿಕಾರಿಗಳು!
Udupi: ಗೀತಾರ್ಥ ಚಿಂತನೆ-150: ತಣ್ತೀನಿಶ್ಚಯ ಬಳಿಕವೇ ಧ್ಯಾನ
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.