ರಸ್ತೆ ಸುರಕ್ಷೆ ಜಾಗೃತಿ ಕಾರ್ಯಕ್ರಮ
Team Udayavani, Nov 23, 2017, 10:56 AM IST
ಸುರತ್ಕಲ್ : ಶೆಲ್ ಎಂಆರ್‌ಪಿಎಲ್ ಸಂಸ್ಥೆಯ ವತಿಯಿಂದ ರಸ್ತೆ ಸುರಕ್ಷೆ ಜಾಗೃತಿ ಕಾರ್ಯಕ್ರಮವು ಇತ್ತೀಚೆಗೆ ಸುರತ್ಕಲ್ ವಿದ್ಯಾದಾಯಿನೀ ವಜ್ರಮಹೋತ್ಸವ ಸಭಾಂಗಣದಲ್ಲಿ ಜರಗಿತು. ಸುರತ್ಕಲ್ ಪರಿಸರದ 25 ಶಾಲೆಗಳ ಮಕ್ಕಳಿಗಾಗಿ ಚಿತ್ರ ಬಿಡಿಸುವ ಸ್ಪರ್ಧೆ ಹಾಗೂ ಚಿತ್ರ ಶಿಬಿರದಲ್ಲಿ 150 ಮಕ್ಕಳು ಭಾಗವಹಿಸಿದರು.
ಮಂಗಳೂರು ನಗರ ಉತ್ತರ ಸಂಚಾರ ಠಾಣೆಯ ಇನ್ ಸ್ಪೆಕ್ಟರ್ ಮಂಜುನಾಥ್ ಮಕ್ಕಳಿಗೆ ರಸ್ತೆ ಸುರಕ್ಷೆ ನಿಯಮಗಳು ಮತ್ತು ಅಂಡರ್ ಪಾಸ್ ಅನ್ನು ಉಪಯೋಗಿಸುವಂತೆ ಮಾರ್ಗದರ್ಶನ ನೀಡಿದರು.
ಸಂಸ್ಥೆಯ ಪಿ. ರಾಮಚಂದ್ರ ಮೂರ್ತಿ, ಶ್ರೀನಿವಾಸ ಕುಳಾಯಿ, ಶಿವ ಕೋಟೇಶ್ವರ ರಾವ್, ಶರತ್ ಕುಮಾರ್, ಶಾಲೆಯ ಕುಸುಮಾ, ಶ್ರೀಕಾಂತ್ ಚಿಪ್ಳೂಣ್ಕರ್, ಜಯಶ್ರೀ, ನ್ಯಾಯವಾದಿ ರಾಘವೇಂದ್ರ ಎಚ್. ವಿ., ವಿಧಾನ ಪರಿಷತ್ ಮಾಜಿ ಸದಸ್ಯರಾದ ಕೆ. ಬಾಲಕೃಷ್ಣ ಭಟ್, ಎಂಆರ್‌ಪಿಎಲ್‌ನ ಚಕ್ರವರ್ತಿ ಕೆ., ಅರುಳ್ ರಾಜ್ ಮತ್ತು ಸಂಪನ್ಮೂಲ ವ್ಯಕ್ತಿಗಳಾಗಿ ಮನೋರಂಜಿನಿ, ಸುಹಾಸ್ ಹಾಗೂ ಉಡುಪಿಯ ಬಿ. ಸುಬ್ರಾಯ ಶಾಸ್ತ್ರಿಯವರು ಸಹಕರಿಸಿದರು. ಶ್ರೀನಿವಾಸ ಕುಳಾಯಿ ಕಾರ್ಯಕ್ರಮ ನಿರೂಪಿಸಿದರು.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
MUST WATCH
ಹೊಸ ಸೇರ್ಪಡೆ
Vijayapura: ಕರ್ನಾಟಕ ಸಾವಿನ ಮನೆಯಾಗಿದೆ: ಸರ್ಕಾರದ ವಿರುದ್ಧ ಸಿ.ಟಿ.ರವಿ ವಾಗ್ದಾಳಿ
Viral: ಇದು ಇರುವೆಗಳ ಎಂಜಿನಿಯರಿಂಗ್ ಕೌಶಲ್ಯ! ನೀರು ದಾಟಲು ಇರುವೆಗಳ ಸೇತುವೆ ನಿರ್ಮಾಣ
Indian Cricket: ಕ್ರಿಕೆಟ್ ಜೀವನಕ್ಕೆ ಗುಡ್ ಬೈ ಹೇಳಿದ ಆರ್‌ಸಿಬಿ ಮಾಜಿ ಆಟಗಾರ
Nature: ಶ್ರೀಮಂತನಾದರೂ, ಬಡವನಾದರೂ ಪ್ರಕೃತಿಗೆ ಅವಲಂಬಿಯೇ ಅಲ್ಲವೇ?
Sandalwood: ‘ಕೋರ’ ಚಿತ್ರದ ಟ್ರೇಲರ್ ಬಂತು
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.