ರಸ್ತೆ ಸುರಕ್ಷತೆ: ಸಮಗ್ರ ನಿಗಾ ಅಗತ್ಯ
Team Udayavani, Aug 23, 2021, 3:20 AM IST
ಹೆಸರಿಗೆ ತಕ್ಕಂತೆ ಸ್ಮಾರ್ಟ್ ಸಿಟಿಯಾಗಬೇಕಾದರೆ ಅದು ಸಮಗ್ರವಾಗಿ ಅಭಿವೃದ್ಧಿಯಾಗಬೇಕು. ಎಲ್ಲ ವಲಯಗಳಲ್ಲಿನ ಸುಸ್ಥಿರ ಬೆಳವಣಿಗೆಯತ್ತ ಗಮನ ನೀಡಬೇಕಾಗಿದ್ದು, ಈ ಕುರಿತು ಸ್ಥಳೀಯಾಡಳಿತ ಹೆಚ್ಚಿನ ಗಮನ ನೀಡಬೇಕಾಗಿರುತ್ತದೆ. ಮಂಗಳೂರು ನಗರದಲ್ಲಿನ ರಸ್ತೆ ಸುರಕ್ಷತೆಯೂ ಇದರಲ್ಲಿ ಒಳಗೊಂಡಿರುತ್ತದೆ. ಸುರಕ್ಷಿತ ಮತ್ತು ವ್ಯವಸ್ಥಿತ ರಸ್ತೆಗಳಿಂದಾಗಿ ನಗರದ ಅಂದವೂ ಹೆಚ್ಚುತ್ತದೆ.
ಆದರೆ ಮಂಗಳೂರು ನಗರದಲ್ಲಿ ವಾಹನ ಸವಾರರ ಸುರಕ್ಷತೆಗೆ ಸಂಬಂಧಿಸಿ ಹಲವಾರು ಪ್ರಶ್ನೆಗಳು ಎದ್ದಿವೆ. ಹೆಚ್ಚಿನ ಕಡೆ ರಸ್ತೆಗೆ ಮಾತ್ರ ಕಾಂಕ್ರೀಟ್ ಹಾಕಲಾಗಿದೆಯಾದರೂ ಇತರ ಅಡೆ-ತಡೆಗಳ ಕುರಿತು ಗಮನ ಹರಿಸಲಾಗಿಲ್ಲ.
ನಗರದಲ್ಲಿ ರಸ್ತೆಗಳ ಬದಿಗಳಲ್ಲಿ ಶಿಥಿಲಗೊಂಡು ಬೀಳುವ ಸ್ಥಿತಿಯಲ್ಲಿರುವ ಮರಗಳು, ಕೊಂಬೆಗಳು ಫುಟ್‌ಪಾತ್‌ಗಳ ಕಾಮಗಾರಿ, ಒಳಚರಂಡಿ ಕಾಮಗಾರಿಗಳಿಂದ ಸೃಷ್ಟಿಯಾಗಿರುವ ಅಡೆತಡೆಗಳು, ಅಸುರಕ್ಷತೆ ಸ್ಥಿತಿಯಲ್ಲಿರುವ ವಿದ್ಯುತ್ ಕಂಬಗಳು, ವಿದ್ಯುತ್ ತಂತಿಗಳು, ಶಿಥಿಲ ಕಟ್ಟಡಗಳು ರಸ್ತೆ ಸುರಕ್ಷತೆಗೆ ಸವಾಲುಗಳಾಗಿ ಪರಿಣಮಿಸಿವೆ. ಇವುಗಳ ಬಗ್ಗೆ ಕಾಲಕಾಲಕ್ಕೆ ಪರಿಶೀಲನೆ ನಡೆಸಿ ಮುಂಜಾಗ್ರತಾ ಕ್ರಮಗಳನ್ನು ಕೈಗೊಂಡರೆ ಸಂಭಾವ್ಯ ಅನಾಹುತಗಳನ್ನು ಬಹುತೇಕ ನಿವಾರಿಸಬಹುದಾಗಿದೆ
ಇತ್ತೀಚೆಗೆ ಕದ್ರಿ ಮಲ್ಲಿಕಟ್ಟೆ ವೃತ್ತದಲ್ಲಿ ಹಳೆಯ ತೆಂಗಿನಮರವೊಂದು ಉರುಳಿ ಸಂಚರಿಸುತ್ತಿದ್ದ ಸಿಟಿಬಸ್‌ನ ಮೇಲೆ ಬಿದ್ದಿದೆ. ಬಸ್‌ನ ಹಿಂಭಾಗಕ್ಕೆ ಬಿದ್ದ ಪರಿಣಾಮ ಪ್ರಯಾಣಿಕರು ಅಪಾಯದಿಂದ ಪಾರಾಗಿದ್ದಾರೆ. ಈ ವೃತ್ತ ಸದಾ ಜನ ಹಾಗೂ ವಾಹನ ದಟ್ಟಣೆಯಿಂದ ಕೂಡಿದೆ. ಒಂದು ತಿಂಗಳ ಹಿಂದೆಯಷ್ಟೇ ಇದೇ ರೀತಿ ತೆಂಗಿನ ಮರವೊಂದು ಬೊಂದೇಲ್ ಸಮೀಪ ವಾಹನದಟ್ಟಣೆಯ ರಸ್ತೆ ಮೇಲೆ ಉರುಳಿಬಿದ್ದಿತ್ತು. ಘಟನೆ ನಡೆಯುವ ಕೆಲವೇ ಕ್ಷಣಗಳ ಮೊದಲು ದ್ವಿಚಕ್ರವಾಹನ ಹಾಗೂ ಟೆಂಪೊವೊಂದು ಇಲ್ಲಿಯೇ ಹಾದು ಹೋಗಿತ್ತು. ಇಂತಹ ಅನೇಕ ಘಟನೆಗಳು ಆಗಾಗ ಸಂಭವಿಸುತ್ತಿರುತ್ತವೆ.
ಅಪಾಯದ ಸ್ಥಿತಿಯಲ್ಲಿರುವ, ರಸ್ತೆಗಳಿಗೆ ವಾಲಿಕೊಂಡಿರುವ ಹಳೆಯ ಮರಗಳನ್ನು ಗುರುತಿಸಿ ಅವುಗಳ ಮೇಲೆ ಗಮನವಿಡುವುದು ಅಗತ್ಯ. ಈ ನಿಟ್ಟಿನಲ್ಲಿ ಮಹಾನಗರ ಪಾಲಿಕೆ, ಅರಣ್ಯ ಇಲಾಖೆ ಜಂಟಿಯಾಗಿ ಸಮೀಕ್ಷೆ ನಡೆಸುವುದು ಉತ್ತಮ. ತೀರಾ ಅಪಾಯಕಾರಿ ಸ್ಥಿತಿಯಲ್ಲಿದ್ದರೆ ಸಾರ್ವಜನಿಕ ಸುರಕ್ಷತೆಯ ದೃಷ್ಟಿಯಿಂದ ತೆರವುಗೊಳಿಸುವುದು ಅಗತ್ಯ. ಇದಲ್ಲದೆ ರಸ್ತೆಗಳ ಬದಿಯಲ್ಲಿರುವ ಖಾಸಗಿ ಜಾಗಗಳಲ್ಲೂ ರಸ್ತೆಗೆ ವಾಲಿಕೊಂಡು ಅಪಾಯಕಾರಿ ಸ್ಥಿತಿಯಲ್ಲಿರುವ ಅನೇಕ ಮರಗಳು, ತೆಂಗಿನ ಮರಗಳು ಇವೆ. ಇವುಗಳ ಬಗ್ಗೆ ಖಾಸಗಿಯವರು ಕ್ರಮಕ್ಕೆ ಮುಂದಾಗದಿದ್ದರೆ ಮಹಾನಗರ ಪಾಲಿಕೆ ಖಾಸಗಿ ಜಾಗಗಳ ಮಾಲಕರ ಜತೆ ಚರ್ಚೆ ನಡೆಸಿ ಅವಶ್ಯ ಕ್ರಮಗಳನ್ನು ಕೈಗೊಳ್ಳುವುದು ಅಗತ್ಯ. ಇದೇ ರೀತಿ ವಿದ್ಯುತ್ ತಂತಿಗಳನ್ನು ಅಳವಡಿಸುವಾಗ ಆದಷ್ಟು ಮರಗಳನ್ನು ತಪ್ಪಿಸಿಕೊಂಡು ಸಾಗುವ ನಿಟ್ಟಿನಲ್ಲಿ ಗಮನವಿರಿಸುವುದು ಅವಶ್ಯ.
ಅರ್ಧದಲ್ಲಿ ನಿಂತ ಫುಟ್‌ಪಾತ್, ಚರಂಡಿ ಕಾಮಗಾರಿಗಳಲ್ಲಿ ಗುಂಡಿಗಳು ತೆರೆದ ಸ್ಥಿತಿಯಲ್ಲೇ ಬಿಟ್ಟ ಹೋಗುವ ನಿದರ್ಶನಗಳಿವೆ. ಇದಲ್ಲದೆ ಕೆಲವು ಕಡೆ ವಿದ್ಯುತ್‌ಕಂಬಗಳು ಅಪಾಯಕಾರಿ ಸ್ಥಿತಿಯಲ್ಲಿವೆ. ಇವುಗಳ ಬಗ್ಗೆ ಸಮೀಕ್ಷೆ ನಡೆಸಿ ಸೂಕ್ತ ಕ್ರಮಗಳು ಅವಶ್ಯ.
-ಸಂ.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
MUST WATCH
ದೈವ ನರ್ತಕರಂತೆ ಗುಳಿಗ ದೈವದ ವೇಷ ಭೂಷಣ ಧರಿಸಿ ಕೋಲ ಕಟ್ಟಿದ್ದ ಅನ್ಯ ಸಮಾಜದ ಯುವಕ
ಹಕ್ಕಿಗಳಿಗಾಗಿ ಕಲಾತ್ಮಕ ವಸ್ತುಗಳನ್ನು ತಯಾರಿಸುತ್ತಿರುವ ಪಕ್ಷಿ ಪ್ರೇಮಿ
ಮಂಗಳೂರಿನ ನಿಟ್ಟೆ ವಿಶ್ವವಿದ್ಯಾನಿಲಯದ ತಜ್ಞರ ಅಧ್ಯಯನದಿಂದ ಬಹಿರಂಗ
ಈ ಹೋಟೆಲ್ ಗೆ ಪೂರಿ, ಬನ್ಸ್, ಕಡುಬು ತಿನ್ನಲು ದೂರದೂರುಗಳಿಂದಲೂ ಜನ ಬರುತ್ತಾರೆ
ಹರೀಶ್ ಪೂಂಜ ಪ್ರಚೋದನಾಕಾರಿ ಹೇಳಿಕೆ ವಿರುದ್ಧ ಪ್ರಾಣಿ ಪ್ರಿಯರ ಆಕ್ರೋಶ
ಹೊಸ ಸೇರ್ಪಡೆ
ಪತ್ನಿಗಾಗಿ ಕೆಲಸದಿಂದ ನಿವೃತ್ತಿ ಪಡೆದ ಪತಿ; ಬೀಳ್ಕೊಡುಗೆ ಕಾರ್ಯಕ್ರಮದಲ್ಲೇ ಪತ್ನಿ ಮೃತ್ಯು
Manipal: ಹಿರಿಯ ವೈದ್ಯೆ ಡಾ. ಆಶಾ ಭಟ್ ನಿಧನ
Banahatti: ತಾಂತ್ರಿಕ ಸೌಲಭ್ಯಗಳನ್ನು ನೀಡುವ ನಿಟ್ಟಿನಲ್ಲಿ ಬದ್ಧಳಾಗಿದ್ದೇನೆ: ಉಮಾಶ್ರೀ
Road Mishap; ದ್ವಿಚಕ್ರ ವಾಹನ-ಲಾರಿ ನಡುವೆ ಅಪಘಾತ: ದಂಪತಿ ಸಾವು
ಕಾಲ್ತುಳಿತ ಪ್ರಕರಣ: ಅಲ್ಲು, ʼಪುಷ್ಪ-2ʼ ತಂಡದಿಂದ ರೇವತಿ ಕುಟುಂಬಕ್ಕೆ 2 ಕೋಟಿ ರೂ. ಪರಿಹಾರ
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.