![Gun-Fire](https://www.udayavani.com/wp-content/uploads/2025/02/Gun-Fire-415x249.jpg)
![Gun-Fire](https://www.udayavani.com/wp-content/uploads/2025/02/Gun-Fire-415x249.jpg)
Team Udayavani, Aug 28, 2022, 8:30 AM IST
ಬಂಟ್ವಾಳ: ಮಂಗಳೂರಿ ನಿಂದ ಚೆನ್ನೈಗೆ ಮೀನು ಸಾಗಾಟದ ಉದ್ಯಮ ನಡೆಸುತ್ತಿದ್ದ ಬಿ.ಸಿ. ರೋಡಿನ ತಲಪಾಡಿಯ ವ್ಯಕ್ತಿಯೊಬ್ಬರು ತಮಿಳು ನಾಡಿನ ಅಂಬೂರ್‌ನಲ್ಲಿ ಸಂಭವಿಸಿದ ಲಾರಿ ಅಪಘಾತದಲ್ಲಿ ಮೃತಪಟ್ಟ ಘಟನೆ ಶುಕ್ರವಾರ ತಡರಾತ್ರಿ ಸಂಭವಿಸಿದೆ.
ತಲಪಾಡಿ ನಿವಾಸಿ ಮುಹಮ್ಮದ್ ಇರ್ಷಾದ್ (37) ಮೃತರು. ಆ. 26ರ ಮಧ್ಯಾಹ್ನ ಮಂಗಳೂರು ದಕ್ಕೆಯಿಂದ ಲಾರಿಯಲ್ಲಿ ಮೀನು ತುಂಬಿಸಿ ಹೊರಟಿದ್ದು, ರಾತ್ರಿ 12.15ರ ವೇಳೆಗೆ ಅಪಘಾತ ಸಂಭವಿಸಿದೆ. ಅಂಬೂರ್ ಪ್ರದೇಶದಲ್ಲಿ ಲಾರಿಗಳ ಮಧ್ಯೆ ಢಿಕ್ಕಿ ಸಂಭವಿಸಿದೆ ಎನ್ನಲಾಗಿದೆ. ಮೃತ ಇರ್ಷಾದ್ ಅವರು ಲಾರಿಯಲ್ಲಿ ನಿದ್ದೆ ಮಾಡುತ್ತಿದ್ದು, ಬಿ.ಸಿ. ರೋಡು ಪಲ್ಲಮಜಲು ನಿವಾಸಿ ಅಬ್ದುಲ್ ಅಝೀಝ್ ಅವರು ಲಾರಿ ಚಲಾಯಿಸುತ್ತಿದ್ದರು.
ಘಟನೆಯಲ್ಲಿ ಅಬ್ದುಲ್ ಅಝೀಝ್ ಅವರು ಸಣ್ಣ ಪುಟ್ಟ ಗಾಯಗಳೊಂದಿಗೆ ಪಾರಾಗಿದ್ದಾರೆ.
ಘಟನೆಯಲ್ಲಿ ಗಂಭೀರ ಗಾಯಗೊಂಡ ಇರ್ಷಾದ್ ಸ್ಥಳ ದಲ್ಲೇ ಮೃತಪಟ್ಟಿದ್ದಾರೆ. ಅವರು ತಾಯಿ, ಪತ್ನಿ, ಪುತ್ರ ಹಾಗೂ ಪುತ್ರಿಯನ್ನು ಅಗಲಿದ್ದಾರೆ.
ಹಲವು ವರ್ಷಗಳ ಕಾಲ ವಿದೇಶದಲ್ಲಿ ಉದ್ಯೋಗದಲ್ಲಿದ್ದ ಇರ್ಷಾದ್ ಕೊರೊನಾ ಲಾಕ್‌ಡೌನ್ ಬಳಿಕ ಊರಿನಲ್ಲೇ ಬಾಕಿಯಾಗಿದ್ದು, ಅವರು ಸ್ವಲ್ಪ ಸಮಯದ ಹಿಂದೆಯಷ್ಟೇ ಲಾರಿಯನ್ನು ಖರೀದಿಸಿ ಮೀನು ಸಾಗಾಟದ ವ್ಯಾಪಾರ ಆರಂಭಿಸಿದ್ದರು ಎಂದು ಅವರ ಆಪ್ತರು ತಿಳಿಸಿದ್ದಾರೆ.
Mandya: ನಾಗಮಂಗಲದಲ್ಲಿ ಆಕಸ್ಮಿಕ ಫೈರಿಂಗ್: 3 ವರ್ಷದ ಮಗು ಮೃತ್ಯು!
Kaup: ಸ್ಕೂಟಿ, ಕಾರಿಗೆ ಬಸ್ ಢಿಕ್ಕಿ; ಸವಾರನಿಗೆ ಗಾಯ
Thirthahalli: ಸಾಲ ಕಟ್ಟದ್ದಕ್ಕೆ ಕಿವಿಯೋಲೆ ಕಿತ್ತ ಬ್ಯಾಂಕ್ ಸಿಬ್ಬಂದಿ!
Padubidri: ಕಬ್ಬಿಣದ ತುಂಡು ಹೆಕ್ಕಿದ ಬಾಲಕರಿಗೆ ರೈಲ್ವೇ ಗ್ಯಾಂಗ್‌ಮನ್ ಹಲ್ಲೆ; ದೂರು
Restriction: ನಿಷೇಧವಿದ್ದರೂ ಗೂಡ್ಸ್ ವಾಹನಗಳಲ್ಲಿ ಜನರು ಬಿಳಿಗಿರಿ ರಂಗನ ಬೆಟ್ಟಕ್ಕೆ ಪಯಣ!
You seem to have an Ad Blocker on.
To continue reading, please turn it off or whitelist Udayavani.