ಊರ್ವ ದರೋಡೆ ಪ್ರಕರಣ: ನಾಲ್ವರು ಆರೋಪಿಗಳ ಬಂಧನ
Team Udayavani, Oct 5, 2021, 4:21 PM IST
ಮಂಗಳೂರು: ನಗರದ ಮಣ್ಣಗುಡ್ಡೆಯ ಆರ್ಶೀವಾದ್ ಪೆಟ್ರೋಲ್ ಬಂಕ್ ನ ಮ್ಯಾನೇಜರ್ ಗೆ ಬ್ಯಾಟ್ ನಿಂದ ಹಲ್ಲೆ ಮಾಡಿ, ಹಣ ದೋಚಿದ ಪ್ರಕರಣಕ್ಕೆ ಸಂಬಂಧಿಸಿದಂತೆ ನಾಲ್ವರು ಆರೋಪಿಗಳನ್ನು ಸೆರೆಹಿಡಿಯಲಾಗಿದೆ.
ಪೆಟ್ರೋಲ್ ಬಂಕ್ ನ ಮ್ಯಾನೇಜರ್ ಬೋಜಪ್ಪನವರು ಕಲೆಕ್ಷನ್ ಆದ ಹಣ ಕಟ್ಟಲು ಬ್ಯಾಂಕಿಗೆ ಹೋಗುತ್ತಿದ್ದ ವೇಳೆ ಅದೇ ದಾರಿಯಲ್ಲಿ ಸಂಚು ಹಾಕಿ ಕಾಯುತ್ತಿದ್ದ ಅಪರಿಚಿತರು ಬೋಜಪ್ಪ ಅವರ ಮೇಲೆ ಬ್ಯಾಟಿನಿಂದ ಹಲ್ಲೆ ಮಾಡಿ, 4 ಲಕ್ಷದ 20 ಸಾವಿರ ನಗದನ್ನು ಕಸಿದುಕೊಂಡು ಸ್ಕೂಟರ್ ನಲ್ಲಿ ಪರಾರಿಯಾಗುತ್ತಾರೆ. ಈ ಸಂಬಂಧ ಊರ್ವ ಠಾಣೆಯಲ್ಲಿ ಪ್ರಕರಣ ದಾಖಲಾಗಿರುತ್ತದೆ.
ಈ ಪ್ರಕರಣದ ಆರೋಪಿಗಳನ್ನು ಪತ್ತೆ ಹಚ್ಚಲು ವಿಶೇಷ ತಂಡವನ್ನು ಪೊಲೀಸ್ ಆಯುಕ್ತರು ರಚಿಸುತ್ತಾರೆ. ಆರೋಪಿಗಳ ಜಾಡನ್ನು ಹತ್ತಿದ ಪೊಲೀಸರು, ಬೋಜಪ್ಪನವರ ಪೆಟ್ರೋಲ್ ಪಂಪ್ ನಲ್ಲೇ ಕೆಲಸ ಮಾಡುತ್ತಿದ್ದ ಶ್ಯಾಮ್ ಶಂಕರ್ ನನ್ನು ವಶಕ್ಕೆ ಪಡೆದು ವಿಚಾರಣೆ ನಡೆಸುತ್ತಾರೆ. ಈ ವೇಳೆ ಶ್ಯಾಮ್ ಶಂಕರ್ ನ ಮಾಹಿತಿಯಂತೆ ಇತರೆ ಆರೋಪಿಗಳಾದ ಅಭಿಷೇಕ್,ಕಾರ್ತಿಕ್ ಹಾಗೂ ಸಾಗರ್ ನನ್ನು ಬಂಧಿಸಿದ್ದಾರೆ.
ಆರೋಪಿಗಳಿಂದ ಸುಲಿಗೆ ಮಾಡಿದ 60 ಸಾವಿರ ನಗದನ್ನು ವಶಪಡಿಸಿಕೊಂಡಿದ್ದಾರೆ. ಆರೋಪಿಗಳಲ್ಲಿ ಅಭಿಷೇಕ್, ಕಾರ್ತಿಕ್ ಈ ಹಿಂದೆ ಹಲವು ಪ್ರಕರಣದಲ್ಲಿ ಭಾಗಿಯಾದವರು.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
MUST WATCH
ಹೊಸ ಸೇರ್ಪಡೆ
Review Meeting: ಉನ್ನತ ಶಿಕ್ಷಣಕ್ಕೆ ಬೋಧಕರ ಕೊರತೆ: ಸಿಎಂ ಸಿದ್ದರಾಮಯ್ಯ ಗರಂ
ನಕ್ಸಲರನ್ನು ಅಮಿತ್ ಶಾ ಸ್ವಾಗತಿಸಿದಾಗ ಏಕೆ ಬೆಚ್ಚಿ ಬಿದ್ದಿಲ್ಲ?: ಸಿಎಂ ತಿರುಗೇಟು
Naxal Package: “ಮೊದಲೇ ಪ್ಯಾಕೇಜ್ ನೀಡಿದ್ದರೆ ವಿಕ್ರಂಗೌಡ ಪ್ರಾಣ ಉಳಿಯುತ್ತಿತ್ತು’: ಸಹೋದರ
Belagavi: ಜೀವಂತ ವ್ಯಕ್ತಿ ಹೆಸರಿನಲ್ಲಿ ಮರಣ ಪ್ರಮಾಣ ಪತ್ರ ನೀಡಿದ ಅಧಿಕಾರಿಗಳು!
Udupi: ಗೀತಾರ್ಥ ಚಿಂತನೆ-150: ತಣ್ತೀನಿಶ್ಚಯ ಬಳಿಕವೇ ಧ್ಯಾನ
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.