ಶಿಲೆಯಲ್ಲರಳಿದ ಕಲೆ…
Team Udayavani, Dec 29, 2017, 11:52 AM IST
ಬಂಟ್ಸ್‌ಹಾಸ್ಟೆಲ್ : ಕರಕುಶಲ ರಂಗದ ಬಗ್ಗೆ ಅಲ್ಪಜ್ಞಾನವೂ ಇರದ ಯುವಕನೊಬ್ಬ ಶಿಲೆಗಳನ್ನೇ ಕಲೆಯಾಗಿ ಅರಳಿಸಿದ ಕಥೆಯಿದು. ಈತನ ಕೈಚಳಕದಿಂದ ತಯಾರಾಗುವ ಶಿಲಾಮೂರ್ತಿಗಳಿಗೆ ಮಂಗಳೂರಿನಲ್ಲಿ ಬೇಡಿಕೆಯೂ ಅಧಿಕವಾಗುತ್ತಿದೆ.
ಬಂಟ್ಸ್‌ಹಾಸ್ಟೆಲ್‌ನಲ್ಲಿ ಗುರುವಾರ ಆರಂಭವಾದ ರಾಷ್ಟ್ರಮಟ್ಟದ ಕರಕುಶಲ ವಸ್ತು ಪ್ರದರ್ಶನ ಮತ್ತು ಮಾರಾಟ ಮೇಳದಲ್ಲಿ ಬಿಹಾರದ ಹಿಮಾಂಶು ಅವರ ಕೈಯಲ್ಲರಳಿದ ಸುಂದರ ಶಿಲಾ ಮೂರ್ತಿಗಳು ಕಣ್ಮನ ಸೆಳೆಯುತ್ತಿವೆ. ಅಷ್ಟಕ್ಕೂ ಈ ಯುವಕ ದೂರದ ಬಿಹಾರದಿಂದ ಮಂಗಳೂರಿಗೆ ಬಂದು ಕರಕುಶಲ ಕ್ಷೇತ್ರದಲ್ಲಿ ತೊಡಗಿಸಿಕೊಂಡವರು.
12 ವರ್ಷಗಳ ಹಿಂದೆ ಮಂಗಳೂರಿಗೆ ಬಂದ ಹಿಮಾಂಶು ಅವರಿಗೆ ಕರಕುಶಲ ಕ್ಷೇತ್ರದ ಬಗ್ಗೆ ಕಿಂಚಿತ್ತೂ ಗೊತ್ತಿರಲಿಲ್ಲ. ಇಲ್ಲಿನ ಕಲಾ ವೈವಿಧ್ಯವನ್ನು ನೋಡಿದ ಬಳಿಕ ಕರಕುಶಲ ಕ್ಷೇತ್ರದ ಬಗ್ಗೆ ತಿಳಿದುಕೊಳ್ಳುವ ಮನಸ್ಸಾಗಿ ಕೆನರಾ ಬ್ಯಾಂಕಿನಿಂದ ನಡೆಸಲ್ಪಡುವ ಕರಕುಶಲ ಶಾಲೆಯಲ್ಲಿ ಅಭ್ಯಾಸಕ್ಕೆಂದು ಸೇರಿಕೊಂಡರು. ಒಂದೂವರೆ ವರ್ಷದ ಶಿಕ್ಷಣದಲ್ಲಿ ಅವರು ಕಲಾಕೃತಿ ರಚನೆಯ ಬಗ್ಗೆ ತಿಳಿದುಕೊಂಡು ಆ ಕ್ಷೇತ್ರದಲ್ಲೇ ಜೀವನ ಸಾಗಿಸುವ ಯೋಚನೆ ಮಾಡಿದರು. ಅವರ ಸತತ ಪರಿಶ್ರಮದ ಫಲವಾಗಿ ಇದೀಗ ಸುಂದರ ಮೂರ್ತಿಗಳನ್ನು ರಚಿಸಿ ಮಾರಾಟ ಮಾಡುತ್ತಿದ್ದಾರೆ.
ಕೈಯಲ್ಲೇ ಕಲಾಕುಸುರಿ
ಹಿಮಾಂಶು ಅವರು ಶಿವ, ಗಣಪತಿ, ಋಷಿ ಮುನಿಗಳು, ನಾಗನ ಮೂರ್ತಿ ಸಹಿತ ಸುಮಾರು 500ಕ್ಕೂ ಹೆಚ್ಚು ಶಿಲಾಮೂರ್ತಿಗಳನ್ನು ರಚಿಸಿದ್ದಾರೆ. ‘ಯಾವುದೇ ಅಲಂಕಾರಿಕ ಉಪಕರಣ, ವಸ್ತುಗಳನ್ನು ಬಳಸದೆ, ನೈಸರ್ಗಿಕವಾಗಿ ಸಿಗುವ ಕಲ್ಲಿನಿಂದಲೇ ಮೂರ್ತಿ ಕೆತ್ತನೆ ಮಾಡುತ್ತೇನೆ. ನಗರದ ವಿವಿಧ ದೇವಸ್ಥಾನಗಳು ಸೇರಿದಂತೆ ಹಲವು ಕಡೆಯಿಂದ ಈ ಮೂರ್ತಿಗಳಿಗೆ ಬೇಡಿಕೆಯಿದೆ’ ಎನ್ನುತ್ತಾರೆ ಹಿಮಾಂಶು.
ಕನ್ನಡ, ತುಳು ಬಲ್ಲರು
ಬಿಹಾರ ಮೂಲದ ಪಟ್ನಾದವರಾದ ಹಿಮಾಂಶು ಮಂಗಳೂರಿಗೆ ಬಂದು ಕನ್ನಡ ಮತ್ತು ತುಳು ಕಲಿತಿರುವುದಲ್ಲದೇ, ತುಳುವಿನಲ್ಲಿ ಸಲೀಸಾಗಿ ಮಾತನಾಡುತ್ತಾರೆ. ಜ. 3ರ ವರೆಗೆ ವುಡ್‌ಲ್ಯಾಂಡ್ಸ್ ಹೊಟೇಲ್ ಸಭಾಂಗಣದಲ್ಲಿ ಈ ಪ್ರದರ್ಶನ ನಡೆಯಲಿದೆ.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
MUST WATCH
ದೈವ ನರ್ತಕರಂತೆ ಗುಳಿಗ ದೈವದ ವೇಷ ಭೂಷಣ ಧರಿಸಿ ಕೋಲ ಕಟ್ಟಿದ್ದ ಅನ್ಯ ಸಮಾಜದ ಯುವಕ
ಹಕ್ಕಿಗಳಿಗಾಗಿ ಕಲಾತ್ಮಕ ವಸ್ತುಗಳನ್ನು ತಯಾರಿಸುತ್ತಿರುವ ಪಕ್ಷಿ ಪ್ರೇಮಿ
ಮಂಗಳೂರಿನ ನಿಟ್ಟೆ ವಿಶ್ವವಿದ್ಯಾನಿಲಯದ ತಜ್ಞರ ಅಧ್ಯಯನದಿಂದ ಬಹಿರಂಗ
ಈ ಹೋಟೆಲ್ ಗೆ ಪೂರಿ, ಬನ್ಸ್, ಕಡುಬು ತಿನ್ನಲು ದೂರದೂರುಗಳಿಂದಲೂ ಜನ ಬರುತ್ತಾರೆ
ಹರೀಶ್ ಪೂಂಜ ಪ್ರಚೋದನಾಕಾರಿ ಹೇಳಿಕೆ ವಿರುದ್ಧ ಪ್ರಾಣಿ ಪ್ರಿಯರ ಆಕ್ರೋಶ
ಹೊಸ ಸೇರ್ಪಡೆ
Kashmir cold: 34 ವರ್ಷಗಳಲ್ಲೇ ಕನಿಷ್ಠ ತಾಪಮಾನ ದಾಖಲು!
Natural Disaster: ಅನಿರೀಕ್ಷಿತ ಮಳೆಗೆ ಸೊರಗಿದ ವಿಶಿಷ್ಟ ಗುಣದ ಹೆಮ್ಮಾಡಿ ಸೇವಂತಿಗೆ
Rain Alert: ರಾಜ್ಯದಲ್ಲಿ ಕನಿಷ್ಠ ತಾಪಮಾನ 4 ಡಿ.ಸೆ ಏರಿಕೆ; ಹಲವೆಡೆ 24ರಂದು ಮಳೆ ಸಾಧ್ಯತೆ
Karnataka; ರಾಜ್ಯದ ಕಾಡಿಗೆ ಕೊಡಲಿ! ಮಾನವ-ವನ್ಯಜೀವಿ ಸಂಘರ್ಷ ಹೆಚ್ಚಳ?
Puri; ವರ್ಷಾರಂಭದೊಂದಿಗೆ ಜಗನ್ನಾಥ ದೇಗುಲದಲ್ಲಿ ಹೊಸ ದರ್ಶನ ವ್ಯವಸ್ಥೆ
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.