Mangaluru; ರೋಹನ್ ಕಾರ್ಪೊರೇಶನ್ 31ನೇ ವರ್ಷಕ್ಕೆ ಪಾದಾರ್ಪಣೆ
ರೋಹನ್ ಸಿಟಿ, ಇನ್ನಿತರ ಪ್ರಾಜೆಕ್ಟ್ಗಳ ಮೇಲೆ ಶೇ. 10 ರಿಯಾಯಿತಿ
Team Udayavani, Jan 14, 2024, 12:09 AM IST
ರೋಹನ್ ಕಾರ್ಪೊರೇಶನ್,Rohan Corporation,
ಮಂಗಳೂರು: ರೋಹನ್ ಕಾರ್ಪೊರೇಶನ್ ಜ. 14ರಂದು ಯಶಸ್ವಿ 30 ವರ್ಷಗಳನ್ನು ಪೂರೈಸುತ್ತಿದ್ದು 31ನೇ ವರ್ಷಕ್ಕೆ ಪಾದಾರ್ಪಣೆ ಮಾಡುತ್ತಿದೆ. ಈ ಪ್ರಯುಕ್ತ ರೋಹನ್ ಸಿಟಿ, ರೋಹನ್ ಸ್ಕ್ವೇರ್, ರೋಹನ್ ಎಸ್ಟೇಟ್ಸ್ ಮತ್ತು ಇನ್ನಿತರ ಆಯ್ದ ಪ್ರಾಜೆಕ್ಟ್ಗಳ ಮೇಲೆ ಶೇ. 10 ವಿಶೇಷ ರಿಯಾಯಿತಿ ಪ್ರಕಟಿಸಲಾಗಿದೆ.
ಈ ಕೊಡುಗೆ ಜ. 31ರ ವರೆಗೆ ಇರುವುದು. ಷರತ್ತುಗಳು ಅನ್ವಯವಾಗಲಿವೆ.
ರೋಹನ್ ಮೊಂತೇರೊ ನೇತೃತ್ವದ ಸಂಸ್ಥೆಯ ಬಹು ನಿರೀಕ್ಷಿತ, ಅತಿದೊಡ್ಡ ಮತ್ತು ವಿಶಿಷ್ಟ “ರೋಹನ್ ಸಿಟಿ’ ಬೃಹತ್ ಕಟ್ಟಡ ನಿರ್ಮಾಣ ಬಿಜೈಯಲ್ಲಿ ಭರದಿಂದ ಸಾಗುತ್ತಿದೆ. 6 ಲಕ್ಷ ಚದರ ಅಡಿ ವಸತಿ ಪ್ರದೇಶವನ್ನು ಒಳಗೊಂಡಿರುವ ಸಮುಚ್ಚಯವಾಗಿದ್ದು, ಒಟ್ಟು 546 ಅಪಾರ್ಟ್‌ಮೆಂಟ್‌ಗಳನ್ನು ಒಳಗೊಂ ಡಿದೆ. ವಸತಿ ಆಯ್ಕೆಗಳು ಡ್ಯುಪ್ಲೆಕ್ಸ್, 6 ಬಿಎಚ್‌ಕೆ, 4 ಬಿಎಚ್‌ಕೆ, 1,405ರಿಂದ 1,900 ಚದರ ಅಡಿಯ 3 ಬಿಎಚ್‌ಕೆ, 1,075ರಿಂದ 1,135 ಚದರ ಅಡಿಯ 2 ಬಿಎಚ್‌ಕೆ ಮತ್ತು 700ರಿಂದ 815 ಚದರ ಅಡಿಯ 1 ಬಿಎಚ್‌ಕೆ ಫ್ಲ್ಯಾಟ್‌ಗಳೊಂದಿಗೆ ವಿವಿಧ ಅಗತ್ಯಗಳನ್ನು ಪೂರೈಸುತ್ತವೆ.
ವಸತಿ ಪ್ರದೇಶದ ಜತೆಗೆ, 2 ಲಕ್ಷ ಚದರ ಅಡಿ ವಿಸ್ತೀರ್ಣದಲ್ಲಿ ಒಟ್ಟು 284 ವಾಣಿಜ್ಯ ಮಳಿಗೆಗಳಿವೆ. ಯಾಂತ್ರೀಕೃತ ಪಾರ್ಕಿಂಗ್ ವ್ಯವಸ್ಥೆಯನ್ನು ಹೊಂದಿದ್ದು, ಹೆಚ್ಚಿನ ಸಂಖ್ಯೆಯ ದ್ವಿಚಕ್ರ ಮತ್ತು ಕಾರ್‌ಗಳಿಗೆ ಅವಕಾಶ ಕಲ್ಪಿಸುತ್ತದೆ.
ಸಿಟಿ ಕ್ಲಬ್‌ನ ವೈಶಿಷ್ಟ್ಯ
ಸಂಪೂರ್ಣ ಹವಾನಿಯಂತ್ರಿತ, ವಿಶಾಲ ಎಂಟ್ರೆನ್ಸ್ ಲಾಬಿ, ಫ್ಯಾಮಿಲಿ ರೆಸ್ಟೋರೆಂಟ್, ಕಾಫಿಶಾಪ್, ಒಳಾಂಗಣ ಕ್ರೀಡೆ, ಬಾಸ್ಕೆಟ್‌ಬಾಲ್ ಕೋರ್ಟ್, ಬಾಡ್ಮಿಂಟನ್ ಕೋರ್ಟ್, ವಿಡಿಯೋ ಗೇಮ್ಸ್ ವಲಯ, ಸುಸಜ್ಜಿತ ಜಿಮ್, ಸ್ಪಾ, ಯುನಿಸೆಕ್ಸ್ ಸಲೂನ್, ಆಯುರ್ವೇದಿಕ್ ವೆಲ್‌ನೆಸ್ ಸೆಂಟರ್, 3ಡಿ ಥಿಯೇಟರ್, ಮಲ್ಟಿ-ಪರ್ಪಸ್ ಹಾಲ್, ಸ್ವಿಮಿಂಗ್ ಪೂಲ್, ಜಾಗಿಂಗ್ ಟ್ರ್ಯಾಕ್ , ಸೀನಿಯರ್ ಸಿಟಿಜನ್ ಪಾರ್ಕ್, ಚಿಣ್ಣರ ಆಟದ ವಲಯ, ಸುಸಜ್ಜಿತ ಗ್ರಂಥಾಲಯ, ವಿದ್ಯಾರ್ಥಿ ಕಲಿಕಾ ಕೊಠಡಿ ಹಾಗೂ ಇನ್ನಿತರ ಸೌಕರ್ಯಗಳು.
ಪ್ರಸ್ತುತ ಪಕ್ಷಿಕೆರೆಯಲ್ಲಿ ಮತ್ತು ಕುಲಶೇಖರದಲ್ಲಿ ರೋಹನ್‌ಎಸ್ಟೇಟ್,ಸುರತ್ಕಲ್‌ನಲ್ಲಿ ರೋಹನ್ ಎನ್‌ಕ್ಲೇವ್ ಮತ್ತು ಅವೆನ್ಯೂ ಸಂಪೂರ್ಣಗೊಂ ಡಿದ್ದು, ಪಂಪ್‌ವೆಲ್ ಬಳಿಯ ಕಪಿತಾನಿ ಯೋದಲ್ಲಿನ ರೋಹನ್ ಸ್ಕ್ವೇರ್ ನಿರ್ಮಾಣದ ಕೊನೆಯ ಹಂತದಲ್ಲಿದೆ.
ಹೆಚ್ಚಿನ ವಿವರಕ್ಕೆ: http://www.rohancity.in / http://www.rohancorporation.in
ರೋಹನ್ ಸಿಟಿ ವೈಶಿಷ್ಟ್ಯ
2 ಹಂತಗಳಲ್ಲಿ 35,000 ಚದರ ಅಡಿ ಹೈಪರ್ ಮಾರುಕಟ್ಟೆ, ವಾಣಿಜ್ಯ ಮಳಿಗೆಗಳಿಗೆ 2 ಎಸ್ಕಲೇಟರ್ ವ್ಯವಸ್ಥೆ, ವಸತಿ, ವಾಣಿಜ್ಯ, ಸೂಪರ್ ಮಾರ್ಕೆಟ್, ಹೋಟೆಲ್, ಅತ್ಯಾಧುನಿಕ ಕ್ಲಬ್ ಹಾಗೂ ಇನ್ನಿತರ ಸೌಲಭ್ಯಗಳು ಒಂದೇ ಸೂರಿನಡಿ, ಮಂಗಳೂರಿನ ಹೃದಯಭಾಗದಲ್ಲಿ ಅತಿ ಸಮಂಜಸ ಬೆಲೆಗಳಲ್ಲಿ ಲಕ್ಸುರಿ ಸೌಲಭ್ಯಗಳು, ಪ್ರಮುಖ ರಾಷ್ಟ್ರೀಕೃತ ಬ್ಯಾಂಕ್‌ಗಳಿಂದ ಪ್ರಾಜೆಕ್ಟ್ ಅಂಗೀಕೃತ, ತ್ವರಿತ ಸಾಲ ಸೌಲಭ್ಯ ಸೇವೆ, ಡೀಸೆಲ್ ಜನರೇಟರ್‌ಗಳೊಂದಿಗೆ ಶೇ. 100 ಪವರ್ ಬ್ಯಾಕಪ್, ಸ್ವಯಂಚಾಲಿತ ಪವರ್‌ಚೇಂಜ್ ಓವರ್ ವ್ಯವಸ್ಥೆ, ಅತ್ಯಾಧುನಿಕ ಭದ್ರತಾ ವ್ಯವಸ್ಥೆ, ಎಲೆಕ್ಟ್ರಿಕ್ ಕಾರ್ ಚಾರ್ಜಿಂಗ್ ವ್ಯವಸ್ಥೆ, ಹಸುರುವನ, ಉದ್ಯಾನವನ, ಘನತ್ಯಾಜ್ಯ ಸಂಸ್ಕರಣ ಘಟಕ, ಸೌರಶಕ್ತಿ ಸಂಗ್ರಹ ಘಟಕ, ಲೈಟಿಂಗ್ ಆಟೊಮೇಷನ್ (ಮಂಗಳೂರಿನಲ್ಲಿ ಮೊದಲ ಬಾರಿಗೆ).
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
MUST WATCH
ದೈವ ನರ್ತಕರಂತೆ ಗುಳಿಗ ದೈವದ ವೇಷ ಭೂಷಣ ಧರಿಸಿ ಕೋಲ ಕಟ್ಟಿದ್ದ ಅನ್ಯ ಸಮಾಜದ ಯುವಕ
ಹಕ್ಕಿಗಳಿಗಾಗಿ ಕಲಾತ್ಮಕ ವಸ್ತುಗಳನ್ನು ತಯಾರಿಸುತ್ತಿರುವ ಪಕ್ಷಿ ಪ್ರೇಮಿ
ಮಂಗಳೂರಿನ ನಿಟ್ಟೆ ವಿಶ್ವವಿದ್ಯಾನಿಲಯದ ತಜ್ಞರ ಅಧ್ಯಯನದಿಂದ ಬಹಿರಂಗ
ಈ ಹೋಟೆಲ್ ಗೆ ಪೂರಿ, ಬನ್ಸ್, ಕಡುಬು ತಿನ್ನಲು ದೂರದೂರುಗಳಿಂದಲೂ ಜನ ಬರುತ್ತಾರೆ
ಹರೀಶ್ ಪೂಂಜ ಪ್ರಚೋದನಾಕಾರಿ ಹೇಳಿಕೆ ವಿರುದ್ಧ ಪ್ರಾಣಿ ಪ್ರಿಯರ ಆಕ್ರೋಶ
ಹೊಸ ಸೇರ್ಪಡೆ
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.