ಕರಾವಳಿಯ ಕರಕುಶಲಕರ್ಮಿಗಳ ನೋಂದಣಿ: ರೂಪಾ ಮೌದ್ಗಿಲ್ ಕರೆ
Team Udayavani, Jan 11, 2023, 6:40 AM IST
ಮಂಗಳೂರು: ರಾಜ್ಯ ಕರಕುಶಲ ನಿಗಮದಿಂದ ಕುಶಲ ಕರ್ಮಿಗಳಿಗೆ ಹಲವು ರೀತಿಯ ಪ್ರೋತ್ಸಾಹ ನೀಡಲಾಗುತ್ತಿದೆ. ಆದ ರೂ ದ.ಕ., ಉಡುಪಿ ಭಾಗದ ಕುಶಲ ಕರ್ಮಿಗಳ ಸಂಖ್ಯೆ ಕಡಿಮೆ ಇದೆ. ಕರಾವಳಿ ಭಾಗದವರು ನಿಗಮದಲ್ಲಿ ನೋಂದಣಿ ಮಾಡುವ ಮೂಲಕ ತಮ್ಮ ಕರಕುಶಲ ವಸ್ತುಗಳನ್ನು ವಿವಿಧೆಡೆ ಪರಿಚಯಿಸಬೇಕು ಎಂದು ನಿಗಮದ ವ್ಯವಸ್ಥಾಪಕ ನಿರ್ದೇಶಕಿ ರೂಪಾ ಮೌದ್ಗಿಲ್ ಹೇಳಿದರು.
“ಗಾಂಧಿ ಶಿಲ್ಪ ಬಜಾರ್’ ಉದ್ಘಾಟನೆ ಸಮಾರಂಭದಲ್ಲಿ ಅವರು ಸುದ್ದಿಗಾರರ ಜತೆ ಮಾತನಾಡಿ, ಪ್ರಸ್ತುತ ನಿಗಮದಲ್ಲಿ 3 ಸಾವಿರದಷ್ಟು ಮಂದಿ ನೋಂದಣಿ ಮಾಡಿದ್ದಾರೆ. ಅವರಿಗೆ ತರಬೇತಿ ನೀಡುವುದಲ್ಲದೇ, ಅವರ ಉತ್ಪನ್ನಗಳಿಗೆ ಮೇಳಗಳು, ಕಾವೇರಿ ಶೋರೂಂ ಇತ್ಯಾದಿ ಮೂಲಕ ಮಾರುಕಟ್ಟೆ ಒದಗಿಸಲಾಗುತ್ತದೆ. ಇದು ಉಚಿತ. ಉತ್ಪನ್ನಗಳ ಮಾರಾಟದಿಂದ ಬಂದ ಹಣವೂ ಅವರಿಗೆ ನೀಡಲಾಗುತ್ತದೆ ಎಂದರು.
ಮಂಗಳೂರಿನಲ್ಲಿ ಮಳಿಗೆ
ಮಂಗಳೂರಿನಲ್ಲಿ ಕರಕುಶಲ ವಸ್ತುಗಳ ಮಾರಾಟಕ್ಕೆ ಜಾಗ ಹುಡು ಕುತ್ತಿದ್ದೇವೆ. ದಿಲ್ಲಿ, ಹೈದರಾಬಾದ್, ಕೊಲ್ಕತ್ತಾ, ಗುಜರಾತ್ ನಲ್ಲಿ ಕಾವೇರಿ ಮಳಿಗೆಗಳಿವೆ. ಚೆನ್ನೈನಲ್ಲಿ “ಕಾವೇರಿ’ ಶೋರೂಂ 2 ತಿಂಗಳಲ್ಲಿ ಆರಂಭವಾಗಲಿದೆ. ಇದು ಹೊರ ರಾಜ್ಯದಲ್ಲಿ ಐದನೇ ಮಳಿಗೆ. ರಾಜ್ಯ ದಲ್ಲೂ 13 ಕಡೆಗಳಲ್ಲಿ ಕರಕುಶಲ ಸಂಕೀರ್ಣಗಳಿವೆ ಎಂದರು.
ಸಾಗರದಲ್ಲಿರುವ ನಿಗಮದ ಶಿಲ್ಪ ಗುರುಕುಲ ಕೋರ್ಸ್‌ಗಳನ್ನು ಈಗಿನ ಅಗತ್ಯಕ್ಕೆೆ ತಕ್ಕಂತೆ ಮೇಲ್ದರ್ಜೆಗೇರಿಸಿ, ಶಿಲ್ಪ ತರಬೇತಿಯ ಕೋರ್ಸ್‌ಗಳನ್ನು 10 ತಿಂಗಳಿಗೆ ಇಳಿಸಲಾಗುತ್ತದೆ. ಪ್ರಸ್ತುತ 40 ಮಂದಿ ವಿದ್ಯಾರ್ಥಿ ಗಳು ಮರ ಮತ್ತು ಶಿಲ್ಪ ಕೆತ್ತನೆಯ ತರಬೇತಿ ಪಡೆಯುತ್ತಿದ್ದಾರೆ ಎಂದರು.
ರಾಜ್ಯದಲ್ಲಿ ಶ್ರೀಗಂಧದಲ್ಲಿ ಕೆತ್ತನೆ ಮಾಡುವ ಸಾವಿರದಷ್ಟು ಕರಕುಶಲ ಕರ್ಮಿಗಳಿದ್ದಾರೆ. ಅವರಿಗೆ ಉತ್ತೇಜನ ನೀಡಲು ಶ್ರೀಗಂಧದ ಸಸಿಗಳನ್ನು ಶೇ. 50ರ ದರದಲ್ಲಿ ವಿತರಿಸಲಾಗುತ್ತಿದೆ. ಅದೇ ರೀತಿ ಬಿದಿರಿ ಕಲೆಗೆ ಬಳಸುವ ಸತು ಮತ್ತು ಬೆಳ್ಳಿಯನ್ನು ಕೂಡ ಶೇ. 50ರ ದರದಲ್ಲಿ ನೀಡಲಾಗುತ್ತಿದೆ ಎಂದು ಮಾಹಿತಿ ನೀಡಿದರು.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
MUST WATCH
ದೈವ ನರ್ತಕರಂತೆ ಗುಳಿಗ ದೈವದ ವೇಷ ಭೂಷಣ ಧರಿಸಿ ಕೋಲ ಕಟ್ಟಿದ್ದ ಅನ್ಯ ಸಮಾಜದ ಯುವಕ
ಹಕ್ಕಿಗಳಿಗಾಗಿ ಕಲಾತ್ಮಕ ವಸ್ತುಗಳನ್ನು ತಯಾರಿಸುತ್ತಿರುವ ಪಕ್ಷಿ ಪ್ರೇಮಿ
ಮಂಗಳೂರಿನ ನಿಟ್ಟೆ ವಿಶ್ವವಿದ್ಯಾನಿಲಯದ ತಜ್ಞರ ಅಧ್ಯಯನದಿಂದ ಬಹಿರಂಗ
ಈ ಹೋಟೆಲ್ ಗೆ ಪೂರಿ, ಬನ್ಸ್, ಕಡುಬು ತಿನ್ನಲು ದೂರದೂರುಗಳಿಂದಲೂ ಜನ ಬರುತ್ತಾರೆ
ಹರೀಶ್ ಪೂಂಜ ಪ್ರಚೋದನಾಕಾರಿ ಹೇಳಿಕೆ ವಿರುದ್ಧ ಪ್ರಾಣಿ ಪ್ರಿಯರ ಆಕ್ರೋಶ
ಹೊಸ ಸೇರ್ಪಡೆ
Nagpur: ʼಪುಷ್ಪ-2ʼ ನೋಡುತ್ತಿದ್ದಾಗಲೇ ಥಿಯೇಟರ್‌ಗೆ ಪೊಲೀಸರ ಎಂಟ್ರಿ; ಸ್ಮಗ್ಲರ್ ಬಂಧನ
Hysteroscopy: ಸಂತಾನಹೀನತೆಯ ಪತ್ತೆ ಮತ್ತು ಚಿಕಿತ್ಸೆಗೆ ಒಂದು ಅತ್ಯವಶ್ಯಕ ಕಾರ್ಯವಿಧಾನ
ಸಚಿವೆ ಲಕ್ಷ್ಮಿ ಹೆಬ್ಬಾಳ್ಕರ್ ಬಗ್ಗೆ ಅವಹೇಳನಕಾರಿ ಪದಬಳಕೆ: ಪ್ರಸಾದ್ ರಾಜ್ ಕಾಂಚನ್ ಖಂಡನೆ
Puttur: ತೆಂಕಿಲದಲ್ಲಿ ರಿಕ್ಷಾ ಅಪಘಾತ: ಚಾಲಕ ಸಾವು
Gurunandan: ಡಿ.27ಕ್ಕೆ ತೆರೆಗೆ ಬರುತ್ತಿಲ್ಲ ʼರಾಜು ಜೇಮ್ಸ್ ಬಾಂಡ್’ ಚಿತ್ರ
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.