![Delhi-Stamp](https://www.udayavani.com/wp-content/uploads/2025/02/Delhi-Stamp-415x249.jpg)
![Delhi-Stamp](https://www.udayavani.com/wp-content/uploads/2025/02/Delhi-Stamp-415x249.jpg)
Team Udayavani, Jun 21, 2019, 9:38 AM IST
ಮಂಗಳೂರು: ಸಮಾಜ ವಿರೋಧಿ ಶಕ್ತಿಗಳನ್ನು ಮತ್ತು ರೌಡಿಗಳನ್ನು ಮಟ್ಟ ಹಾಕುವ ನಿಟ್ಟಿನಲ್ಲಿ ಮಂಗಳೂರಿನ ಪೊಲೀಸರು ಬುಧವಾರ ರಾತ್ರಿ ನಗರದ ಎಲ್ಲಾ ಬಾರ್‌ಗಳಲ್ಲಿ ತೀವ್ರ ತಪಾಸಣೆಯನ್ನು ನಡೆಸಿದರು.
ಬಾರ್‌ಗಳ ಒಳಗೆ ಮದ್ಯ ಮತ್ತು ಆಹಾರ ಸೇವನೆ ಮಾಡುತ್ತಿದ್ದವರನ್ನು ಮತ್ತು ಬಾರ್‌ನ ಹೊರಗೆ ನಿಲುಗಡೆ ಮಾಡಿದ್ದ ವಾಹನಗಳನ್ನು ಪೊಲೀಸರು ತಪಾಸಣೆ ನಡೆಸಿದರು.
ಮಾದಕ ವಸ್ತು, ಚಾಕು, ಕತ್ತಿ ಮತ್ತಿತರ ಮಾರಕಾಯುಧಗಳು ಇವೆಯೇ ಎನ್ನುವುದನ್ನು ಪತ್ತೆ ಮಾಡುವುದು ಈ ತಪಾಸವಣೆಯ ಉದ್ದೇಶವಾಗಿತ್ತು ಎಂದು ಪೊಲೀಸ್ ಆಯುಕ್ತ ಸಂದೀಪ್ ಪಾಟೀಲ್ ಅವರು ತಿಳಿಸಿದ್ದಾರೆ. ಮದ್ಯ ಸೇವಿಸಿ ಕಾನೂನು ಬಾಹಿನ ಕೃತ್ಯಗಳಲ್ಲಿ ತೊಡಗುವುದನ್ನು ಹಾಗೂ ರೌಡಿ ಚಟುವಟಿಕೆಗಳನ್ನು ಮಟ್ಟ ಹಾಕುವ ನಿಟ್ಟಿನಲ್ಲಿ ಈ ಕಾರ್ಯಾಚರಣೆ ನಡೆಸಲಾಯಿತು ಎಂದಿದ್ದಾರೆ.
You seem to have an Ad Blocker on.
To continue reading, please turn it off or whitelist Udayavani.