ಕೊಡಗಿಗೆ 10 ಲಕ್ಷ ರೂ.; ದ.ಕ.ದಲ್ಲಿ 95 ಸಾವಿರ !
Team Udayavani, Dec 1, 2018, 8:56 AM IST
ಸುಳ್ಯ: ಪ್ರಾಕೃತಿಕ ವಿಕೋಪಕ್ಕೆ ಸಿಲುಕಿ ಮನೆ ಕಳೆದುಕೊಂಡವರಿಗೆ ಪರಿಹಾರ ನೀಡುವಲ್ಲಿ ಸರಕಾರ ಒಂದು ಕಣ್ಣಿಗೆ ಸುಣ್ಣ, ಇನ್ನೊಂದು ಕಣ್ಣಿಗೆ ಬೆಣ್ಣೆ ಎಂಬ ನೀತಿ ತಳೆದಿದೆ!
ದಕ್ಷಿಣ ಕನ್ನಡ ಜಿಲ್ಲೆ ಹಾಗೂ ಕೊಡಗು ಜಿಲ್ಲೆಯಲ್ಲಿ ನೀಡಿದ ಪರಿಹಾರ ಮೊತ್ತದಲ್ಲಿ 8ರಿಂದ 9 ಲಕ್ಷ ರೂ. ವರೆಗೆ ವ್ಯತ್ಯಾಸ ಇರುವುದೇ ಇದಕ್ಕೆ ಸಾಕ್ಷಿ. ಈಗಿನ ಪರಿಹಾರದಲ್ಲಿ ದ.ಕ. ಜಿಲ್ಲೆಯ ಸಂತ್ರಸ್ತರು ಮನೆ ಕಟ್ಟಲು ಸಾಧ್ಯವಿಲ್ಲ.
ಭೀಕರ ಪ್ರಾಕೃತಿಕ ವಿಕೋಪ
ಆಗಸ್ಟ್‌ನಲ್ಲಿ ಪ್ರಾಕೃತಿಕ ವಿಕೋಪ ಪರಿಣಾಮ ಕೊಡಗು, ದ.ಕ. ಜಿಲ್ಲೆಯಲ್ಲಿ ಹಾನಿ ಸಂಭವಿಸಿತ್ತು. ಕೊಡಗಿನಲ್ಲಿ ಸಾವಿರಾರು ಕುಟುಂಬಗಳು ಮನೆ, ಕೃಷಿ, ಜಮೀನು ಕಳೆದುಕೊಂಡಿದ್ದವು. ಕೊಡಗು ಗಡಿಯ ಸುಳ್ಯ ತಾಲೂಕಿನ ವಿವಿಧ ಭಾಗದಲ್ಲೂ ಅಪಾರ ಹಾನಿ ಸಂಭವಿಸಿತ್ತು. ಕಲ್ಲುಗುಂಡಿ, ಅರಂತೋಡು, ಸಂಪಾಜೆ ಪರಿಹಾರ ಕೇಂದ್ರಗಳಲ್ಲಿ ನೂರಾರು ಕುಟುಂಬಗಳು ಆಶ್ರಯ ಪಡೆದಿದ್ದವು. ಈಗಲೂ ಕೆಲವು ಕುಟುಂಬಗಳು ಅಲ್ಲಿ ವಾಸಿಸುತ್ತಿವೆ.
ಜಿಲ್ಲೆಗಿಲ್ಲ ಪರಿಹಾರ!
ಕೊಡಗಿನ ಘಟನೆಯನ್ನು ಮಹಾ ದುರಂತ ಎಂದು ಪರಿಗಣಿಸಿ ಸರಕಾರ ಸಂತ್ರಸ್ತರಿಗೆ ಜಾಗ ಗುರುತಿಸಿ ಮನೆ ನಿರ್ಮಿಸಿಕೊಡಲು ತೀರ್ಮಾನಿಸಿತ್ತು. ಅಲ್ಲಿ ಭೂ ಸಮತಟ್ಟು, ಮಾದರಿ ಮನೆ ನಿರ್ಮಾಣ ಪ್ರಗತಿಯಲ್ಲಿದೆ. ದ.ಕ. ಜಿಲ್ಲೆಗೆ ಸೇರಿದ 134ಕ್ಕೂ ಅಧಿಕ ಮನೆಗಳಿಗೆ ಸಂಪೂರ್ಣ ಹಾನಿ ಆಗಿದೆ ಅನ್ನುವ ವರದಿಯನ್ನು ಜಿಲ್ಲಾಡಳಿತ ನೀಡಿದೆ. ಈ ಕುಟುಂಬಗಳಿಗೆ ಶಾಶ್ವತ ಪುನರ್ವಸತಿ ಕಲ್ಪಿಸಲು ಸರಕಾರ ಮುಂದಾಗಿಲ್ಲ. ಈ ಬಗ್ಗೆ ಜಿಲ್ಲೆಯ ಜನಪ್ರತಿನಿಧಿಗಳು, ಆಡಳಿತ ವ್ಯವಸ್ಥೆ ಕೂಡ ನಿರ್ಲಕ್ಷé ಪ್ರದರ್ಶಿಸಿವೆ.
95 ಸಾವಿರ ರೂ!
ಕೊಡಗಿನಲ್ಲಿ ಮನೆ ಕಳೆದುಕೊಂಡ ಕುಟುಂಬಗಳಿಗೆ 8ರಿಂದ 10 ಲಕ್ಷ ರೂ. ವ್ಯಯಿಸಿ ಸರಕಾರವೇ ಮನೆ ನಿರ್ಮಿಸಲಿದೆ. ಆದರೆ ದ.ಕ. ಜಿಲ್ಲೆಯ ವ್ಯಾಪ್ತಿಯಲ್ಲಾದ ಪ್ರಕೃತಿ ವಿಕೋಪವನ್ನು ಸಾಮಾನ್ಯ ಎಂದು ಪರಿಗಣಿಸಿ, ವರ್ಷಂಪ್ರತಿ ಪ್ರಾಕೃತಿಕ ವಿಕೋಪಕ್ಕಾಗಿ ನೀಡುವ ಪರಿಹಾರ ಹಣ ಮಾತ್ರ ಒದಗಿಸಲಾಗಿದೆ. ಪೂರ್ತಿ ಮನೆ ನಾಶವಾಗಿದ್ದರೂ 95 ಸಾವಿರ ರೂ. ಮಾತ್ರ ನೀಡಲಾಗಿದೆ. ಅರಂತೋಡು, ಕಲ್ಮಕಾರು ಭಾಗದಲ್ಲಿ ತೀವ್ರ ಸ್ವರೂಪದ ಹಾನಿ ಸಂಭವಿಸಿದ್ದರೂ ಸರಕಾರ ಗಂಭೀರವಾಗಿ ಪರಿಗಣಿಸಿಲ್ಲ.
ಗರಿಷ್ಠ ಮಿತಿ
ಪ್ರಕೃತಿ ವಿಕೋಪದಡಿ ಗರಿಷ್ಠ 95 ಸಾವಿರ ರೂ. ನೀಡಲು ಅವಕಾಶ ಇತ್ತು. ಅದರಡಿ ಪರಿಹಾರ ಒದಗಿಸಲಾಗಿದೆ. ಕೊಡಗಿನಲ್ಲಿ ಹಾಗೂ ದ.ಕ.ದಲ್ಲಿ ಸಂಭವಿಸಿದ ಪ್ರಕೃತಿ ವಿಕೋಪ ಬೇರೆಬೇರೆ ತೆರನಾದದ್ದು. ಕೊಡಗಿನಲ್ಲಿ ಪ್ರಾಕೃತಿಕ ವಿಪತ್ತಿನಿಂದ ಜಮೀನು, ಮನೆ, ಮಠ ಎಲ್ಲವೂ ನಾಶವಾದ ಕಾರಣ ಅಲ್ಲಿ ವಿಶೇಷ ಪ್ಯಾಕೇಜ್ ಮೂಲಕ ಪರಿಹಾರ ನೀಡಲಾಗಿದೆ.
– ಕುಂಞಮ್ಮ, ತಹಶೀಲ್ದಾರ್, ಸುಳ್ಯ
ನಷ್ಟ ಎಲ್ಲರಿಗೂ ಒಂದೇ
ಕೊಡಗಿನಲ್ಲಿ ಸರಕಾರ ನ್ಯಾಯಬದ್ಧ ಪರಿಹಾರ ಮೊತ್ತ ನೀಡಿದೆ. ದ.ಕ. ಜಿಲ್ಲೆಯಲ್ಲಿ ಮನೆ ಕಳೆದುಕೊಂಡವರಿಗೂ ಆ ಪ್ಯಾಕೇಜ್ ಒದಗಿಸಬೇಕು. ಪ್ರಕೃತಿ ವಿಪತ್ತು ಅಥವಾ ವಿಕೋಪದಿಂದ ಮನೆ ಸಂಪೂರ್ಣ ಹಾನಿಯಾದರೆ ಅದನ್ನು ಮರು ನಿರ್ಮಾಣವೇ ಮಾಡಬೇಕು. ಹಾಗಾಗಿ ವಿಕೋಪ, ವಿಪತ್ತು ಎಂದು ವಿಭಜಿಸದೆ ಸಮಾನ ಪರಿಹಾರ ಒದಗಿಸಬೇಕು.
– ಕೃಷ್ಣಪ್ಪ, ಸುಳ್ಯ
– ಕಿರಣ್ ಪ್ರಸಾದ್ ಕುಂಡಡ್ಕ
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
MUST WATCH
ಹೊಸ ಸೇರ್ಪಡೆ
Laddu Mutya: ಬದುಕು ಅರಳಿಸಿದ ಬಾಗಲಕೋಟೆಯ ಭಗವಂತ: ತಮಾಷೆಯ ವಸ್ತುವಲ್ಲ ಲಡ್ಡು ಮುತ್ಯಾ
KL Rahul; ಗಾಯದ ಚಿಂತೆ ನಿವಾರಿಸಲು ನೆಟ್‌ನಲ್ಲಿ ಬ್ಯಾಟಿಂಗ್: ಬ್ಯಾಕ್-ಅಪ್ ಆಗಿ ಪಡಿಕ್ಕಲ್
Maharastra: ಚುನಾವಣಾ ರ್‍ಯಾಲಿ ರದ್ದುಗೊಳಿಸಿ ದಿಢೀರ್ ದೆಹಲಿಗೆ ವಾಪಸ್ಸಾದ ಸಚಿವ ಅಮಿತ್ ಶಾ
Kantara Chapter 1: ರಿಷಬ್ ಶೆಟ್ಟಿ ʼಕಾಂತಾರ ಚಾಪ್ಟರ್ -1ʼ ರಿಲೀಸ್ ಗೆ ಡೇಟ್ ಫಿಕ್ಸ್
The Sabarmati Report ;ಸಿನಿಮಾವಾಗಿ ಗೋಧ್ರಾ ದುರಂತ: ಸತ್ಯ ಹೊರಬರುತ್ತಿದೆ ಎಂದ ಪ್ರಧಾನಿ
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.