ಅಶಕ್ತರಿಗೆ 1.50 ಲಕ್ಷ ರೂ. ಸಹಾಯಧನ ವಿತರಣೆ
Team Udayavani, Nov 19, 2017, 10:24 AM IST
ಬಲ್ಲಾಳ್‌ಬಾಗ್: ಉದಯ ಪೂಜಾರಿ ಬಲ್ಲಾಳ್‌ಬಾಗ್ ನೇತೃತ್ವದ ಫ್ರೆಂಡ್ಸ್ ಬಲ್ಲಾಳ್‌ಬಾಗ್ ಬಿರುವೆರ್ ಕುಡ್ಲ ಸಂಘಟನೆಯ ವತಿಯಿಂದ ಬಲ್ಲಾಳ್ ಬಾಗ್ ಗುರ್ಜಿ ದೀಪೋತ್ಸವ ಕಾರ್ಯಕ್ರಮದಲ್ಲಿ ಅಶಕ್ತ ಕುಟುಂಬಗಳಿಗೆ ಆರ್ಥಿಕ ನೆರವು ವಿತರಿಸಲಾಯಿತು.
ಕಿಡ್ನಿ ವೈಫಲ್ಯದಿಂದ ಬಳಲುತ್ತಿರುವ ಯಶವಂತ್ ಸುವರ್ಣ ಮಠದಕಣಿ ಬೋಳೂರು ಅವರ ಕುಟುಂಬಕ್ಕೆ 50,000 ರೂ., ಅಂಗ ನ್ಯೂನತೆ ಹೊಂದಿರುವ ಬಲ್ಲಾಳ್‌ಬಾಗ್‌ನ ಕಾವ್ಯಾ ಕುಟುಂಬಕ್ಕೆ 40,000 ರೂ., ಮನೋಜ್ ಸರಿಪಳ್ಳ ಹಾಗೂ ಕುಂಪಲ ನಿವಾಸಿ ಶೈಲೇಶ್ ಕುಟುಂಬಕ್ಕೆ 60,000 ರೂ. ಸೇರಿ ಒಟ್ಟು 1,50,000 ರೂ.ಗಳನ್ನು ಹಸ್ತಾಂತರಿಸಲಾಯಿತು. ವಿವಿಧ ಕ್ಷೇತ್ರದಲ್ಲಿ ಸಾಧನೆಗೈದ ಉದಯ್ ಕುಮಾರ್ ಶೆಟ್ಟಿ ಮತ್ತು ನಿಹಾಲ್ ಅವರನ್ನು ಗೌರವಿಸಲಾಯಿತು.
ಕಾರ್ಮಿಕ ಮುಂದಾಳು ಸುರೇಶ್ಚಂದ್ರ ಶೆಟ್ಟಿ ಮಾತನಾಡಿ, ಬಿರುವೆರ್ ಕುಡ್ಲ ಸ್ಥಾಪಕಾಧ್ಯಕ್ಷ ಉದಯ್ ಪೂಜಾರಿ ನೇತೃತ್ವದಲ್ಲಿ ಯುವಶಕ್ತಿ ಒಂದುಗೂಡಿ ಆರ್ಥಿಕ ನೆರವು ಸಂಗ್ರಹಿಸಿ ಬಡ ವರ್ಗಕ್ಕೆ ನೀಡುತ್ತಿರುವುದು ಶ್ಲಾಘನೀಯ. ಈ ಸಂಘಟನೆಯು ಎಲ್ಲ ಜಾತಿ, ಮತ, ಧರ್ಮದ ಜನರನ್ನು ಒಗ್ಗೂಡಿಸಿ ನ್ಯಾಯಪರವಾಗಿ ಕೆಲಸ ಮಾಡಿ ಎಲ್ಲರ ಅಭ್ಯುದಯಕ್ಕಾಗಿ ಶ್ರಮಿಸುತ್ತಿರುವುದು ಉತ್ತಮ ಕೆಲಸ ಎಂದರು.
ಸ್ಥಾಪಕಾಧ್ಯಕ್ಷ ಉದಯ್ ಪೂಜಾರಿ, ಮುಡಾ ಅಧ್ಯಕ್ಷ ಸುರೇಶ್ ಬಲ್ಲಾಳ್, ಮಂಜಣ್ಣ ಬ್ರಿಗೇಡ್‌ನ ಮನೋಜ್ ಕೋಡಿಕೆರೆ, ಪ್ರಮೋದ್ ಬಲ್ಲಾಳ್‌ಬಾಗ್, ಪ್ರಕಾಶ್ ಪಾಂಡೇಶ್ವರ್, ರಾಕೇಶ್ ಪೂಜಾರಿ ಬಲ್ಲಾಳ್‌ಬಾಗ್, ಅಭಿಷೇಕ್ ಅಮೀನ್ ಬಿಕರ್ನಕಟ್ಟೆ, ರಣದೀಪ್ ಕಾಂಚನ್, ಜಾನ್ ಸುರೇಶ್, ಸದಾನಂದ ಪೂಜಾರಿ, ಚಾರ್ವಾಕ್ ಮಹೇಶ್ ಶೆಟ್ಟಿ ಮುಂಬಯಿ, ಲತೀಶ್ ಪೂಜಾರಿ, ಅಮೃತ್ ಕದ್ರಿ, ಅಕ್ಷಿತ್ ಸುವರ್ಣ, ಇರ್ಫಾನ್ ಕುದ್ರೋಳಿ, ಮನೋಜ್ ಸರಿಪಲ್ಲ, ಪ್ರಕಾಶ್ ಡಿ. ಸಾಲ್ಯಾನ್, ರಾಕೇಶ್ ಕೋಟ್ಯಾನ್ ಮತ್ತಿತರರು ಉಪಸ್ಥಿತರಿದ್ದರು.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
MUST WATCH
ಹೊಸ ಸೇರ್ಪಡೆ
Vijayapura: ಕರ್ನಾಟಕ ಸಾವಿನ ಮನೆಯಾಗಿದೆ: ಸರ್ಕಾರದ ವಿರುದ್ಧ ಸಿ.ಟಿ.ರವಿ ವಾಗ್ದಾಳಿ
Viral: ಇದು ಇರುವೆಗಳ ಎಂಜಿನಿಯರಿಂಗ್ ಕೌಶಲ್ಯ! ನೀರು ದಾಟಲು ಇರುವೆಗಳ ಸೇತುವೆ ನಿರ್ಮಾಣ
Indian Cricket: ಕ್ರಿಕೆಟ್ ಜೀವನಕ್ಕೆ ಗುಡ್ ಬೈ ಹೇಳಿದ ಆರ್‌ಸಿಬಿ ಮಾಜಿ ಆಟಗಾರ
Nature: ಶ್ರೀಮಂತನಾದರೂ, ಬಡವನಾದರೂ ಪ್ರಕೃತಿಗೆ ಅವಲಂಬಿಯೇ ಅಲ್ಲವೇ?
Sandalwood: ‘ಕೋರ’ ಚಿತ್ರದ ಟ್ರೇಲರ್ ಬಂತು
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.