ಕೆ.ಜಿ.ಗೆ 420 ರೂ. ದಾಟಿದ ನಾಟಿ ಕೋಳಿ ಬೆಲೆ!
ಹತ್ತನಾವಧಿ (ಪತ್ತನಾಜೆ) ಆಚರಣೆಯಲ್ಲಿ ದೈವಗಳಿಗೆ ಬಲಿ ಕೊಡಲು ಬೇಡಿಕೆ
Team Udayavani, May 25, 2019, 6:00 AM IST
ಸಾದಾ ನಾಟಿ ಕೋಳಿ.
ಪುತ್ತೂರು: ತುಳುನಾಡಿನಲ್ಲಿ ಪತ್ತನಾಜೆ (ಹತ್ತನಾವಧಿ) ಆಚರಣೆಯಲ್ಲಿ ದೈವಗಳಿಗೆ ಕೋಳಿ ಬಲಿ ನೀಡುವ ಸಂಪ್ರದಾಯವಿರುವುದರಿಂದ ನಾಟಿ ಕೋಳಿಗೆ ವ್ಯಾಪಕ ಬೇಡಿಕೆ ಉಂಟಾಗಿದೆ. ಈ ಕಾರಣದಿಂದ ಬೆಲೆಯೂ ಕೆ.ಜಿ. ಗೆ 420 ರೂ. ದಾಟಿ ಮುನ್ನುಗ್ಗಿದೆ.
ತುಳುನಾಡಿನ ನಂಬಿಕೆ, ಆಚರಣೆಗೆ ಪೂರಕವಾಗಿ ಪತ್ತನಾಜೆಯ ಅಗೇಲು, ತಂಬಿಲಾದಿಗಳು ಮೇ 25ರಂದು ನಡೆಯಲಿವೆ. ಹತ್ತನಾವಧಿಯಂದು ತುಳುನಾಡಿನಲ್ಲಿ ದೈವಾರಾಧನೆಗೆ ಪೂರಕವಾಗಿ ಬನಗಳಲ್ಲಿ ದೈವಗಳಿಗೆ ಕೋಳಿ ಬಲಿ ಕೊಡುವುದು, ಎಳನೀರು ಹಾಗೂ ಇತರ ಪರಿಕರಗಳನ್ನು ಇಟ್ಟು ದೈವಗಳಿಗೆ ಪ್ರಾರ್ಥನೆ ಸಲ್ಲಿಸುವ ಆಚರಣೆ ರೂಢಿಯಲ್ಲಿದೆ. ಈ ದಿನ ಗುಳಿಗ, ಭೈರವ ದೈವ ಮೊದಲಾದ ದೈವಗಳಿಗೆ ಭಕ್ತರು ನಿವೇದನೆಗಳನ್ನು ಮಾಡಿ ಪ್ರಾರ್ಥಿಸುತ್ತಾರೆ, ಹರಕೆಗಳನ್ನು ಒಪ್ಪಿಸುತ್ತಾರೆ. ಹತ್ತನಾವಧಿಯ ವರೆಗೆ ಭೂತ ಕೋಲಗಳು ನಡೆದು ಅನಂತರದಲ್ಲಿ ಗೆಜ್ಜೆ ಬಿಚ್ಚುವ ನಂಬಿಕೆ ಇರುವುದರಿಂದ ಹತ್ತನಾವಧಿಯ ವರೆಗೆ ಊರಿನ ಕೋಳಿಗಳಿಗೆ ವಿಪರೀತ ಬೇಡಿಕೆ ಇದೆ.
ಕೆ.ಜಿ.ಗೆ 420 ರೂ. ದಾಟಿತು
ಶುಕ್ರವಾರ ಸಾದಾ ಊರಿನ ಕೋಳಿ ಕೆ.ಜಿ.ಯೊಂದರ 420 ರೂ.ಗೆ ಮಾರಾಟವಾಗಿದೆ. ಉಳಿದಂತೆ ಮಂಡ್ಯ, ಮೈಸೂರು ಭಾಗದ ಹಾಗೂ ತಮಿಳುನಾಡಿನಿಂದ ಆಮದಾಗುವ ಹೈಬ್ರಿಡ್ ನಾಟಿ ಕೋಳಿಗಳಿಗೆ ಕೆ.ಜಿ.ಯೊಂದರ 300 ರೂ. ತನಕ ಮಾರಾಟವಾಗುತ್ತಿದೆ.
ಮನೆಯಲ್ಲಿ ಸಾಕುವವರಿಲ್ಲ
ನಾಟಿ ಕೋಳಿ ಮಾಂಸ ಹೆಚ್ಚು ರುಚಿಕರವಾಗಿರುತ್ತದೆ. ಗ್ರಾಮೀಣ ಭಾಗದಲ್ಲಿ ಕೆಲವರು ನಾಟಿ ಕೋಳಿ ಸಾಕುತ್ತಾರೆ. ಹತ್ತನಾವಧಿ ಸಮಯದಲ್ಲಿ ವಿಪರೀತ ಬೇಡಿಕೆ ಇರುತ್ತದೆ. ಸಾಕಣೆದಾರರು ಕೇಳಿದ ಬೆಲೆಗೆ ಖರೀದಿಸುತ್ತಾರೆ. ನಾಟಿ ಕೋಳಿಯ ಬೇಡಿಕೆಯನ್ನು ಗಮನಿಸಿ ಬ್ರಾಯ್ಲರ್, ಟೈಸನ್ ಕೋಳಿ ಫಾರ್ಮ್ಗಳು ಇರುವಂತೆ ನಾಟಿ ಕೋಳಿ ಮಾರಾಟದ ಫಾರ್ಮ್ಗಳೂ ಹುಟ್ಟಿಕೊಂಡಿವೆ. ಪುತ್ತೂರಿನ ಪಡೀಲ್ನಲ್ಲಿ ಇಂತಹ ಎರಡು ಫಾರ್ಮ್ಗಳಿವೆ. ಸೀಸನ್ ಅವಧಿಗೆ ನಾಟಿ ಕೋಳಿ ಫಾರ್ಮ್ನಲ್ಲಿ ಕ್ಯೂ ಆರಂಭಗೊಳ್ಳುತ್ತದೆ. ಇಲ್ಲಿನ ಎರಡು ಅಂಗಡಿಗಳಲ್ಲಿ ವಾರದಲ್ಲಿ 20 ಕ್ವಿಂಟಾಲ್ ನಾಟಿ ಕೋಳಿ ಮಾರಾಟವಾಗುತ್ತದೆ. ಈ ಕೋಳಿಗಳನ್ನು ಚೆನ್ನೈಯಿಂದ ತರಿಸಲಾಗುತ್ತದೆ. ಅವುಗಳ ತೂಕ ಜಾಸ್ತಿ ಇರುತ್ತದೆ. ಇನ್ನು ನಾಟಿ ಕೋಳಿಗೆ ಪರ್ಯಾಯವಾಗಿ ಗಿರಿರಾಜ ಕೋಳಿಗಳೂ ಲಭ್ಯವಾಗುತ್ತಿದ್ದರೂ ಈಗ ಮೈಸೂರು, ಮಂಡ್ಯಗಳಿಂದ ಆಮದಾಗುವ ನಾಟಿ ಕೋಳಿಗಳಿಗೆ ಹೆಚ್ಚು ಬೇಡಿಕೆ ಇದೆ.
ಪತ್ತನಾಜೆ ಸೀಸನ್
ಪತ್ತನಾಜೆಯ ಸೀಸನ್ನ ವಾರ ವೊಂದರಲ್ಲಿ 10 ಕ್ವಿಂಟಾಲ್ಗೂ ಅಧಿಕ ನಾಟಿ ಕೋಳಿ ಮಾರಾಟವಾಗುತ್ತದೆ. ಮಂಗಳೂರು, ಬೆಳ್ತಂಗಡಿ, ಸುಳ್ಯ ಸಹಿತ ಜಿಲ್ಲೆಯ ವಿವಿಧ ಕಡೆ ಗಳಿಂದ ನಾಟಿ ಕೋಳಿಗಾಗಿ ಬರು ತ್ತಾರೆ. ಪತ್ತನಾಜೆಯ ಬಳಿಕ ದೈವಾ ರಾಧನೆಗಳು ಇರದಿರುವುದರಿಂದ ಬೇಡಿಕೆ ಕಡಿಮೆಯಾಗುತ್ತದೆ ಎನ್ನುತ್ತಾರೆ ವ್ಯಾಪಾರಿ ಮೋಹನ್ ಶೆಟ್ಟಿ.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
MUST WATCH
ದೈವ ನರ್ತಕರಂತೆ ಗುಳಿಗ ದೈವದ ವೇಷ ಭೂಷಣ ಧರಿಸಿ ಕೋಲ ಕಟ್ಟಿದ್ದ ಅನ್ಯ ಸಮಾಜದ ಯುವಕ
ಹಕ್ಕಿಗಳಿಗಾಗಿ ಕಲಾತ್ಮಕ ವಸ್ತುಗಳನ್ನು ತಯಾರಿಸುತ್ತಿರುವ ಪಕ್ಷಿ ಪ್ರೇಮಿ
ಮಂಗಳೂರಿನ ನಿಟ್ಟೆ ವಿಶ್ವವಿದ್ಯಾನಿಲಯದ ತಜ್ಞರ ಅಧ್ಯಯನದಿಂದ ಬಹಿರಂಗ
ಈ ಹೋಟೆಲ್ ಗೆ ಪೂರಿ, ಬನ್ಸ್, ಕಡುಬು ತಿನ್ನಲು ದೂರದೂರುಗಳಿಂದಲೂ ಜನ ಬರುತ್ತಾರೆ
ಹರೀಶ್ ಪೂಂಜ ಪ್ರಚೋದನಾಕಾರಿ ಹೇಳಿಕೆ ವಿರುದ್ಧ ಪ್ರಾಣಿ ಪ್ರಿಯರ ಆಕ್ರೋಶ
ಹೊಸ ಸೇರ್ಪಡೆ
Nagavalli Bangale Movie: ಸೆನ್ಸಾರ್ ಪಾಸಾದ ನಾಗವಲ್ಲಿ
Sky Force: ಭಾರತದ ಮೊದಲ ವೈಮಾನಿಕ ದಾಳಿಯ ʼಸ್ಕೈ ಫೋರ್ಸ್ʼ ಟ್ರೇಲರ್ ಔಟ್- ಮಿಂಚಿದ ಅಕ್ಷಯ್
Doddaballapura: ಘಾಟಿ ಕ್ಷೇತ್ರದಲ್ಲಿ ಶ್ರೀ ಸುಬ್ರಹ್ಮಣ್ಯಸ್ವಾಮಿ ಬ್ರಹ್ಮ ರಥೋತ್ಸವ
Naxalite: ಮುಂಡಗಾರು ಲತಾ ಸೇರಿ ಆರು ನಕ್ಸಲರು ಶೀಘ್ರ ಮುಖ್ಯವಾಹಿನಿಗೆ: ಪ್ರಕ್ರಿಯೆ ಚುರುಕು
Hunsur: ಬ್ಯಾರಿಕೇಡ್ ಗೆ ಸಿಲುಕಿದ ಗಜರಾಜ
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.