ಪಾಲಿಕೆಗೆ 20.64 ಕೋ.ರೂ. ನೀರಿನ ಶುಲ್ಕ ಬಾಕಿ!
Team Udayavani, Aug 11, 2017, 8:35 AM IST
ಮಂಗಳೂರು: ಮಹಾನಗರ ಪಾಲಿಕೆ ವ್ಯಾಪ್ತಿಯಲ್ಲಿ ಸುದೀರ್ಘ ವರ್ಷಗಳಿಂದ ಗೃಹ ಬಳಕೆ ಸೇರಿದಂತೆ ವಿವಿಧ ಮೂಲಗಳಿಂದ ಸುಮಾರು 20.64 ಕೋಟಿ ರೂ. ನೀರಿನ ಶುಲ್ಕ ಪಾಲಿಕೆಗೆ ಪಾವತಿಗೆ ಬಾಕಿ ಇದೆ. ಈ ಬಾಕಿಯನ್ನು ಮುಂದಿನ 15 ದಿನಗಳೊಳಗೆ ಸಂಬಂಧಪಟ್ಟವರು ಪಾವತಿಸದಿದ್ದಲ್ಲಿ, ಅವರ ನೀರಿನ ಸಂಪರ್ಕವನ್ನು ಕಡಿತಗೊಳಿಸಿ ಹೆಸರನ್ನು ಪತ್ರಿಕೆಗಳಲ್ಲಿ ಪ್ರಕಟಿಸಲಾಗುವುದು ಎಂದು ಮೇಯರ್ ಕವಿತಾ ಸನಿಲ್ ಎಚ್ಚರಿಕೆ ನೀಡಿದ್ದಾರೆ.
ಗುರುವಾರ ಪಾಲಿಕೆ ಕಚೇರಿಯಲ್ಲಿ ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿದ ಅವರು, ನೀರಿನ ಶುಲ್ಕ ಪಾವತಿಗೆ ಬಾಕಿ ಇರುವುದರಿಂದ ಆದಾಯದ ಕೊರತೆ ಯಿಂದ ಅಭಿವೃದ್ಧಿ ಕಾಮಗಾರಿಗಳಿಗೆ ತೊಡಕಾಗುತ್ತಿದೆ. ಆದ್ದರಿಂದ ಸಾರ್ವ ಜನಿಕರು ಪ್ರಾಮಾಣಿಕವಾಗಿ ತಮ್ಮ ನೀರಿನ ಶುಲ್ಕವನ್ನು ಪಾವತಿಸಬೇಕು ಎಂದರು.
2,000 ಸಂಪರ್ಕ ಕಡಿತ
ನಾನು ಮೇಯರ್ ಆಗಿ ಅಧಿಕಾರ ಸ್ವೀಕರಿಸಿದ ಬಳಿಕ ಕಳೆದ ಮಾರ್ಚ್‌ನಿಂದ ನೀರಿನ ಶುಲ್ಕ ಪಾವತಿಗೆ ಸಂಬಂಧಿಸಿ ಕಾರ್ಯಾಚರಣೆ ಮಾಡಿ ಹಲವಾರು ವರ್ಷಗಳಿಂದ ಬಾಕಿ ಇದ್ದ ಸುಮಾರು 2,000 ನೀರಿನ ಸಂಪರ್ಕಗಳನ್ನು ಕಡಿತ ಗೊಳಿಸಲಾಗಿದೆ. ಇದರಿಂದಾಗಿ ಅಲ್ಲಿಯವರೆಗೆ 22,37,84,730 ಕೋಟಿ ರೂ.ಗಳಾಗಿದ್ದ ಬಾಕಿ ಮೊತ್ತ ಇದೀಗ 20 ಕೋಟಿ ರೂ.ಗಳಿಗೆ ಇಳಿಕೆ ಯಾಗಿದೆ. ಇದೀಗ ಮತ್ತೆ ಸಾರ್ವ ಜನಿಕ ರಿಗೆ 15 ದಿನಗಳ ಕಾಲಾವ ಕಾಶದ ಮೂಲಕ ಬಾಕಿ ಮೊತ್ತ ವನ್ನು ಪಾವತಿಸಲು ಅವಕಾಶ ನೀಡ ಲಾಗು ತ್ತದೆ. ಇದಕ್ಕೆ ಪ್ರತಿಕ್ರಿಯೆ ನೀಡದಿದ್ದರೆ ಮುಂದಿನ ದಿನಗಳಲ್ಲಿ ಬಾಕಿದಾರರ ಹೆಸರನ್ನು ಪತ್ರಿಕೆಗಳಲ್ಲಿ ಪ್ರಕಟ ಮಾಡ ಲಾಗುವುದು ಎಂದವರು ಹೇಳಿದರು.
ಮಸಾಜ್ ಸೆಂಟರ್ ಆದ ಸೆಲೂನ್
ಬಲ್ಮಠ ರಸ್ತೆಯಲ್ಲಿರುವ ಸೆಲೂನ್ ಸೆಂಟರ್‌ಗೆ ದಾಳಿ ನಡೆಸಿರುವುದನ್ನು ಪ್ರಶ್ನಿಸಿ ಆಯುಕ್ತರು, ಮೇಯರ್‌ಗೆ
ಠೇವಣಿ ಇಡಲು ಹೈಕೋರ್ಟ್ ಆದೇಶಿ ಸಿದ ಕುರಿತಂತೆ ಸುದ್ದಿಗಾರರ ಪ್ರಶ್ನೆಗೆ ಉತ್ತರಿಸಿದ ಮೇಯರ್, ಬುಧ ವಾರ ನ್ಯಾಯಾಲಯದಲ್ಲಿ ವಿಚಾ ರಣೆಗೆ ಹಾಜ ರಾಗಬೇಕೆಂಬ ನೋಟಿಸ್ ಬುಧವಾರ ಸಂಜೆಯ ವೇಳೆಗೆ ನನ್ನ ಕಚೇರಿಗೆ ತಲುಪಿದೆ. ಅಷ್ಟು ಹೊತ್ತಿ ಗಾಗಲೇ ಬೆಂಗಳೂರಿನಲ್ಲಿ ಕೋರ್ಟ್ ಕಲಾಪ ಕೂಡ ಮುಗಿದಿತ್ತು. ಮಾತ್ರವಲ್ಲದೆ ಆಯುಕ್ತರಿಗೂ ನೋಟಿಸ್ ಬುಧವಾರ ಸಂಜೆಯ ವೇಳೆಗೆ ಕಚೇರಿಗೆ ರವಾನೆಯಾಗಿತ್ತು. ನೋಟಿಸ್ ಕೋರ್ಟ್‌ನಿಂದ ಆ. 7ರಂದು ರವಾನೆ ಗೊಂಡಿದ್ದು, ಆ. 9ರಂದು ಸಂಜೆ ಕಚೇರಿ ತಲುಪಿದೆ. ನೋಟಿಸ್ ಮುಂಚಿತವಾಗಿ ದೊರಕಿರು ತ್ತಿದ್ದರೆ ಅವರು ಮತ್ತು ನಾನು ವಿಚಾ ರಣೆಗೆ ಹಾಜರಾಗುತ್ತಿದ್ದೆವು. ಜತೆಗೆ ಸೆಲೂನ್‌ಗಾಗಿ ಮನಪಾದಿಂದ ಪರ ವಾನಿಗೆ ಪಡೆದಿದ್ದರೂ ಅಲ್ಲಿ ನಮ್ಮ ಮನಪಾ ತಂಡ ಭೇಟಿ ನೀಡಿದ ವೇಳೆ ಅದು ಮಸಾಜ್ ಸೆಂಟರ್ ಆಗಿ ಕಾರ್ಯ ನಿರ್ವಹಿಸುತ್ತಿದ್ದುದು ಸ್ಪಷ್ಟ ಗೊಂಡಿದೆ ಎಂದರು.
ಪ್ಲಾಸ್ಟರ್ ಆಫ್ ಪ್ಯಾರಿಸ್‌ನಿಂದ ತಯಾ ರಿಸಲಾದ ಗಣಪತಿ ವಿಗ್ರಹಗಳ ಬಳಕೆ ಅಥವಾ ಅದನ್ನು ಸಾರ್ವಜನಿಕ ನದಿ ಮೂಲಗಳಲ್ಲಿ ವಿಸರ್ಜಿಸಲು ಅವಕಾಶವನ್ನು ರದ್ದುಪಡಿಸಲು ನಿರ್ಧಾರ ಕೈಗೊಳ್ಳಲಾಗಿದೆ ಎಂದು ಸುದ್ದಿಗಾರರ ಪ್ರಶ್ನೆಗೆ ಉತ್ತರಿಸಿದರು.
1 ಸಂಪರ್ಕ; 7.47 ಲಕ್ಷ ರೂ. ಬಾಕಿ !
ಗೃಹ ಬಳಕೆಗೆ ಸಂಬಂಧಿಸಿ ನಗರದಲ್ಲಿ ಒಂದು ಸಂಪರ್ಕದಿಂದ ಬರೋಬ್ಬರಿ 7,47,000 ರೂ. ನೀರಿನ ಬಿಲ್ ಬಾಕಿ ಇದೆ. 2004ರಿಂದ ಈ ಸಂಪರ್ಕ ದಿಂದ ನೀರಿನ ಮೊತ್ತ ಬಾಕಿ ಉಳಿಸಿಕೊಳ್ಳಲಾಗಿದೆ. ಇನ್ನೊಂದು ಸಂಪರ್ಕದಿಂದ 7,30,000 ರೂ. ನೀರಿನ ಶುಲ್ಕ ಮನಪಾಕ್ಕೆ ಪಾವತಿಗೆ ಬಾಕಿ ಇದೆ. ನಗರದಲ್ಲಿ ಸುಮಾರು 75,000 ನೀರಿನ ಸಂಪರ್ಕಗಳಿದ್ದು,
ಅದರಲ್ಲಿ ಸುಮಾರು 50,000ದಷ್ಟು ಸಂಪರ್ಕಗಳಿಂದ ಶುಲ್ಕ ಪಾವತಿಗೆ ಬಾಕಿ ಇದೆ. ಈ ಪೈಕಿ 166 ಸಂಪರ್ಕಗಳಿಂದ 1 ಲಕ್ಷ ರೂ.ಗಳಿಗೂ ಅಧಿಕ ಮೊತ್ತದ ಶುಲ್ಕ ಪಾವತಿಗೆ ಬಾಕಿಯಿದ್ದರೆ, 50,000 ರೂ.ಗಳಿಂದ 1 ಲಕ್ಷ ರೂ. ವರೆಗಿನ ಬಾಕಿ 350 ಸಂಪರ್ಕಗಳಿಂದ ಇದೆ. 22,780 ಸಂಪರ್ಕಗಳಿಂದ 10,000 ರೂ.ನಿಂದ 50,000 ರೂ. ವರೆಗೆ ಬಾಕಿ ಇದೆ ಎಂದು ಮೇಯರ್ ಕವಿತಾ ಸನಿಲ್ ಹೇಳಿದರು.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
Train Service: ಮಂಗಳೂರು – ವಿಜಯಪುರ ವಿಶೇಷ ರೈಲು ವಿಸ್ತರಣೆ
U. T. Khader: ಹೆಬ್ಟಾಳ್ಕರ್-ಸಿ.ಟಿ. ರವಿ ಪ್ರಕರಣ ಹಕ್ಕು ಭಾದ್ಯತಾ ಸಮಿತಿಗೆ: ಖಾದರ್
Drugs; ಮಾರಾಟ, ಸೇವನೆ : ಮಂಗಳೂರು 1,090, ಉಡುಪಿ 116 ಪ್ರಕರಣ ದಾಖಲು
ಮಂಜನಾಡಿ ಗ್ಯಾಸ್ ಸ್ಫೋ*ಟ ಪ್ರಕರಣ : ಸಾವಿನ ಸಂಖ್ಯೆ ಮೂರಕ್ಕೆ ಏರಿಕೆ
Mangaluru Kambala; ಬಂಗ್ರಕೂಳೂರಿನಲ್ಲಿ ಚಾಲನೆ, ನಾಳೆ ಸಮಾರೋಪ
MUST WATCH
ದೈವ ನರ್ತಕರಂತೆ ಗುಳಿಗ ದೈವದ ವೇಷ ಭೂಷಣ ಧರಿಸಿ ಕೋಲ ಕಟ್ಟಿದ್ದ ಅನ್ಯ ಸಮಾಜದ ಯುವಕ
ಹಕ್ಕಿಗಳಿಗಾಗಿ ಕಲಾತ್ಮಕ ವಸ್ತುಗಳನ್ನು ತಯಾರಿಸುತ್ತಿರುವ ಪಕ್ಷಿ ಪ್ರೇಮಿ
ಮಂಗಳೂರಿನ ನಿಟ್ಟೆ ವಿಶ್ವವಿದ್ಯಾನಿಲಯದ ತಜ್ಞರ ಅಧ್ಯಯನದಿಂದ ಬಹಿರಂಗ
ಈ ಹೋಟೆಲ್ ಗೆ ಪೂರಿ, ಬನ್ಸ್, ಕಡುಬು ತಿನ್ನಲು ದೂರದೂರುಗಳಿಂದಲೂ ಜನ ಬರುತ್ತಾರೆ
ಹರೀಶ್ ಪೂಂಜ ಪ್ರಚೋದನಾಕಾರಿ ಹೇಳಿಕೆ ವಿರುದ್ಧ ಪ್ರಾಣಿ ಪ್ರಿಯರ ಆಕ್ರೋಶ
ಹೊಸ ಸೇರ್ಪಡೆ
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.