Government ಶಾಲೆಯಲ್ಲಿ ಆರೆಸ್ಸೆಸ್ ಗುರುಪೂಜೆ ? ಫೋಟೋ ವೈರಲ್; ಇಲಾಖೆಗೆ ದೂರು
Team Udayavani, Jul 16, 2024, 12:16 AM IST
ಸುಳ್ಯ: ಸರಕಾರಿ ಶಾಲೆಯಲ್ಲಿ ರಾಷ್ಟ್ರೀಯ ಸ್ವಯಂ ಸೇವಕ ಸಂಘದ ವತಿಯಿಂದ ಗುರುಪೂಜೆ ನಡೆಸಿದ ಆರೋಪ ಕೇಳಿಬಂದಿದ್ದು, ಈ ಬಗ್ಗೆ ಇಲಾಖೆಗೆ ದೂರು ನೀಡಿರುವ ಘಟನೆ ನಡೆದಿದ್ದು, ಕಾರ್ಯಕ್ರಮದ ಫೋಟೋ ವೈರಲ್ ಆಗಿದೆ.
ಕಡಬ ತಾಲೂಕಿನ ಎಡಮಂಗಲ ಗ್ರಾಮದ ಕರಿಂಬಿಲ ಸರಕಾರಿ ಕಿರಿಯ ಪ್ರಾಥಮಿಕ ಶಾಲೆಯಲ್ಲಿ ಗುರುಪೂಜೆ ನಡೆಸಲಾಗಿರುವ ಆರೋಪ ಕೇಳಿಬಂದಿದೆ. ಶಾಲಾ ಕೊಠಡಿಯೊಳಗೆ ಕಾರ್ಯಕ್ರಮ ನಡೆಸಿದ್ದು, ಎದುರಿನ ಕಪ್ಪು ಹಲಗೆ(ಬ್ಲಾಕ್ ಬೋರ್ಡ್)ಯಲ್ಲಿ ಶಾಲೆಯ ಹೆಸರು ಕಂಡುಬಂದಿದೆ. ಕಾರ್ಯಕ್ರಮದಲ್ಲಿ ಭಾಗವಹಿಸಿದ ಕೆಲವರು ಕಾರ್ಯಕ್ರಮ ಫೋಟೋವನ್ನು ವಾಟ್ಸಾಪ್ ಸ್ಟೇಟಸ್ ಹಾಕಿದ್ದರಿಂದ ಬಹಿರಂಗವಾಗಿದೆ.
ಸರಕಾರಿ ಶಾಲೆಯ ಆವರಣದೊಳಗೆ ಅಥವಾ ಮೈದಾನದಲ್ಲಿ ಸಾರ್ವಜನಿಕ ಕಾರ್ಯಕ್ರಮಗಳಿಗೆ ಅವಕಾಶ ನೀಡಬಾರದೆಂಬ ಸರಕಾರದ ಸುತ್ತೋಲೆ ಇದ್ದರೂ ಶಾಲೆಯ ಒಳಗೆ ಆರೆಸ್ಸೆಸ್ ಕಾರ್ಯಕ್ರಮ ನಡೆದಿರುವ ಬಗ್ಗೆ ಶಿಕ್ಷಣ ಇಲಾಖೆ, ಹಾಗೂ ಜಿಲ್ಲಾಧಿಕಾರಿಗಳಿಗೆ ದೂರು ಸಲ್ಲಿಸಲಾಗಿದೆ ಎಂದು ತಿಳಿದುಬಂದಿದ್ದು, ಮುಖ್ಯ ಶಿಕ್ಷಕರಿಂದ ವಿವರಣೆ ಪಡೆಯಲಾಗಿದೆ ಎಂದು ತಿಳಿದುಬಂದಿದೆ.
ಟಾಪ್ ನ್ಯೂಸ್
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.