ಸುಳ್ಯ: ರಬ್ಬರ್‌ ಧಾರಣೆ ಕುಸಿತ, ಸಂಕಷ್ಟದಲ್ಲಿ ಬೆಳೆಗಾರರು

Team Udayavani, May 14, 2018, 7:50 AM IST

Rubber-Milk-600.jpg

ಬೆಳ್ಳಾರೆ: ರಬ್ಬರ್‌ ಧಾರಣೆ ಕುಸಿತಗೊಂಡ ಹಿನ್ನಲೆಯಲ್ಲಿ ಸುಳ್ಯ ತಾಲೂಕಿನ ಅರಂತೋಡು, ಬೆಳ್ಳಾರೆ, ಸಂಪಾಜೆ ಭಾಗದಲ್ಲಿ ರಬ್ಬರ್‌ ಬೆಳೆಗಾರರು ತೀವ್ರ ಸಂಕಷ್ಟ ಪರಿಸ್ಥಿತಿಯನ್ನು ಎದುರಿಸುತ್ತಿದೆ. ಇದರ ಪರಿಣಾಮ ಸಾವಿರಾರು ಎಕ್ರೆಗಳಲ್ಲಿ ಬೆಳೆಯಲಾಗಿದ್ದ ರೈತರು ರಬ್ಬರ್‌ ಟ್ಯಾಪಿಂಗ್‌ ಮಾಡುವುದನ್ನೇ ನಿಲ್ಲಿಸಿದ್ದಾರೆ. ಸುಳ್ಯ ತಾಲೂಕಿನಾದ್ಯಂತ ಅಡಿಕೆ ಮತ್ತು ರಬ್ಬರ್‌ ಪ್ರಮುಖ ವಾಣಿಜ್ಯ ಬೆಳೆಯಾಗಿದೆ. ಇದೀಗ ಅಡಿಕೆ ಕೃಷಿಗೂ ಹಳದಿ ರೋಗ, ರಬ್ಬರ್‌ ವ್ಯಾಪಕವಾಗಿ ಹರಡಿಕೊಂಡಿರುವ ಪರಿಣಾಮ ರೈತರಿಗೆ ಮತ್ತೆ ಗಾಯದ ಮೇಲೆ ಬರೆ ಎಳೆದಂತಾಗಿದೆ. ಆಮದು ನೀತಿಯನ್ನು ಸಡಿಲಿಸಿರುವುದೇ ಇದಕ್ಕೆ ಕಾರಣ ಎಂದು ರಬ್ಬರ್‌ ಕೃಷಿಕರು ಅಭಿಪ್ರಾಯ ಪಡುತ್ತಾರೆ.

ಅಸಲು ಅಧಿಕ
ಸ್ಥಳೀಯವಾಗಿ ಉತ್ಪಾದನಾ ವೆಚ್ಚ ಒಂದು ಕೆಜಿಗೆ 120 ಆಗುತ್ತಿದ್ದು ರಬ್ಬರ್‌ ಮರಕ್ಕೆ ಹಾಕುವ ಗಂ, ಪ್ಲಾಸ್ಟಿಕ್‌, ಹಾಗೂ ಇತರ ಸಾಮಾಗ್ರಿಗಳ ಬೆಲೆ ಏರಿಕೆಯಾಗಿದೆ. ಸಣ್ಣ ರಬ್ಬರ್‌ ಬೆಳೆಗಾರರು ತಾವೇ ಟ್ಯಾಪಿಂಗ್‌ ಮಾಡುತ್ತಿದ್ದು, ಕೂಲಿಕಾರ್ಮಿಕರನ್ನು ಆಶ್ರಯಿಸಿದ ಕೆಲವು ರಬ್ಬರ್‌ ಬೆಳೆಗಾರರು ಟ್ಯಾಪಿಂಗ್‌ ಈಗಾಗಲೇ ನಿಲ್ಲಿಸಿದ್ದಾರೆ. ಮುಂದಿನ ವರ್ಷವ ಮರದಲ್ಲಿ ಹಾಲು ಕಡಿಮೆಯಾದರೆ ಎಂಬ ಭಯದಿಂದ ಕೆಲವರು ನಷ್ಟದಲ್ಲಿದ್ದರೂ ರಬ್ಬರ್‌ ಹಾಲು ತೆಗೆಯುತ್ತಿದ್ದಾರೆ. ರಬ್ಬರ್‌ ಬೆಳೆಗಾರರ ನಿರುತ್ಸಾಹ ಹಾಲು ತೆಗೆಯುವ ಕಾರ್ಮಿಕರನ್ನು ಸಂಕಷ್ಟಕ್ಕೆ ದೂಡಿದೆ. ರಬ್ಬರ್‌ ಟ್ಯಾಪಿಂಗ್‌ ಕಾರ್ಮಿಕರು ಜೀವನ ನಿರ್ವಾಹಣೆಗಾಗಿ ಪರ್ಯಾಯ ಕೆಲಸದ ಮೊರೆ ಹೋಗಿದ್ದಾರೆ.

ರಾಜ್ಯದ 60 ಸಾವಿರ ಹೆಕ್ಟೆರ್‌ ರಬ್ಬರ್‌ ತೋಟದ ಪೈಕಿ ಶೇ. 50 ರಷ್ಟು ದ.ಕ. ಜಿಲ್ಲೆಯಲ್ಲಿದೆ. ಇದೀಗ ರಬ್ಬರ್‌ ಟ್ಯಾಪಿಂಗ್‌ ನಿಲ್ಲಿಸಿರುವುದರಿಂದ ದೇಶದಲ್ಲಿ 2 ಲಕ್ಷ ಮೆಟ್ರಿಕ್‌ ಟನ್‌ ಮತ್ತು ರಾಜ್ಯದಲ್ಲಿ 10 ಸಾವಿರ ಮೆಟ್ರಿಕ್‌ ಉತ್ಪಾದನೆ ಕುಸಿದಿದೆ ಅಂದಾಜಿಸಲಾಗಿದೆ. ಈ ಹಿಂದೆ ರಾಜ್ಯದಲ್ಲಿ 35 ಸಾವಿರ ಮೆಟ್ರಿಕ್‌ ಟನ್‌ ಉತ್ಪಾದನೆ ಆಗುತ್ತಿತ್ತು. ಈ ಹಿಂದೆ ಅಡಿಕೆ ಜಾಗದಲ್ಲಿ ರಬ್ಬರ್‌ ಬೆಳೆಯನ್ನು ಪರಿಚಯಿಸಲಾಗಿತ್ತು.ಆದರೆ ಈಗ ರಬ್ಬರ್‌ ಲಾಭ ತರದ ಹಿನ್ನೆಲೆಯಲ್ಲಿ ಸುಳ್ಯ ಭಾಗದವರು ತಾಳೆ ಬೆಳೆಯತ್ತ ಮುಖ ಮಾಡುತ್ತಿದ್ದಾರೆ.

ಭವಿಷ್ಯವಿಲ್ಲ
ಈಗ ಮಾರುಕಟ್ಟೆಯಲ್ಲಿ ರಬ್ಬರ್‌ಗೆ ಕೆ.ಜಿಗೆ ರೂ. 121 ಇದೆ. ಈ ಮಾರುಕಟ್ಟೆ ಏನೂ ಸಾಲದೂ. ಕಾರ್ಮಿಕರರನ್ನು ಇಟ್ಟುಕೊಂಡು ರಬ್ಬರ್‌ ಟ್ಯಾಪಿಂಗೆ ಹಾಗೂ ಇತರೆ ಕೆಲಸ ಮಾಡಿಸಿದರೆ ಉಳಿತಾಯ ಸಿಗದ ಪರಿಸ್ಥಿತಿ ಸೃಷ್ಟಿಯಾಗಿದೆ. ಕನಿಷ್ಠ ರಬ್ಬರ್‌ಗೆ ಕೇಜಿಯೊಂದಕ್ಕೆ ರೂ. 170 ಮಾರುಕಟ್ಟೆ ಧಾರಣೆ ಬರಬೇಕು. ಇಲ್ಲದಿದ್ದರೆ ರಬ್ಬರ್‌ ಕೃಷಿಕರಿಗೆ ಭವಿಷ್ಯ ಇಲ್ಲ.
– ಮಾಧವ ಗೌಡ ಕಾಮಧೇನು, ರಬ್ಬರ್‌ ಕೃಷಿಕರು ಬೆಳ್ಳಾರೆ

ಟಾಪ್ ನ್ಯೂಸ್

CTRavi

Derogatory Remark: ಧರ್ಮಸ್ಥಳದಲ್ಲಿ ಆಣೆ, ಪ್ರಮಾಣ ಮುಗಿದ ಕತೆ: ಸಿ.ಟಿ.ರವಿ

ಬಾಂಗ್ಲಾದಿಂದ ಅಕ್ರಮ ವಲಸೆ: ಮುಂಬೈಯಲ್ಲಿ 10, ದೆಹಲಿಯಲ್ಲಿ 11 ಮಂದಿ ಸೆರೆ

Police: ಬಾಂಗ್ಲಾದಿಂದ ಅಕ್ರಮ ವಲಸೆ: ಮುಂಬೈಯಲ್ಲಿ10,ದೆಹಲಿಯಲ್ಲಿ11 ಮಂದಿ ಸೆರೆ

Kashmir: 300 ಅಡಿ ಕಮರಿಗೆ ಸೇನಾ ವಾಹನ ಬಿದ್ದು 5 ಯೋಧರ ಸಾವು; ಹಲವರಿಗೆ ಗಾಯ

Kashmir: 300 ಅಡಿ ಕಮರಿಗೆ ಸೇನಾ ವಾಹನ ಬಿದ್ದು 5 ಯೋಧರ ಸಾವು; ಹಲವರಿಗೆ ಗಾಯ

Catholic ಸಮ್ಮೇಳನದಲ್ಲಿ ಪ್ರಧಾನಿ ಮೋದಿ ಭಾಗಿ: ಕೇರಳದ ಬಿಷಪ್‌ ತರಾಟೆ

Catholic ಸಮ್ಮೇಳನದಲ್ಲಿ ಪ್ರಧಾನಿ ಮೋದಿ ಭಾಗಿ: ಕೇರಳದ ಬಿಷಪ್‌ ತರಾಟೆ

England; ಬೆನ್‌ ಸ್ಟೋಕ್ಸ್‌ಗೆ ಗಾಯ: ಚಾಂಪಿಯನ್ಸ್‌ ಟ್ರೋಫಿಗೆ ಅಲಭ್ಯ

England; ಬೆನ್‌ ಸ್ಟೋಕ್ಸ್‌ಗೆ ಗಾಯ: ಚಾಂಪಿಯನ್ಸ್‌ ಟ್ರೋಫಿಗೆ ಅಲಭ್ಯ

15-crime

Bailhongal: ಅನೈತಿಕ ಸಂಬಂಧದ ಹಿನ್ನೆಲೆ ಯುವಕನ ಮೇಲೆ ಮಾರಣಾಂತಿಕ ಹಲ್ಲೆ; ಆರೋಪಿ ಪರಾರಿ

CT Ravi ಭದ್ರತೆ ವ್ಯವಸ್ಥೆ,ನ್ಯಾಯಾಂಗ ತನಿಖೆಗೆ ರಾಜ್ಯಪಾಲರಿಗೆ ಬಿಜೆಪಿ ಮನವಿ: ಆರ್.ಅಶೋಕ್

CT Ravi Case ನ್ಯಾಯಾಂಗ ತನಿಖೆಗೆ ಒಪ್ಪಿಸಲು ಗೌರ್ನರ್‌ಗೆ ಬಿಜೆಪಿ ದೂರು

ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು

8-bntwl

Sajipamunnur: ಅಪಘಾತದ ವೇಳೆ ಗೋಮಾಂಸ ಸಾಗಾಟ ಪತ್ತೆ; ಪ್ರಕರಣ ದಾಖಲು

6-aranthodu

Aranthodu: ಲಾರಿ-ಸ್ಕೂಟಿ ಅಪಘಾತ; ಸವಾರರಿಬ್ಬರು ಮೃತ್ಯು

Police-logo

CEN Police Station: ದಕ್ಷಿಣ ಕನ್ನಡ ಜಿಲ್ಲಾ ಸೆನ್‌ ಪೊಲೀಸ್‌ ಠಾಣೆ ಬಂಟ್ವಾಳಕ್ಕೆ

aane

Uppinangady; ಕಾಡಾನೆ ಸಂಚಾರದಿಂದ ಹಿರೇಬಂಡಾಡಿ ಗ್ರಾಮಸ್ಥರು ಭಯಭೀತ

bjp-congress

Aranthodu:ಕಾಂಗ್ರೆಸ್‌-ಬಿಜೆಪಿ ಕಾರ್ಯಕರ್ತರ ಮಾತಿನ ಚಕಮಕಿ

MUST WATCH

udayavani youtube

ದೈವ ನರ್ತಕರಂತೆ ಗುಳಿಗ ದೈವದ ವೇಷ ಭೂಷಣ ಧರಿಸಿ ಕೋಲ ಕಟ್ಟಿದ್ದ ಅನ್ಯ ಸಮಾಜದ ಯುವಕ

udayavani youtube

ಹಕ್ಕಿಗಳಿಗಾಗಿ ಕಲಾತ್ಮಕ ವಸ್ತುಗಳನ್ನು ತಯಾರಿಸುತ್ತಿರುವ ಪಕ್ಷಿ ಪ್ರೇಮಿ

udayavani youtube

ಮಂಗಳೂರಿನ ನಿಟ್ಟೆ ವಿಶ್ವವಿದ್ಯಾನಿಲಯದ ತಜ್ಞರ ಅಧ್ಯಯನದಿಂದ ಬಹಿರಂಗ

udayavani youtube

ಈ ಹೋಟೆಲ್ ಗೆ ಪೂರಿ, ಬನ್ಸ್, ಕಡುಬು ತಿನ್ನಲು ದೂರದೂರುಗಳಿಂದಲೂ ಜನ ಬರುತ್ತಾರೆ

udayavani youtube

ಹರೀಶ್ ಪೂಂಜ ಪ್ರಚೋದನಾಕಾರಿ ಹೇಳಿಕೆ ವಿರುದ್ಧ ಪ್ರಾಣಿ ಪ್ರಿಯರ ಆಕ್ರೋಶ

ಹೊಸ ಸೇರ್ಪಡೆ

CTRavi

Derogatory Remark: ಧರ್ಮಸ್ಥಳದಲ್ಲಿ ಆಣೆ, ಪ್ರಮಾಣ ಮುಗಿದ ಕತೆ: ಸಿ.ಟಿ.ರವಿ

ಬಾಂಗ್ಲಾದಿಂದ ಅಕ್ರಮ ವಲಸೆ: ಮುಂಬೈಯಲ್ಲಿ 10, ದೆಹಲಿಯಲ್ಲಿ 11 ಮಂದಿ ಸೆರೆ

Police: ಬಾಂಗ್ಲಾದಿಂದ ಅಕ್ರಮ ವಲಸೆ: ಮುಂಬೈಯಲ್ಲಿ10,ದೆಹಲಿಯಲ್ಲಿ11 ಮಂದಿ ಸೆರೆ

Kashmir: 300 ಅಡಿ ಕಮರಿಗೆ ಸೇನಾ ವಾಹನ ಬಿದ್ದು 5 ಯೋಧರ ಸಾವು; ಹಲವರಿಗೆ ಗಾಯ

Kashmir: 300 ಅಡಿ ಕಮರಿಗೆ ಸೇನಾ ವಾಹನ ಬಿದ್ದು 5 ಯೋಧರ ಸಾವು; ಹಲವರಿಗೆ ಗಾಯ

Catholic ಸಮ್ಮೇಳನದಲ್ಲಿ ಪ್ರಧಾನಿ ಮೋದಿ ಭಾಗಿ: ಕೇರಳದ ಬಿಷಪ್‌ ತರಾಟೆ

Catholic ಸಮ್ಮೇಳನದಲ್ಲಿ ಪ್ರಧಾನಿ ಮೋದಿ ಭಾಗಿ: ಕೇರಳದ ಬಿಷಪ್‌ ತರಾಟೆ

England; ಬೆನ್‌ ಸ್ಟೋಕ್ಸ್‌ಗೆ ಗಾಯ: ಚಾಂಪಿಯನ್ಸ್‌ ಟ್ರೋಫಿಗೆ ಅಲಭ್ಯ

England; ಬೆನ್‌ ಸ್ಟೋಕ್ಸ್‌ಗೆ ಗಾಯ: ಚಾಂಪಿಯನ್ಸ್‌ ಟ್ರೋಫಿಗೆ ಅಲಭ್ಯ

Thanks for visiting Udayavani

You seem to have an Ad Blocker on.
To continue reading, please turn it off or whitelist Udayavani.