ಪಾಳುಬಿದ್ದ ತಾ.ಪಂ. ಜಾಗ; ವಸತಿಗೃಹ ಶಿಥಿಲ
ವಿಟ್ಲ ನೀರಕಣಿ ಬಳಿಯ 2 ಎಕ್ರೆ ಭೂಮಿ ಸದ್ಬಳಕೆಯಾಗಲಿ
Team Udayavani, Feb 14, 2020, 5:22 AM IST
ವಿಟ್ಲ : ವಿಟ್ಲ ಪೇಟೆಯಿಂದ ಸುಮಾರು 1 ಕಿ.ಮೀ. ದೂರದಲ್ಲಿ ಹಳೆ ಕೆಇಬಿ / ನೀರಕಣಿ ಬಳಿ 2 ಎಕ್ರೆಗೂ ಹೆಚ್ಚು ಭೂಮಿಯನ್ನು ತಾ.ಪಂ. ಹೊಂದಿದೆ. ಈ ವಿಶಾಲ ಜಾಗದಲ್ಲಿ ಹಾಸ್ಟೆಲ್ ವಾರ್ಡನ್ ಅವರ ಸಹಿತ 10 ವಸತಿಗೃಹಗಳಿದ್ದವು.
ಇವೆಲ್ಲವೂ ನಾಶವಾಗುತ್ತಿವೆ. ಜಾಗ ಬಳಸದೇ ಇರುವುದರಿಂದ ಕಾಡು ಬೆಳೆ ದಿದೆ. ಅನೈತಿಕ ಚಟುವಟಿಕೆಗಳಿಗೆ ದಾರಿ ತೋರುತ್ತಿದ್ದು, ನಿರ್ಜನ ಪ್ರದೇಶವಾಗಿದೆ. ಈ ಬಗ್ಗೆ ಸೂಕ್ತ ಕ್ರಮ ಕೈಗೊಳ್ಳಬೇಕೆಂದು ಸ್ಥಳೀಯರು ಆಗ್ರಹಿಸುತ್ತಿದ್ದಾರೆ.
ಹಳೆಯ ವಸತಿಗೃಹಗಳು
ಇಲ್ಲಿದ್ದ 10 ವಸತಿಗೃಹಗಳಲ್ಲಿ 7 ಶೋಚನೀಯ ಸ್ಥಿತಿಯಲ್ಲಿವೆ. ಎರಡು ಸಂಪೂರ್ಣ ಕುಸಿದುಬಿದ್ದಿವೆ. ಉಳಿದವು ಗಳ ಬಾಗಿಲು, ಕಿಟಕಿಗಳು ಮುರಿದು ಬಿದ್ದಿವೆ. ಛಾವಣಿ – ಗೋಡೆ ಕುಸಿದು ಬೀಳುವ ಹಂತದಲ್ಲಿದೆ. ಒಂದರಲ್ಲಿ ವಾಸಿ ಸುತ್ತಿದ್ದಾರೆ. ಉಳಿದವುಗಳೆಲ್ಲವೂ ಶಿಥಿಲಾ ವಸ್ಥೆಯಲ್ಲಿದ್ದು ಬಳಸುವಂತಿಲ್ಲ.
ಅವಶೇಷವೂ ಇಲ್ಲ
ಕುಸಿದುಬಿದ್ದ ವಸತಿಗೃಹಗಳ ಅವಶೇಷ ಗಳೂ ಇಲ್ಲ. ಕೆಲವು ವಸತಿ ಗೃಹಗಳ ಬಾಗಿಲುಗಳು ತೆರೆ ದಿವೆ. ಕಿಟಕಿಗಳನ್ನೂ ಮುರಿದು ಹಾಕಲಾಗಿದೆ. ಹಂಚಿನ ಛಾವಣಿ ಬೀಳುವ ಹಂತದಲ್ಲಿದೆ. ಈ ವಸತಿ ಗೃಹ ಗಳ ಸಾಮಗ್ರಿಗಳು ಕಳ್ಳರ ಪಾಲಾಗುತ್ತಿವೆ. ಕೊಳವೆಬಾವಿ ಅನಾಥ ಸ್ಥಿತಿಯಲ್ಲಿದೆ. ಕೊಳವೆಬಾವಿಯ ಕಬ್ಬಿಣದ ಪೈಪು ಕರಗಿ ಹೋಗಿದೆ. ಇದರಲ್ಲಿ ನೀರಿದೆಯೇ ?
ಆ ಕೊಳವೆ ಬಾವಿಯಿಂದ ನೀರೆತ್ತುವ ಪಂಪ್ ಏನಾಗಿದೆ ? ಎಂಬ ಮಾಹಿತಿ ಸಿಗುತ್ತಿಲ್ಲ. ಬಾವಿಯಿದೆ. ಬೇಸಗೆಯಲ್ಲಿ ನೀರು ಸಿಗುತ್ತಿರಲಿಲ್ಲ. ಇಲ್ಲಿದ್ದವರು ಪಂ. ನೀರನ್ನು ಅವಲಂಬಿಸುವ ಪರಿಸ್ಥಿತಿಯಿತ್ತು ಎಂದು ಹಿಂದೆ ಅಲ್ಲಿದ್ದವರು ಹೇಳುತ್ತಾರೆ.
ಕಟ್ಟಡ ನಿರ್ವಹಣೆ ಇಲ್ಲ
ವಸತಿಗೃಹಗಳನ್ನು ಹತ್ತಾರು ವರ್ಷಗಳಿಂದ ಇಲಾಖೆ ನಿರ್ವಹಣೆ ಮಾಡಲೇ ಇಲ್ಲ. ಅಲ್ಲಿ ಬಾಡಿಗೆಗಿದ್ದವರು ಬಾಡಿಗೆ ನೀಡಿ, ವಿದ್ಯುತ್ ಬಿಲ್ ಪಾವತಿಸುತ್ತಿದ್ದರು. ದುರಸ್ತಿ ಕಾರ್ಯವನ್ನೂ ಅವರೇ ನಿಭಾಯಿಸುತ್ತಿದ್ದರು. ಬರಬರುತ್ತ ಅಲ್ಲಿದ್ದವರು ಸ್ವಂತ ಮನೆ ಅಥವಾ ವರ್ಗಾವಣೆ ಕಾರಣಕ್ಕೆ ಬಿಟ್ಟುಬಿಟ್ಟರು. ಹೊಸಬರು ಅದನ್ನು ಬಳಸುವ ಪರಿಸ್ಥಿತಿಯಲ್ಲೇ ಇರಲಿಲ್ಲ. ಸದೃಢ ಪಂಚಾಂಗ ಹೊಂದಿದ್ದ ಕಟ್ಟಡ ಗಳು ನಿರ್ವಹಣೆಯಿಲ್ಲದೇ ನಾಶ ವಾಗುತ್ತ ಬಂದಿರುವುದು ದುರಂತ. ಇದೀಗ ಇಡೀ ವ್ಯವಸ್ಥೆ ಸಂಪೂರ್ಣ ಕೆಟ್ಟುಹೋಗಿದೆ. ಅದಕ್ಕೆ ಕಾಯಕಲ್ಪ ಮಾಡಬೇಕಾಗಿದೆ.
ಸೂಕ್ತ ಕ್ರಮ
ಈ ಜಾಗವು ಇಲಾಖೆಯ ಗಮನದಲ್ಲಿದೆ. 2-3 ಲಕ್ಷ ರೂ. ಅನುದಾನದಲ್ಲಿ ಆವರಣಗೋಡೆ ನಿರ್ಮಿಸುತ್ತಿದ್ದೇವೆ. ತಾ.ಪಂ.ಗೆ ಸೇರಿದ ಭೂಮಿ ಯನ್ನು ಗುರುತಿಸಿ, ಬೇಲಿ ಹಾಕಿ, ರಕ್ಷಿಸುತ್ತೇವೆ. ಶಿಥಿಲಾವಸ್ಥೆ ಯಲ್ಲಿರುವ ವಸತಿಗೃಹ ಗಳನ್ನು ಕೆಡವಿ, ನೂತನ ವಸತಿಗೃಹಗಳನ್ನು ನಿರ್ಮಿಸು ತ್ತೇವೆ. ಮುಂದಿನ ಸಾಲಿನಲ್ಲಿ ಇದಕ್ಕೆ ಅಧ್ಯಕ್ಷರ ಹಾಗೂ ಸದಸ್ಯರ ಬೆಂಬಲದೊಂದಿಗೆ ವಿಶೇಷ ಅನುದಾನ ಪಡೆದು ಸೂಕ್ತ ಕ್ರಮ ಕೈಗೊಳ್ಳುತ್ತೇವೆ.
- ರಾಜಣ್ಣ
ಕಾರ್ಯನಿರ್ವಹಣಾಧಿಕಾರಿ, ತಾ.ಪಂ. ಬಂಟ್ವಾಳ
ಮಿನಿ ವಿಧಾನಸೌಧ ಮಾಡಬಹುದು
ಈ ಭೂಮಿಯಲ್ಲಿ ಮಿನಿ ವಿಧಾನಸೌಧ ನಿರ್ಮಿಸಬಹುದು. ವಿಟ್ಲ ಪೇಟೆಯಲ್ಲಿ ಜಾಗವಿಲ್ಲ. ಪ.ಪಂ.ಕಚೇರಿಯೂ ಸುಸಜ್ಜಿತವಾಗಿಲ್ಲ. ಮಿನಿ ವಿಧಾನಸೌಧಕ್ಕೆ ಪ.ಪಂ. ಕಚೇರಿ, ನಾಡಕಚೇರಿ, ಕಂದಾಯ ಕಚೇರಿಗಳನ್ನು ವರ್ಗಾಯಿಸ ಬಹುದು. ಪೇಟೆಯಲ್ಲಿರುವ ಜಾಗ ಬಳಸಿಕೊಳ್ಳುವ ನಿಟ್ಟಿನಲ್ಲಿ ಪರಿಣಾಮಕಾರಿ ಯೋಜನೆ ರೂಪಿಸುವ ಬಗ್ಗೆ ಸಂಬಂಧಪಟ್ಟವರು ಕ್ರಮ ಕೈಗೊಳ್ಳಬೇಕು.
- ಡಾ|ಕೆ.ಟಿ.ರೈ,ವೈದ್ಯರು,ವಿಟ್ಲ
-ಉದಯಶಂಕರ್ ನೀರ್ಪಾಜೆ
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
MUST WATCH
ಹೊಸ ಸೇರ್ಪಡೆ
Karnataka HC; ನಾಲ್ಕನೇ ಪ್ರಕರಣದಲ್ಲೂ ಪ್ರಜ್ವಲ್ ರೇವಣ್ಣ ನಿರೀಕ್ಷಣಾ ಜಾಮೀನು ಅರ್ಜಿ ವಜಾ
Sagara: ಟ್ರಾಫಿಕ್ ಜಾಮ್‌ಗೆ ಕಾರಣವಾದ ವಾಹನ ವಶ; ಚಾಲಕನ ವಿರುದ್ಧ ಎಫ್ಐಆರ್ ದಾಖಲು
Siruguppa: ತೆಕ್ಕಲಕೋಟೆಯಲ್ಲಿ ಅಕ್ರಮ ಪಡಿತರ ಅಕ್ಕಿ ವಶ
Mangaluru Airport; ಕೆ 9 ಹೀರೋ ಜಾಕ್ ಇನ್ನಿಲ್ಲ: ಭಾವನಾತ್ಮಕ ವಿದಾಯ
Kottigehara: ಅಪಘಾತದಿಂದ ಗಾಯಗೊಂಡ ನಾಗರಹಾವಿಗೆ ಚಿಕಿತ್ಸೆ
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.