ರನ್ ಫಾರ್ ಹೆಲ್ದಿ ಲಿವಿಂಗ್: ಮ್ಯಾರಾಥಾನ್ ಓಟ
Team Udayavani, May 28, 2018, 11:27 AM IST
ಮಹಾನಗರ : ಸಕ್ರಿಯ ಹಾಗೂ ಆರೋಗ್ಯಕರ ಜೀವನಶೈಲಿಯನ್ನು ಉತ್ತೇಜಿಸುವ ದೃಷ್ಟಿಯಿಂದ ಹರ್ಬಲ್ ಲೈಫ್ ನ್ಯೂಟಿಷನ್ ನಗರದಲ್ಲಿ ರವಿವಾರ ರನ್ ಫಾರ್ ಹೆಲ್ದಿ ಲಿವಿಂಗ್ ಮ್ಯಾರಥಾನ್ ಓಟ ನಡೆಸಿತು. 500ಕ್ಕೂ ಹೆಚ್ಚು ನಾಗರಿಕರು ಪಾಲ್ಗೊಂಡಿದ್ದರು.
ಇದೇ ಸಂದರ್ಭದಲ್ಲಿ ದೇಶದಲ್ಲೇ ಮೊಟ್ಟಮೊದಲ ‘ಸ್ಮಾರ್ಟ್ ಸಿಟಿ ಕಾರ್ಯಕ್ರಮ’ ಕ್ಕೆ ಹರ್ಬಲ್‌ಲೈಫ್ ಕಂಟ್ರಿ ಹೆಡ್ ಮತ್ತು ಉಪಾಧ್ಯಕ್ಷ ಅಜಯ್ ಖನ್ನಾ ಚಾಲನೆ ನೀಡಿ, ಮಂಗಳೂರು, ದೇಶದ ಮೊಟ್ಟಮೊದಲ ಹರ್ಬಲ್‌ಲೈಫ್ ಸ್ಮಾರ್ಟ್ ಸಿಟಿ ಎನಿಸಿಕೊಂಡಿದೆ. ಇದು ಗ್ರಾಹಕರನ್ನು ಸಕ್ರಿಯ ಹಾಗೂ ಆರೋಗ್ಯಕರ ಜೀವನಶೈಲಿಗೆ ತೊಡಗಿಸಿಕೊಳ್ಳುವಂತೆ ಉತ್ತೇಜನ ನೀಡುವ ಯೋಜನೆಯಾಗಿದ್ದು, ಇದಕ್ಕೆ ಪೂರಕವಾದ ಉತ್ಪನ್ನ, ತರಬೇತಿ ಹಾಗೂ ಕಾರ್ಯಕ್ರಮದ ಸೌಲಭ್ಯ ನಾಗರಿಕರಿಗೆ ಸಿಗಲಿದೆ ಎಂದರು.
ಅಜಯ್ ಖನ್ನಾ ಮಾತನಾಡಿ, ದೇಶದಾದ್ಯಂತ ಸದ್ಯದಲ್ಲೇ ಇಂಥಹ ನಾಲ್ಕು ಸ್ಮಾರ್ಟ್ ಸಿಟಿಗಳನ್ನು ಪರಿಚಯಿ ಸಲಾಗುವುದು. ಇದು ಜನಸಾಮಾನ್ಯರಿಗೆ ಉತ್ತಮ ಆರೋಗ್ಯ ಸೇವೆ ಒದಗಿಸುವ ನಿಟ್ಟಿನಲ್ಲಿ ನೂತನ ಪ್ರಯತ್ನವಾಗಿದೆ ಎಂದರು.
ಮ್ಯಾರಾಥಾನ್
ನಗರದ ನೆಹರು ಕ್ರೀಡಾಂಗಣದಿಂದ ರನ್ ಫಾರ್ ಹೆಲ್ದಿ ಲಿವಿಂಗ್ 3 ಕಿ.ಮೀ. ಓಟ ನಡೆಯಿತು. ಹಂಪನಕಟ್ಟೆ ಸರ್ಕಲ್‌ಗೆ ತೆರಳಿ ಅಲ್ಲಿಂದ ಮತ್ತೆ ನೆಹರೂ ಮೈದಾನ ತಲುಪಿತು. ನಗರದ ಜಾಯ್‌ನೆಲ್ ಪಿಂಟೋ ಪ್ರಥಮ, ದಾದಾ ಖಲಂದರ್ ದ್ವಿತೀಯ ಹಾಗೂ ಮಾನ್‌ಸಿಂಗ್ ತೃತೀಯ ಬಹುಮಾನ ಪಡೆದರು.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
MUST WATCH
ದೈವ ನರ್ತಕರಂತೆ ಗುಳಿಗ ದೈವದ ವೇಷ ಭೂಷಣ ಧರಿಸಿ ಕೋಲ ಕಟ್ಟಿದ್ದ ಅನ್ಯ ಸಮಾಜದ ಯುವಕ
ಹಕ್ಕಿಗಳಿಗಾಗಿ ಕಲಾತ್ಮಕ ವಸ್ತುಗಳನ್ನು ತಯಾರಿಸುತ್ತಿರುವ ಪಕ್ಷಿ ಪ್ರೇಮಿ
ಮಂಗಳೂರಿನ ನಿಟ್ಟೆ ವಿಶ್ವವಿದ್ಯಾನಿಲಯದ ತಜ್ಞರ ಅಧ್ಯಯನದಿಂದ ಬಹಿರಂಗ
ಈ ಹೋಟೆಲ್ ಗೆ ಪೂರಿ, ಬನ್ಸ್, ಕಡುಬು ತಿನ್ನಲು ದೂರದೂರುಗಳಿಂದಲೂ ಜನ ಬರುತ್ತಾರೆ
ಹರೀಶ್ ಪೂಂಜ ಪ್ರಚೋದನಾಕಾರಿ ಹೇಳಿಕೆ ವಿರುದ್ಧ ಪ್ರಾಣಿ ಪ್ರಿಯರ ಆಕ್ರೋಶ
ಹೊಸ ಸೇರ್ಪಡೆ
Mangaluru: ಒನ್ ನೇಶನ್-ಒನ್ ಡೆಸ್ಟಿನೇಶನ್‌ಗೆ ಮಂಗಳೂರಿನ ತಣ್ಣೀರುಬಾವಿ ಬೀಚ್
HMP: ಮತ್ತಿಬ್ಬರು ಮಕ್ಕಳಲ್ಲಿ ಎಚ್‌ಎಂಪಿ ವೈರಸ್: ದೇಶದಲ್ಲಿ 7ಕ್ಕೇರಿದ ಕೇಸ್
ಇಂಡಿಯಾ ಓಪನ್ ಬ್ಯಾಡ್ಮಿಂಟನ್ ಭಾರತದ 21 ಸ್ಪರ್ಧಿಗಳು ಭಾಗಿ
Gangolli; ಬೋಟ್‌ಗೆ ಮರದ ದಿಮ್ಮಿ ಢಿಕ್ಕಿ: ಅಪಾರ ಹಾನಿ
Mangaluru: ಲಕ್ಷಾಂತರ ವಿದ್ಯಾರ್ಥಿಗಳಿಗೆ ಕೆಪಿಟಿ ದಾರಿದೀಪ: ಸಚಿವ ಡಾ| ಎಂ.ಸಿ. ಸುಧಾಕರ್
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.