ರಾಜ್ಯಮಟ್ಟದ ಕರಾಟೆ ಸ್ಪರ್ಧಾ ಕೂಟಕ್ಕೆ ಚಾಲನೆ
Team Udayavani, Jan 14, 2018, 3:16 PM IST
ಪುತ್ತೂರು: ಆತ್ಮವಿಶ್ವಾಸದ ಜತೆಗೆ ಆತ್ಮರಕ್ಷಣೆಗೆ ಕರಾಟೆ ಉಪಯುಕ್ತ. ಹೆಣ್ಣು ಮಕ್ಕಳು ಕರಾಟೆ ಅಭ್ಯಾಸ ಮಾಡುವ ಮೂಲಕ ಸಮಾಜದಲ್ಲಿ ಮುಂದೆ ಬರಲು ಸಾಧ್ಯ ಎಂದು ಶಾಸಕಿ ಶಕುಂತಳಾ ಶೆಟ್ಟಿ ಹೇಳಿದರು.
ತೆಂಕಿಲ ವಿವೇಕಾನಂದ ಆಂಗ್ಲ ಮಾಧ್ಯಮ ಶಾಲೆಯಲ್ಲಿ ಶನಿವಾರ ಮಂಗಳೂರು ಇನ್ಸ್ಟಿಟ್ಯೂಟ್ ಆಫ್ ಕರಾಟೆ ಆ್ಯಂಡ್ ಅಲೈಡ್ ಆರ್ಟ್ಸ್ ಆಶ್ರಯದಲ್ಲಿ ನಡೆದ ಅಂತರ್ ಶಾಲಾ- ಕಾಲೇಜು ರಾಜ್ಯಮಟ್ಟದ ಕರಾಟೆ ಚಾಂಪಿಯನ್‌ಶಿಪ್- 2018ನ್ನು ಉದ್ಘಾಟಿಸಿ ಅವರು ಮಾತನಾಡಿದರು.
ದೈಹಿಕ, ಮಾನಸಿಕ ಸಾಮರ್ಥ್ಯ ಹೆಚ್ಚಿಸುವ ಕರಾಟೆ ಪ್ರಸ್ತುತ ದಿನಗಳಲ್ಲಿ ಜನಪ್ರಿಯವಾಗುತ್ತಿದೆ. ಪುತ್ತೂರಿನಲ್ಲಿ ಈ ಬಾರಿ ರಾಜ್ಯಮಟ್ಟದ ಕರಾಟೆ ಏರ್ಪಡಿಸಿರುವ ಸಂಘಟಕರ ಕಾರ್ಯ ಶ್ಲಾಘನೀಯ. ಸ್ಪರ್ಧೆಯ ಅವಕಾಶವನ್ನು ವಿದ್ಯಾರ್ಥಿಗಳೆಲ್ಲರೂ ಪಡೆದುಕೊಂಡು ರಾಷ್ಟ್ರಮಟ್ಟದಲ್ಲಿ ಪುತ್ತೂರಿನ ಕೀರ್ತಿ ಪತಾಕೆಯನ್ನು ಹಾರಿಸುವಂತಾಗಲಿ ಎಂದು ಶುಭ ಹಾರೈಸಿದರು.
ಜಿಲ್ಲಾ ಶಿಕ್ಷಣ ಇಲಾಖೆಯ ಉಪನಿರ್ದೇಶಕ ಶಿವರಾಮಯ್ಯ ವೈ. ಮಾತನಾಡಿ, ವಿಶೇಷ ಕೌಶಲ ಹೊಂದಿರುವ ಕರಾಟೆಯನ್ನು ಹೆಣ್ಣುಮಕ್ಕಳು ಹೆಚ್ಚು ಕಲಿಯಬೇಕು. ದೈಹಿಕ ಸ್ಥೈರ್ಯ ಪಡೆಯುವ ಜತೆಗೆ ದೈಹಿಕ ಆರೋಗ್ಯಕ್ಕೂ ಇದು ಉಪಯುಕ್ತ. ವಿದ್ಯಾರ್ಥಿಗಳು ಕರಾಟೆ ಕಡೆಗೆ ಹೆಚ್ಚು ಒಲವು ತೋರಿಸುವ ಅಗತ್ಯವಿದೆ ಎಂದರು.
ಮಂಗಳೂರು ಇನ್ಸ್ಟಿಟ್ಯೂಟ್ ಆಫ್ ಕರಾಟೆ ಆ್ಯಂಡ್ ಅಲೈಡ್ ಆರ್ಟ್ಸ್ ಮುಖ್ಯಶಿಕ್ಷಕ ಕ್ಯೋಶಿ ಪ್ರವೀಣ್ ಕುಮಾರ್ ಮಾತನಾಡಿ, ಕರಾಟೆ ಕೇವಲ ಆತ್ಮರಕ್ಷಣೆ ಕಲೆಯಾಗಿ ಉಳಿದಿಲ್ಲ. ಬದಲಾಗಿ ಒಂದು ಕ್ರೀಡೆಯಾಗಿ ವಿಶ್ವಾದಾದ್ಯಂತ ಜನಪ್ರಿಯತೆ ಗಳಿಸುತ್ತಿದೆ. ಒಲಿಂಪಿಕ್‌ನಲ್ಲೂ ಕ್ರೀಡೆಯಾಗಿ
ಸೇರ್ಪಡೆಗೊಂಡ ಕರಾಟೆಯನ್ನು ಬೆಳೆಸುವ ನಿಟ್ಟಿನಲ್ಲಿ ಪ್ರತಿ ವರ್ಷ ಸ್ಪರ್ಧಾ ಕೂಟವನ್ನು ಏರ್ಪಡಿಸಲಾಗುತ್ತಿದೆ ಎಂದರು.
ಫ್ಯಾಶನ್‌ಗೋಸ್ಕರ ಕಲಿಯುವ ಅಗತ್ಯವಿಲ್ಲ
ಕರಾಟೆ ತರಬೇತು ಸಂಸ್ಥೆಯ ಸ್ಥಾಪಕ ಸೇಡಿಯಾಪು ಜನಾರ್ದನ ಭಟ್ ಮಾತನಾಡಿ, ಜನಪ್ರಿಯತೆ ಪಡೆಯುತ್ತಿರುವ ಕರಾಟೆಯನ್ನು ಕೇವಲ ಫ್ಯಾಶನ್‌ಗೋಸ್ಕರ ಕಲಿಯುವ ಅಗತ್ಯವಿಲ್ಲ. ಪ್ರಾಣಾಯಾಮದ ಮೂಲಕ ಅದರದ್ದೇ ಆದ ಚೌಕಟ್ಟಿನಡಿ ಶಿಸ್ತಿನಿಂದ ಅಭ್ಯಾಸ ಮಾಡಿ ಎಂದು ವಿದ್ಯಾರ್ಥಿಗಳಿಗೆ ಕಿವಿಮಾತು ಹೇಳಿದರು.
ಅಧ್ಯಕ್ಷತೆ ವಹಿಸಿದ್ದ ವಿವೇಕಾನಂದ ವಿದ್ಯಾವರ್ಧಕ ಸಂಘದ ಕಾರ್ಯದರ್ಶಿ ಡಾ| ಕೆ.ಎಂ. ಕೃಷ್ಣ ಭಟ್ ಮಾತನಾಡಿ, ಸ್ವರಕ್ಷಣೆ ಇಲ್ಲದೆ ಇನ್ನೊಬ್ಬರ ರಕ್ಷಣೆ ಮಾಡಲು ಸಾಧ್ಯವಿಲ್ಲ. ಈ ನಿಟ್ಟಿನಲ್ಲಿ ಕರಾಟೆಯನ್ನು ಮೊದಲು ಮೈಗೂಡಿಸಿಕೊಂಡು ತಮ್ಮನ್ನು ರಕ್ಷಣೆ ಮಾಡುವ ಮೂಲಕ ಇತರರನ್ನೂ ರಕ್ಷಣೆ ಮಾಡಿಕೊಳ್ಳಬಹುದು ಎಂದರು.
ವಿವೇಕಾನಂದ ಶಾಲಾ ಅಧ್ಯಕ್ಷ ವೆಂಕಟೇಶ್ವರ ಅಮೈ ಎ., ಆಡಳಿತ ಮಂಡಳಿ ಸಂಚಾಲಕ ಮುರಳೀಧರ ಕೆ., ಮುಖ್ಯಶಿಕ್ಷಕ ಸತೀಶ್ ಕುಮಾರ್ ರೈ, ಕರಾಟೆ ಶಿಕ್ಷಕ ಆನಂದ ದೇವಾಡಿಗ ಉಪಸ್ಥಿತರಿದ್ದರು.
ಇನ್ಸಿಟ್ಯೂಟ್ ಆಫ್ ಕರಾಟೆ ಆಂಡ್ ಅಲೈಡ್ ಆರ್ಟ್ಸ್ ಪುತ್ತೂರು ಶಾಖೆಯ ಮುಖ್ಯ ಶಿಕ್ಷಕ ಶಿಹಾನ್ ಎಂ. ಸುರೇಶ್ ಪ್ರಾಸ್ತಾವಿಕವಾಗಿ ಸ್ವಾಗತಿಸಿದರು. ನಗರ ಬಿಇಎಂ ಶಾಲಾ ಮುಖ್ಯಶಿಕ್ಷಕ ಮನೋಹರ ಕುಮಾರ್, ಪಶು ವೈದ್ಯಾ ಧಿಕಾರಿ ಡಾ| ಉಷಾ ಎನ್. ನಿರೂಪಿಸಿದರು. ಇನ್ಸಿಟ್ಯೂಟ್ ಆಫ್
ಕರಾಟೆ ಆಂಡ್ ಅಲೈಡ್ ಆರ್ಟ್ಸ್ ಸದಸ್ಯ ಗೋಪಾಲ್ ವಂದಿಸಿದರು.
ದೆಹಲಿಯ ನಿರ್ಭಯಾ ಹತ್ಯೆಯ ಬಳಿಕ ಇಂತಹ ಘಟನೆ ಮರುಕಳಿಸಬಾರದು ಎಂದು ಸರಕಾರ ಗಂಭೀರ ಚಿಂತನೆ ನಡೆಸಿದೆ. ಗ್ರಾಮೀಣ, ನಗರ ಪ್ರದೇಶದ ಶಾಲಾ- ಕಾಲೇಜುಗಳಲ್ಲಿ ಕರಾಟೆಯನ್ನು ಕಡ್ಡಾಯಗೊಳಿಸಿದೆ. ಹೆಣ್ಣು ಮಕ್ಕಳಿಗೆ ಇದರಲ್ಲಿ ಮೊದಲ ಆದ್ಯತೆ ನೀಡಲಾಗಿದೆ ಎಂದು ಜಿಲ್ಲಾ ಶಿಕ್ಷಣ ಇಲಾಖೆ ಉಪನಿರ್ದೇಶಕ ಶಿವರಾಮಯ್ಯ ವೈ. ತಿಳಿಸಿದ್ದಾರೆ.
1,500 ಸ್ಪರ್ಧಿಗಳು
ರಾಜ್ಯಮಟ್ಟದ ಕರಾಟೆ ಚಾಂಪಿಯನ್ ಶಿಪ್‌ನಲ್ಲಿ 200 ಶಾಲಾ- ಕಾಲೇಜುಗಳು ಭಾಗವಹಿಸಿವೆ. 1,500ಕ್ಕೂ ಹೆಚ್ಚು ವಿದ್ಯಾರ್ಥಿಗಳು ಹೆಸರು ನೋಂದಾಯಿಸಿಕೊಂಡಿದ್ದಾರೆ. ಎರಡು ದಿನಗಳ ಕಾಲ ನಡೆಯುವ ಪಂದ್ಯಕ್ಕಾಗಿ ಏಳು ಮ್ಯಾಟ್ ಅಂಕಣ ನಿರ್ಮಿಸಲಾಗಿದೆ. ಸ್ಪರ್ಧಾ ಫಲಿತಾಂಶಕ್ಕಾಗಿ ಎಲ್‌ಇಡಿ ಡಿಸ್‌ಪ್ಲೆ ಅಳವಡಿಸಲಾಗಿದೆ. ಪ್ರತಿ ಅಂಕಣದಲ್ಲೂ ಎಲ್‌ಇಡಿ ಮೂಲಕ ಸ್ಪರ್ಧೆಯ ಮಾಹಿತಿ ನೀಡುವ ವ್ಯವಸ್ಥೆ ಮಾಡಲಾಗಿದೆ.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
MUST WATCH
ದೈವ ನರ್ತಕರಂತೆ ಗುಳಿಗ ದೈವದ ವೇಷ ಭೂಷಣ ಧರಿಸಿ ಕೋಲ ಕಟ್ಟಿದ್ದ ಅನ್ಯ ಸಮಾಜದ ಯುವಕ
ಹಕ್ಕಿಗಳಿಗಾಗಿ ಕಲಾತ್ಮಕ ವಸ್ತುಗಳನ್ನು ತಯಾರಿಸುತ್ತಿರುವ ಪಕ್ಷಿ ಪ್ರೇಮಿ
ಮಂಗಳೂರಿನ ನಿಟ್ಟೆ ವಿಶ್ವವಿದ್ಯಾನಿಲಯದ ತಜ್ಞರ ಅಧ್ಯಯನದಿಂದ ಬಹಿರಂಗ
ಈ ಹೋಟೆಲ್ ಗೆ ಪೂರಿ, ಬನ್ಸ್, ಕಡುಬು ತಿನ್ನಲು ದೂರದೂರುಗಳಿಂದಲೂ ಜನ ಬರುತ್ತಾರೆ
ಹರೀಶ್ ಪೂಂಜ ಪ್ರಚೋದನಾಕಾರಿ ಹೇಳಿಕೆ ವಿರುದ್ಧ ಪ್ರಾಣಿ ಪ್ರಿಯರ ಆಕ್ರೋಶ
ಹೊಸ ಸೇರ್ಪಡೆ
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.