ಕೆಮ್ರಾಲ್ ಹಕ್ಕು ಪತ್ರ ವಿತರಣೆ
Team Udayavani, Jan 10, 2018, 10:04 AM IST
ಕೆಮ್ರಾಲ್ : ಗ್ರಾಮೀಣ ಭಾಗದಲ್ಲಿ ಬಡ ವರ್ಗಕ್ಕೆ ಮೂಲ ಸೌಕರ್ಯಗಳಾದ ವಸತಿ, ಕುಡಿಯುವ ನೀರು, ಪಡಿತರ ಚೀಟಿ, ಮನೆಗೆ ವಿದ್ಯುತ್ ಸೌಲಭ್ಯ ಅಗತ್ಯ ಎಂದು ಶಾಸಕ ಅಭಯಚಂದ್ರ ಜೈನ್ ಹೇಳಿದರು. ಅವರು ಜ. 9 ರಂದು ಕೆಮ್ರಾಲ್ ಗ್ರಾಮ ಪಂಚಾಯತ್ ವ್ಯಾಪ್ತಿಯಲ್ಲಿನ 94 ಸಿ.ಸಿ. ಅನ್ವಯ 96 ಮಂದಿಗೆ ಹಕ್ಕು ಪತ್ರ ವಿತರಿಸಿ ಮಾತನಾಡಿದರು.
ಹಲವು ವರ್ಷಗಳಿಂದ ಸರಕಾರಿ ಜಾಗದಲ್ಲಿ ವಾಸ ಮಾಡಿಕೊಂಡಿರುವ ಬಡ ವರ್ಗಕ್ಕೆ ಮನೆ ಕಟ್ಟಲು ಹಾಗೂ ಇತರ ಸೌಲಭ್ಯಕ್ಕೆ ತೊಡಕು ಉಂಟಾಗಿತ್ತು. ಈ 94 ಸಿಸಿ ಯೋಜನೆಯಿಂದ ಹಕ್ಕು ಪತ್ರ ಲಭಿಸಿ ನೆಮ್ಮದಿಯ ಬದುಕು ಕಾಣುವಂತಾಗಿದೆ. ಗ್ರಾಮ ಪಂಚಾಯತ್ ಸದಸ್ಯರು ಪಕ್ಷಭೇದ ಮರೆತು ಜನರಿಗೆ ಸೌಲಭ್ಯಗಳ ಬಗ್ಗೆ ತಿಳಿಹೇಳಬೇಕು ಎಂದರು.
ಕುಡಿಯುವ ನೀರಿನ ಯೋಜನೆ ಅನುಷ್ಠಾನಕ್ಕೆ
ಕೆಮ್ರಾಲ್ ಹಾಗೂ ಪಕ್ಕದ ಗ್ರಾಮ ಪಂಚಾಯತ್‌ಗಳನ್ನು ಸೇರಿಸಿ ಪಂಜದಲ್ಲಿ ನಂದಿನಿ ನದಿಗೆ ಅಣೆಕಟ್ಟು ಕಟ್ಟಿ ಇಲ್ಲಿನ
ಗ್ರಾಮಕ್ಕೆ ಶಾಶ್ವತವಾಗಿ ಬಹುಗ್ರಾಮ ಕುಡಿಯುವ ನೀರಿನ ಯೋಜನೆ ಅನುಷ್ಠಾನ ಮಾಡಲಾಗುವುದು ಎಂದು ಶಾಸಕರು ತಿಳಿಸಿದರು.
ಗ್ರಾಮ ಪಂಚಾಯತ್ ಅಧ್ಯಕ್ಷ ನಾಗೇಶ್ ಅಂಚನ್ ಅಧ್ಯಕ್ಷತೆ ವಹಿಸಿದ್ದರು. ತಾ.ಪಂ. ಸದಸ್ಯೆ ವಜ್ರಾಕ್ಷಿ ಶೆಟ್ಟಿ, ಉಪಾಧ್ಯಕ್ಷೆ
ತುಳಸಿ ಶೆಟ್ಟಿಗಾರ್, ಗ್ರಾಮ ಪಂಚಾಯತ್ ಸದಸ್ಯರಾದ ಮಯ್ಯದ್ದಿ, ಸುಧಾಕರ ಶೆಟ್ಟಿ, ಸೇಸಪ್ಪ ಸಾಲ್ಯಾನ್, ಸುರೇಶ್ ದೇವಾಡಿಗ ಪಂಜ, ಹರಿಪ್ರಸಾದ್, ರೇವತಿ ಶೆಟ್ಟಿಗಾರ್, ಮಮತಾ, ಪ್ರಮೀಳಾ, ಸುಮಲಾತಾ, ಸುಮತಿ, ಆಶಾಲತಾ, ಮಾಲತಿ , ಲೋಹಿತ್ ಉಪಸ್ಥಿತರಿದ್ದರು. ಮೂಲ್ಕಿ ತಹಶೀಲ್ದಾರ್ ಮಾಣಿಕ್ಯ ಪ್ರಸ್ತಾವನೆಗೈದರು. ಕೆಮ್ರಾಲ್ ಗ್ರಾಮ ಕರಣಿಕ ಸಂತೋಷ್ ಹಕ್ಕುಪತ್ರ ವಿವರ ನೀಡಿದರು. ಪಿಡಿಒ ರಮೇಶ್ ರಾಥೋಡ್ ನಿರೂಪಿಸಿದರು.
ಶೀಘ್ರದಲ್ಲಿ ಮೂಲ್ಕಿ ತಾಲೂಕು
ಮೂಲ್ಕಿ ತಾಲೂಕು ಕಚೇರಿಗೆ 1. 40 ಎಕರೆ ಜಾಗ ಮಂಜೂರು ಮಾಡಿದ್ದು, ಜಾಗ ಕಾದಿರಿಸಲಾಗಿದೆ. ಮುಂದಿನ ದಿನದಲ್ಲಿ ಮೂಲ್ಕಿಯನ್ನು ತಾಲೂಕು ಕೇಂದ್ರವನ್ನಾಗಿ ಮಾಡಲಾಗುವುದು. ಜಿಲ್ಲೆಯಲ್ಲಿ ಯಾವ ವಿಧಾನ ಸಭಾ
ಕ್ಷೇತ್ರಕ್ಕೂ ಎರಡು ವಿಶೇಷ ತಹಶಿಲ್ದಾರು ಇಲ್ಲ. ಆದರೇ ಮೂಲ್ಕಿ – ಮೂಡಬಿದಿರೆ ವಿಧಾನ ಸಭಾ ಕ್ಷೇತ್ರದಲ್ಲಿ ಇಬ್ಬರು
ತಹಶೀಲ್ದಾರರ ನೇಮಕವಾಗಿದೆ ಎಂದರು.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
MUST WATCH
ಹೊಸ ಸೇರ್ಪಡೆ
Mudhol: ಪ್ರಯಾಣಿಕರ ಉಪಯೋಗಕ್ಕೆ ಬಾರದ ತಂಗುದಾಣ… ಅಂಗಡಿ ಮುಂಗಟ್ಟಿನಿಂದ ಕಣ್ಮರೆ
Hubli: ರಾಜ್ಯದ ಕಾಂಗ್ರೆಸ್ ಸರ್ಕಾರ ಪತನಗೊಳ್ಳುವುದು ಖಚಿತ: ಜಗದೀಶ ಶೆಟ್ಟರ್
Shettar: ಪ್ರಧಾನಿ ಮೋದಿ ಭೇಟಿಯಾದ ಶೆಟ್ಟರ್; ಬೆಳಗಾವಿಗೆ ವಂದೇ ಭಾರತ್ ವಿಸ್ತರಣೆಗೆ ಮನವಿ
Bengaluru: 54 ಪಾಲಿಕೆ ಕಚೇರಿಗಳ ಮೇಲೆ ಲೋಕಾಯುಕ್ತ ದಾಳಿ
Kalaburagi: ಡ್ರಗ್ಸ್ ದಂಧೆಕೋರನ ಮೇಲೆ ಕಲಬುರಗಿಯಲ್ಲಿ ಪೊಲೀಸ್ ಫೈರಿಂಗ್
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.