ಬೈಕ್‌ನಲ್ಲೇ ತ್ರಿರಾಷ್ಟ್ರ ಸುತ್ತಾಡಿದ ಸಚಿನ್‌, ಅಭಿಷೇಕ್‌ ಮಂಗಳೂರಿಗೆ


Team Udayavani, Sep 3, 2018, 10:06 AM IST

3-september-1.jpg

ಮಹಾನಗರ: ವಿದೇಶಗಳ ಸಂಸ್ಕೃತಿ, ಅಲ್ಲಿನ ಆಹಾರ ಕ್ರಮಗಳನ್ನು ಅಧ್ಯಯನ ಮಾಡಲೆಂದು ಬೈಕ್‌ನಲ್ಲಿಯೇ ದೇಶಸುತ್ತಲು ತೆರಳಿದ್ದ ಕಾಪು ಮಲ್ಲಾರಿನ ಸಚಿನ್‌ ಶೆಟ್ಟಿ ಹಾಗೂ ಅವರ ಸ್ನೇಹಿತ ಕಾಪು ಹಳೆಮಾರಿಗುಡಿ ನಿವಾಸಿ ಅಭಿಷೇಕ್‌ ಶೆಟ್ಟಿ ಅವರು 38 ದಿನಗಳ ಬಳಿಕ ತಮ್ಮ ಯಾತ್ರೆ ಪೂರ್ಣಗೊಳಿಸಿ ರವಿವಾರ ಮಂಗಳೂರಿಗೆ ಆಗಮಿಸಿದ್ದಾರೆ.

ಭಾರತ, ನೇಪಾಳ, ಭೂತಾನ್‌ ದೇಶಗಳ ಜನಜೀವನ, ಸಂಸ್ಕೃತಿ, ಆಹಾರ ಪದ್ಧತಿಗಳ ಬಗ್ಗೆ ಅಧ್ಯಯನಕ್ಕಾಗಿ ಜು. 27ರಂದು ಕಾಪುವಿನಿಂದ ಹೊರಟ ಈ ಇಬ್ಬರು ಸ್ನೇಹಿತರು ಮಹಾರಾಷ್ಟ್ರದ ಸತಾರಾ ಮೂಲಕ ಮುಂಬಯಿ ತಲುಪಿದರು. ಆ ಬಳಿಕ ಮಧ್ಯಪ್ರದೇಶದ ಇಂದೋರ್‌, ಉತ್ತರ ಪ್ರದೇಶದ ಜಾನ್ಸಿ, ಲಕ್ನೌ , ನೇಪಾಳದ ಸನೌಲಿ, ಕಾಠ್ಮಂಡು, ಭೂತಾನ್‌ನ ತಿಂಪು, ಅಸ್ಸಾಂನ ಗುವಾಹಟಿ, ನಾಗಲ್ಯಾಂಡ್‌ನ‌ ಕೊಹಿಮಾ, ಮಣಿಪುರದ ಇಂಫಾಲ್‌, ಮೇಘಾಲಯದ ಶಿಲ್ಲಾಂಗ್‌, ಪಶ್ಚಿಮ ಬಂಗಾಲದ ಸಿಲಿಗುರಿ, ಕೋಲ್ಕತ್ತಾ, ಒಡಿಶಾದ ಪುರಿ, ಆಂಧ್ರಪ್ರದೇಶದ ವಿಶಾಖ ಪಟ್ಟಣ, ವಿಜಯವಾಡ, ರಾಜ್ಯದ ಬೆಂಗಳೂರು ಮುಖಾಂತರ ರವಿವಾರ ಮಂಗಳೂರು ತಲುಪಿದ್ದಾರೆ. 

ಬೆಳಗ್ಗೆ 6 ಕ್ಕೆ ಪ್ರಯಾಣ ಆರಂಭ
ಸಚಿನ್‌ ಶೆಟ್ಟಿ ಮತ್ತು ಅಭಿಷೇಕ್‌ ಶೆಟ್ಟಿ ಅವರು ಪ್ರತೀ ದಿನ ಬೆಳಗ್ಗೆ 6 ಗಂಟೆಗೆ ತಮ್ಮ ರೈಡ್‌ ಪ್ರಾರಂಭಿಸಿ, ರಾತ್ರಿ 12 ಗಂಟೆವರೆಗೂ ಬೈಕ್‌ನಲ್ಲಿ ಸಂಚರಿಸುತ್ತಿದ್ದರು. ಕೆಲವೊಂದು ಬಾರಿ ದಿನಕ್ಕೆ 500 ಕಿ.ಮೀ.ಗೂ ಹೆಚ್ಚು ರೈಡ್‌ ಮಾಡಿದ್ದಿದೆಯಂತೆ. ತಮ್ಮ ಮೊಬೈಲ್‌ ಚಾರ್ಜಿಂಗ್‌ಗೆ, ಬ್ಯಾಗ್‌ ಇಡಲು ವ್ಯವಸ್ಥೆ ಮುಂತಾದ ಎಲ್ಲ ಸೌಕರ್ಯಗಳನ್ನೂ ತಮ್ಮ ಬೈಕ್‌ ಗಳಲ್ಲಿಯೇ ಮಾಡಿಕೊಂಡಿದ್ದರು.

ಸಚಿನ್‌ ಶೆಟ್ಟಿ ಅವರು ರಾಯಲ್‌ ಎನ್‌ಫೀಲ್ಡ್‌ ಹಿಮಾಲಯನ್‌, ಅಭಿಷೇಕ್‌ ಅವರು ರಾಯಲ್‌ ಎನ್‌ಫೀಲ್ಡ್‌ ಕ್ಲಾಸಿಕ್‌ 350 ಬೈಕ್‌ ಗಳಲ್ಲಿ ತಮ್ಮ ಪ್ರಯಾಣ ಪ್ರಾರಂಭಿಸಿ ಒಟ್ಟಾರೆ 13,560 ಕಿ.ಮೀ. ದೂರ ಕ್ರಮಿಸುವುದರ ಮೂಲಕ ಸೈ ಎನಿಸಿಕೊಂಡಿದ್ದಾರೆ. ಸಚಿನ್‌ ಶೆಟ್ಟಿ ಅವರು ಸಾಕ್ಷ್ಯಚಿತ್ರ ನಿರ್ಮಿಸಲು ಕಳೆದ ವರ್ಷ ಏಕಾಂಗಿಯಾಗಿ ವಿವಿಧ ರಾಜ್ಯಗಳ ಜೀವನ ಪದ್ಧತಿ ಹಾಗೂ ಆಹಾರ ಪದ್ಧತಿ ಬಗ್ಗೆ ಕುರಿತ ಅಧ್ಯಯನ ನಡೆಸಲು ‘ಲೈಟ್ಸ್‌ ಕೆಮರಾ ಲಡಾಕ್‌ ಟೂರ್‌’ ಎಂಬ ಹೆಸರಿನಲ್ಲಿ 11,000 ಕಿ.ಮೀ. ಲಡಾಕ್‌ವರೆಗೆ ಬೈಕ್‌ ಯಾತ್ರೆ ನಡೆಸಿ ಗಮನಸೆಳೆದಿದ್ದರು.

ಚಲನಚಿತ್ರದಲ್ಲಿ ಕಮಾಲ್‌
ಸಚಿನ್‌ ಶೆಟ್ಟಿ ಅವರು ಅತ್ಯತ್ತಮ ಛಾಯಾಚಿತ್ರಗ್ರಾಹಕರಾಗಿದ್ದು, ಸೌತ್‌ಕೆನರಾ ಫೋಟೊ ಗ್ರಾಫರ್ ಅಸೋಶಿಯೇಶನ್‌ನ ಕಾಪು ವಲಯದ ಸಕ್ರಿಯ ಸದಸ್ಯರಾಗಿದ್ದಾರೆ. ಕನ್ನಡ ಹಾಗೂ ತುಳು ಚಲನ ಚಿತ್ರಕ್ಕೂ ಛಾಯಾಚಿತ್ರಗ್ರಹಣ ಮಾಡಿದ್ದು, ಇತ್ತೀಚೆಗೆ ಬಿಡುಗಡೆ ಆದ ‘ಅಮ್ಮೆರ್‌ ಪೊಲೀಸ್‌’ ಚಲನಚಿತ್ರದಲ್ಲಿ ಕೆಮರಾಮನ್‌ ಆಗಿದ್ದರು.

ಮಂಗಳೂರಿನಲ್ಲಿ ಸ್ವಾಗತ
ಸಚಿನ್‌ ಶೆಟ್ಟಿ ಹಾಗೂ ಅಭಿಷೇಕ್‌ ಶೆಟ್ಟಿ ಮರಳಿ ತಾಯ್ನಾಡು ಮಂಗಳೂರಿಗೆ ಆಗಮಿಸಿದ ವೇಳೆ ಯುನೈಟೆಡ್‌ ಬೈಕರ್ಸ್‌ ಮಂಗಳೂರು ಹಾಗೂ ಸ್ನೇಹಿತರು, ಕುಟುಂಬಸ್ಥರು ನಗರದ ಪಡೀಲ್‌ನ ಅಯ್ಯಪ್ಪ ಮಂದಿರದ ಮುಂಭಾಗದ ಮೋಟೋ ಗ್ಯಾರೇಜ್‌ ಬಳಿ ಸ್ವಾಗತಿಸಿದರು.

ವಿದೇಶಿಗರಿಗೆ ಕರಾವಳಿ ಸಂಸ್ಕೃತಿ ಅರಿವು
ಬೈಕ್‌ ರೈಡರ್‌ ಸಚಿನ್‌ ಶೆಟ್ಟಿ ಅವರು ‘ಸುದಿನ’ ಜತೆ ತಮ್ಮ ಅನುಭವವನ್ನು ಹಂಚಿಕೊಳ್ಳುತ್ತಾ, ನಮ್ಮ ಜರ್ನಿಯಲ್ಲಿ ಪ್ರತಿಯೊಂದು ಪ್ರದೇಶದಲ್ಲಿಯೂ ಬೇರೆ ಬೇರೆ ಸಂಸ್ಕೃತಿ ಅನಾವರಣವಾಗಿತ್ತು. ಅಲ್ಲಿಯ ಆಹಾರ ಕ್ರಮ ಸೇರಿದಂತೆ ಸುತ್ತಮುತ್ತಲಿನ ಪ್ರದೇಶದ ವಿಡಿಯೋವನ್ನು ಚಿತ್ರೀಕರಿಸಿ ನಮ್ಮ ಯೂಟ್ಯೂಬ್‌ ಚಾನೆಲ್‌ಗೆ ಹಾಕುತ್ತಿದ್ದೆವು. ಅಲ್ಲದೆ, ಕರಾವಳಿ ಪ್ರದೇಶದ ಆಹಾರ ಕ್ರಮಗಳು ವಿದೇಶಿಗರು ಸೇರಿದಂತೆ ಬೇರೆ ರಾಜ್ಯದ ಮಂದಿಗೆ ಹೊಸತು. ಅದಕ್ಕೆಂದು ಇಲ್ಲಿನ ಸಂಸ್ಕೃತಿಯನ್ನು ಅವರಿಗೆ ತಿಳಿಯಪಡಿಸುತ್ತಿದ್ದೆವು ಎಂದು ಹೇಳಿದ್ದಾರೆ.

ಪ್ರಯಾಣ ವೇಳೆ ಅಪಘಾತವಾಗಿತ್ತು 
ತಮ್ಮ ಪಯಣದಲ್ಲಿ ವಿಜಯವಾಡದಿಂದ ವಿಶಾಖಪಟ್ಟಣ ಮಾರ್ಗದ ಮಧ್ಯೆ ರಸ್ತೆ ಇಬ್ಬರಿಗೂ ಬೈಕ್‌ ಅಪಘಾತವಾಗಿ ಸಣ್ಣಪುಟ್ಟ ಗಾಯಗಳಾಗಿತ್ತು. ಆದರೆ ಕೂಡಲೇ ಹತ್ತಿರ ಆಸ್ಪತ್ರೆಯಲ್ಲಿ ಚಿಕಿತ್ಸೆ ತೆಗೆದುಕೊಂಡ ಬಳಿಕ ಮರು ಪ್ರಯಾಣ ಆರಂಭಿಸಿದ್ದರು.

ಟಾಪ್ ನ್ಯೂಸ್

DK-Shivakumar

Racial Remark: ಕುಮಾರಸ್ವಾಮಿಯವರ “ಕರಿಯ” ಎಂದದ್ದು ತಪ್ಪು: ಡಿ.ಕೆ.ಶಿವಕುಮಾರ್‌

MNG-hosp

Mangaluru: ವೆನ್ಲಾಕ್‌ ಆಸ್ಪತ್ರೆ 10 ಕೋಟಿ ರೂ. ವೆಚ್ಚದಲ್ಲಿ ಆಧುನೀಕರಣ: ಸಚಿವ ದಿನೇಶ್‌

Jameer

Illegal Property Case: ಸಚಿವ ಜಮೀರ್‌ ಅಹ್ಮದ್‌ಖಾನ್‌ಗೆ ಲೋಕಾಯುಕ್ತದಿಂದ ನೋಟಿಸ್‌

Gsat20

Space Science: ಸ್ಪೇಸ್‌ಎಕ್ಸ್‌ನಿಂದ ಮೊದಲ ಬಾರಿ ಇಸ್ರೋ ಉಪಗ್ರಹ ನಭಕ್ಕೆ!

Yathanaa

Waqf Issue: ಮೂರು ತಂಡ ರಚನೆಗೆ ಅವ್ವ-ಅಪ್ಪ ಏನೂ ಇಲ್ಲ: ಬಸನಗೌಡ ಪಾಟೀಲ್‌ ಯತ್ನಾಳ್‌ ಆಕ್ಷೇಪ

1-jenu

GKVK Research; ಇನ್ನು ಜೇನು ಗೂಡು ಕಟ್ಟಬೇಕಿಲ್ಲ: 3ಡಿ ಗೂಡು ಆವಿಷ್ಕಾರ!

GTD

Court Judgement: ತಪ್ಪಿತಸ್ಥ ಎಂದಾದರೆ ಮಾತ್ರ ರಾಜೀನಾಮೆ ನೀಡಬೇಕು: ಜಿ.ಟಿ.ದೇವೇಗೌಡ


ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು

ಬೋಂಡಾ, ಬನ್ಸ್ ಮತ್ತು ಕೇಕ್‌

ಬೋಂಡಾ, ಬನ್ಸ್ ಮತ್ತು ಕೇಕ್‌

promegrnate

ಉಪಬೆಳೆಯಾಗಿ ದಾಳಿಂಬೆ

ಕೂಲ್‌ ಕೂಲ್‌ ಬೇಸಗೆಯಲ್ಲಿ ಜಾನುವಾರುಗಳ ಆರೈಕೆ ಹೀಗಿರಲಿ

ಕೂಲ್‌ ಕೂಲ್‌ ಬೇಸಗೆಯಲ್ಲಿ ಜಾನುವಾರುಗಳ ಆರೈಕೆ ಹೀಗಿರಲಿ

go-green

ಮನೆಯಲ್ಲೇ ಹಸಿರು ಕ್ರಾಂತಿಯಾಗಲಿ…

ಮನೆಯ ಒಳಾಂಗಣದ ಅಂದ ಹೆಚ್ಚಿಸುವ ಗಾರ್ಡನ್‌

ಮನೆಯ ಒಳಾಂಗಣದ ಅಂದ ಹೆಚ್ಚಿಸುವ ಗಾರ್ಡನ್‌

MUST WATCH

udayavani youtube

ಇಂಗ್ಲೀಷ್ ಒಂದು ಭಾಷೆ ಅನ್ನೋದೇ ತಪ್ಪು -ಪ್ರಕಾಶ್ ಬೆಳವಾಡಿ

udayavani youtube

ಕಾರಿನ ಟಯರ್ ಒಳಗಿತ್ತು ಬರೋಬ್ಬರಿ 50 ಲಕ್ಷ

udayavani youtube

ಹೊಸ ತಂತ್ರಜ್ಞಾನಕ್ಕೆ ತೆರೆದುಕೊಂಡ ತುಳುನಾಡ ಕಂಬಳ

udayavani youtube

ಉಡುಪಿಯ ಶ್ರೀ ಕೃಷ್ಣ ಮಠದಲ್ಲಿ ಕಾರ್ತಿಕ ಲಕ್ಷದೀಪೋತ್ಸವ

udayavani youtube

ಪುಂಗನೂರು ತಳಿಯ ಹಾಲು ಯಾವೆಲ್ಲ ಕಾಯಿಲೆಗಳನ್ನು ಗುಣಪಡಿಸುತ್ತದೆ ?

ಹೊಸ ಸೇರ್ಪಡೆ

DK-Shivakumar

Racial Remark: ಕುಮಾರಸ್ವಾಮಿಯವರ “ಕರಿಯ” ಎಂದದ್ದು ತಪ್ಪು: ಡಿ.ಕೆ.ಶಿವಕುಮಾರ್‌

Jameer

Illegal Property Case: ಸಚಿವ ಜಮೀರ್‌ ಅಹ್ಮದ್‌ಖಾನ್‌ಗೆ ಲೋಕಾಯುಕ್ತದಿಂದ ನೋಟಿಸ್‌

MNG-hosp

Mangaluru: ವೆನ್ಲಾಕ್‌ ಆಸ್ಪತ್ರೆ 10 ಕೋಟಿ ರೂ. ವೆಚ್ಚದಲ್ಲಿ ಆಧುನೀಕರಣ: ಸಚಿವ ದಿನೇಶ್‌

Gsat20

Space Science: ಸ್ಪೇಸ್‌ಎಕ್ಸ್‌ನಿಂದ ಮೊದಲ ಬಾರಿ ಇಸ್ರೋ ಉಪಗ್ರಹ ನಭಕ್ಕೆ!

Yathanaa

Waqf Issue: ಮೂರು ತಂಡ ರಚನೆಗೆ ಅವ್ವ-ಅಪ್ಪ ಏನೂ ಇಲ್ಲ: ಬಸನಗೌಡ ಪಾಟೀಲ್‌ ಯತ್ನಾಳ್‌ ಆಕ್ಷೇಪ

Thanks for visiting Udayavani

You seem to have an Ad Blocker on.
To continue reading, please turn it off or whitelist Udayavani.