ದೈವಗಳ ನರ್ತನಕ್ಕೆ  ಸಾಹೇಬರ ವಾದ್ಯ!


Team Udayavani, Mar 16, 2019, 5:58 AM IST

16-march-6.jpg

ಆಲಂಕಾರು : ಪರಶುರಾಮನ ಸೃಷ್ಟಿಯ ನಾಡೆಂದು ಪ್ರಸಿದ್ಧಿ ಪಡೆದ ಕರಾವಳಿ ದೈವಾರಾಧನೆ, ನಾಗಾರಾಧನೆಯ ಪ್ರಮುಖ ಧಾರ್ಮಿಕ ಕೇಂದ್ರ. ಸಾಮರಸ್ಯದ ಬದುಕು ಕರಾವಳಿ ಜನರ ಉನ್ನತ ಆದರ್ಶವೂ ಆಗಿದೆ. ಅದಕ್ಕೆ ಪೂರಕವೆನ್ನುವಂತೆ ಹಿಂದೂಗಳ ದೈವಗಳ ನೇಮಕ್ಕೆ ಪೆರಾಬೆ ಗ್ರಾಮದ ಚಾಮೆತ್ತಡ್ಕ ಪಿ.ಆರ್‌. ಮಹಮ್ಮದ್‌ ಸಾಹೇಬ್‌ (61) ಕುಟುಂಬ ನಾಲ್ಕೂವರೆ ದಶಕಗಳಿಂದ ವಾದ್ಯ, ಬ್ಯಾಂಡ್‌, ವಾಲಗ ನುಡಿಸುತ್ತಿದೆ.

ಚಾಮೆತ್ತಡ್ಕ ಪಿ.ಆರ್‌. ಮಹಮ್ಮದ್‌ ಸಾಹೇಬ್‌ ನೇತೃತ್ವದ ವಾದ್ಯ ತಂಡ ಜನಪ್ರಿಯವಾಗಿದೆ. ಹಿಂದೂಗಳ ದೈವಾರಾಧನೆಯ ಕುರಿತು ವಿಸ್ತಾರವಾದ ಮಾಹಿತಿ ಅವರಿಗಿದೆ. ಸರ್ವ ಧರ್ಮಗಳ ಪ್ರೀತಿಯ ವ್ಯಕ್ತಿ ಅವರು. ತಮ್ಮ ಸಹೋದರರನ್ನು ಸೇರಿಸಿಕೊಂಡೇ ಬ್ಯಾಂಡ್‌ ವಾಲಗದ ತಂಡವನ್ನು ಆರಂಭಿಸಿದ್ದರು. ಇತ್ತೀಚಿನ ದಿನಗಳಲ್ಲಿ ಸಹೋದರರು ಬದಲಿ ಉದ್ಯೋಗದ ಮೊರೆ ಹೋಗಿರುವ ಕಾರಣ ಬೇರೆಯವರೊಂದಿಗೆ ಸೇರಿಸಿಕೊಂಡು ಪಿ.ಆರ್‌. ಮಹಮ್ಮದ್‌ ವಾಲಗ ನುಡಿಸುತ್ತಿದ್ದಾರೆ.

ಲಕ್ಷದೀಪೋತ್ಸವ ದಾರಿದೀಪ
45 ವರ್ಷಗಳಿಂದ ವಾದ್ಯ ಸೇವೆ ನೀಡುತ್ತಿರುವ ಪಿ.ಆರ್‌. ಮಹಮ್ಮದ್‌ ಸಾಹೇಬ್‌ ಅವರಿಗೆ ಧರ್ಮಸ್ಥಳದ ಲಕ್ಷದೀಪೋತ್ಸವ ದಾರಿದೀಪವಾಗಿದೆ. ಸಾಹೇಬರು ತಮ್ಮ 6ನೇ ವಯಸ್ಸಿನಿಂದ ವಾದ್ಯದ ಬಗ್ಗೆ ಒಲವು ಮೂಡಿಸಿಕೊಂಡಿದ್ದರು. ಬಡತನದ ನಡುವೆಯೂ 6ನೇ ತರಗತಿ ವಿದ್ಯಾಭ್ಯಾಸ ಪಡೆದಿದ್ದ ಸಾಹೇಬರಿಗೆ ಆನಂತರದಲ್ಲಿ ವಾದ್ಯವೇ ಸರ್ವಸ್ವವಾಯಿತು. ಚಿಕ್ಕಂದಿನಿಂದಲೇ ಧರ್ಮಸ್ಥಳದ ಲಕ್ಷದೀಪೋತ್ಸವಕ್ಕೆ ವರ್ಷಂಪ್ರತಿ ತನ್ನ ಸಂಬಂಧಿಕರೊಂದಿಗೆ ಭೇಟಿ ನೀಡುತ್ತಿದ್ದ ಸಾಹೇಬರಿಗೆ ಅಲ್ಲಿ ವಾದ್ಯಗಾರರು ನುಡಿಸುವ ಸ್ವರಗಳೇ ಪ್ರೇರಣೆಯಾದವು. ಮುಂದಿನ ದಿನಗಳಲ್ಲಿ ತನ್ನ ಸಂಬಂಧಿಕರೊಂದಿಗೆ ವಾದ್ಯ ನುಡಿಸುವುದನ್ನು ಕಲಿತು, ಅದನ್ನೇ ಜೀವನೋಪಾಯವಾಗಿಯೂ ಮಾಡಿಕೊಂಡರು.

ಸೇವೆಯಲ್ಲಿ ಸಾರ್ಥಕತೆ ಇದೆ
ದೈವಗಳ ನರ್ತನೋತ್ಸವ ಸ್ಥಳದಲ್ಲಿ ದೈವದ ಕೆಲಸದಲ್ಲಿ ಸ್ವಲ್ಪ ವ್ಯತ್ಯಾಸವಾದರೂ ಅದನ್ನು ಅವರಿಗೆ ತಿಳಿಸುತ್ತೇನೆ. ತಪ್ಪಾದ ಬಗ್ಗೆ ಮಾಹಿತಿ ನೀಡಿ, ಹಿಂದೂ ಸಂಪ್ರದಾಯದಂತೆ ದೈವಗಳ ನರ್ತನೋತ್ಸವ ಹೇಗೆ ನಡೆಯಬೇಕೋ ಅದರ ಬಗ್ಗೆ ತಿಳಿಹೇಳುತ್ತೇನೆ. ನನ್ನ ಸಮುದಾಯದ ಬಗ್ಗೆ ಯಾರೂ ಹೀಯಾಳಿಸಿ ಮಾತನಾಡಿಲ್ಲ. ಸಹೋದರತೆಯಿಂದ ಧಾರ್ಮಿಕ ಕಾರ್ಯದಲ್ಲಿ ಪಾಲ್ಗೊಳ್ಳುತ್ತೇನೆ. ಹಿಂದೆ ಸಂಬಳ ಕಡಿಮೆ ಇತ್ತು. ಇಂದು ಕೈತುಂಬ ಕೊಡುತ್ತಾರೆ. ಪಡೆದ ಸಂಬಳಕ್ಕೆ ಗೌರವಯುತ ಸೇವೆಯನ್ನು ನೀಡಿದ್ದೇನೆ ಎನ್ನುವ ಸಾರ್ಥಕತೆ ನನಗಿದೆ.
– ಪಿ.ಆರ್‌. ಮಹಮ್ಮದ್‌ ಸಾಹೇಬ್‌,
 ವಾದ್ಯಗಾರ

ಬರಲಿದೆಯೇ  ಡಿಜಿಟಲ್‌ ವಾದ್ಯ!?
ವಾದ್ಯ ನುಡಿಸುವ ವೃತ್ತಿಯನ್ನು ಮುಂದುವರಿಸಲು ಯಾವ ಸಮುದಾಯವೂ ಮುಂದಾಗುತ್ತಿಲ್ಲ. ಜನತೆ ದೈವ – ದೈವರ ಆರಾಧನೆ ಮಾಡುತ್ತಾರೆ. ಈ ಹಿಂದೆ ಮನೆ ಮಂದಿಯೇ ಸೇರಿಕೊಂಡು ದೈವಗಳ ನರ್ತನ ಸೇವೆಗೆ ಬೇಕಾದ ಸಿದ್ಧತೆಗಳನ್ನು ಮಾಡಿಕೊಳ್ಳುತ್ತಿದ್ದರು. ಈಗ ದೈವಗಳ ಆಭರಣದಿಂದ ಹಿಡಿದು ಪಾತ್ರಿಗಳ ವರೆಗೆ, ದೈವಗಳ ನರ್ತನ ಸೇವೆಗೆ ಬೇಕಾದ ಎಲ್ಲ ಪರಿಕರಗಳ ಸಂಗ್ರಹದ ಜವಾಬ್ದಾರಿಯನ್ನು ದುಬಾರಿ ಮೊತ್ತಕ್ಕೆ ವಹಿಸಿಕೊಡುತ್ತಾರೆ. ಸಮಯಕ್ಕೆ ಸರಿಯಾಗಿ ನರ್ತನ ಸೇವೆಗೆ ಕುಟುಂಬಸ್ಥರು ಹಾಜರಾಗುತ್ತಿದ್ದಾರೆ. ಇನ್ನು ದೈವಾರಾಧನೆಗೂ ಡಿಜಿಟಲ್‌ ವಾದ್ಯಗಾರಿಕೆ ಬಂದರೂ ಅಚ್ಚರಿ ಅಲ್ಲ ಎಂದು ಆತಂಕದಿಂದಲೇ ಹೇಳುತ್ತಾರೆ, ಮಹಮ್ಮದ್‌ ಸಾಹೇಬ್‌.

ವಿಶೇಷ ವರದಿ

ಟಾಪ್ ನ್ಯೂಸ್

Chintamani: ದ್ವಿಚಕ್ರ ವಾಹನಕ್ಕೆ ಡಿಕ್ಕಿ ಹೊಡೆದ ಕಾರು… ಪತಿ ಸಾ*ವು, ಪತ್ನಿಗೆ ಗಾಯ

Chintamani: ದ್ವಿಚಕ್ರ ವಾಹನಕ್ಕೆ ಡಿಕ್ಕಿ ಹೊಡೆದ ಕಾರು… ಪತಿ ಸಾ*ವು, ಪತ್ನಿ ಗಂಭೀರ

Delhi: ಆಮ್‌ ಆದ್ಮಿಯ ಮಾಜಿ ಶಾಸಕ ಸುಖ್ಬೀರ್‌ ದಲಾಲ್‌ ಬಿಜೆಪಿ ಸೇರ್ಪಡೆ, ಕೇಜ್ರಿಗೆ ಹಿನ್ನಡೆ

Delhi: ಆಮ್‌ ಆದ್ಮಿಯ ಮಾಜಿ ಶಾಸಕ ಸುಖ್ಬೀರ್‌ ದಲಾಲ್‌ ಬಿಜೆಪಿ ಸೇರ್ಪಡೆ, ಕೇಜ್ರಿಗೆ ಹಿನ್ನಡೆ

Nodidavaru Enanthare Movie: ನವೀನ್‌ ಶಂಕರ್‌ ಚಿತ್ರದ ಟೀಸರ್‌ ಬಂತು

Nodidavaru Enanthare Movie: ನವೀನ್‌ ಶಂಕರ್‌ ಚಿತ್ರದ ಟೀಸರ್‌ ಬಂತು

Nelamangala: ಐಷಾರಾಮಿ ಕಾರಿನ ಮೇಲೆ ಬಿದ್ದ ಕಂಟೈನರ್… ಒಂದೇ ಕುಟುಂಬದ 6 ಮಂದಿ ಸಾವು

Nelamangala: ಐಷಾರಾಮಿ ಕಾರಿನ ಮೇಲೆ ಬಿದ್ದ ಕಂಟೈನರ್… ಒಂದೇ ಕುಟುಂಬದ 6 ಮಂದಿ ಸಾ*ವು

Google Layoffs: ಉನ್ನತ ಹುದ್ದೆಯ ಉದ್ಯೋಗಿಗಳ ವಜಾ: ಗೂಗಲ್‌ ಸಿಇಒ ಸುಂದರ್‌ ಪಿಚೈ

Google Layoffs: ಉನ್ನತ ಹುದ್ದೆಯ ಉದ್ಯೋಗಿಗಳ ವಜಾ: ಗೂಗಲ್‌ ಸಿಇಒ ಸುಂದರ್‌ ಪಿಚೈ

Arrest Warrant Against Robin Uthappa

Arrest Warrant: ರಾಬಿನ್ ಉತ್ತಪ್ಪ ವಿರುದ್ದ ಬಂಧನ ವಾರೆಂಟ್;‌ ಜೈಲು ಪಾಲಾಗ್ತಾರಾ ಕ್ರಿಕೆಟಿಗ

Mangaluru: ಕರಾವಳಿ ಉತ್ಸವದಲ್ಲಿ ಹೆಲಿಕಾಪ್ಟರ್ ಮೂಲಕ ನಗರದ ದರ್ಶನಕ್ಕೆ ಅವಕಾಶ

Mangaluru: ಕರಾವಳಿ ಉತ್ಸವದಲ್ಲಿ ಹೆಲಿಕಾಪ್ಟರ್ ಮೂಲಕ ನಗರದ ದರ್ಶನಕ್ಕೆ ಅವಕಾಶ


ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು

ಬೋಂಡಾ, ಬನ್ಸ್ ಮತ್ತು ಕೇಕ್‌

ಬೋಂಡಾ, ಬನ್ಸ್ ಮತ್ತು ಕೇಕ್‌

promegrnate

ಉಪಬೆಳೆಯಾಗಿ ದಾಳಿಂಬೆ

ಕೂಲ್‌ ಕೂಲ್‌ ಬೇಸಗೆಯಲ್ಲಿ ಜಾನುವಾರುಗಳ ಆರೈಕೆ ಹೀಗಿರಲಿ

ಕೂಲ್‌ ಕೂಲ್‌ ಬೇಸಗೆಯಲ್ಲಿ ಜಾನುವಾರುಗಳ ಆರೈಕೆ ಹೀಗಿರಲಿ

go-green

ಮನೆಯಲ್ಲೇ ಹಸಿರು ಕ್ರಾಂತಿಯಾಗಲಿ…

ಮನೆಯ ಒಳಾಂಗಣದ ಅಂದ ಹೆಚ್ಚಿಸುವ ಗಾರ್ಡನ್‌

ಮನೆಯ ಒಳಾಂಗಣದ ಅಂದ ಹೆಚ್ಚಿಸುವ ಗಾರ್ಡನ್‌

MUST WATCH

udayavani youtube

ದೈವ ನರ್ತಕರಂತೆ ಗುಳಿಗ ದೈವದ ವೇಷ ಭೂಷಣ ಧರಿಸಿ ಕೋಲ ಕಟ್ಟಿದ್ದ ಅನ್ಯ ಸಮಾಜದ ಯುವಕ

udayavani youtube

ಹಕ್ಕಿಗಳಿಗಾಗಿ ಕಲಾತ್ಮಕ ವಸ್ತುಗಳನ್ನು ತಯಾರಿಸುತ್ತಿರುವ ಪಕ್ಷಿ ಪ್ರೇಮಿ

udayavani youtube

ಮಂಗಳೂರಿನ ನಿಟ್ಟೆ ವಿಶ್ವವಿದ್ಯಾನಿಲಯದ ತಜ್ಞರ ಅಧ್ಯಯನದಿಂದ ಬಹಿರಂಗ

udayavani youtube

ಈ ಹೋಟೆಲ್ ಗೆ ಪೂರಿ, ಬನ್ಸ್, ಕಡುಬು ತಿನ್ನಲು ದೂರದೂರುಗಳಿಂದಲೂ ಜನ ಬರುತ್ತಾರೆ

udayavani youtube

ಹರೀಶ್ ಪೂಂಜ ಪ್ರಚೋದನಾಕಾರಿ ಹೇಳಿಕೆ ವಿರುದ್ಧ ಪ್ರಾಣಿ ಪ್ರಿಯರ ಆಕ್ರೋಶ

ಹೊಸ ಸೇರ್ಪಡೆ

Chintamani: ದ್ವಿಚಕ್ರ ವಾಹನಕ್ಕೆ ಡಿಕ್ಕಿ ಹೊಡೆದ ಕಾರು… ಪತಿ ಸಾ*ವು, ಪತ್ನಿಗೆ ಗಾಯ

Chintamani: ದ್ವಿಚಕ್ರ ವಾಹನಕ್ಕೆ ಡಿಕ್ಕಿ ಹೊಡೆದ ಕಾರು… ಪತಿ ಸಾ*ವು, ಪತ್ನಿ ಗಂಭೀರ

7(1

Lalbagh: ಇಂದಿನಿಂದ ಕರಾವಳಿ ಉತ್ಸವ ಸಂಭ್ರಮ

6(1

Kundapura: ಕಸದಿಂದಲೇ ಕಲಾಕೃತಿ; ಕಾಲ್ತೋಡಿನಲ್ಲೊಂದು ಸುಂದರ ಅಂಗನವಾಡಿ

Delhi: ಆಮ್‌ ಆದ್ಮಿಯ ಮಾಜಿ ಶಾಸಕ ಸುಖ್ಬೀರ್‌ ದಲಾಲ್‌ ಬಿಜೆಪಿ ಸೇರ್ಪಡೆ, ಕೇಜ್ರಿಗೆ ಹಿನ್ನಡೆ

Delhi: ಆಮ್‌ ಆದ್ಮಿಯ ಮಾಜಿ ಶಾಸಕ ಸುಖ್ಬೀರ್‌ ದಲಾಲ್‌ ಬಿಜೆಪಿ ಸೇರ್ಪಡೆ, ಕೇಜ್ರಿಗೆ ಹಿನ್ನಡೆ

5(1

ಹೆಬ್ಬಾಗಿಲಿನಲ್ಲಿ ಆರಂಭವಾದ ಶಾಲೆ ಇಂದು ಈ ಊರ ಮಕ್ಕಳ ಪಾಲಿನ ಶಿಕ್ಷಣದ ಹೆಬ್ಬಾಗಿಲೇ ಆಗಿದೆ

Thanks for visiting Udayavani

You seem to have an Ad Blocker on.
To continue reading, please turn it off or whitelist Udayavani.