ಮಾಣಿ ಯುವತಿ ಕೊಲೆ: ಜೀವನಪರ್ಯಂತ ಜೀವಾವಧಿ
Team Udayavani, Feb 24, 2019, 1:00 AM IST
ಮಂಗಳೂರು: ಸರಣಿ ಹಂತಕ ಸೈನೈಡ್ ಮೋಹನ್‌ನ 7ನೇ ಪ್ರಕರಣದ ಆರೋಪ ಸಾಬೀತಾಗಿದ್ದು, ಆತ ನಿಗೆ ಜೀವನಪರ್ಯಂತ ಜೀವಾವಧಿ ಶಿಕ್ಷೆ ವಿಧಿಸಿ ಮಂಗಳೂರಿನ 6ನೇ ಹೆಚ್ಚುವರಿ ಜಿಲ್ಲಾ ಮತ್ತು ಸತ್ರ ನ್ಯಾಯಾಲಯ ತೀರ್ಪು ನೀಡಿದೆ.
ಪ್ರಕರಣದ ವಿವರ
ಬಂಟ್ವಾಳ ಮಾಣಿಯ 25 ವರ್ಷದ ಯುವತಿಯೊಬ್ಬರನ್ನು ಸೈನೈಡ್ ಕಿಲ್ಲರ್ ಮೋಹನ್ ಕುಮಾರ್ ವೆನಾÉಕ್ ಆಸ್ಪತ್ರೆಯಲ್ಲಿ ಸದಾನಂದ ನಾಯ್ಕ ಎಂದು ಪರಿಚಯಿಸಿಕೊಂಡಿದ್ದ. “ನಾನು ನಿಮ್ಮ ಜಾತಿಯವನೇ, ನಿನ್ನನ್ನು ಮದುವೆಯಾಗುತ್ತೇನೆ’ ಎಂದು ನಂಬಿಸಿ ಆಕೆಯ ಸ್ನೇಹ ಬೆಳೆಸಿದ್ದ. ಅಲ್ಲದೆ ಯುವತಿಯ ತಾಯಿಯ ಬಳಿ “ನಾನು ಕಾರ್ಕಳದಲ್ಲಿ ಕೃಷಿ ಇಲಾಖೆಯಲ್ಲಿ ಉದ್ಯೋಗದಲ್ಲಿದ್ದು, ನಿಮ್ಮ ಮಗಳನ್ನು ಮದುವೆಯಾಗಲು ಬಯ ಸಿದ್ದೇನೆ’ ಎಂದು ಹೇಳಿದ್ದ. ಅದಕ್ಕೆ ಯುವತಿಯ ತಾಯಿ “ಮನೆಗೆ ಬಂದು ಮಾತನಾಡು’ ಎಂದು ಹೇಳಿದ್ದರು.
ಬಳಿಕ ಯುವತಿಯನ್ನು ನಂಬಿಸಿ, ಪ್ರೀತಿಯ ಬಲೆಗೆ ಬೀಳಿಸಿದ್ದ ಆತ 2008ರ ಜ.2ರಂದು ಪುತ್ತೂರು ಬಸ್ ನಿಲ್ದಾಣಕ್ಕೆ ಚಿನ್ನಾಭರಣ ಧರಿಸಿ ಬರಲು ತಿಳಿಸಿದ್ದ. ಬಳಿಕ ಇಬ್ಬರೂ ಮಡಿಕೇರಿಗೆ ಲಾಡಿjನಲ್ಲಿ ತಂಗಿದ್ದರು. ಅಲ್ಲಿ ಮೋಹನನು ಆನಂದ ನಾಯ್ಕ ಎಂಬ ಹೆಸರಿನಲ್ಲಿ ಕೊಠಡಿ ಪಡೆದುಕೊಂಡಿದ್ದ. ಬಳಿಕ ರಾತ್ರಿ ಆಕೆಯ ಮೇಲೆ ಅತ್ಯಾಚಾರವೆಸಗಿದ್ದª.
ಜ.3ರಂದು ಬೆಳಗ್ಗೆ ಮೋಹನನು ಯುವತಿ ಬಳಿ “ನಿನ್ನ ಚಿನ್ನಾಭರಣ, ಹಣ ರೂಂನಲ್ಲಿಡು, ನಾವು ಹೊರಗೆ ಹೋಗಿ ಬರೋಣ’ ಎಂದು ನಂಬಿಸಿ, ಮಡಿಕೇರಿ ಬಸ್ ನಿಲ್ದಾಣ ಬಳಿ ಕರೆದೊಯ್ದಿದ್ದ. ಅಲ್ಲಿ ಗರ್ಭನಿರೋಧಕ ಮಾತ್ರೆ ಎಂದು ನಂಬಿಸಿ ಸೈನೈಡ್ ನೀಡಿದ್ದ. ಅದನ್ನು ಸೇವಿಸಿದ್ದ ಆಕೆ ಅಲ್ಲಿನ ಶೌಚಾಲಯದಲ್ಲಿ ಸಾವನ್ನಪ್ಪಿದ್ದಳು. ಜ.4ರಂದು ಮರಣೋತ್ತರ ಪರೀಕ್ಷೆ ನಡೆಸಿ ಇದೊಂದು ಅಸಹಜ ಸಾವು ಎಂದು ಮಡಿಕೇರಿ ಠಾಣೆಯಲ್ಲಿ ಪೊಲೀಸರು ಪ್ರಕರಣ ದಾಖಲಿಸಿದ್ದರು.
ಈ ನಡುವೆ ಮೋಹನನು ರೂಮಿಗೆ ತೆರಳಿ ಚಿನ್ನಾಭರಣ ಸಹಿತ ಪರಾರಿಯಾಗಿದ್ದ.
ಕೊಲೆ ಘಟನೆ ನಡೆದ ಕೆಲವು ದಿನದ ಬಳಿಕ ಯುವತಿಯ ನೆರೆಮನೆಯ ಯುವಕನ ಮೊಬೈಲಿಗೆ ಕರೆ ಮಾಡಿದ ಮೋಹನ, ಯುವತಿಯ ತಂಗಿಯ ಜತೆ ಮಾತನಾಡಿ “ನಾನು ನಿನ್ನ ಅಕ್ಕ ನನ್ನು ವಿವಾಹವಾಗಿದ್ದು, ಕ್ಷೇಮವಾಗಿದ್ದೇವೆ. ಒಂದು ವಾರದೊಳಗೆ ಬರುತ್ತೇವೆ. ನಮ್ಮನ್ನು ಹುಡುಕುವ ಪ್ರಯತ್ನ ಮಾಡಬೇಡಿ’ ಎಂದು ತಿಳಿಸಿದ್ದ. ಈ ಹಿನ್ನೆಲೆಯಲ್ಲಿ ವಿಟ್ಲ ಠಾಣೆಯಲ್ಲಿ ನಾಪತ್ತೆ ಪ್ರಕರಣ ದಾಖಲಾಗಿತ್ತು.
ಪ್ರಕರಣ ಬೆಳಕಿಗೆ
2009 ಅ.26ರಂದು ಬರಿಮಾರು ಯುವತಿಯ ಕೊಲೆ ಪ್ರಕರಣದ ತನಿಖೆ ನಡೆಸುತ್ತಿದ್ದಾಗ ಮೋಹನನು ಮಾಣಿಯ ಯುವತಿಯನ್ನು ಕೊಲೆ ಮಾಡಿದ್ದ ಬಗ್ಗೆ ತಿಳಿಸಿದ್ದ. ಆಗ ಎಎಸ್‌ಪಿಯಾಗಿದ್ದ ಚಂದ್ರಗುಪ್ತ ಅವರು ಆತನ ಹೇಳಿಕೆಗಳನ್ನು ದಾಖಲಿಸಿದ್ದರು.
ಪ್ರಕರಣವನ್ನು ಇನ್‌ಸ್ಪೆಕ್ಟರ್ ನಂಜುಂಡೇಗೌಡ ಅವರು ವಿಚಾರಣೆ ನಡೆಸಿ, ಸಿಒಡಿಗೆ ಹಸ್ತಾಂ ತರಿಸಿದ್ದರು. ಸಿಒಡಿಯವರು ದೋಷಾರೋಪಣ ಪಟ್ಟಿ ಸಲ್ಲಿಸಿದ್ದರು.
ಪ್ರಕರಣದ ವಿಚಾರಣೆ ನಡೆಸಿದ 6ನೇ ಹೆಚ್ಚುವರಿ ಜಿಲ್ಲಾ ಮತ್ತು ಸತ್ರ ನ್ಯಾಯಾಲಯ ನ್ಯಾಯಾಧೀಶರಾದ ಡಿ. ಟಿ. ಪುಟ್ಟರಂಗ ಸ್ವಾಮಿ ಅವರು 40 ಸಾಕ್ಷಿಗಳ ವಿಚಾರಣೆ ನಡೆಸಿ, 64 ದಾಖಲೆ, 38 ಸಾಕ್ಷ್ಯಗಳನ್ನು ಪರಿಗಣಿಸಿ ತೀರ್ಪು ನೀಡಿದ್ದಾರೆ. ಸರಕಾರದ ಪರವಾಗಿ ಸರಕಾರಿ ಅಭಿಯೋಜಕರಾದ ಜುಡಿತ್ ಒ. ಎಂ. ಕ್ರಾಸ್ತಾ ವಾದಿಸಿದ್ದರು.
ಶಿಕ್ಷೆ ವಿವರ
ಐಪಿಸಿ ಸೆಕ್ಷನ್ 366 (ಅಪಹರಣ)ರಡಿ 6ವರ್ಷ ಕಠಿನ ಸಜೆ 3 ಸಾ.ರೂ. ದಂಡ, ದಂಡ ತೆರಲು ತಪ್ಪಿದಲ್ಲಿ 1ತಿಂಗಳ ಸಜೆ, ಸೆಕ್ಷನ್ 302ಯಡಿಯಲ್ಲಿ (ಕೊಲೆ) ಜೀವನಪರ್ಯಂತ ಜೀವಾವಧಿ ಶಿಕ್ಷೆ, ಸೆಕ್ಷನ್ 376ರಡಿ (ಅತ್ಯಾಚಾರ) 7ವರ್ಷ ಕಠಿನ ಸಜೆ, 3 ಸಾ.ರೂ. ದಂಡ, ದಂಡ ತೆರಲು ತಪ್ಪಿದಲ್ಲಿ 1 ತಿಂಗಳು ಸಜೆ, ಸೆಕ್ಷನ್ 328ರಡಿ (ವಿಷ ಉಣಿಸಿದ್ದು)7 ವರ್ಷ ಸಜೆ 3 ಸಾ. ರೂ. ದಂಡ, ದಂಡ ತೆರಲು ತಪ್ಪಿದಲ್ಲಿ 1 ತಿಂಗಳ ಸಜೆ, ಸೆಕ್ಷನ್ 201 (ಸಾಕ್ಷಿನಾಶ) 5 ವರ್ಷ ಕಠಿನ ಸಜೆ, 3 ಸಾ.ರೂ. ದಂಡ, ದಂಡ ತೆರಲು ತಪ್ಪಿದಲ್ಲಿ 1 ತಿಂಗಳ ಸಜೆ, ಸೆಕ್ಷನ್ 392 (ಚಿನ್ನಾಭರಣ ಸುಲಿಗೆ) 5 ವರ್ಷ ಕಠಿನ ಸಜೆ, 3 ಸಾ. ರೂ. ದಂಡ, ದಂಡ ತೆರಲು ತಪ್ಪಿದಲ್ಲಿ 1 ತಿಂಗಳ ಸಜೆ, ಸೆಕ್ಷನ್ 417 (ವಂಚನೆ)ರಡಿ 6 ತಿಂಗಳ ಸಜೆ ವಿಧಿಸಲಾ ಗಿದೆ. ಕೊಲೆಯಾದ ಯುವತಿಯ ಕುಟುಂಬಸ್ಥರು ಕಾನೂನು ಸೇವಾ ಪ್ರಾಧಿಕಾರದಿಂದ ಪರಿಹಾರ ಪಡೆದುಕೊಳ್ಳಲು ಅರ್ಹರೆಂದು ತೀರ್ಪಿನಲ್ಲಿ ತಿಳಿಸಲಾಗಿದೆ.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
MUST WATCH
ದೈವ ನರ್ತಕರಂತೆ ಗುಳಿಗ ದೈವದ ವೇಷ ಭೂಷಣ ಧರಿಸಿ ಕೋಲ ಕಟ್ಟಿದ್ದ ಅನ್ಯ ಸಮಾಜದ ಯುವಕ
ಹಕ್ಕಿಗಳಿಗಾಗಿ ಕಲಾತ್ಮಕ ವಸ್ತುಗಳನ್ನು ತಯಾರಿಸುತ್ತಿರುವ ಪಕ್ಷಿ ಪ್ರೇಮಿ
ಮಂಗಳೂರಿನ ನಿಟ್ಟೆ ವಿಶ್ವವಿದ್ಯಾನಿಲಯದ ತಜ್ಞರ ಅಧ್ಯಯನದಿಂದ ಬಹಿರಂಗ
ಈ ಹೋಟೆಲ್ ಗೆ ಪೂರಿ, ಬನ್ಸ್, ಕಡುಬು ತಿನ್ನಲು ದೂರದೂರುಗಳಿಂದಲೂ ಜನ ಬರುತ್ತಾರೆ
ಹರೀಶ್ ಪೂಂಜ ಪ್ರಚೋದನಾಕಾರಿ ಹೇಳಿಕೆ ವಿರುದ್ಧ ಪ್ರಾಣಿ ಪ್ರಿಯರ ಆಕ್ರೋಶ
ಹೊಸ ಸೇರ್ಪಡೆ
N.Maharajan: ವಲ್ಲರಸು ನಿರ್ದೇಶಕರ ಚಿತ್ರದಲ್ಲಿ ಶಿವಣ್ಣ ಸಿನಿಮಾ
Sirsi: ಅರಣ್ಯವಾಸಿಗಳ 50,000 ಕ್ಕೂ ಮಿಕ್ಕಿ ಜಿ.ಪಿ.ಎಸ್ ನಕಾಶೆ ಅತಂತ್ರ: ರವಿಂದ್ರ ನಾಯ್ಕ
Hubli: ಕಾಂಗ್ರೆಸ್‌ನಲ್ಲಿ ಈಗ ಇರುವವರೆಲ್ಲ ನಕಲಿ ಗಾಂಧಿಗಳು..: ಪ್ರಹ್ಲಾದ ಜೋಶಿ
FIR 6to6 movie: ಆ್ಯಕ್ಷನ್ ಚಿತ್ರದಲ್ಲಿ ವಿಜಯ ರಾಘವೇಂದ್ರ
Birthday Party: ಬರ್ತ್‌ಡೇ ಪಾರ್ಟಿ ಮುಗಿಸಿ ಬರುತ್ತಿದ್ದ ಮೂವರನ್ನು ಗುಂಡಿಕ್ಕಿ ಹ*ತ್ಯೆ…
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.