ರಾಜ್ಯದಲ್ಲಿ 16 ಕೋ. ಅರ್ಜಿ ವಿಲೇ: ಮಥಾಯಿ


Team Udayavani, Oct 18, 2018, 10:32 AM IST

18-october-4.gif

ಬೆಳ್ತಂಗಡಿ: ರಾಜ್ಯದ 73 ಇಲಾಖೆಗಳ 897 ಸೇವೆ ಸಕಾಲದಡಿ ಬರುತ್ತಿದ್ದು, ಈವರೆಗೆ ಇದರ ಮೂಲಕ 16 ಕೋಟಿ ಅರ್ಜಿಗಳು ವಿಲೇವಾರಿಯಾಗಿವೆ. ರಾಜ್ಯದ ನಾಗರಿಕರಿಗೆ ಸರಕಾರ ನೀಡುವ ಈ ಹಕ್ಕಿನ ಕುರಿತು ಅಂತಾರಾಷ್ಟ್ರೀಯ ಮನ್ನಣೆ ಲಭಿಸಿದೆ ಎಂದು ರಾಜ್ಯ ಸಕಾಲ ಮಿಷನ್‌ನ ಆಡಳಿತಾಧಿಕಾರಿ ಕೆ. ಮಥಾಯಿ ಹೇಳಿದರು.

ಅವರು ಬುಧವಾರ ಇಲ್ಲಿನ ಮಿನಿ ವಿಧಾನಸೌಧ ಸಭಾಂಗಣದಲ್ಲಿ ರಾಜ್ಯ ಸಕಾಲ ಮಿಷನ್‌ ಸಿಬಂದಿ ಮತ್ತು ಆಡಳಿತ ಹಾಗೂ ಸುಧಾರಣೆ ಇಲಾಖೆ ಮತ್ತು ದ.ಕ. ಜಿಲ್ಲಾಡಳಿತದ ಸಹಯೋಗದಲ್ಲಿ ನಡೆದ ಸಕಾಲ ಯೋಜನೆ ಕುರಿತು ಸಿಬಂದಿ ಹಾಗೂ ಸಾರ್ವಜನಿಕ ಜಾಗೃತಿ ಕಾರ್ಯಕ್ರಮದಲ್ಲಿ ಮಾತನಾಡಿದರು.

ಈ ಯೋಜನೆ ಪ್ರಕಾರ ಅಧಿಕಾರಿ ಕಾಲಮಿತಿಯೊಳಗೆ ಅರ್ಜಿ ವಿಲೇವಾರಿ ಮಾಡದಿದ್ದಲ್ಲಿ ದಿನಕ್ಕೆ 20 ರೂ.ಗಳಂತೆ ದಂಡ ವಿಧಿಸಿ ಅದನ್ನು ಅರ್ಜಿದಾರರಿಗೆ ಪರಿಹಾರ ರೂಪದಲ್ಲಿ ನೀಡಲಾಗುತ್ತಿದೆ. ರಾಜ್ಯದ 20 ಸಾವಿರ ಅಧಿಕಾರಿಗಳ ಕಚೇರಿಯನ್ನು ಸಕಾಲದಡಿ ಗೊತ್ತು ಪಡಿಸಲಾಗಿದೆ. ಸಕಾಲ ಕಾನೂನನ್ನು ಸಮರ್ಪಕವಾಗಿ ಉಪಯೋಗಿಸುವವರ ಸಂಖ್ಯೆ ಕಡಿಮೆ ಇದೆ. ಅರ್ಜಿ ಸಲ್ಲಿಸಿದ ಬಳಿಕ 15 ಡಿಜಿಟ್‌ಗಳ ಜಿಎಸ್‌ಸಿ ಸಂಖ್ಯೆ ನೀಡಲಾಗುತ್ತಿದ್ದು, ಅದರ ಆಧಾರದಲ್ಲಿ ಅಪೀಲು ಹೋಗಲು ಅವಕಾಶವಿರುತ್ತದೆ. ಸಕಾಲಕ್ಕೆ ವಿದೇಶದಲ್ಲೂ ಉತ್ತಮ ಅಭಿಪ್ರಾಯ ವ್ಯಕ್ತವಾಗಿದ್ದು, ಪ್ರಧಾನಮಂತ್ರಿ ಎಕ್ಸಲೆನ್ಸ್‌, ಕಾಮನ್‌ ವೆಲ್ತ್‌, ಗೂಗಲ್‌ ಅವಾರ್ಡ್‌ಗಳು ಲಭ್ಯವಾಗಿವೆ ಎಂದರು.

ಸಕಾಲ ಡಿಐಟಿಸಿ ಮಾಲತಿ, ಬೆಳ್ತಂಗಡಿ ತಹಶೀಲ್ದಾರ್‌ ಮದನ್‌ ಮೋಹನ್‌ ಸಿ., ತಾ.ಪಂ. ಕಾರ್ಯನಿರ್ವಹಣಾಧಿಕಾರಿ ಕುಸುಮಾಧರ್‌, ವಿವಿಧ ಇಲಾಖಾಧಿಕಾರಿಗಳು ಉಪಸ್ಥಿತರಿದ್ದರು.

ನಿವೃತ್ತ ಸೈನಿಕನ ಅಳಲು
ತಾನು ದೇಶದ ಸೇನೆಗೆ ಸಲ್ಲಿಸಿದ ಸೇವೆಯನ್ನು ಪರಿಗಣಿಸಿ ಲಭಿಸಿದ ಭೂಮಿಯ ವ್ಯಾಜ್ಯದ ಕುರಿತು ಅಧಿಕಾರಿಗಳು ತನ್ನನ್ನು ಸತಾಯಿಸುತ್ತಿದ್ದಾರೆ ಎಂದು ಹತ್ಯಡ್ಕ ಗ್ರಾಮ ನಿವಾಸಿ, ನಿವೃತ್ತ ಸೈನಿಕ ಮೋಹನ ಶೆಟ್ಟಿ ಅವರು ಸಕಾಲ ಆಡಳಿತಾಧಿಕಾರಿಯವರ ಮುಂದೆ ತನ್ನ ನೋವನ್ನು ತೋಡಿಕೊಂಡರು. ಈ ಕುರಿತು ತಹಶೀಲ್ದಾರ್‌ ಜತೆ ಮುಖಾಮುಖಿ ಮಾತನಾಡಿ ಸಮಸ್ಯೆ ಬಗೆಹರಿಸೋಣ ಎಂದು ಆಡಳಿತಾಧಿಕಾರಿಯವರು ಭರವಸೆ ನೀಡಿದರು.

ಮೂಲತಃ ಬೆಳ್ತಂಗಡಿಯವರು
ರಾಜ್ಯ ಸಕಾಲ ಮಿಷನ್‌ನ ಆಡಳಿತಾಧಿಕಾರಿ ಕೆ. ಮಥಾಯಿ ಅವರು ಮೂಲತಃ ಬೆಳ್ತಂಗಡಿಯ ಕಕ್ಕಿಂಜೆಯವರು. ಸಕಾಲದಲ್ಲಿ ಇಬ್ಬರು ನಿರ್ದೇಶಕರನ್ನು ಬಿಟ್ಟರೆ ಮಥಾಯಿ ಅವರದು ಪ್ರಮುಖ ಹುದ್ದೆಯಾಗಿದೆ. ಕಕ್ಕಿಂಜೆ, ಮಂಗಳೂರು ಹಾಗೂ ಉಜಿರೆಯಲ್ಲಿ ಶಿಕ್ಷಣ ಪಡೆದಿರುವ ಇವರು, ಕೆಪಿಟಿಯಲ್ಲಿ ಕಲಿಯುತ್ತಿರುವ ವೇಳೆಗೆ ಏರ್‌ಫೋರ್ಸ್‌ಗೆ ನೇಮಕಗೊಂಡಿದ್ದರು. ಅಲ್ಲಿ 18 ವರ್ಷಗಳ ಸೇವೆ ಸಲ್ಲಿಸಿ, ಬಳಿಕ ಮಂಗಳೂರಿನಲ್ಲಿ ನ್ಯಾಯವಾದಿಯಾಗಿ ಕೆಲಸ ನಿರ್ವಹಿಸಿದ್ದರು. 2006ರಲ್ಲಿ ಕೆಎಎಸ್‌ನಲ್ಲಿ ಉತ್ತೀರ್ಣರಾಗಿ ವಿವಿಧ ಜಿಲ್ಲೆಗಳ 7 ತಾಲೂಕುಗಳಲ್ಲಿ ತಹಶೀಲ್ದಾರ್‌ ಆಗಿ ಕರ್ತವ್ಯ ನಿರ್ವಹಿಸಿ, ಕಳೆದೆರಡು ವರ್ಷಗಳಿಂದ ಸಕಾಲದಲ್ಲಿ ಕರ್ತವ್ಯ ನಿರ್ವಹಿಸುತ್ತಿದ್ದಾರೆ.

 ಪ್ರಸ್ತಾವನೆ ಇದೆ
ಸಕಾಲದಲ್ಲಿ ಸೇವೆಯ ವಿಳಂಬದ ಕುರಿತು ಪರಿಹಾರಕ್ಕೆ ಸಾರ್ವಜನಿಕರು ದೂರು ನೀಡುವ ಬದಲು ಸ್ವಯಂ ಪ್ರಕರಣ ದಾಖಲಿಸುವ ಕುರಿತು ಕಾನೂನು ತಿದ್ದುಪಡಿ ಹಾಗೂ ಗರಿಷ್ಠ ಪರಿಹಾರ ಮೊತ್ತವನ್ನು 500 ರೂ. ಬದಲು 25 ಸಾವಿರ ರೂ.ಗೆ ಏರಿಕೆ ಮಾಡುವ ಪ್ರಸ್ತಾವನೆ ಇದೆ.
– ಕೆ. ಮಥಾಯಿ
ರಾಜ್ಯ ಸಕಾಲ ಮಿಷನ್‌ನ
ಆಡಳಿತಾಧಿಕಾರಿ

ಟಾಪ್ ನ್ಯೂಸ್

1-vitla

Vitla; ನಿವೃತ್ತ ಶಿಕ್ಷಕ, ಅರ್ಥಧಾರಿ ಪಕಳಕುಂಜ ಶ್ಯಾಮ ಭಟ್ ವಿಧಿವಶ

1-donald

Trump warns; ಹಮಾಸ್ ಒತ್ತೆಯಾಳುಗಳನ್ನು ಬಿಡುಗಡೆ ಮಾಡದಿದ್ದರೆ ನರಕ…

Yakshagana

Yakshagana: ಕಾಲಮಿತಿ, ಕಾಲಗತಿಯ ಕಾಲದ ಯಕ್ಷಗಾನ-ಚಿಂತನೆ

EC-Comm-sangreshi1

ಜಿ.ಪಂ.,ತಾ.ಪಂ. ಚುನಾವಣೆ ವಿಳಂಬಕ್ಕೆ ಸರಕಾರವೇ ನೇರ ಹೊಣೆ, ನಾವು ಚುನಾವಣೆಗೆ ಸಿದ್ಧ: ಆಯೋಗ

Cong-CM-Dinner-Meet

Dinner Politics: ಡಿಸಿಎಂ ಡಿಕೆಶಿ ದೂರು; ಕಾಂಗ್ರೆಸ್‌ ಡಿನ್ನರ್‌ಗೆ ಹೈ ಕಮಾಂಡ್‌ ತಡೆ

Naxal-Meeting

Naxal Surrender: ಕೊನೆಗೂ ಕರ್ನಾಟಕ ರಾಜ್ಯ ಸಂಪೂರ್ಣ ನಕ್ಸಲ್‌ ಮುಕ್ತವಾಯಿತೇ?

R.Ashok

Budget Allocation: ಇನ್ನೆರಡು ತಿಂಗಳಲ್ಲಿ ಶೇ. 45 ಪ್ರಗತಿ ಸಾಧ್ಯವೇ?: ಆರ್‌.ಅಶೋಕ್‌


ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು

ಬೋಂಡಾ, ಬನ್ಸ್ ಮತ್ತು ಕೇಕ್‌

ಬೋಂಡಾ, ಬನ್ಸ್ ಮತ್ತು ಕೇಕ್‌

promegrnate

ಉಪಬೆಳೆಯಾಗಿ ದಾಳಿಂಬೆ

ಕೂಲ್‌ ಕೂಲ್‌ ಬೇಸಗೆಯಲ್ಲಿ ಜಾನುವಾರುಗಳ ಆರೈಕೆ ಹೀಗಿರಲಿ

ಕೂಲ್‌ ಕೂಲ್‌ ಬೇಸಗೆಯಲ್ಲಿ ಜಾನುವಾರುಗಳ ಆರೈಕೆ ಹೀಗಿರಲಿ

go-green

ಮನೆಯಲ್ಲೇ ಹಸಿರು ಕ್ರಾಂತಿಯಾಗಲಿ…

ಮನೆಯ ಒಳಾಂಗಣದ ಅಂದ ಹೆಚ್ಚಿಸುವ ಗಾರ್ಡನ್‌

ಮನೆಯ ಒಳಾಂಗಣದ ಅಂದ ಹೆಚ್ಚಿಸುವ ಗಾರ್ಡನ್‌

MUST WATCH

udayavani youtube

ದೈವ ನರ್ತಕರಂತೆ ಗುಳಿಗ ದೈವದ ವೇಷ ಭೂಷಣ ಧರಿಸಿ ಕೋಲ ಕಟ್ಟಿದ್ದ ಅನ್ಯ ಸಮಾಜದ ಯುವಕ

udayavani youtube

ಹಕ್ಕಿಗಳಿಗಾಗಿ ಕಲಾತ್ಮಕ ವಸ್ತುಗಳನ್ನು ತಯಾರಿಸುತ್ತಿರುವ ಪಕ್ಷಿ ಪ್ರೇಮಿ

udayavani youtube

ಮಂಗಳೂರಿನ ನಿಟ್ಟೆ ವಿಶ್ವವಿದ್ಯಾನಿಲಯದ ತಜ್ಞರ ಅಧ್ಯಯನದಿಂದ ಬಹಿರಂಗ

udayavani youtube

ಈ ಹೋಟೆಲ್ ಗೆ ಪೂರಿ, ಬನ್ಸ್, ಕಡುಬು ತಿನ್ನಲು ದೂರದೂರುಗಳಿಂದಲೂ ಜನ ಬರುತ್ತಾರೆ

udayavani youtube

ಹರೀಶ್ ಪೂಂಜ ಪ್ರಚೋದನಾಕಾರಿ ಹೇಳಿಕೆ ವಿರುದ್ಧ ಪ್ರಾಣಿ ಪ್ರಿಯರ ಆಕ್ರೋಶ

ಹೊಸ ಸೇರ್ಪಡೆ

1-vitla

Vitla; ನಿವೃತ್ತ ಶಿಕ್ಷಕ, ಅರ್ಥಧಾರಿ ಪಕಳಕುಂಜ ಶ್ಯಾಮ ಭಟ್ ವಿಧಿವಶ

1-donald

Trump warns; ಹಮಾಸ್ ಒತ್ತೆಯಾಳುಗಳನ್ನು ಬಿಡುಗಡೆ ಮಾಡದಿದ್ದರೆ ನರಕ…

Yakshagana

Yakshagana: ಕಾಲಮಿತಿ, ಕಾಲಗತಿಯ ಕಾಲದ ಯಕ್ಷಗಾನ-ಚಿಂತನೆ

EC-Comm-sangreshi1

ಜಿ.ಪಂ.,ತಾ.ಪಂ. ಚುನಾವಣೆ ವಿಳಂಬಕ್ಕೆ ಸರಕಾರವೇ ನೇರ ಹೊಣೆ, ನಾವು ಚುನಾವಣೆಗೆ ಸಿದ್ಧ: ಆಯೋಗ

Cong-CM-Dinner-Meet

Dinner Politics: ಡಿಸಿಎಂ ಡಿಕೆಶಿ ದೂರು; ಕಾಂಗ್ರೆಸ್‌ ಡಿನ್ನರ್‌ಗೆ ಹೈ ಕಮಾಂಡ್‌ ತಡೆ

Thanks for visiting Udayavani

You seem to have an Ad Blocker on.
To continue reading, please turn it off or whitelist Udayavani.