ಗಾಂಜಾ ಮಾರಾಟ: ಬಂಧನ; ಗಾಂಜಾ ಸಹಿತ ಸೊತ್ತು ವಶ
Team Udayavani, Feb 3, 2018, 2:39 PM IST
ಮಂಗಳೂರು: ಕೋಡಿಕಲ್ ಜಿ.ಎಸ್.ಬಿ.ಸಭಾ ಭವನದ ಎದುರು ಗಾಂಜಾ ಮಾರಾಟ ವ್ಯವಹಾರದಲ್ಲಿ ತೊಡಗಿದ್ದ ಇಬ್ಬರನ್ನು ಮಂಗಳೂರು ನಗರ ಕೇಂದ್ರ ರೌಡಿ ನಿಗ್ರಹ ದಳದ ಪೊಲೀಸರು ಬಂಧಿಸಿ 250 ಗ್ರಾಂ ಗಾಂಜಾ, 1 ಮೋಟಾರ್ ಬೈಕ್ ಮತ್ತು 2 ಮೊಬೈಲ್ ಫೋನ್ ಸಹಿತ ಒಟ್ಟು 1,59,900 ರೂ. ಮೌಲ್ಯದ ಸೊತ್ತು ಗಳನ್ನು ವಶಪಡಿಸಿಕೊಂಡಿದ್ದಾರೆ. ಕೋಡಿಕಲ್ ಸುಂಕದಕಟ್ಟೆಯ ಅವಿ ನಾಶ್ (19) ಮತ್ತು ಬಂಟ್ವಾಳ ಕರಿಂ ಗಾನ ಗ್ರಾಮದ ಅಮೂರಿನ ದಿಲೀಪ್ ಕುಮಾರ್ (22) ಬಂಧಿತರು. ಇನ್ನೋರ್ವ ಆರೋಪಿ ರಂಜಿತ್ ತಲೆಮರೆಸಿಕೊಂಡಿದ್ದಾನೆ.
ಕೋಡಿಕಲ್‌ನಲ್ಲಿ ಇಬ್ಬರು ಗಾಂಜಾ ಮಾರಾಟ ಮಾಡುತ್ತಿದ್ದಾರೆ ಎಂಬ ಖಚಿತ ಮಾಹಿತಿ ಮೇರೆಗೆ ಕೇಂದ್ರ ರೌಡಿ ನಿಗ್ರಹ ದಳದ ಹಾಗೂ ಉರ್ವ ಪೊಲೀಸ್ ಠಾಣೆಯ ಇನ್‌ಸ್ಪೆಕ್ಟರ್ ರವೀಶ್ ನಾಯಕ್ ಮತ್ತು ಸಿಬಂದಿ ಪೊಲೀಸ್ ಆಯುಕ್ತ ಟಿ.ಆರ್. ಸುರೇಶ್ ಮತ್ತು ಕೇಂದ್ರ ರೌಡಿ ನಿಗ್ರಹ ದಳದ ಎಸಿಪಿ ಉದಯ ನಾಯಕ್ ಅವರ ಮಾರ್ಗದರ್ಶನದಲ್ಲಿ ದಾಳಿ ಕಾರ್ಯಾಚರಣೆ ನಡೆಸಿದರು.
ಬಂಧಿತರನ್ನು ವಿಚಾರಣೆ ನಡೆಸಿದಾಗ ತಮಗೆ ರಂಜಿತ್ ಗಾಂಜಾ ಪೂರೈಕೆ ಮಾಡಿದ್ದನೆಂದು ಅವರು ತಿಳಿಸಿದ್ದಾರೆ. ಈ ಹಿನ್ನೆಲೆಯಲ್ಲಿ ರಂಜಿತ್ ಬಂಧನಕ್ಕೆ ಪೊಲೀಸರು ಬಲೆ ಬೀಸಿದ್ದಾರೆ.
ಮೇರಿಹಿಲ್‌ನಲ್ಲಿ ಮೂವರ ಸೆರೆ
ಮೇರಿಹಿಲ್ ಬಳಿ ಗಾಂಜಾ ಸೇವಿ ಸುತ್ತಿದ್ದ ಬಂಟ್ವಾಳದ ಮೊಡಂಕಾಪು ಪಲಿಲ ಮಜಲಿನ ಅಬ್ದುಲ್ ರಜಾಕ್ (22), ಸಲ್ಮಾನ್ ಫಾರೂಕ್ (22), ಮತ್ತು ಪಚ್ಚನಾಡಿಯ ಪ್ರಶಾಂತ್ (24) ಅವರನ್ನು ದಸ್ತಗಿರಿ ಮಾಡಿದ್ದಾರೆ. ಸಲ್ಮಾನ್ ಫಾರೂಕ್ 2015ರಲ್ಲಿ ಕಾವೂರು ಠಾಣೆಯ ಗ್ಯಾಂಗ್ ರೇಪ್ ಪ್ರಕರಣದ ಆರೋಪಿಯಾಗಿರುತ್ತಾನೆ. ಕಾವೂರು ಪೊಲೀಸ್ ನಿರೀಕ್ಷಕ ಕೆ. ಆರ್. ನಾಯ್ಕ ಮತ್ತು ಸಿಬಂದಿ ವರ್ಗದ ವಿಶ್ವನಾಥ, ಸಜೀವ, ಚೆರಿಯನ್ ಶರಣಪ್ಪ ಕಾಖಂಡಕಿ, ರಶೀದ್ ಶೇಖ್ ಕಾರ್ಯಾಚರಣೆಯಲ್ಲಿ ಭಾಗವಹಿಸಿದ್ದರು.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
MUST WATCH
ಹೊಸ ಸೇರ್ಪಡೆ
Bantwal: ಕಾಂಟ್ರಾಕ್ಟ್ ಕ್ಯಾರೇಜ್ ಬಸ್ ಪ್ರಯಾಣ ದರ ಏರಿಕೆ
Special Train ಮಕರ ಸಂಕ್ರಾಂತಿ: ಇಂದು ಬೆಂಗಳೂರಿನಿಂದ ಕರಾವಳಿಗೆ ವಿಶೇಷ ರೈಲು
Daily Horoscope: ಅನಿರೀಕ್ಷಿತ ಧನಾಗಮ, ಅವಿವಾಹಿತರಿಗೆ ಯೋಗ್ಯ ಸಂಗಾತಿ ಲಭ್ಯ
ಕಾಂಗ್ರೆಸ್‌ಗೆ ಬಿಸಿ ಊಟ: ಪರಂಗೆ ಹೈ ಬುಲಾವ್?ವಿವಾದ ಬೆನ್ನಲ್ಲೇ ದಿಲ್ಲಿಗೆ ಕರೆದ ಹೈಕಮಾಂಡ್
California Wildfire: “ಮನೆಯ ಅಂಗಳದಲ್ಲೇ ಬೆಂಕಿ ಕುಣಿದಂತಿದೆ’
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.