ದೇಶ ಕಾಯುವ ಸೈನಿಕನಿಗೆ ಜನ ಸೇವೆಯ ಕನಸು

Team Udayavani, Feb 13, 2019, 1:00 AM IST

nagesh-army-13-02.jpg

ಪುತ್ತೂರು: ಬಾಲ್ಯದಿಂದಲೇ ಕಂಡು – ಉಂಡಿದ್ದ ಬಡತನದ ನಡುವೆಯೂ ದೇಶಸೇವೆಯ ಸಂಕಲ್ಪ ಬಲವಾಗಿತ್ತು. ಅದರಿಂದಾಗಿ ಭಾರತೀಯ ಸೇನೆಯಲ್ಲಿ ಅವಕಾಶ ಸಿಕ್ಕಿತು. ಕನಸುಗಳು ಇನ್ನೂ ಮುಗಿದಿಲ್ಲ; ಭವಿಷ್ಯದಲ್ಲಿ ಭಾರತೀಯ ಆಡಳಿತ ಸೇವೆ ಸೇರಬೇಕು, ಅಧಿಕಾರಿಯಾಗಿ ಜನಸೇವೆ ಮಾಡಬೇಕು ಎಂಬ ಹಂಬಲವಿದೆ. ಪುತ್ತೂರು ತಾಲೂಕಿನ ನೆಲ್ಯಾಡಿ ಭಾಗ್ಯಜಾಲು ನಿವಾಸಿ ಕುಶಾಲಪ್ಪ ಗೌಡ ಮತ್ತು ದೇವಕಿ ಅವರ ತೃತೀಯ ಪುತ್ರ ನಾಗೇಶ್‌ ಕುಮಾರ್‌. ಇವರಿಗೆ ಇಬ್ಬರು ಸಹೋದರಿಯರು ಮತ್ತು ಓರ್ವ ಸಹೋದರ. ತಂದೆ ಕೂಲಿ ಕೆಲಸ ಮಾಡಿ ಮನೆಯ ಜವಾಬ್ದಾರಿ ನಿಭಾಯಿಸುತ್ತಿದ್ದಾರೆ. ಇಬ್ಬರು ಸಹೋದರಿಯರಿಗೆ ವಿವಾಹವಾಗಿದೆ.

ನಾಗೇಶ್‌ ಕುಮಾರ್‌ ಅರಸಿನಮಕ್ಕಿ ಸರಕಾರಿ ಶಾಲೆಯಲ್ಲಿ ಪ್ರಾಥಮಿಕ ಹಾಗೂ ಪ್ರೌಢ ಶಾಲಾ ಶಿಕ್ಷಣ ಪಡೆದಿದ್ದಾರೆ. ಆ ಬಳಿಕ ತಂದೆ ಕೆಲಸ ಅರಸಿಕೊಂಡು ಮೂಲ್ಕಿಯತ್ತ ತೆರಳಿದಾಗ ನಾಗೇಶ್‌ ಮೂಲ್ಕಿ ವಿಜಯಾ ಕಾಲೇಜು ಸೇರಿಕೊಂಡು ಪದವಿಪೂರ್ವ ವಿದ್ಯಾಭ್ಯಾಸ ಮಾಡಿದರು. ಅನಂತರ ಉಪ್ಪಿನಂಗಡಿ ಸರಕಾರಿ ಪ್ರಥಮ ದರ್ಜೆ ಕಾಲೇಜಿನಲ್ಲಿ ಪದವಿ ಪೂರೈಸಿದರು. ಬಳಿಕ ಸೇನಾ ನೇಮಕಾತಿ ರ್ಯಾಲಿಯಲ್ಲಿ ಭಾಗವಹಿಸಿ ಆಯ್ಕೆಯಾದರು. ಹವಾಲ್ದಾರ್‌ ಆಗಿ ಸೈನ್ಯದಲ್ಲಿದ್ದುಕೊಂಡೇ ಸ್ನಾತಕೋತ್ತರ ಪದವಿಯನ್ನೂ ಪಡೆದುಕೊಂಡ ಸಾಧನೆ ಇವರದು.

ಬಡತನವೇ ಬಂಡವಾಳ

ನಾಗೇಶ್‌ ಕುಮಾರ್‌ ಅವರಲ್ಲಿದ್ದದ್ದು ಬಡತನದಿಂದ ಮೇಲೆ ಬರುವ ಛಲ. ಮನೆಯಲ್ಲಿ ಅನುಕೂಲಕರ ವಾತಾವರಣ ಇಲ್ಲದಿದ್ದಾಗ ಪ್ರಾಥಮಿಕ ಹಾಗೂ ಪ್ರೌಢಶಾಲಾ ಶಿಕ್ಷಣವನ್ನು ಅಜ್ಜಿ ಮನೆಯಲ್ಲಿದ್ದು ಪೂರೈಸಿದ್ದರು. ಶೈಕ್ಷಣಿಕ ಖರ್ಚುವೆಚ್ಚಗಳಿಗೆ ಹಣ ಹೊಂದಿಸುವುದಕ್ಕಾಗಿ ಅಡಿಕೆ ಸುಲಿಯುವ ಕೆಲಸಕ್ಕೆ ಹೋಗುತ್ತಿದ್ದರು. ಮೂಲ್ಕಿಯಲ್ಲಿ ಪಿಯು ವಿದ್ಯಾಭ್ಯಾಸ ಮಾಡುತ್ತಿದ್ದಾಗ ತೋಟದ ಕೆಲಸ, ಜಾನುವಾರುಗಳ ನಿರ್ವಹಣೆ ಕೈಗೊಂಡು ಆದಾಯ ಗಳಿಸುತ್ತಿದ್ದರು.

ಉಗ್ರರ ದಾಳಿಯ ನೆನಪು
ಕಾಶ್ಮೀರದ ಸಾಂಜುವಾನ್‌ ಪ್ರದೇಶದಲ್ಲಿ 7 ಉಗ್ರರು ಸೇನಾ ಶಿಬಿರದ ಮೇಲೆ ದಾಳಿ ಮಾಡಿದ ನೆನಪು ನಾಗೇಶ್‌ ಸ್ಮರಣೆಯಲ್ಲಿ ಚಿರಸ್ಥಾಯಿ. ಮುಂಜಾವ 3 ಗಂಟೆಯ ಸುಮಾರಿಗೆ ಉಗ್ರರು ದಾಳಿ ನಡೆಸಿದ್ದರು. 24 ಗಂಟೆಗಳ ಕಾಲ ಸೈನಿಕರ ಕ್ಯಾಂಪನ್ನು ವಶದಲ್ಲಿ ಇರಿಸಿಕೊಂಡಿದ್ದರು. ನಾಗೇಶ್‌ ಕೂಡ ಇದ್ದ ಸೈನಿಕರ ತಂಡ ಉಗ್ರರ ವಿರುದ್ಧ ನಿರಂತರ ಹೋರಾಟ ಸಂಘಟಿಸಿತ್ತು. ಈ ದಾಳಿಯಲ್ಲಿ ನಾಲ್ವರು ಸೈನಿಕರು ಹಾಗೂ ಸೈನಿಕರ ಕುಟುಂಬದ ಮೂವರು ಸದಸ್ಯರು ಸಾವನ್ನಪ್ಪಿದ್ದು ಅತ್ಯಂತ ದುಃಖದ ಘಟನೆ ಎಂದು ನೆನಪಿಸಿಕೊಳ್ಳುತ್ತಾರೆ. ಅನಂತರ ಎನ್‌ಎಸ್‌ಜಿ ಕಮಾಂಡೋ, ವಿಶೇಷ ಪಡೆಯ ಸೈನಿಕರು ದಾಳಿ ನಡೆಸಿ ಎಲ್ಲ ಏಳು ಉಗ್ರರನ್ನೂ ಸದೆಬಡಿದರು. ಆ ಬಳಿಕ ಅಲ್ಲಿ  ದಾಳಿ ಆಗಿಲ್ಲ ಎನ್ನುತ್ತಾರೆ ನಾಗೇಶ್‌ ಕುಮಾರ್‌.

ಉನ್ನತ ಸೇವೆಯ ಕನಸು

ನಾಗೇಶ್‌ ಕುಮಾರ್‌ ಪದವಿ ವಿದ್ಯಾಭ್ಯಾಸದ ಸಂದರ್ಭದಲ್ಲೇ ಐಎಎಸ್‌, ಐಪಿಎಸ್‌, ಕೆಎಎಸ್‌ ಅಧಿಕಾರಿಯಾಗಿ ಸೇವೆ ಸಲ್ಲಿಸುವ ಕನಸು ಕಂಡು ಸಿದ್ಧತೆ ನಡೆಸುತ್ತಿದ್ದರು. ಅನಂತರ ಸೈನ್ಯದಲ್ಲಿ  ಸೇವೆ ಸಲ್ಲಿಸುವ ಅವಕಾಶ ಸಿಕ್ಕಿದರೂ ಕಲಿಕೆಯನ್ನು ಬಿಟ್ಟಿಲ್ಲ. ಸೈನ್ಯದಲ್ಲಿದ್ದುಕೊಂಡೇ ಸ್ನಾತಕೋತ್ತರ ಪದವಿ ಪಡೆದಿದ್ದಾರೆ. ಮುಂದೆ ಸ್ಪರ್ಧಾತ್ಮಕ ಪರೀಕ್ಷೆಗಳನ್ನು ಎದುರಿಸಿ ಆಡಳಿತ ಸೇವೆಯ ಅಧಿಕಾರಿಯಾಗಬೇಕೆನ್ನುವ ಬಯಕೆ ಅವರಿಗಿದೆ. ಸಮಯ ಸಿಕ್ಕಿದಾಗ ಅದಕ್ಕಾಗಿ ತಯಾರಿ ನಡೆಸುತ್ತಿದ್ದಾರೆ. ದಿಲ್ಲಿಯ ಚಾಣಕ್ಯ ತರಬೇತಿ ಸಂಸ್ಥೆಯಲ್ಲಿ  ತರಬೇತಿ ಪಡೆಯುವ ಕನಸನ್ನೂ ಇರಿಸಿಕೊಂಡಿದ್ದಾರೆ.

ಸೇನೆ ಸೇರಬೇಕಾದರೆ ಸೂಕ್ತ ರೀತಿಯ ಸಿದ್ಧತೆ, ಪ್ರಯತ್ನವೂ ಬೇಕು. ದೈಹಿಕ ಕ್ಷಮತೆಯ ಜತೆಗೆ ತಾಂತ್ರಿಕ ಕೌಶಲವೂ ಸೈನ್ಯದಲ್ಲಿ ಅಗತ್ಯವಾಗಿರುವುದರಿಂದ ಈ ನಿಟ್ಟಿನಲ್ಲಿಯೂ ಅವಕಾಶಗಳಿವೆ. ಸಾಧನೆಯ ಛಲ ನಮ್ಮಲ್ಲಿದ್ದಾಗ ಯಾವ ಅಡೆತಡೆಯೂ ಬಾಧಿಸದು ಎನ್ನುವುದನ್ನು ಯುವ ಸಮುದಾಯ ಅರಿತುಕೊಳ್ಳಬೇಕು. 
– ನಾಗೇಶ್‌ ಕುಮಾರ್‌ ಹವಾಲ್ದಾರ್‌, ಭಾರತೀಯ ಸೇನೆ

ಮನೆಯಲ್ಲಿ ಸಾಕಷ್ಟು  ಬಡತನವಿತ್ತು. ಈ ಕಾರಣದಿಂದ ಜವಾಬ್ದಾರಿ ನಿಭಾಯಿಸುವ ಹೊಣೆಗಾರಿಕೆ ಹೊತ್ತುಕೊಂಡಿದ್ದ  ನಾಗೇಶ್‌ ಎಳವೆ ಯಲ್ಲಿಯೇ ಕೂಲಿ ಕೆಲಸ ಮಾಡಿ ಕೊಂಡು ಶಿಕ್ಷಣ ಪಡೆದಿದ್ದ. ದೇಶ ಸೇವೆ ಮಾಡಬೇಕೆಂಬ ಹಂಬಲವನ್ನು ಛಲದಿಂದ ಪೂರೈಸಿದ್ದಾನೆ. ನಮಗೆಲ್ಲ ರಿಗೂ ಖುಷಿ ಹಾಗೂ ಹೆಮ್ಮೆ ಇದೆ.
– ದೇವಕಿ ನಾಗೇಶ್‌ ಕುಮಾರ್‌ ಅವರ ತಾಯಿ

– ರಾಜೇಶ್‌ ಪಟ್ಟೆ

ಟಾಪ್ ನ್ಯೂಸ್

ICC: ಉದಯೋನ್ಮುಖ ಆಟಗಾರ್ತಿ ಪ್ರಶಸ್ತಿಗೆ ಕರ್ನಾಟಕದ ಶ್ರೇಯಾಂಕಾ ಹೆಸರು

ICC: ಉದಯೋನ್ಮುಖ ಆಟಗಾರ್ತಿ ಪ್ರಶಸ್ತಿಗೆ ಕರ್ನಾಟಕದ ಶ್ರೇಯಾಂಕಾ ಹೆಸರು

World Rapid Chess Championship: ವಿಶ್ವ ರ‍್ಯಾಪಿಡ್ ಚೆಸ್‌.. ಅರ್ಜುನ್‌ ಜಂಟಿ ಅಗ್ರಸ್ಥಾನ

World Rapid Chess Championship: ವಿಶ್ವ ರ‍್ಯಾಪಿಡ್ ಚೆಸ್‌.. ಅರ್ಜುನ್‌ ಜಂಟಿ ಅಗ್ರಸ್ಥಾನ

3-plane-crash

Plane Crash: ದಕ್ಷಿಣ ಕೊರಿಯಾದಲ್ಲಿ ವಿಮಾನ ಪತನ; 28 ಮಂದಿ ಮೃತ್ಯು, ಇಬ್ಬರು ಗಂಭೀರ

PKL Season 11: ಇಂದು ಪ್ರೊ ಕಬಡ್ಡಿ ಫೈನಲ್‌… ಹರಿಯಾಣ – ಪಾಟ್ನಾ ಹಣಾಹಣಿ

PKL Season 11: ಇಂದು ಪ್ರೊ ಕಬಡ್ಡಿ ಫೈನಲ್‌… ಹರಿಯಾಣ – ಪಾಟ್ನಾ ಹಣಾಹಣಿ

2-bbk11

BBK11: 13ನೇ ವಾರದಲ್ಲಿ ವೀಕ್ಷಕರ ಗಮನ ಸೆಳೆದಿದ್ದ ಖ್ಯಾತ ಸ್ಪರ್ಧಿಯೇ ಎಲಿಮಿನೇಟ್

RBI: ಯುಪಿಐ ಮೂಲಕ ಡಿಜಿಟಲ್‌ ವ್ಯಾಲೆಟ್‌ ಹಣ ಬಳಕೆಗೆ ಅಸ್ತು

RBI: ಯುಪಿಐ ಮೂಲಕ ಡಿಜಿಟಲ್‌ ವ್ಯಾಲೆಟ್‌ ಹಣ ಬಳಕೆಗೆ ಅಸ್ತು

Daily Horoscope: ಅಪಾತ್ರರಿಗೆ ಸಲಹೆ ನೀಡಿ ಅವಮಾನ ಹೊಂದದಿರಿ, ಭವಿಷ್ಯದ ಕುರಿತು ಚಿಂತನೆ

ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು

11-2

Belthangady: ಶಾಲೆಯ ಮಕ್ಕಳು ನೆಟ್ಟಿದ್ದ ಹೂ ಗಿಡಗಳ ಕುಂಡಗಳನ್ನು ಪುಡಿಗೈದ ಕಿಡಿಗೇಡಿಗಳು

4

Bantwal: ಸಾಹಿತ್ಯವನ್ನು ಮಕ್ಕಳ ಮನ ಮುಟ್ಟುವಂತೆ ಬೋಧಿಸುವ ಶಿಕ್ಷಕರು ಬೇಕು

3

Bantwal ತಾಲೂಕು ಕಚೇರಿ: ಪಾಳು ಬಿದ್ದಿದೆ ಜನರೇಟರ್‌!

2

Uppinangady: ಕಾಟಾಚಾರದ ಕಾಮಗಾರಿಗೆ ಸ್ಥಳೀಯರ ತರಾಟೆ

1(1

Sullia: ಪ್ಲಾಟ್‌ಫಾರ್ಮ್ ಎತ್ತರಿಸುವ ಕಾರ್ಯ ಪೂರ್ಣ

MUST WATCH

udayavani youtube

ದೈವ ನರ್ತಕರಂತೆ ಗುಳಿಗ ದೈವದ ವೇಷ ಭೂಷಣ ಧರಿಸಿ ಕೋಲ ಕಟ್ಟಿದ್ದ ಅನ್ಯ ಸಮಾಜದ ಯುವಕ

udayavani youtube

ಹಕ್ಕಿಗಳಿಗಾಗಿ ಕಲಾತ್ಮಕ ವಸ್ತುಗಳನ್ನು ತಯಾರಿಸುತ್ತಿರುವ ಪಕ್ಷಿ ಪ್ರೇಮಿ

udayavani youtube

ಮಂಗಳೂರಿನ ನಿಟ್ಟೆ ವಿಶ್ವವಿದ್ಯಾನಿಲಯದ ತಜ್ಞರ ಅಧ್ಯಯನದಿಂದ ಬಹಿರಂಗ

udayavani youtube

ಈ ಹೋಟೆಲ್ ಗೆ ಪೂರಿ, ಬನ್ಸ್, ಕಡುಬು ತಿನ್ನಲು ದೂರದೂರುಗಳಿಂದಲೂ ಜನ ಬರುತ್ತಾರೆ

udayavani youtube

ಹರೀಶ್ ಪೂಂಜ ಪ್ರಚೋದನಾಕಾರಿ ಹೇಳಿಕೆ ವಿರುದ್ಧ ಪ್ರಾಣಿ ಪ್ರಿಯರ ಆಕ್ರೋಶ

ಹೊಸ ಸೇರ್ಪಡೆ

ICC: ಉದಯೋನ್ಮುಖ ಆಟಗಾರ್ತಿ ಪ್ರಶಸ್ತಿಗೆ ಕರ್ನಾಟಕದ ಶ್ರೇಯಾಂಕಾ ಹೆಸರು

ICC: ಉದಯೋನ್ಮುಖ ಆಟಗಾರ್ತಿ ಪ್ರಶಸ್ತಿಗೆ ಕರ್ನಾಟಕದ ಶ್ರೇಯಾಂಕಾ ಹೆಸರು

World Rapid Chess Championship: ವಿಶ್ವ ರ‍್ಯಾಪಿಡ್ ಚೆಸ್‌.. ಅರ್ಜುನ್‌ ಜಂಟಿ ಅಗ್ರಸ್ಥಾನ

World Rapid Chess Championship: ವಿಶ್ವ ರ‍್ಯಾಪಿಡ್ ಚೆಸ್‌.. ಅರ್ಜುನ್‌ ಜಂಟಿ ಅಗ್ರಸ್ಥಾನ

3-plane-crash

Plane Crash: ದಕ್ಷಿಣ ಕೊರಿಯಾದಲ್ಲಿ ವಿಮಾನ ಪತನ; 28 ಮಂದಿ ಮೃತ್ಯು, ಇಬ್ಬರು ಗಂಭೀರ

PKL Season 11: ಇಂದು ಪ್ರೊ ಕಬಡ್ಡಿ ಫೈನಲ್‌… ಹರಿಯಾಣ – ಪಾಟ್ನಾ ಹಣಾಹಣಿ

PKL Season 11: ಇಂದು ಪ್ರೊ ಕಬಡ್ಡಿ ಫೈನಲ್‌… ಹರಿಯಾಣ – ಪಾಟ್ನಾ ಹಣಾಹಣಿ

2-bbk11

BBK11: 13ನೇ ವಾರದಲ್ಲಿ ವೀಕ್ಷಕರ ಗಮನ ಸೆಳೆದಿದ್ದ ಖ್ಯಾತ ಸ್ಪರ್ಧಿಯೇ ಎಲಿಮಿನೇಟ್

Thanks for visiting Udayavani

You seem to have an Ad Blocker on.
To continue reading, please turn it off or whitelist Udayavani.