ಸಂತ ಲಾರೆನ್ಸರ ಬದುಕು ಕ್ರೈಸ್ತರಿಗೆ ಮಾದರಿ: ಬಿಷಪ್
Team Udayavani, Aug 11, 2017, 8:15 AM IST
ಮಂಗಳೂರು: ಸಂತ ಲಾರೆನ್ಸರು ಕ್ರೈಸ್ತ ವಿಶ್ವಾಸಕ್ಕೆ ಸಂಬಂಧಿಸಿ ದೃಢ ಸಂಕಲ್ಪದಿಂದ ದೇವರ ಮುಂದೆ ಧನ್ಯರಾಗಿದ್ದಾರೆ. ದೇವರು ಅವರ ಮೂಲಕ ಆಶೀರ್ವಾದಗಳ ಸುರಿಮಳೆಗೈಯುತ್ತಾರೆ. ಸಮಾಜದಲ್ಲಿ ನೈಜ ಕ್ರೈಸ್ತರಾಗಿ ಜೀವನ ನಡೆಸಲು ಸಂತ ಲಾರೆನ್ಸರು ಮಾದರಿಯಾಗಿದ್ದಾರೆ ಎಂದು ಶಿವಮೊಗ್ಗ ಧರ್ಮಪ್ರಾಂತದ ಧರ್ಮಾಧ್ಯಕ್ಷ ರೈ| ರೆ| ಡಾ| ಫ್ರಾನ್ಸಿಸ್ ಸೆರಾವೋ ಹೇಳಿದರು.
ಅವರು ಗುರುವಾರ ಬೋಂದೆಲ್‌ನ ಸಂತ ಲಾರೆನ್ಸ್ ಚರ್ಚ್ ಹಾಗೂ ಪುಣ್ಯಕ್ಷೇತ್ರದ ವಾರ್ಷಿಕ ಮಹೋತ್ಸವದಲ್ಲಿ ಆಶೀರ್ವಚನ ನೀಡಿದರು. ಸಂತ ಲಾರೆನ್ಸರು ತಮ್ಮ ಬದುಕಿನ ಉದ್ದಕ್ಕೂ ಹಾಗೂ ಮರಣಾನಂತರವೂ ಯೇಸುಕ್ರಿಸ್ತರಿಗೆ ಸಾಕ್ಷಿಯಾದರು. ಬಡವರ ಸೇವೆಯ ವಿಚಾರದಲ್ಲಿ ತನ್ನ ಜೀವವನ್ನು ಅರ್ಪಿಸಿ ತ್ಯಾಗ ಮನೋ ಭಾವವವನ್ನು ಜಗತ್ತಿಗೇ ತೋರಿಸಿದ್ದಾರೆ.
ಸಂತ ಲಾರೆನ್ಸರಿಗೆ ಸಲ್ಲಿಸುವ ಪ್ರಾರ್ಥನೆಗಳು ನೇರವಾಗಿ ಯೇಸು ಕ್ರಿಸ್ತರಿಗೆ ತಲುಪುತ್ತವೆ ಎಂದು ವಿವರಿಸಿದರು.
ಹಬ್ಬದ ವಿಶೇಷ ಬಲಿಪೂಜೆಯಲ್ಲಿ ಬಜೊjàಡಿಯ ಕ್ರೈಸ್ತ ಕುಟುಂಬ ಸಲಹಾ ಸೇವಾ ಕೇಂದ್ರದ ನಿರ್ದೇಶಕ ಫಾ| ಅನಿಲ್ ಅಲ್ಫೆ†ಡ್ ಡಿ’ಸೋಜಾ ಅವರು ಪ್ರವಚನ ನೀಡಿದರು. ಸಂತ ಲಾರೆನ್ಸರು ತಮ್ಮ ಕಷ್ಟ ನಷ್ಟಗಳಲ್ಲಿ ಅಚಲ ವಿಶ್ವಾಸದ ಮೂಲಕ ದೇವರ ಪ್ರೀತಿಗೆ ಪಾತ್ರರಾದವರು. ಅವರ ಆದರ್ಶಗಳನ್ನು ಕ್ರೈಸ್ತರು ತಮ್ಮ ಬದುಕಿನಲ್ಲಿ ಅಳವಡಿಸಿಕೊಳ್ಳಬೇಕು. ಸಂತ ಲಾರೆನ್ಸರಿಗೆ ಸಮರ್ಪಿಸಿದ ಬೋಂದೆಲ್‌ನ ಪುಣ್ಯಕ್ಷೇತ್ರ ಅನೇಕ ಪವಾಡಗಳಿಗೆ ಸಾಕ್ಷಿಯಾಗಿದೆ ಎಂದು ಹೇಳಿದರು.
ಬೋಂದೆಲ್ ಚರ್ಚಿನ ಧರ್ಮಗುರು ವಂ| ಆ್ಯಂಡ್ರು ಡಿ’ಸೋಜಾ ಸೇರಿದಂತೆ ಬೋಂದೆಲ್ ವಲಯದ ವಿವಿಧ ಚರ್ಚ್‌ಗಳ 35ಕ್ಕೂ ಅಧಿಕ ಧರ್ಮಗುರುಗಳು ವಿಶೇಷ ಬಲಿಪೂಜೆಯಲ್ಲಿ ಭಾಗಿಗಳಾದರು. 3,000ಕ್ಕೂ ಅಧಿಕ ಭಕ್ತರು ಭಾಗವಹಿಸಿದ್ದರು. ಬಲಿಪೂಜೆ ಬಳಿಕ ವಂ| ಆ್ಯಂಡ್ರು ಡಿ’ಸೋಜಾ ಅವರು ವಾರ್ಷಿಕ ಮಹೋತ್ಸವದ ಯಶಸ್ಸಿಗೆ ಸಹಕರಿಸಿದ ಎಲ್ಲರಿಗೂ ಕೃತಜ್ಞತೆ ಸಲ್ಲಿಸಿದರು. ಫೋರ್ ವಿಂಡ್ಸ್ ಸಂಸ್ಥೆಯ ನಿರ್ದೇಶಕ ಇ. ಫೆರ್ನಾಂಡಿಸ್ ಸಹಿತ ವಿಶೇಷ ಸಹಕಾರ ನೀಡಿದವರನ್ನು ಸ್ಮರಿಸಿದರು.
ಸಹಾಯಕ ಗುರುಗಳಾದ ವಂ| ಲಿಯೋ ವೇಗಸ್ ಮತ್ತು ವಂ| ವಿನೋದ್ ಲೋಬೊ, ಉಪಾಧ್ಯಕ್ಷ ಹೆನºರ್ಟ್ ಪಿಂಟೊ, ಕಾರ್ಯದರ್ಶಿ ಫ್ರಾನ್ಸಿಸ್ ವೇಗಸ್, ಪ್ರಚಾರ ಸಮಿತಿ ಸಂಚಾಲಕ ಸ್ಟಾ éನಿ ಅಲ್ವಾರಿಸ್, ಪುಣ್ಯಕ್ಷೇತ್ರ ಸಮಿತಿಯ ಸಂಯೋಜಕ ರೂಢಿ ಪಿಂಟೊ, ಕಾರ್ಯದರ್ಶಿ ವಿಲ್ಫೆ†ಡ್ ಅಲ್ವಾರಿಸ್ ಉಪಸ್ಥಿತರಿದ್ದರು.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
MUST WATCH
ಹೊಸ ಸೇರ್ಪಡೆ
ಪರೀಕ್ಷೆಯಿಂದ ತಪ್ಪಿಸಿಕೊಳ್ಳಲು 23ಶಾಲೆಗೆ ಬಾಂಬ್ ಬೆದರಿಕೆ ಹಾಕಿದ್ದ 12ನೇ ತರಗತಿ ವಿದ್ಯಾರ್ಥಿ
Delhi-NCR: ದಟ್ಟ ಮಂಜು ಕವಿದ ವಾತಾವರಣ-ವಿಮಾನ,ವಾಹನ ಸಂಚಾರಕ್ಕೆ ಎಫೆಕ್ಟ್, ಟ್ರಾಫಿಕ್ ಜಾಮ್
Uchila: ಕಾರು ಢಿಕ್ಕಿಯಾಗಿ ಪಾದಚಾರಿ ಸ್ಥಳದಲ್ಲೇ ಸಾವು
Shimoga: ರಸ್ತೆ ಬದಿಯಲ್ಲಿ ನವಜಾತ ಶಿಶು ಬಿಟ್ಟು ಹೋದ ತಾಯಿ!; ಆರೈಕೆ ಮಾಡಿದ ಸ್ಥಳೀಯರು
Bengaluru: 7 ಮದುವೆ ಮುಚ್ಚಿಟ್ಟು 8ನೇ ಮದುವೆಯಾಗಿ ಪತಿಗೆ ವಂಚನೆ!
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.