ರಸ್ತೆಗೆ ಉರುಳಲು ಹವಣಿಸುತ್ತಿದೆ ಬಿರುಕುಬಿಟ್ಟ ಗುಡ್ಡ

ಸಂಪಾಜೆ-ಮಡಿಕೇರಿ ರಾಷ್ಟ್ರೀಯ ಹೆದ್ದಾರಿ

Team Udayavani, Apr 11, 2019, 6:00 AM IST

Sullia1

ಸುಳ್ಯ: ಪ್ರಾಕೃತಿಕ ಅವಘಡಕ್ಕೆ ಸಿಲುಕಿ ಹಲವು ಹೋಳಾಗಿದ್ದ ಮಡಿಕೇರಿ-ಸಂಪಾಜೆ ರಾಷ್ಟ್ರೀಯ ಹೆದ್ದಾರಿಯ ಇಕ್ಕೆಲಗಳಲ್ಲಿ ಬಿರುಕು ಬಿಟ್ಟ ಸ್ಥಿತಿಯಲ್ಲಿರುವ ಆಳೆತ್ತರದ ಗುಡ್ಡಗಳು ರಸ್ತೆಗೆ ಉರುಳಲು ಹವಣಿಸುವಂತಿವೆ.

“ಉದಯವಾಣಿ’ಯು ಬುಧವಾರ ನಡೆಸಿದ ರಿಯಾಲಿಟಿ ಚೆಕ್‌ನಲ್ಲಿ ಕಂಡುಬಂದ ದೃಶ್ಯಗಳಿವು. ಒಂದೆಡೆ ಶಿಥಿಲ ರಸ್ತೆ ದುರಸ್ತಿಗೊಂಡು ನಯವಾದ ಹೊಸ ರಸ್ತೆ ನಿರ್ಮಾಣವಾಗಿದೆ. ಆದರೆ, ಕಳೆದ ಪ್ರಾಕೃತಿಕ ದುರಂತದಲ್ಲಿ ಬಿರುಕು ಬಿಟ್ಟಿರುವ ಗುಡ್ಡಗಳು ರಸ್ತೆಗೆ ತಾಗಿಕೊಂಡಿದ್ದು, ಮತ್ತೂಂದು ಅವಘಡಕ್ಕೆ ಕಾರಣವಾಗಬಲ್ಲ ಎಲ್ಲ ಲಕ್ಷಣಗಳು ಕಾಣಿಸುತ್ತಿವೆ.

ಹಲವೆಡೆ ಗುಡ್ಡ ಅಪಾಯ
ಕಳೆದ ಆಗಸ್ಟ್‌ನಲ್ಲಿ ಜಲಪ್ರಳಯಕ್ಕೆ ಬಲಿಯಾಗಿದ್ದ ಜೋಡುಪಾಲ ಈಗ ಸುಧಾರಿಸಿದೆ. ಇಲ್ಲಿ ರಸ್ತೆ, ತಡೆಗೋಡೆ ನಿರ್ಮಾಣವಾಗಿದೆ. ಇಲ್ಲಿಂದ ಮೇಲ್ಭಾಗದಲ್ಲಿ ಮೊಣ್ಣಂಗೇರಿ, ಎರಡನೇ ಮೊಣ್ಣಂಗೇರಿ, ಮದೆನಾಡು ಮೊದಲಾದೆಡೆ ಆಳೆತ್ತರದ ಗುಡ್ಡಗಳು ರಸ್ತೆಗೆ ಜಾರಿ ನಿಂತಿವೆ. ಅದೂ ತಿರುವು ರಸ್ತೆಯಲ್ಲೇ. ಮೊಣ್ಣಂಗೇರಿಯಿಂದ ತುಸು ದೂರದಲ್ಲಿ ರಸ್ತೆಯ ಒಂದು ಪಾರ್ಶ್ವಕ್ಕೆ ಮರಳು ಚೀಲದ ತಡೆಗೋಡೆ ನಿರ್ಮಿಸಿದ್ದರೂ ಮೇಲ್ಭಾಗದ ಗುಡ್ಡ ಬಿರುಕು ಬಿಟ್ಟಿದೆ. ಮದೆನಾಡು ತನಕವೂ ಇಂತಹ ಅಪಾಯಕಾರಿ ಸ್ಥಿತಿ ಇದೆ.

ಮಳೆ ಆರಂಭ: ಸುರಕ್ಷತೆ ಆತಂಕ
ಮಡಿಕೇರಿಯಾಚೆ ಈಗಾಗಲೇ ಮಳೆ ಆರಂಭಗೊಂಡಿದೆ. ಗುಡ್ಡ ಬಿರುಕು ಬಿಟ್ಟು ಜಾರಿ ನಿಂತಿರುವ ಕಾರಣ ಪೂರ್ಣ ಕುಸಿಯಲು ಸಣ್ಣ ಮಳೆ ಸಾಕು. ಆದರೆ ರಾಷ್ಟ್ರೀಯ ಹೆದ್ದಾರಿ ಇಲಾಖೆ ರಸ್ತೆ ನಿರ್ಮಾಣಕ್ಕೆ ತೋರಿರುವ ಕಾಳಜಿಯನ್ನು ಗುಡ್ಡ ತೆರವು ಅಥವಾ ಸಮತಟ್ಟು ಮಾಡಲು ತೋರಿಲ್ಲ. ಈ ಮಾರ್ಗದಲ್ಲಿ ದಿನಂಪ್ರತಿ ಸಾವಿರಾರು ವಾಹನಗಳು ಸಂಚರಿಸುತ್ತವೆ.

ಹೊಸ ರಸ್ತೆ ನಿರ್ಮಾಣ
ಸಂಪಾಜೆಯಿಂದ ಮಡಿಕೇರಿ ತನಕ ಹೊಸ ರಸ್ತೆ ನಿರ್ಮಾಣ ಬಹುತೇಕ ಪೂರ್ಣಗೊಂಡಿದೆ. ಒಂದು ಹಂತದ ಡಾಮರು ಕಾಮಗಾರಿ ಮುಗಿದು ಎರಡನೇ ಹಂತ ದೇವರ ಕೊಲ್ಲಿ ತಿರುವು ತನಕ ಸಾಗಿದೆ. ತಾಳತ್‌ಮನೆ, ಮದೆನಾಡು, ಎರಡನೇ ಮೊಣ್ಣಂಗೇರಿ ಬಳಿ ಶಾಶ್ವತ ತಡೆಗೋಡೆ ನಿರ್ಮಾಣ ಪೂರ್ಣಗೊಂಡಿದೆ. ಕೆಲವೇ ದಿನಗಳಲ್ಲಿ ಡಾಮರು ಕೆಲಸ ಪೂರ್ಣಗೊಳ್ಳಲಿದೆ. ತಡೆಗೋಡೆ ಸ್ಥಳದಲ್ಲಿ ಜಲ್ಲಿಪುಡಿ ತುಂಬಿದ ಚೀಲಗಳನ್ನು ಇರಿಸಲಾಗಿದೆ. ನೆಲದ ಮೇಲೆ ಜಿಯೋಫ್ಯಾಬ್ರಿಕ್‌ ಪದರ ಹಾಸಿ ಅದರ ಮೇಲೆ ಒಂದೂವರೆ ಅಡಿಯಷ್ಟು ದಪ್ಪಗೆ ಗ್ರಾನ್ಯುಲರ್‌ ಸಬ್‌ಬೇಸ್‌ (ಜಿಎಸ್‌ಬಿ) ಪದರ ಹಾಕಲಾಗಿದೆ. ಮಣ್ಣು ಹಾಕಿ ಎಂಬ್ಯಾಂಕ್‌ವೆುಂಟ್‌ ನಿರ್ಮಿಸಿ ಇಕ್ಕೆಲಗಳು ಕುಸಿಯದಂತೆ ರಿಟೇನಿಂಗ್‌ ವಾಲ್‌, ಗೇಬಿಯನ್‌ ವಾಲ್‌ ಮೂಲಕ ಶಾಶ್ವತ ಹೆದ್ದಾರಿ ನಿರ್ಮಾಣ ಕಾಮಗಾರಿ ನಡೆಸಲಾಗಿದೆ.

ಪ್ರಯಾಣ ಸಲೀಸಲ್ಲ
ರಸ್ತೆ ಮರು ನಿರ್ಮಾಣ, ರಸ್ತೆ ಕುಸಿತದ ಸ್ಥಳಕ್ಕೆ ತಡೆಗೋಡೆ ಕಾಮಗಾರಿ ಉತ್ತಮವಾಗಿದೆ. ಆದರೆ ಇನ್ನೊಂದು ಭಾಗದಲ್ಲಿ ಗುಡ್ಡಗಳು ರಸ್ತೆಗೆ ಬೀಳುವ ಸ್ಥಿತಿಯಲ್ಲಿವೆ. ಈ ಬಗ್ಗೆ ಮೊದಲು ಕ್ರಮ ಕೈಗೊಳ್ಳಬೇಕಿತ್ತು.
– ಶ್ರೀನಿವಾಸ ಮಡಿಕೇರಿ
ವಾಹನ ಸವಾರ

– ಕಿರಣ್‌ ಪ್ರಸಾದ್‌ ಕುಂಡಡ್ಕ

ಟಾಪ್ ನ್ಯೂಸ್

Egg-Students

Financial Burden: ಶಾಲಾ ಶಿಕ್ಷಕರಿಗೆ ಮೊಟ್ಟೆ ತಲೆನೋವು!

Naxal-encounter-Vikram-1

Naxal Activity: ಮಲೆನಾಡಿನವರೊಂದಿಗೆ ಆತ್ಮೀಯವಾಗಿ ಬೆರೆಯುತ್ತಿದ್ದ ವಿಕ್ರಂ ಗೌಡ

Arrest

Ullala: ತ್ರಿವಳಿ ತಲಾಖ್‌ ಪ್ರಕರಣ: ಆರೋಪಿಯ ಸೆರೆ

women-suside

CID Investigate: ಬೋವಿ ಹಗರಣದ ಆರೋಪಿ ಮಹಿಳಾ ಉದ್ಯಮಿ ಆತ್ಮಹ*ತ್ಯೆ

Govt Employees: 8ನೇ ವೇತನ ಆಯೋಗ ಶಿಫಾರಸು ಜಾರಿಯಾದರೆ ಕನಿಷ್ಠ ವೇತನ 51000 ರೂ.!

Govt Employees: 8ನೇ ವೇತನ ಆಯೋಗ ಶಿಫಾರಸು ಜಾರಿಯಾದರೆ ಕನಿಷ್ಠ ವೇತನ 51000 ರೂ.!

Kota-Shrinivas

Udupi: ಟವರ್‌ ನಿರ್ಮಾಣ ಕಾಮಗಾರಿ ವಿಳಂಬವಾದರೆ ಕ್ರಿಮಿನಲ್‌ ದಾವೆ: ಸಂಸದ ಕೋಟ

Kishor-Kodgi-Campco

Mangaluru: ಅಡಿಕೆ ಕ್ಯಾನ್ಸರ್‌ ಕಾರಕ ಎಂಬ ಡಬ್ಲ್ಯುಎಚ್‌ಒ ವಾದಕ್ಕೆ ಕ್ಯಾಂಪ್ಕೊ ಆಕ್ಷೇಪ


ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು

Suside-Boy

Belthangady: ಕಲ್ಮಂಜ: ರಿಕ್ಷಾ ಚಾಲಕ ಆತ್ಮಹತ್ಯೆ

Suside-Boy

Punjalakatte: ಕೊಯಿಲದ ವ್ಯಕ್ತಿ ಹಾಸನದಲ್ಲಿ ನಿಗೂಢ ಸಾವು

Police

Subhramanya: ಹೆದ್ದಾರಿ ತಡೆದು ಪ್ರತಿಭಟನೆ: 13 ಮಂದಿಗೆ ಜಾಮೀನು

ನವೆಂಬರ್‌ 26-30: ಧರ್ಮಸ್ಥಳ ಲಕ್ಷದೀಪೋತ್ಸವ ಸಂಭ್ರಮ

ನವೆಂಬರ್‌ 26-30: ಧರ್ಮಸ್ಥಳ ಲಕ್ಷದೀಪೋತ್ಸವ ಸಂಭ್ರಮ

12-

Belthangady: ನ. 21- ಮೇ 23: ಧರ್ಮಸ್ಥಳ ಮೇಳದಿಂದ ಯಕ್ಷ ಗಾನ ಸೇವೆ

MUST WATCH

udayavani youtube

ಮಣಿಪಾಲ | ವಾಗ್ಶಾದಲ್ಲಿ ಗಮನ ಸೆಳೆದ ವಾರ್ಷಿಕ ಫ್ರೂಟ್ಸ್ ಮಿಕ್ಸಿಂಗ್‌ |

udayavani youtube

ಕೊಲ್ಲೂರಿನಲ್ಲಿ ಮಾಧ್ಯಮಗಳಿಗೆ ಪ್ರತಿಕ್ರಿಯೆ ನೀಡಿದ ಡಿಸಿಎಂ ಡಿ ಕೆ ಶಿವಕುಮಾರ್

udayavani youtube

ಉಡುಪಿ ಶ್ರೀ ಕೃಷ್ಣ ಮಠದಲ್ಲಿ ಬೃಹತ್ ಗೀತೋತ್ಸವಕ್ಕೆ ಅದ್ದೂರಿ ಚಾಲನೆ|

udayavani youtube

ಲಾಭದಾಯಕ ಗುಲಾಬಿ ಕೃಷಿ ಮಾಡುವ ವಿಧಾನ

udayavani youtube

ಗೀತೋತ್ಸವ ತ್ರಿಪಕ್ಷ ಶತವೈಭವ ಕಾರ್ಯಕ್ರಮಕ್ಕೆ ಆಮಂತ್ರಿಸಿದ ಪರ್ಯಾಯ ಪುತ್ತಿಗೆ ಶ್ರೀಗಳು

ಹೊಸ ಸೇರ್ಪಡೆ

Egg-Students

Financial Burden: ಶಾಲಾ ಶಿಕ್ಷಕರಿಗೆ ಮೊಟ್ಟೆ ತಲೆನೋವು!

Naxal-encounter-Vikram-1

Naxal Activity: ಮಲೆನಾಡಿನವರೊಂದಿಗೆ ಆತ್ಮೀಯವಾಗಿ ಬೆರೆಯುತ್ತಿದ್ದ ವಿಕ್ರಂ ಗೌಡ

Arrest

Ullala: ತ್ರಿವಳಿ ತಲಾಖ್‌ ಪ್ರಕರಣ: ಆರೋಪಿಯ ಸೆರೆ

women-suside

CID Investigate: ಬೋವಿ ಹಗರಣದ ಆರೋಪಿ ಮಹಿಳಾ ಉದ್ಯಮಿ ಆತ್ಮಹ*ತ್ಯೆ

Ullala-Balepuni

Ullala: 3ರ ಬಾಲಕಿಗೆ 70ರ ವೃದ್ಧನಿಂದ ಲೈಂಗಿಕ ಕಿರುಕುಳ

Thanks for visiting Udayavani

You seem to have an Ad Blocker on.
To continue reading, please turn it off or whitelist Udayavani.