ಎರಡೇ ಮಳೆಗೆ ಸಂಪಾಜೆ ರಾ. ಹೆದ್ದಾರಿ ಕುಸಿತ!
ಆಧುನಿಕ ತಂತ್ರಜ್ಞಾನ ಬಳಸಿದ ಕಾಮಗಾರಿ ಬಗ್ಗೆ ಅನುಮಾನ
Team Udayavani, Jul 8, 2019, 10:30 AM IST
ಸುಳ್ಯ: ಕಳೆದ ಬಾರಿ ಪ್ರಾಕೃತಿಕ ಅವಘಡದಿಂದ ಸಂಪರ್ಕ ಕಳೆದುಕೊಂಡಿದ್ದ ಸಂಪಾಜೆ- ಮಡಿಕೇರಿ ಹೆದ್ದಾರಿ ಈ ವರ್ಷ ಮಳೆಗಾಲದ ಆರಂಭದಲ್ಲೇ ಕುಸಿದಿದೆ. ಮಡಿಕೇರಿ-ಮಂಗಳೂರು ರಸ್ತೆಯ ಕಾಟಕೇರಿ ಬಳಿ ಹೆದ್ದಾರಿಯಲ್ಲಿ ಬಿರುಕು ಕಾಣಿಸಿಕೊಂಡಿದ್ದು, ಮುನ್ನೆಚ್ಚರಿಕೆಯಾಗಿ ಘನ ವಾಹನ ಸಂಚಾರವನ್ನು ಜಿಲ್ಲಾಡಳಿತ ನಿಷೇಧಿಸಿದೆ.
ಕುಶಾಲ ನಗರ-ಸಕಲೇಶಪುರ ಮೂಲಕ ಪರ್ಯಾಯ ಮಾರ್ಗ ದಲ್ಲಿ ಸಂಚಾರಕ್ಕೆ ಅನುವು ಮಾಡಿಕೊಡಲಾಗಿದೆ. ಬಿರುಕು ಕಾಣಿಸಿಕೊಂಡ ಭಾಗದಲ್ಲಿ ಬ್ಯಾರಿಕೇಡ್ ಇಡಲಾಗಿದ್ದು, ರಾ. ಹೆ. ಪ್ರಾಧಿಕಾರದ ಅಧಿಕಾರಿಗಳು ಪರಿಶೀಲನೆ ನಡೆಸಿದ್ದಾರೆ.
ಗುಣಮಟ್ಟದ ಬಗ್ಗೆ ಮೂಡಿದ ಅನುಮಾನ
ಕಳೆದ ಆಗಸ್ಟ್‌ನಲ್ಲಿ ರಸ್ತೆ ಕುಸಿದ ಕಡೆ ಮರಳಿನ ಚೀಲ, ಜಿಯೊ ಸಿಂಥೆಟಿಕ್ ತಡೆಗೋಡೆ ನಿರ್ಮಿಸಿ ತಾತ್ಕಾಲಿಕ ವ್ಯವಸ್ಥೆಯಡಿ ರಸ್ತೆ ಸಂಚಾರಕ್ಕೆ ಮುಕ್ತಗೊಳಿಸಲಾಗಿತ್ತು. ಜಿಯೋಫ್ಯಾಬ್ರಿಕ್ ಪದರ ಹಾಸಿ ಅದರ ಮೇಲೆ ಒಂದೂವರೆ ಅಡಿಯಷ್ಟು ದಪ್ಪಗೆ ಗ್ರಾನ್ಯುಲರ್ ಸಬ್‌ಬೇಸ್ (ಜಿಎಸ್‌ಬಿ) ಪದರ, ಮಣ್ಣು ಹಾಕಿ ಎಂಬ್ಯಾಂಕ್‌ವೆುಂಟ್ ನಿರ್ಮಿಸಿ ಇಕ್ಕೆಲಗಳು ಕುಸಿಯದಂತೆ ರಿಟೇನಿಂಗ್ ವಾಲ್, ಗೇಬಿಯನ್ ವಾಲ್ ಮೂಲಕ ಹೆದ್ದಾರಿ ನಿರ್ಮಾಣ ಕಾಮಗಾರಿ ನಡೆಸಲಾಗಿತ್ತು. ಸಾಯಿಲ್ ನೈಲಿಂಗ್ ಮತ್ತು ಶಾಟ್‌ಕ್ರೆಟಿಂಗ್ ಎನ್ನುವ ಆಧುನಿಕ ತಂತ್ರಜ್ಞಾನ ಬಳಸಿ ದುರಸ್ತಿ ನಡೆದಿತ್ತು.
ಈ ತಂತ್ರಜ್ಞಾನದಡಿ ಮರಳಿನ ಚೀಲಗಳ ಮೇಲೆ ಕಬ್ಬಿಣದ ಸರಳು ಹರಡಿ ಇದರ ಮೇಲೆ ಯಂತ್ರಗಳ ಮೂಲಕ ಕಾಂಕ್ರೀಟ್ ಹಾಕಲಾಗುತ್ತದೆ. ಇದರಿಂದ ಮಳೆ ನೀರು ಭೂಮಿ ಒಳಗೆ ಇಳಿಯುವುದಿಲ್ಲ ಎನ್ನುವುದು ಇಲಾಖೆಯ ವಾದ. ಆದರೆ ಕಾಮಗಾರಿ ನಡೆದ ಸ್ಥಳದಲ್ಲಿ ಎರಡೇ ದಿನಗಳ ಮಳೆಗೆ ರಸ್ತೆ ಬಿರುಕು ಬಿಟ್ಟಿದ್ದು, ಕಾಮಗಾರಿ ಸಾಮರ್ಥ್ಯವನ್ನು ಪ್ರಶ್ನೆ ಮಾಡಿದೆ.
ಕೊಯನಾಡಿನಲ್ಲಿ ಕುಸಿತದ ಭೀತಿ
ರಾಜ್ಯ ಹೆದ್ದಾರಿಯಾಗಿದ್ದ ಮಾಣಿ-ಮೈಸೂರು ರಸ್ತೆ 2013ರಲ್ಲಿ ವಿಸ್ತರಣೆಗೊಂಡು ಮರು ಡಾಮರು ಕಂಡಿತ್ತು. 2013ರ ಆಗಸ್ಟ್‌ನಲ್ಲಿ ಕೊಯನಾಡು ಬಳಿ 200 ಮೀ. ಉದ್ದಕ್ಕೆ, 5 ಅಡಿ ಆಳಕ್ಕೆ ಕುಸಿದಿತ್ತು. ಆಗ ಕೆಲವು ತಿಂಗಳು ಸಂಚಾರ ಅಸ್ತವ್ಯಸ್ತಗೊಂಡಿತ್ತು. ಬಳಿಕ ಅಲ್ಲಿ 1 ಕೋಟಿ ರೂ.ಗೂ ಹೆಚ್ಚು ವೆಚ್ಚದಲ್ಲಿ ಕಾಂಕ್ರೀಟ್ ತಡೆಗೋಡೆ ಸಹಿತ ಹೊಸ ರಸ್ತೆ ನಿರ್ಮಿಸಲಾಗಿತ್ತು. ಕಳೆದ ವರ್ಷ ಇದೇ ಜಾಗದಲ್ಲಿ ಮತ್ತೆ ಬಿರುಕು ಉಂಟಾಗಿ 8 ಇಂಚಿನಷ್ಟು ರಸ್ತೆ ಕುಸಿದಿದೆ. ಸುರಕ್ಷತೆಯ ದೃಷ್ಟಿಯಿಂದ ಘನ ವಾಹನ ಸಂಚಾರಕ್ಕೆ ಪಕ್ಕದ ಹಳೆ ರಸ್ತೆ ಬಳಸಲಾಗಿತ್ತು. ಈ ಬಾರಿಯೂ ಆತಂಕ ತಪ್ಪಿಲ್ಲ.
ಹಲವೆಡೆ ಗುಡ್ಡ ಅಪಾಯ
ಜೋಡುಪಾಲ ಅನಂತರದ ಮೊಣ್ಣಂಗೇರಿ, 2ನೇ ಮೊಣ್ಣಂಗೇರಿ, ಮದೆನಾಡು ಮೊದಲಾದೆಡೆ ಆಳೆತ್ತರದ ಗುಡ್ಡಗಳು ಜಾರಿ ನಿಂತಿವೆ. ಇವು ಪೂರ್ಣ ಕುಸಿಯಲು ಸಣ್ಣ ಮಳೆ ಸಾಕು. ರಾ. ಹೆ. ಇಲಾಖೆ ರಸ್ತೆ ದುರಸ್ತಿಗೆ ತೋರಿರುವ ಕಾಳಜಿಯನ್ನು ಗುಡ್ಡ ತೆರವು ಅಥವಾ ಸಮತಟ್ಟು ಮಾಡಲು ತೋರಿಲ್ಲ. ಈ ಮಾರ್ಗದಲ್ಲಿ ದಿನಂಪ್ರತಿ ಸಾವಿರಾರು ವಾಹನಗಳು ಸಂಚರಿಸುತ್ತವೆ.
ಸಮಸ್ಯೆ ಆಗದು
ರಾಷ್ಟ್ರೀಯ ಹೆದ್ದಾರಿ ಪ್ರಾಧಿಕಾರದ ಮೇಲಧಿಕಾರಿಗಳು, ತಜ್ಞರ ನೇತೃತ್ವದಲ್ಲಿ ರಸ್ತೆ ಬಿರುಕು ಬಿಟ್ಟ ಸ್ಥಳ ಪರಿಶೀಲಿಸಿದ್ದೇವೆ. ಅಲ್ಲಿ ರಸ್ತೆ ಕುಸಿಯುವ ಅಪಾಯ ಇಲ್ಲ. ಹಾಗಾಗಿ ವಾಹನಗಳು ಓಡಾಟಕ್ಕೆ ಅಡ್ಡಿ ಇಲ್ಲ. ಘನ ವಾಹನ ಓಡಾಟ ಒಂದು ತಿಂಗಳ ಹಿಂದೆಯೇ ನಿಷೇಧಿಸಲಾಗಿದೆ. ಉಳಿದ ವಾಹನ ಓಡಾಟ ಎಂದಿನಂತಿದೆ. ಸಂಪಾಜೆ-ಮಡಿಕೇರಿ ನಡುವೆ ರಸ್ತೆ ಪರಿಶೀಲಿಸಿದ್ದು, ಯಾವುದೇ ಸಮಸ್ಯೆ ಇಲ್ಲ.
ಚಂದ್ರಪ್ಪ , ಸಹಾಯಕ ಎಂಜಿನಿಯರ್
ಕಿರಣ್ ಪ್ರಸಾದ್ ಕುಂಡಡ್ಕ
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
Veerendra Heggade: ಡಾ.ಡಿ.ವೀರೇಂದ್ರ ಹೆಗ್ಗಡೆಗೆ ಇಂಡಿಯಾ ಬುಕ್ ಆಫ್ ರೆಕಾರ್ಡ್ ಪ್ರಶಸ್ತಿ
Puttur: ಮೃ*ತದೇಹವನ್ನು ರಸ್ತೆ ಬದಿ ಇರಿಸಿ ಹೋದ ಪ್ರಕರಣ; ಪ್ರಮುಖ ಆರೋಪಿ ಸಹಿತ ಮೂವರ ಬಂಧನ
Sulya: ನಿಲ್ಲಿಸಿದ್ದ ಕಾರಿಗೆ ಬಸ್ ಢಿಕ್ಕಿ; ಜಖಂ
Bantwala: ಬಿ.ಸಿ.ರೋಡಿನಲ್ಲಿ ರೈಲ್ವೇಯ ವಿದ್ಯುತ್ ಕೇಬಲ್ ಕಳವು
Sulya: ಆರಂತೋಡು: ಚಿಕನ್ ಸೆಂಟರ್‌ಗೆ ದಾಳಿ; ಮದ್ಯ ಅಕ್ರಮ ದಾಸ್ತಾನು ಪತ್ತೆ
MUST WATCH
ಎದೆ ನೋವು, ಮಧುಮೇಹ, ಥೈರಾಯ್ಡ್ ,ಸಮಸ್ಯೆಗಳಿಗೆ ಪರಿಹಾರ ತೆಂಗಿನಕಾಯಿ ಹೂವು
ಕನ್ನಡಿಗರಿಗೆ ಬೇರೆ ಭಾಷೆ ಸಿನಿಮಾ ನೋಡೋ ಹಾಗೆ ಮಾಡಿದ್ದೆ ನಾವುಗಳು
ವಿಕ್ರಂ ಗೌಡ ಎನ್ಕೌಂಟರ್ ಪ್ರಕರಣ: ಮನೆ ಯಜಮಾನ ಜಯಂತ್ ಗೌಡ ಹೇಳಿದ್ದೇನು?
ಮಣಿಪಾಲ | ವಾಗ್ಶಾದಲ್ಲಿ ಗಮನ ಸೆಳೆದ ವಾರ್ಷಿಕ ಫ್ರೂಟ್ಸ್ ಮಿಕ್ಸಿಂಗ್ |
ಕೊಲ್ಲೂರಿನಲ್ಲಿ ಮಾಧ್ಯಮಗಳಿಗೆ ಪ್ರತಿಕ್ರಿಯೆ ನೀಡಿದ ಡಿಸಿಎಂ ಡಿ ಕೆ ಶಿವಕುಮಾರ್
ಹೊಸ ಸೇರ್ಪಡೆ
Sudeep: ʼಮ್ಯಾಕ್ಸ್ʼ ರಿಲೀಸ್ ದಿನ ಫಿಕ್ಸ್: ಕಿಚ್ಚನ ಸಿಟ್ಟಿಗೆ ಎಚ್ಚೆತ್ತ ನಿರ್ಮಾಣ ಸಂಸ್ಥೆ
Bidar: ಭಾರತದಿಂದಲೇ ವಕ್ಫ್ ತೊಲಗಿಸಬೇಕು: ಯತ್ನಾಳ್
Veerendra Heggade: ಡಾ.ಡಿ.ವೀರೇಂದ್ರ ಹೆಗ್ಗಡೆಗೆ ಇಂಡಿಯಾ ಬುಕ್ ಆಫ್ ರೆಕಾರ್ಡ್ ಪ್ರಶಸ್ತಿ
Sambhal Case Follow Up:ಹೊರಗಿನವರಿಗೆ ಸಂಭಾಲ್ ಪ್ರವೇಶಕ್ಕೆ ನಿರ್ಬಂಧ,ಜಲ್ಲಿ ಮಾರಾಟ ನಿಷೇಧ
Kannappa Movie: ವಿಷ್ಣು ಮಂಚು ʼಕಣ್ಣಪ್ಪʼ ರಿಲೀಸ್‌ಗೆ ಡೇಟ್ ಫಿಕ್ಸ್
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.