ಕೆಐಒಸಿಎಲ್‌ನಿಂದ ಮಾದರಿ ಕಾರ್ಯ: ನಳಿನ್ ಕುಮಾರ್ ಕಟೀಲು
ಸಿಎಸ್‌ಆರ್ ನಿಧಿಯಿಂದ 2 ಕೋ.ರೂ.ಮೊತ್ತದ ನೆರವು ವಿತರಣೆ
Team Udayavani, Oct 8, 2022, 6:15 AM IST
ಮಂಗಳೂರು: ಸಮಾಜಮುಖಿಯಾಗಿ ಸ್ಪಂದಿಸುತ್ತ ಸ್ಥಳೀಯ ಆವಶ್ಯಕತೆಗಳಿಗೆ ನೆರವು ನೀಡುತ್ತಿರುವ ಕೆಐಒಸಿಎಲ್ ಮಾದರಿಯಾಗಿ ಕಾರ್ಯ ನಿರ್ವಹಿಸುತ್ತಿದೆ ಎಂದು ಸಂಸದ ನಳಿನ್ ಕುಮಾರ್ ಕಟೀಲು ಅವರು ಅಭಿಪ್ರಾಯ ಪಟ್ಟರು.
ಜಿಲ್ಲಾಧಿಕಾರಿ ಕಚೇರಿ ಸಭಾಂಗಣ ದಲ್ಲಿ ಗುರುವಾರ ಕುದುರೆಮುಖ ಕಬ್ಬಿಣ ಅದಿರು ಕಂಪೆನಿಯ (ಕೆಐ ಒಸಿಎಲ್) ಸಿಎಸ್‌ಆರ್ ನಿಧಿಯಡಿ ವಿವಿಧ ಸಂಸ್ಥೆಗಳು, ಇಲಾಖೆಗಳಿಗೆ ನೆರವಿನ ಚೆಕ್ ವಿತರಿಸಿ ಮಾತನಾಡಿದ ಅವರು ಕೆಐಒಸಿಎಲ್ ಕೋವಿಡ್ ಸಂದರ್ಭ ಮೂರು ಕಡೆ ಸರಕಾರಿ ಆಸ್ಪತ್ರೆಗೆ ಆಮ್ಲಜನಕ ಘಟಕ, ವಿವಿಧೆಡೆ ಕಿಟ್, ಆ್ಯಂಬುಲೆನ್ಸ್ ನೀಡುವ ಮೂಲಕ ನೆರವಾಗಿದೆ. ಪ್ರಸ್ತುತ ಶಿಕ್ಷಣ, ಆರೋಗ್ಯ, ಸೇವೆ, ರಕ್ಷಣೆ ಹೀಗೆ ವಿಂಗಡಣೆ ಮಾಡಿಕೊಂಡು ಸಿಎಸ್‌ಆರ್ ನಿಧಿಯನ್ನು ವಿತರಿಸಿದೆ ಎಂದವರು ಶ್ಲಾಘಿಸಿದರು.
ಜಿಲ್ಲಾಧಿಕಾರಿ ಡಾ| ರಾಜೇಂದ್ರ ಕೆ.ವಿ. ಅವರು ಮಾತನಾಡಿ, “ಕೆಐಒಸಿಎಲ್ ಸಿಎಸ್‌ಆರ್ ನಿಧಿಯಡಿ ಜಿಲ್ಲಾಡಳಿತಕ್ಕೆ ವಿವಿಧ ಆವಶ್ಯಕತೆಗಳ ಪೂರೈಕೆಗಾಗಿ ಧನ ಸಹಾಯ ಒದಗಿಸಿದೆ ಎಂದು ಪ್ರಶಂಸಿಸಿದರು. ಕೆಐಒಸಿಎಲ್ ಸಿಎಂಡಿ ಸಾಮಿನಾಥನ್ ಮಾತನಾಡಿ, “ಸಂಸ್ಥೆ ಕಳೆದ ವರ್ಷ ಕೂಡ ಸಿಎಸ್‌ಆರ್ ನಿಧಿಯಲ್ಲಿ ಸಾರ್ವಜನಿಕ ಕಾರ್ಯ ಗಳಿಗೆ ನೆರವು ನೀಡಿದೆ ಎಂದರು.
2 ಕೋಟಿ ರೂ. ನೆರವು
ಜಿಲ್ಲಾ ವೆನ್ಲಾಕ್ ಆಸ್ಪತ್ರೆಗೆ ಡಯಾಲಿಸಿಸ್ ಘಟಕಗಳ ಅಳವಡಿಕೆಗೆ 50 ಲಕ್ಷ ರೂ., ಪುತ್ತೂರು ತಾಲೂಕಿನ ಮಣಿಯಕರ ಶಾಲೆಗೆ ಎರಡು ತರಗತಿ ಕೊಠಡಿಗಳ ನಿರ್ಮಾಣಕ್ಕೆ 45 ಲಕ್ಷ ರೂ., ಮಂಗಳೂರಿನ ಕಾವೂರಿನ ಪ.ಪೂ. ಕಾಲೇಜಿಗೆ ಎರಡು ತರಗತಿ ಕೊಠಡಿಗಳ ನಿರ್ಮಾಣಕ್ಕೆ 25 ಲಕ್ಷ ರೂ., ಮಂಗಳೂರಿನ ಚೈಲ್ಡ್‌ಲೈನ್ 1098ಗೆ ಬೋಲೊರೊ ವಾಹನ ಖರೀದಿಗೆ 15 ಲಕ್ಷ ರೂ., ವೆನ್ಲಾಕ್ ಆಸ್ಪತ್ರೆಯಲ್ಲಿ ಎಎನ್‌ಎಂಟಿಸಿ ಕಟ್ಟಡ ದುರಸ್ತಿಗೆ 12 ಲಕ್ಷ ರೂ., ಮಂಗಳೂರಿನ ಕುತ್ತಾರಿನ ಮಂಗಳಾಸೇವಾ ಸಮಿತಿಗೆ 4 ಲಕ್ಷ ರೂ., ಬಂಟ್ವಾಳ ತಾಲೂಕಿನ ವಾಮದಪದವು ಸಮುದಾಯ ಆರೋಗ್ಯ ಕೇಂದ್ರಕ್ಕೆ ಎಕ್ಸ್‌ರೇ ಮೆಷಿನ್ ಖರೀದಿಗೆ 4 ಲಕ್ಷ ರೂ., ಪೊಲೀಸ್ ಕ್ವಾಟ್ರಸ್‌ನ ಕೌನ್ಸೆಲಿಂಗ್ ನವೀಕರಣಕ್ಕೆ 5 ಲಕ್ಷ ರೂ., ಭಾರತಿ ಕಾಲೇಜಿನ ಗೋಶಾಲೆಗೆ 5 ಲಕ್ಷ ರೂ.ಸೇರಿದಂತೆ ಒಟ್ಟು 2 ಕೋ.ರೂ. ನೆರವು ನೀಡಲಾಗಿದೆ ಎಚ್‌ಆರ್ ವಿಭಾಗದ ಹಿರಿಯ ವ್ಯವಸ್ಥಾಪಕ ಮುಗೇìಶ್ ಎಚ್. ವಿವರಿಸಿದರು.
ನಿರ್ದೇಶಕರಾದ ಸ್ವಪನ್ ಕುಮಾರ್, ಭಾಸ್ಕರ್ ರೆಡ್ಡಿ, ವಿನಯ್‌ಕೃಷ್ಣ ಮಹಾಪಾತ್ರ, ಮುಖ್ಯ ಪ್ರಧಾನ ವ್ಯವಸ್ಥಾಪಕ ರಾಮಕೃಷ್ಣ ರಾವ್,ಎಚ್‌ಆರ್ ವಿಭಾಗದ ಹಿರಿಯ ವ್ಯವಸ್ಥಾಪಕ ಜಿ.ವಿ. ಕಿರಣ್ ಉಪಸ್ಥಿತರಿದ್ದರು.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
MUST WATCH
ದೈವ ನರ್ತಕರಂತೆ ಗುಳಿಗ ದೈವದ ವೇಷ ಭೂಷಣ ಧರಿಸಿ ಕೋಲ ಕಟ್ಟಿದ್ದ ಅನ್ಯ ಸಮಾಜದ ಯುವಕ
ಹಕ್ಕಿಗಳಿಗಾಗಿ ಕಲಾತ್ಮಕ ವಸ್ತುಗಳನ್ನು ತಯಾರಿಸುತ್ತಿರುವ ಪಕ್ಷಿ ಪ್ರೇಮಿ
ಮಂಗಳೂರಿನ ನಿಟ್ಟೆ ವಿಶ್ವವಿದ್ಯಾನಿಲಯದ ತಜ್ಞರ ಅಧ್ಯಯನದಿಂದ ಬಹಿರಂಗ
ಈ ಹೋಟೆಲ್ ಗೆ ಪೂರಿ, ಬನ್ಸ್, ಕಡುಬು ತಿನ್ನಲು ದೂರದೂರುಗಳಿಂದಲೂ ಜನ ಬರುತ್ತಾರೆ
ಹರೀಶ್ ಪೂಂಜ ಪ್ರಚೋದನಾಕಾರಿ ಹೇಳಿಕೆ ವಿರುದ್ಧ ಪ್ರಾಣಿ ಪ್ರಿಯರ ಆಕ್ರೋಶ
ಹೊಸ ಸೇರ್ಪಡೆ
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.