ಸಂಪ್ಯ: ಆ. 6ರಿಂದ ಕಾಣಿಯೂರು ಶ್ರೀಗಳ ಚಾತುರ್ಮಾಸ್ಯ
Team Udayavani, Jul 25, 2018, 11:36 AM IST
ಪುತ್ತೂರು : ಉಡುಪಿಯ ಅಷ್ಠಮಠಗಳಲ್ಲಿ ಒಂದಾದ ಪುತ್ತೂರು ಸೀಮೆಗೆ ಸಂಬಂಧಿಸಿದ ಕಾಣಿಯೂರು ಮೂಲ ಮಠದ ಯತಿ ಶ್ರೀ ವಿದ್ಯಾವಲ್ಲ ಭತೀರ್ಥ ಶ್ರೀಪಾ ದರ ಚಾತುರ್ಮಾಸ್ಯ ಮಹೋತ್ಸವವು ಆ. 6ರಿಂದ ಸೆ. 24ರ ವರೆಗೆ ಸಂಪ್ಯ ಉದಯಗಿರಿ ಶ್ರೀ ವಿಷ್ಣುಮೂರ್ತಿ ಅನ್ನಪೂರ್ಣೇಶ್ವರಿ ಕ್ಷೇತ್ರದಲ್ಲಿ ನಡೆಯಲಿದೆ ಎಂದು ಚಾತುರ್ಮಾಸ್ಯ ಸಮಿತಿ ಸಂಚಾಲಕ ಪ್ರೀತಂ ಪುತ್ತೂರಾಯ ಅವರು ಮಂಗಳವಾರ ಪತ್ರಿಕಾಗೋಷ್ಠಿಯಲ್ಲಿ ಹೇಳಿದರು.
ಆ. 6ರಂದು ಮಹತೋಭಾರ ಪುತ್ತೂರು ಶ್ರೀ ಮಹಾಲಿಂಗೇಶ್ವರ ದೇವಾಲಯದಿಂದ ಶ್ರೀಗಳು ಮೆರವಣಿಗೆಯಲ್ಲಿ ಉದಯಗಿರಿ ಶ್ರೀ ವಿಷ್ಣುಮೂರ್ತಿ ಅನ್ನಪೂರ್ಣೇಶ್ವರಿ ಕ್ಷೇತ್ರಕ್ಕೆ ತೆರಳಲಿದ್ದಾರೆ ಎಂದರು.
ವಿಶೇಷ ಕಾರ್ಯಕ್ರಮಗಳು
ಚಾತುರ್ಮಾಸ್ಯದ ವಿಶೇಷವಾಗಿ ದೇವಾಲಯದಲ್ಲಿ ಪೂರ್ಣಮಂಡಲ ಶ್ರೀಚಕ್ರ ಪೂಜೆ, ಲಕ್ಷ ಕುಂಕುಮಾರ್ಚನೆ, ಲಕ್ಷ ತುಳಸಿ ಅರ್ಚನೆ, ಧನ್ವಂತರಿ ಹೋಮ ಸಹಿತ ವಿಶೇಷ ಧಾರ್ಮಿಕ ಕಾರ್ಯಕ್ರಮಗಳು ನಡೆಯಲಿವೆ. ಪ್ರತಿ ದಿನ ಸಂಜೆ ಸಭಾ ಕಾರ್ಯಕ್ರಮ, ಸಮಾಜದ ವಿಶೇಷ ವ್ಯಕ್ತಿಗಳಿಗೆ ಸಮ್ಮಾನ, ಪುತ್ತೂರು ಆಸುಪಾಸಿನ ಕಲಾವಿದರಿಂದ ಸಾಂಸ್ಕೃತಿಕ ವೈವಿಧ್ಯಗಳು ನಡೆಯಲಿವೆ ಎಂದರು.
ದೇವಾಲಯ ಭೇಟಿ ವಿಶೇಷ
ಚಾತುರ್ಮಾಸ್ಯದ ಅವಧಿಯಲ್ಲಿ ಶ್ರೀ ವಿದ್ಯಾವಲ್ಲಭ ತೀರ್ಥ ಸ್ವಾಮೀಜಿ ಪ್ರತಿ ದಿನ ಬೆಳಗ್ಗೆ 8.30ರಿಂದ 9 ಗಂಟೆಯ ಅವಧಿಯಲ್ಲಿ ಪುತ್ತೂರು ತಾಲೂಕಿನ ವಿವಿಧ ದೇವಾಲಯಗಳಿಗೆ ಭೇಟಿ ನೀಡಲಿದ್ದಾರೆ. ಸಂಜೆ ಪಾದಪೂಜೆಗೆ ಭಕ್ತರ ಮನೆಗಳಿಗೆ ತೆರಳಿದ್ದಾರೆ. ಸ್ವಾಮೀಜಿಯವರ ಪಾದಪೂಜೆ ಮತ್ತು ಭಿಕ್ಷಾ ಸೇವೆಗೆ ಸರ್ವ ಭಕ್ತರಿಗೆ ಅವಕಾಶ ಕಲ್ಪಿಸಲಾಗಿದೆ. ಪ್ರತಿನಿತ್ಯ ಮಧ್ಯಾಹ್ನ ಹಾಗೂ ರಾತ್ರಿ ನಡೆಯುವ ಅನ್ನಸಂತರ್ಪಣೆಗೆ ಭಕ್ತರಿಂದ ಹೊರೆಕಾಣಿಕೆಯನ್ನು ಸ್ವೀಕರಿಸಲಾಗುತ್ತದೆ ಎಂದರು.
ಹಬ್ಬಗಳಿಗೂ ವಿಶೇಷ
50 ದಿನಗಳ ಚಾತುರ್ಮಾಸ್ಯ ಮಹೋತ್ಸವದಲ್ಲಿ ನಾಗರ ಪಂಚಮಿ, ಗಣೇಶ ಚತುರ್ಥಿ, ರಾಘವೇಂದ್ರ ಸ್ವಾಮಿ ಆರಾಧನೆ, ಶ್ರೀಕೃಷ್ಣ ಜನ್ಮಾಷ್ಟಮಿ ಕಾರ್ಯಕ್ರಮ ಕ್ಷೇತ್ರದಲ್ಲಿ ವಿಶೇಷತೆ ಪಡೆದುಕೊಳ್ಳಲಿದೆ. ಶ್ರೀಕೃಷ್ಣ ಜನ್ಮಾಷ್ಟಮಿ ದಿನ ಶ್ರೀ ವಿದ್ಯಾವಲ್ಲಭತೀರ್ಥ ಸ್ವಾಮೀಜಿಯವರ ಮೂಲಕ ಶ್ರೀ ಕೃಷ್ಣನಿಗೆ ಅರ್ಘ್ಯ ಹಾಕಲು ಭಕ್ತರಿಗೆ ಅವಕಾಶವಿದೆ. ಅಂದು ರಾತ್ರಿ ಉಡುಪಿಯಲ್ಲಿ ಆಚರಣೆಯಲ್ಲಿರುವಂತೆ ಕೊಟ್ಟಿಗೆ, ಚಕ್ಕುಲಿಗಳೊಂದಿಗೆ ಹಬ್ಬದ ಆಚರಣೆ ನಡೆಯಲಿದೆ ಎಂದು ಪ್ರೀತಂ ಪುತ್ತೂರಾಯ ತಿಳಿಸಿದರು.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
MUST WATCH
ಹೊಸ ಸೇರ್ಪಡೆ
Padubidri: ಸ್ಕೂಟಿಗೆ ಈಚರ್ ವಾಹನ ಢಿಕ್ಕಿ; ಸವಾರನಿಗೆ ಗಾಯ
BJP Rift; ಯತ್ನಾಳ್ ಒಬ್ಬ 420, ಗೋಮುಖ ವ್ಯಾಘ್ರ: ರೇಣುಕಾಚಾರ್ಯ
R-Day parade; ಗಣರಾಜ್ಯೋತ್ಸವ ಪರೇಡ್‌ನಲ್ಲಿ 5,000 ಕ್ಕೂ ಹೆಚ್ಚು ಕಲಾವಿದರ ತಂಡಗಳು
ಅಖಿಲ ಭಾರತ ಅಂತರ್ ವಿ.ವಿ.ವೇಟ್‌ಲಿಫ್ಟಿಂಗ್:ಮಂಗಳೂರು ವಿವಿ ರನ್ನರ್ ಅಪ್
Farmers; ಕಬ್ಬು ಹಾನಿಗೆ ಪರಿಹಾರ ನಿಧಿ,ತೊಗರಿಗೆ ಬೆಂಬಲ ಬೆಲೆ: ಸಚಿವ ಶಿವಾನಂದ ಪಾಟೀಲ್
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.