ಮರಳು ದಿಬ್ಬ ಸಮೀಕ್ಷೆ ಆರಂಭ ; ನವೆಂಬರ್‌ನಲ್ಲಿ ಮರಳು ಸಾಧ್ಯತೆ
Team Udayavani, Oct 19, 2021, 6:00 AM IST
ಸಾಂದರ್ಭಿಕ ಚಿತ್ರ.
ಮಂಗಳೂರು: ದಕ್ಷಿಣ ಕನ್ನಡ ಜಿಲ್ಲೆಯ ಸಿಆರ್‌ಝಡ್ ವಲಯದಲ್ಲಿ ಮರಳು ದಿಬ್ಬ ಗುರು ತಿಸುವ ಸಮೀಕ್ಷೆ ಆರಂಭಗೊಂಡಿದೆ. ಸಮೀಕ್ಷೆ ಮತ್ತಿತರ ಪ್ರಕ್ರಿಯೆಗಳಿಗೆ ಸುಮಾರು ಒಂದೂವರೆ ತಿಂಗಳು ಅಗತ್ಯವಿದ್ದು, ನವೆಂಬರ್ ಅಂತ್ಯಕ್ಕೆ ಮರಳುಗಾರಿಕೆ ಆರಂಭಗೊಂಡು ಮರಳು ದರ ಕೊಂಚ ಇಳಿಕೆಯಾಗುವ ನಿರೀಕ್ಷೆ ಮೂಡಿದೆ.
ಸಿಆರ್‌ಝಡ್ ವಲಯದಲ್ಲಿ ಮರಳುಗಾರಿಕೆಗೆ ಪರಿಸರ ಇಲಾಖೆ ನೀಡಿರುವ ಪರಿಸರ ವಿಮೋಚನ ಪತ್ರ (ಇಸಿ ಕ್ಲಿಯರೆನ್ಸ್) ಅವಧಿ ಮುಗಿದು ಸೆ. 17ರಿಂದ ದಕ್ಷಿಣ ಕನ್ನಡ ಜಿಲ್ಲೆಯಲ್ಲಿ ಮರಳುಗಾರಿಕೆ ಸ್ಥಗಿತಗೊಂಡಿತ್ತು. ಇನ್ನು ಹೊಸದಾಗಿ ಪ್ರಕ್ರಿಯೆಗಳು ನಡೆಯಬೇಕಾಗಿವೆ.
ನೇತ್ರಾವತಿ, ಫಲ್ಗುಣಿ ನದಿಯಲ್ಲಿ ಮರಳು ದಿಬ್ಬ ಸಮೀಕ್ಷೆಯನ್ನು ಈ ಬಾರಿ ಮೀನು ಗಾರಿಕೆ ಕಾಲೇಜಿಗೆ ವಹಿಸಲಾಗಿದೆ. ಕಾಲೇಜು ಸೋಮವಾರ ದಿಂದ ಇದನ್ನು ಆರಂಭಿಸಿದ್ದು, ಮಂಗಳವಾರದಿಂದ ಕಾಲೇಜಿನ ತಜ್ಞರ ತಂಡ ನದಿಗಳಲ್ಲಿ ಸಮೀಕ್ಷೆ ನಡೆಸಲಿದೆ. ಈ ಪ್ರಕ್ರಿಯೆ ಸುಮಾರು 15 ದಿನ ನಡೆಯುವ ಸಾಧ್ಯತೆಗಳಿವೆ.
ಮರಳು ದಿಬ್ಬಗಳನ್ನು ಗುರುತಿಸಿದ ಬಳಿಕ ಎನ್‌ಐಟಿಕೆಯಿಂದ ತಾಂತ್ರಿಕ ವರದಿ ಪಡೆಯಲಾಗುತ್ತದೆ. ಜಿಲ್ಲಾಧಿಕಾರಿ ಅಧ್ಯಕ್ಷರಾಗಿರುವ ಜಿಲ್ಲಾ ಮರಳು ಉಸ್ತುವಾರಿ ಸಮಿತಿಯು ವರದಿಯನ್ನು ಪರಿಶೀಲಿಸಿ ಕರ್ನಾಟಕ ಕರಾವಳಿ ವಲಯ ನಿರ್ವಹಣೆ ಸಮಿತಿ (ಕೆಸಿಝಡ್‌ಎಂ)ಗೆ ಅನುಮೋದನೆಗಾಗಿ ಕಳುಹಿಸುತ್ತದೆ. ಕೆಸಿಝಡ್‌ಎಂ ಇದನ್ನು ಪರಿಶೀಲಿಸಿ ಅನುಮೋದನೆ ನೀಡಿದ ಬಳಿಕ ಮರಳುಗಾರಿಕೆ ಪ್ರಕ್ರಿಯೆಗೆ ಚಾಲನೆ ದೊರಕುತ್ತದೆ. ಇವೆಲ್ಲ ಪ್ರಕ್ರಿಯೆಗಳು ಸುಮಾರು ಒಂದೂವರೆ ತಿಂಗಳು ತೆಗೆದುಕೊಳ್ಳುವ ಸಾಧ್ಯತೆಗಳಿದ್ದು, ನವೆಂಬರ್ ಅಂತ್ಯಕ್ಕೆ ಮರಳುಗಾರಿಕೆ ಆರಂಭಗೊಳ್ಳುವ ನಿರೀಕ್ಷೆ ಇದೆ.
ಇದನ್ನೂ ಓದಿ:ಪ್ರತ್ಯೇಕ ಚುನಾವಣಾ ಪ್ರಚಾರದಿಂದ ಅನುಕೂಲ: ಯಡಿಯೂರಪ್ಪ
ಮರಳು ದುಬಾರಿ
ಈಗ ನಾನ್ ಸಿಆರ್‌ಝಡ್ ವಲಯದಿಂದ ಮರಳು ಪೂರೈಕೆಯಾಗುತ್ತಿದೆ. ಒಂದು ಲೋಡ್ ದರ 8 ಸಾವಿರ ರೂ. ವರೆಗಿದೆ. ಸಿಆರ್‌ಝಡ್ ವಲಯ ದಲ್ಲಿ ಮರಳುಗಾರಿಕೆ ಆರಂಭ ಶೀಘ್ರ ಆಗದಿದ್ದರೆ ಮರಳು ಅಭಾವ ತಲೆದೋರುವ ಸಾಧ್ಯತೆಗಳಿವೆ.
ಕರಾವಳಿಗೆ ಪ್ರತ್ಯೇಕ ಮರಳು ನೀತಿ?
ಕರಾವಳಿಗೆ ಪ್ರತ್ಯೇಕ ಮರಳುನೀತಿ ಸಿದ್ಧಗೊಂಡಿದ್ದು, ಸರಕಾರಕ್ಕೆ ಸಲ್ಲಿಕೆ ಯಾಗಿದೆ. ಸರಕಾರ ಇದನ್ನು ಪರಿಶೀಲಿಸಿ ನಿರ್ಧಾರ ಕೈಗೊಳ್ಳಲಿದೆ ಎಂದು ಮೂಲಗಳು ತಿಳಿಸಿವೆ. ಸಿಆರ್‌ಝಡ್, ನಾನ್ ಸಿಆರ್‌ಝಡ್ ಮರಳುಗಾರಿಕೆ ನೀತಿಯನ್ನು ಸರಳಗೊಳಿಸಬೇಕು ಎಂದು ಕರಾವಳಿಯ ಶಾಸಕರು ಭೂವಿಜ್ಞಾನ ಮತ್ತು ಗಣಿಗಾರಿಕೆ ಸಚಿವರಿಗೆ ಸಭೆ ನಡೆಸಿ ಬೇಡಿಕೆ ಮಂಡಿಸಿದ್ದರು. ಪರಿಶೀಲಿಸಿ ಕ್ರಮ ಕೈಗೊಳ್ಳಲಾಗುವುದು ಎಂದು ಸಚಿವರು ಭರವಸೆ ನೀಡಿದ್ದರು.
ಸಿಆರ್‌ಝಡ್‌ನ ನೇತ್ರಾವತಿ, ಫಲ್ಗುಣಿ ನದಿಗಳಲ್ಲಿ ಮರಳು ದಿಬ್ಬ ಗುರುತಿಸಲು ಸಮೀಕ್ಷೆಗೆ ಸೂಚಿಸಲಾಗಿದೆ. ಮೀನುಗಾರಿಕೆ ಕಾಲೇಜು ಮತ್ತು ಎನ್‌ಐಟಿಕೆ ತಜ್ಞರಿಂದ ಈ ಪ್ರಕ್ರಿಯೆ ಪೂರ್ಣಗೊಂಡ ಬಳಿಕ ವರದಿಯನ್ನು ಕೆಸಿಝಡ್‌ಎಂಗೆ ಕಳುಹಿಸಿಕೊಡಲಾಗುವುದು.
– ಡಾ| ಕೆ.ವಿ. ರಾಜೇಂದ್ರ, ಜಿಲ್ಲಾಧಿಕಾರಿ, ದಕ್ಷಿಣ ಕನ್ನಡ
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
Mangaluru: ಕೊಂಕಣಿ ಭಾಷೆ, ಸಾಹಿತ್ಯದ ಬೆಳವಣಿಗೆಗೆ ಬೆಂಬಲ ಅಗತ್ಯ
Mangaluru: ಎಂಟು ಹೊಸ ರೂಟ್‌ಗಳಲ್ಲಿ ಪರವಾನಿಗೆಗೆ ಪ್ರಸ್ತಾವ
Mangaluru Airport: ಮಂಜು ಕವಿದ ವಾತಾವರಣ: ವಿಮಾನ ಯಾನದಲ್ಲಿ ವ್ಯತ್ಯಯ
Commonwealth ಸಂಸದೀಯ ಸಭೆ; ಸ್ಪೀಕರ್ ಯು.ಟಿ. ಖಾದರ್ ಭಾಗಿ
Mangaluru: ಎಡನೀರು ಶ್ರೀಗಳ ಕಾರಿನ ಮೇಲೆ ದಾಳಿ ಖಂಡನೀಯ; ಪುಂಡರ ತಕ್ಷಣವೇ ಬಂಧಿಸಿ: ಕ್ಯಾ.ಚೌಟ
MUST WATCH
ಹೊಸ ಸೇರ್ಪಡೆ
Madarsa Act: ಯುಪಿ ಮದರಸಾ ಕಾಯ್ದೆ ಸಿಂಧುತ್ವ ಎತ್ತಿಹಿಡಿದ ಸುಪ್ರೀಂ
Kharge: ಬೆಂಗಳೂರಿಗೆ ಬಂದು ನನ್ನ ಜತೆ ಚರ್ಚೆಗೆ ನಿಲ್ಲಿ: ಪ್ರಧಾನಿ ಮೋದಿಗೆ ಖರ್ಗೆ ಸವಾಲು
IPL Mega Auction: ನ.24 ಮತ್ತು 25 ಜೆಡ್ಡಾದಲ್ಲಿ ಐಪಿಎಲ್ ಹರಾಜು
Gautam Adani: ಯುಪಿಎ ಅವಧಿಯಲ್ಲಿ ರಾಹುಲ್ ಭೇಟಿಗೆ ಯತ್ನಿಸಿದ್ದರೇ ಅದಾನಿ?
Sharad Pawar: ಚುನಾವಣಾ ರಾಜಕೀಯ ನಿವೃತ್ತಿ ಸುಳಿವು ನೀಡಿದ ಎನ್‌ಸಿಪಿ ವರಿಷ್ಠ ಶರದ್
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.