ಹೆದ್ದಾರಿ ಮೇಲೆ ಮರಳು : ಅಪಘಾತ ಭೀತಿ
Team Udayavani, Mar 18, 2017, 3:00 PM IST
ಬಂಟ್ವಾಳ : ರಾಷ್ಟ್ರೀಯ ಹೆದ್ದಾರಿ ತುಂಬೆ ಮತ್ತು ಕಳ್ಳಿಗೆ ಗ್ರಾಮದ ನಡುವೆ ಬ್ರಹ್ಮರಕೂಟ್ಲು ಟೋಲ್‌ಗೇಟ್ ಸನಿಹ ಲಾರಿಯಿಂದ ರಸ್ತೆಗೆ ಮರಳು ಸೋರಿಕೆಯಾಗಿರುವ ಘಟನೆ ಮಾ. 15ರಂದು ರಾತ್ರಿ ನಡೆದಿದೆ. ಇದರಿಂದ ಲಘು ಮತ್ತು ದ್ವಿಚಕ್ರ ವಾಹನ ಸಂಚಾರಕ್ಕೆ ಅಡಚಣೆ ಆಗಿದೆ. ಅಪಘಾತದ ಭೀತಿ ಉಂಟಾಗಿದೆ.
ಮರಳಿನ ಮೇಲೆ ವಾಹನಗಳು ಚಲಿಸುವಾಗ ನಿಯಂತ್ರಣ ತಪ್ಪಿ ಅನಾಹುತಗಳ ಅಪಾಯ ಉಂಟಾಗಿದೆ. ತುಂಬೆ ರಾಮಲ್‌ಕಟ್ಟೆಯಿಂದ ಅಲ್ಲಲ್ಲಿ ಮರಳು ರಸ್ತೆಯ ಮೇಲೆ ಚೆಲ್ಲಿಕೊಂಡಿದ್ದು ಸಂಚಾರಕ್ಕೆ ಅಡಚಣೆ ಆಗಿದೆ. ಮರಳು ಸಾಗಾಟ ಮಾಡುವವರ ನಿರ್ಲಕ್ಷ್ಯದಿಂದಾಗಿ ಮರಳು ಸೋರಿಕೆಯಾಗಿದೆ. ಮರಳು ತುಂಬಿಸುವಲ್ಲಿ ಸೂಕ್ತ ಮುಂಜಾಗರೂಕತಾ ಕ್ರಮಗಳನ್ನು ಕೈಗೊಳ್ಳದಿರುವುದರಿಂದ ಇಂತಹ ಸಮಸ್ಯೆಗಳು ಸೃಷ್ಟಿಯಾಗುತ್ತಿವೆ ಎಂದು ವಾಹನ ಸವಾರರು, ಸಾರ್ವಜನಿಕರು ದೂರಿದ್ದಾರೆ.
ಅಕ್ರಮಗಳಿಗೆ ಪ್ರೋತ್ಸಾಹ
ಮರಳು ಸಾಗಾಟ ಮಾಡುವವರಿಗೆ ಕಾನೂನು ಬಾಹಿರವಾಗಿ ಪರವಾನಿಗೆ ನೀಡುತ್ತಿರುವುದು, ಒಂದು ವೇಳೆ ಸಮರ್ಪಕವಾಗಿ ಪರವಾನಿಗೆ ನೀಡಿದ್ದರೂ ಅನಂತರ ಅದರ ಬಗ್ಗೆ ಪರಿಶೀಲನೆ ಮಾಡದಿರುವುದು, ಸಾಗಾಟದ ಸಂದರ್ಭದಲ್ಲಿ ಸಾರ್ವಜನಿಕರಿಗೆ ತೊಂದರೆಯಾಗದಂತೆ ಕ್ರಮ ಕೈಗೊಳ್ಳಲಾಗಿದೆಯೇ ಎಂದು ತಪಾಸಣೆ ನಡೆಸದಿರುವುದು ಮೊದಲಾದ ಕಾರಣಗಳಿಂದಾಗಿ ಹಲವಾರು ಮರಳು ಸಾಗಾಟ ಲಾರಿಗಳು ಸಾರ್ವಜನಿಕರಿಗೆ ತೊಂದರೆಯನ್ನುಂಟು ಮಾಡುತ್ತಿವೆ. ಇದಕ್ಕೆ ಇಲಾಖೆಯ ನಿರ್ಲಕ್ಷ್ಯವೇ ಮುಖ್ಯ ಕಾರಣ ಎಂದು ಜನತೆ ಅಸಮಾಧಾನ ವ್ಯಕ್ತಪಡಿಸಿದ್ದಾರೆ.
ಜಿಲ್ಲಾಡಳಿತ ಎಚ್ಚೆತ್ತುಕೊಳ್ಳಲಿ
ಮರಳು ಸೋರಿಕೆಯಿಂದ ಆಗುವ ಅನಾಹುತದ ಬಗ್ಗೆ ಜಿಲ್ಲಾಡಳಿತ ಯಾವುದೇ ಕ್ರಮ ಕೈಗೊಳ್ಳದೆ ಅನೇಕ ಅನಾಹುತಕ್ಕೆ ಕಾರಣವಾಗಿದೆ.
ರಾತ್ರಿ ಹಗಲೆನ್ನದೆ ರಾಜ್ಯ, ಅಂತರ್‌ರಾಜ್ಯಮರಳು ಸಾಗಾಟದ ಸಂದರ್ಭ ರಸ್ತೆಯಲ್ಲಿ ಸೋರಿಕೆ ಆಗುವ ಮರಳು ದ್ವಿಚಕ್ರ ಸವಾರರನ್ನು ಕಂಗೆಡಿಸುತ್ತಿದೆ. ಜಿಲ್ಲೆಯಲ್ಲಿ ಪ್ರಮುಖ ಸೇತುವೆಯ ಇಕ್ಕೆಲಗಳ ರಸ್ತೆಯಲ್ಲಿ ಬೀಳುವ ಮರಳನ್ನು ಹೊರಚೆಲ್ಲುವ ವ್ಯವಸ್ಥೆಯನ್ನು ರಾ.ಹೆ.ಇಲಾಖೆ ಮಾಡುತ್ತದೆ. ಆದರೆ ಹೆದ್ದಾರಿಯಲ್ಲಿ ಬಿದ್ದಂತಹ ಮರಳನ್ನು ತೆಗೆದು ರಸ್ತೆ ಸ್ವತ್ಛ ಮಾಡುವ ವ್ಯವಸ್ಥೆ ಹೆದ್ದಾರಿ ಇಲಾಖೆಯಲ್ಲಿ ಇಲ್ಲವಾಗಿದೆ.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
Mangaluru: ಎಸ್‌ಟಿಪಿಗಳಲ್ಲಿ ಸಂಸ್ಕರಣೆ ಆಗದೆ ಕೊಳಚೆ ನೀರು ನೇರ ನದಿ, ಕೆರೆಗೆ!
Bajpe ಪ.ಪಂ.ನಿಂದ ಕುಡಿಯುವ ನೀರು ಪೂರೈಕೆಗೆ ಹೊಸ ಚಿಂತನೆ; ಹೊಸ ಬೋರ್‌ವೆಲ್‌ಗೆ ಸೌರ ಪಂಪ್
Mannagudda: ಗಡ್ಡೆ ಗೆಣಸು ಸೊಪ್ಪುಗಳಿಗೆ ರಾಜ ಮರ್ಯಾದೆ!
ಜ.6: ಕಕ್ಕಿಂಜೆಯಲ್ಲಿ ವಿಹಿಂಪ, ಬಜರಂಗ ದಳ ಬೃಹತ್ ಪ್ರತಿಭಟನೆ
Train; ಬೆಂಗಳೂರು- ಮುರುಡೇಶ್ವರ ಎಕ್ಸ್‌ಪ್ರೆಸ್ ರೈಲಿನ ಸಮಯ ಬದಲಾವಣೆಗೆ ಅಸಮ್ಮತಿ
MUST WATCH
ದೈವ ನರ್ತಕರಂತೆ ಗುಳಿಗ ದೈವದ ವೇಷ ಭೂಷಣ ಧರಿಸಿ ಕೋಲ ಕಟ್ಟಿದ್ದ ಅನ್ಯ ಸಮಾಜದ ಯುವಕ
ಹಕ್ಕಿಗಳಿಗಾಗಿ ಕಲಾತ್ಮಕ ವಸ್ತುಗಳನ್ನು ತಯಾರಿಸುತ್ತಿರುವ ಪಕ್ಷಿ ಪ್ರೇಮಿ
ಮಂಗಳೂರಿನ ನಿಟ್ಟೆ ವಿಶ್ವವಿದ್ಯಾನಿಲಯದ ತಜ್ಞರ ಅಧ್ಯಯನದಿಂದ ಬಹಿರಂಗ
ಈ ಹೋಟೆಲ್ ಗೆ ಪೂರಿ, ಬನ್ಸ್, ಕಡುಬು ತಿನ್ನಲು ದೂರದೂರುಗಳಿಂದಲೂ ಜನ ಬರುತ್ತಾರೆ
ಹರೀಶ್ ಪೂಂಜ ಪ್ರಚೋದನಾಕಾರಿ ಹೇಳಿಕೆ ವಿರುದ್ಧ ಪ್ರಾಣಿ ಪ್ರಿಯರ ಆಕ್ರೋಶ
ಹೊಸ ಸೇರ್ಪಡೆ
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.