ಸಿಆರ್‌ಝಡ್‌: ಜೂನ್‌ ತಿಂಗಳಿನಿಂದ ಮರಳುಗಾರಿಕೆ ನಿಷೇಧ; ಮತ್ತೆ ಸಮಸ್ಯೆ?


Team Udayavani, May 27, 2019, 6:15 AM IST

crz

ಮಂಗಳೂರು: ದಕ್ಷಿಣ ಕನ್ನಡ ಜಿಲ್ಲೆಯ ಸಿಆರ್‌ಝಡ್‌ ವಲಯದಲ್ಲಿ ಜೂನ್‌ನಿಂದ ಎರಡು ತಿಂಗಳ ಕಾಲ ಮರಳುಗಾರಿಕೆ ನಿಷೇಧಗೊಳ್ಳಲಿದೆ. ಮರಳು ಸಮಸ್ಯೆ ಮತ್ತೆ ಎದುರಾಗುವ ಸಾಧ್ಯತೆಯಿದೆ.

ಜೂನ್‌ನಿಂದ ಆಗಸ್ಟ್‌ ವರೆಗೆ ಮೀನು ಸಂತಾನೋತ್ಪತ್ತಿ ಅವಧಿ ಎಂಬ ಕಾರಣಕ್ಕೆ ಸಿಆರ್‌ಝಡ್‌ನ‌ಲ್ಲಿ ಮರಳುಗಾರಿಕೆಗೆ ನಿಷೇಧ ವಿಧಿಸ ಲಾಗುತ್ತಿದೆ. ಯಾವುದೇ ಅಡೆತಡೆಗಳು ಎದುರಾಗದಿದ್ದರೆ ಆಗಸ್ಟ್‌ ಪ್ರಥಮ ವಾರದಿಂದ ಮರಳುಗಾರಿಕೆ ಆರಂಭ ಗೊಳ್ಳಲಿದೆ. ಇದೇ ವೇಳೆ ನಾನ್‌ಸಿಆರ್‌ಝಡ್‌ ವಲಯದಲ್ಲಿ ಮರಳುಗಾರಿಕೆ ಮುಂದುವರಿಯುವ ಸಾಧ್ಯತೆಗಳಿವೆ.

ಮೇ 27ರಂದು ಸಭೆ

ಸಿಆರ್‌ಝಡ್‌ ವಲಯದಲ್ಲಿ 2 ತಿಂಗಳ ಮರಳುಗಾರಿಕೆ ನಿಷೇಧ ಕುರಿತು ಮೇ 27ರಂದು ಡಿಸಿ ಅಧ್ಯಕ್ಷತೆಯಲ್ಲಿ ಗಣಿ, ಭೂ ವಿಜ್ಞಾನ ಇಲಾಖೆಯ ಅಧಿಕಾರಿಗಳು ಒಳ ಗೊಂಡ ಸಭೆ ನಡೆಯಲಿದೆ. ಇದರಲ್ಲಿ ನಾನ್‌ ಸಿಆರ್‌ಝಡ್‌ ವಲಯದ ಕುರಿತೂ ಚರ್ಚೆ ನಡೆಯಲಿದ್ದು, ಸ್ಪಷ್ಟ ನಿರ್ಧಾರ ಹೊರಬೀಳಲಿದೆ ಎಂದು ಮೂಲಗಳು ತಿಳಿಸಿವೆ.

5 ತಿಂಗಳ ಮರಳುಗಾರಿಕೆ

ಕಳೆದ ವರ್ಷ ಜೂನ್‌ನಿಂದ ಆಗಸ್ಟ್‌ 15ರವರೆಗೆ ಸಿಆರ್‌ಝಡ್‌ ಮರಳುಗಾರಿಕೆಗೆ ನಿಷೇಧ ಇತ್ತು. ಇದು ಮುಕ್ತಾಯಗೊಂಡ ಬಳಿಕವೂ ಸರ್ವೆ ಮತ್ತು ದಿಬ್ಬಗಳ ಗುರುತಿಸುವಿಕೆ ಹಾಗೂ ಪರಿಸರ ಇಲಾಖೆಯ ಅನುಮತಿ ಪ್ರಕ್ರಿಯೆ ಗಳಿಂದ ಅನುಮತಿ ಲಭಿಸದ ಕಾರಣ ತೀವ್ರ ಮರಳಿನ ಸಮಸ್ಯೆ ಎದುರಾಗಿತ್ತು. ನಾನ್‌ಸಿಆರ್‌ಝಡ್‌ ವಲಯದಲ್ಲೂ ತಾಂತ್ರಿಕ ಕಾರಣಗಳಿಂದ ಮರಳು ಗಾರಿಕೆ ಸ್ಥಗಿತಗೊಂಡಿತ್ತು. ಅನುಮತಿ ಪ್ರಕ್ರಿಯೆ ಪೂರ್ಣಗೊಂಡು ನವೆಂಬರ್‌ ಅಂತ್ಯದ ವೇಳೆಗೆ ಮರಳುಗಾರಿಕೆ ಆರಂಭಗೊಂಡಿದ್ದರೂ ಪೂರ್ಣ ಪ್ರಮಾಣದಲ್ಲಿ ಪ್ರಾರಂಭವಾದದ್ದು ಜನವರಿಯಲ್ಲಿ. ಈಗ ಸುಮಾರು 5 ತಿಂಗಳ ಕಾಲ ಈ ವಲಯದಲ್ಲಿ ಮರಳುಗಾರಿಕೆ ನಡೆದಿದೆ.

ಸಿಆರ್‌ಝಡ್‌ ವಲಯದಲ್ಲಿ ನಡೆಸಿದ ಬೇಥಮೆಟ್ರಿಕ್‌ ಸರ್ವೇಯಲ್ಲಿ ನೇತ್ರಾವತಿಯಲ್ಲಿ ಒಟ್ಟು 13 ಬ್ಲಾಕ್‌ಗಳಲ್ಲಿ 4,30,357 ಟನ್‌ ಮರಳು ಲಭ್ಯತೆ ಗುರುತಿಸಲಾಗಿತ್ತು. ಇದು 43,027 ಲಾರಿ ಲೋಡ್‌ಗಳಷ್ಟಾಗು ತ್ತದೆ. ಫಲ್ಗುಣಿಯಲ್ಲಿ ಒಟ್ಟು 9 ಬ್ಲಾಕ್‌ಗಳಲ್ಲಿ 4,20,270 ಟನ್‌ ಮರಳು ಲಭ್ಯತೆ ಗುರುತಿಸಲಾಗಿತ್ತು. ಇದರಲ್ಲಿ ಇದು 42,027 ಲಾರಿ ಲೋಡ್‌ ಎಂದು ಅಂದಾಜಿಸಲಾಗಿತ್ತು. ಸುಮಾರು 100 ಮಂದಿ ಅರ್ಹ ಗುತ್ತಿಗೆ ದಾರಿಗೆ ಮರಳು ಗಾರಿಕೆಗೆ ಅನುಮತಿ ನೀಡಲಾಗಿತ್ತು.

ನಾನ್‌ಸಿಆರ್‌ಝಡ್‌ ವಲಯ

ನಾನ್‌ ಸಿಆರ್‌ಝಡ್‌ ವಲಯ ದಲ್ಲಿ ಮರಳುಗಾರಿಕೆ ಗುತ್ತಿಗೆ ಅನುಮೋದನೆಗೆ ಸಾಂಪ್ರದಾಯಿಕ ಮರಳುಗಾರಿಕೆಯಲ್ಲಿ ಹಿಂದೆ ಇದ್ದ ನಿಯಮಗಳನ್ನು ಸಡಿಲಗೊಳಿಸಿ ಪರವಾನಿಗೆ ಅವಧಿಯನ್ನು ಐದು ವರ್ಷಗಳಿಗೆ ವಿಸ್ತರಿಸಲಾಗಿದೆ. ಇದರಿಂದ ಈ ವಲಯದಲ್ಲಿ ಮರಳುಗಾರಿಕೆಗೆ ಎದುರಾಗಿದ್ದ ಸಮಸ್ಯೆ ನಿವಾರಣೆಯಾಗಿದೆ.

ಟಾಪ್ ನ್ಯೂಸ್

Hunsur: ಹೊಸ ವರ್ಷಾಚರಣೆ: ಕೇಕ್‌ ತಿಂದ 45ಕ್ಕೂ ಹೆಚ್ಚು ಮಕ್ಕಳು ಅಸ್ವಸ್ಥ

Hunsur: ಹೊಸ ವರ್ಷಾಚರಣೆ: ಕೇಕ್‌ ತಿಂದ 45ಕ್ಕೂ ಹೆಚ್ಚು ಮಕ್ಕಳು ಅಸ್ವಸ್ಥ

“ನಿಮ್ಹಾನ್ಸ್‌ ನಡೆ ದೇಶದಲ್ಲೇ ಮುಂಚೂಣಿಯದು’: ರಾಷ್ಟ್ರಪತಿ ದ್ರೌಪದಿ ಮುರ್ಮು

“ನಿಮ್ಹಾನ್ಸ್‌ ನಡೆ ದೇಶದಲ್ಲೇ ಮುಂಚೂಣಿಯದು’: ರಾಷ್ಟ್ರಪತಿ ದ್ರೌಪದಿ ಮುರ್ಮು

ಪತ್ನಿ ಜತೆ ಸಂಬಂಧ ಮುರಿದಿದ್ದ ಸೈಬರ್‌ ಟ್ರಕ್‌ ಸ್ಫೋ*ಟದ ವ್ಯಕ್ತಿ!

ಪತ್ನಿ ಜತೆ ಸಂಬಂಧ ಮುರಿದಿದ್ದ ಸೈಬರ್‌ ಟ್ರಕ್‌ ಸ್ಫೋ*ಟದ ವ್ಯಕ್ತಿ!

Formula E race corruption case: ಜ.6ರಂದು ಕೆಟಿಆರ್‌ ವಿಚಾರಣೆ

Formula E race corruption case: ಜ.6ರಂದು ಕೆಟಿಆರ್‌ ವಿಚಾರಣೆ

Bangladesh ಸುಧಾರಿಸುವವರೆಗೂ ಪ್ರಾರ್ಥನೆ ನಿಲ್ಲದು: ಇಸ್ಕಾನ್‌

Bangladesh ಸುಧಾರಿಸುವವರೆಗೂ ಪ್ರಾರ್ಥನೆ ನಿಲ್ಲದು: ಇಸ್ಕಾನ್‌

ಸನಾತನ ಅರ್ಥ ತಿಳಿಯದೆ ತಪ್ಪು ದಾರಿಗೆ ಸಮಾಜ: ಧನಕರ್‌

ಸನಾತನ ಅರ್ಥ ತಿಳಿಯದೆ ತಪ್ಪು ದಾರಿಗೆ ಸಮಾಜ: ಧನಕರ್‌

Arvind Kejriwal: ಕೇಂದ್ರ ಸರಕಾರ‌ ದಿಲ್ಲಿಯಲ್ಲಿ ಏನೂ ಮಾಡಿಲ್ಲ

Arvind Kejriwal: ಕೇಂದ್ರ ಸರಕಾರ‌ ದಿಲ್ಲಿಯಲ್ಲಿ ಏನೂ ಮಾಡಿಲ್ಲ


ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು

train-track

Mangaluru;ಹಳಿ ನಿರ್ವಹಣೆ: ರೈಲು ಸೇವೆ ವ್ಯತ್ಯಯ

dw

Surathkal: ವ್ಯಕ್ತಿಯ ಮೃತದೇಹ ಪತ್ತೆ

death

Kinnigoli: ಔಷಧ ಸಿಂಪಡಿಸುವಾಗ ಕುಸಿದು ಬಿದ್ದು ಕೃಷಿಕ ಸಾವು

11

Mangaluru: ಗಾಂಜಾ ಮಾರಾಟ; ಇಬ್ಬರ ಬಂಧನ

2

Mulki: ಗಾಂಜಾ ಮಾರಾಟ ಯತ್ನ; ಇಬ್ಬರ ಬಂಧನ

MUST WATCH

udayavani youtube

ದೈವ ನರ್ತಕರಂತೆ ಗುಳಿಗ ದೈವದ ವೇಷ ಭೂಷಣ ಧರಿಸಿ ಕೋಲ ಕಟ್ಟಿದ್ದ ಅನ್ಯ ಸಮಾಜದ ಯುವಕ

udayavani youtube

ಹಕ್ಕಿಗಳಿಗಾಗಿ ಕಲಾತ್ಮಕ ವಸ್ತುಗಳನ್ನು ತಯಾರಿಸುತ್ತಿರುವ ಪಕ್ಷಿ ಪ್ರೇಮಿ

udayavani youtube

ಮಂಗಳೂರಿನ ನಿಟ್ಟೆ ವಿಶ್ವವಿದ್ಯಾನಿಲಯದ ತಜ್ಞರ ಅಧ್ಯಯನದಿಂದ ಬಹಿರಂಗ

udayavani youtube

ಈ ಹೋಟೆಲ್ ಗೆ ಪೂರಿ, ಬನ್ಸ್, ಕಡುಬು ತಿನ್ನಲು ದೂರದೂರುಗಳಿಂದಲೂ ಜನ ಬರುತ್ತಾರೆ

udayavani youtube

ಹರೀಶ್ ಪೂಂಜ ಪ್ರಚೋದನಾಕಾರಿ ಹೇಳಿಕೆ ವಿರುದ್ಧ ಪ್ರಾಣಿ ಪ್ರಿಯರ ಆಕ್ರೋಶ

ಹೊಸ ಸೇರ್ಪಡೆ

Hunsur: ಹೊಸ ವರ್ಷಾಚರಣೆ: ಕೇಕ್‌ ತಿಂದ 45ಕ್ಕೂ ಹೆಚ್ಚು ಮಕ್ಕಳು ಅಸ್ವಸ್ಥ

Hunsur: ಹೊಸ ವರ್ಷಾಚರಣೆ: ಕೇಕ್‌ ತಿಂದ 45ಕ್ಕೂ ಹೆಚ್ಚು ಮಕ್ಕಳು ಅಸ್ವಸ್ಥ

“ನಿಮ್ಹಾನ್ಸ್‌ ನಡೆ ದೇಶದಲ್ಲೇ ಮುಂಚೂಣಿಯದು’: ರಾಷ್ಟ್ರಪತಿ ದ್ರೌಪದಿ ಮುರ್ಮು

“ನಿಮ್ಹಾನ್ಸ್‌ ನಡೆ ದೇಶದಲ್ಲೇ ಮುಂಚೂಣಿಯದು’: ರಾಷ್ಟ್ರಪತಿ ದ್ರೌಪದಿ ಮುರ್ಮು

puttige-2

Udupi; ಗೀತಾರ್ಥ ಚಿಂತನೆ 145: ವೇದಪ್ರಾಮಾಣ್ಯದ ಚರ್ಚೆ

crime

Kasaragod: ಘರ್ಷಣೆಯಿಂದ ಮೂವರಿಗೆ ಗಾಯ

1-weewq

Baindur: ಬಟ್ಟೆ ವ್ಯಾಪಾರಿ ನಾಪತ್ತೆ

Thanks for visiting Udayavani

You seem to have an Ad Blocker on.
To continue reading, please turn it off or whitelist Udayavani.