‘ನಟ ಸಾರ್ವಭೌಮ’ನಿಗೆ ಸಂಗೀತ್ ಪ್ರೊಮೊ ಹಾಡು!
Team Udayavani, Feb 6, 2019, 4:55 AM IST
ಪುತ್ತೂರು: ಸ್ಯಾಂಡಲ್‌ವುಡ್‌ನಲ್ಲಿ ಹವಾ ಎಬ್ಬಿಸಿರುವ ಪುನೀತ್ ರಾಜ್‌ಕುಮಾರ್ ಅಭಿನಯದ ‘ನಟಸಾರ್ವಭೌಮ’ ಸಿನೆಮಾಕ್ಕೆ ಪುತ್ತೂರು ಸಮೀಪದ ಕೆಮ್ಮಾಯಿ ನಿವಾಸಿ ಸಂಗೀತ್ ಕೆ.ಸಿ. ಅಲಿಯಾಸ್ ಸೀಮಿತ್ ಆಚಾರ್ಯ ಪ್ರಮೋಶನಲ್ ಸಾಂಗ್ ನಿರ್ದೇಶಿಸಿ ಸುದ್ದಿ ಮಾಡಿದ್ದಾರೆ. ಈ ಹಾಡು ಯೂಟ್ಯೂಬ್‌ನಲ್ಲಿ ಕೆಲವೇ ಗಂಟೆಗಳ ಒಳಗೆ 34,000ಕ್ಕೂ ಮಿಕ್ಕಿ ಹಿಟ್ಸ್ ಗಳಿಸಿದೆ.
ಪ್ರೋಮೊ ಸಾಂಗ್‌ಗೆ ಸಾಹಿತ್ಯವನ್ನು ನಟ ಸಾರ್ವಭೌಮ ಚಿತ್ರದ ಸಹ ನಿರ್ದೇಶಕ ರಾಜ್ ಗುರು ನಾಯಕ್ ಬರೆದಿದ್ದು, ಮೂರು ತಿಂಗಳ ಅವಿರತ ಶ್ರಮ ವಹಿಸಿ ಪ್ರೊಮೊ ವಿಡಿಯೋವನ್ನು ಸಂಗೀತ್ ಕೆ.ಸಿ. ಅವರು ಸಿದ್ಧಪಡಿಸಿದ್ದಾರೆ. ಲಹರಿ ಸಂಸ್ಥೆ ಮಂಗಳವಾರ ಇದನ್ನು ಮಾರುಕಟ್ಟೆಗೆ ಬಿಡುಗಡೆ ಮಾಡಿದ್ದು, ಪುತ್ತೂರು ಯುವಕನಿಗೆ ಸಿನೆಮಾ ಕ್ಷೇತ್ರದಲ್ಲಿ ಅವಕಾಶಗಳ ಹೆಬ್ಟಾಗಿಲು ತೆರೆದಿದೆ.
ಮೂಲತಃ ಸಕಲೇಶಪುರದ ಸಂಗೀತ್‌ಗೆ ತಂದೆ ಕೆ.ಜಿ. ಚಂದ್ರಶೇಖರ್ ಅವರೇ ಪ್ರೇರಣೆ. ಐದು ವರ್ಷದವನಿದ್ದಾಗಲೇ ಕೀಬೋರ್ಡ್ ಬಳಸಿ ಸಂಗೀತ ನುಡಿಸಲು ಆರಂಭಿಸಿದ್ದರು. ಸಂಗೀತ ಗುರು ಹಾಸನದ ಬಿ.ಎನ್.ಎಸ್. ಮುರಳಿ ಅವರಿಂದ ಕಲಿತ ಸಂಗೀತ್‌ಗೆ ಸಕಲೇಶಪುರದ ನ್ಯಾಯವಾದಿ ಆರ್.ಎನ್. ಕೃಷ್ಣಮೂರ್ತಿ ಮೊದಲ ವೇದಿಕೆ ಒದಗಿಸಿಕೊಟ್ಟರು.
ಬೆಂಗಳೂರಿನ ಪಯಣ
ಖ್ಯಾತ ಗಾಯಕರಿಂದ ಹಾಡಿಸಿದ ರೈತ ಗೀತೆಗೆ ಸಂಗೀತ್ ಅವರೇ ಹಿನ್ನೆಲೆ ಸಂಗೀತ ನೀಡಿದ್ದಾರೆ. ಅವಕಾಶ ಅರಸುತ್ತ 2009ರಲ್ಲಿ ಬೆಂಗಳೂರು ಸೇರಿದ ಸಂಗೀತ್‌ಗೆ ‘ಕಿರೀಟ’ ಸಿನೆಮಾದ ನಿರ್ದೇಶಕ ಕಿರಣ್ ಚಂದ್ರ ಪ್ರೋತ್ಸಾಹ ನೀಡಿದರು. ನಟಸಾರ್ವಭೌಮ ಚಿತ್ರತಂಡಕ್ಕೂ ಸಂಗೀತ್ ಅವರನ್ನು ಪರಿಚಯಿಸಿದ್ದು ಕಿರಣ್ ಚಂದ್ರ ಅವರೇ. ಪ್ರಸ್ತುತ ಪುತ್ತೂರು ಹಾಗೂ ಸುಳ್ಯದ ಪುನೀತ್ ಮತ್ತು ಸಿಂಚನ್ ಆರ್ಕೆಸ್ಟ್ರಾಗಳಲ್ಲಿ ಪ್ರಧಾನ ಕೀಬೋರ್ಡ್ ವಾದಕರಾಗಿರುವ ಸಂಗೀತ್ ನಟಸಾರ್ವಭೌಮ ಚಿತ್ರದ ಪ್ರೊಮೊ ಸಾಂಗ್ ನಿರ್ದೇಶಿಸಿದ್ದಾರೆ. ಪ್ರೋಗ್ರಾಮರ್ ಆಗಿ ಅಶ್ವಿನ್ ಬಾಬಣ್ಣ ಪುತ್ತೂರು, ವೈಶಾಖ್ ಭಾರ್ಗವ ಬೆಂಗಳೂರು ಸಹಕಾರ ನೀಡಿದ್ದಾರೆ. ರಜತ್ ಹೆಗ್ಡೆ ಈ ಹಾಡನ್ನು ಹಾಡಿದ್ದಾರೆ.
ಖುಷಿಯಾಗಿದೆ
ಬಹು ನಿರೀಕ್ಷಿತ ನಟಸಾರ್ವಭೌಮ ಚಿತ್ರದ ಪ್ರೊಮೊ ಸಾಂಗ್ ಮಾಡಲು ನೀಡಿರುವುದು ದೊಡ್ಡ ಜವಾಬ್ದಾರಿ. ಈ ಕೆಲಸ ಖುಷಿ ಕೊಟ್ಟಿದೆ. ಯೂಟ್ಯೂಬ್‌ನಲ್ಲಿ ಭರ್ಜರಿ ಹಿಟ್ಸ್ ಬಂದಿರುವುದು ಸಂತೋಷ ಮತ್ತು ಹೆಮ್ಮೆ ಎನಿಸಿದೆ.
– ಸಂಗೀತ್ ಕೆ.ಸಿ.
ಸಂಗೀತ ಕಲಾವಿದ
ವಿಶೇಷ ವರದಿ
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
MUST WATCH
ಹೊಸ ಸೇರ್ಪಡೆ
Sachin Panchal Case: ರಾಜು ಕಪನೂರ ಸೇರಿ ಐವರ ಸಿಐಡಿ ವಿಚಾರಣೆ
Podcast;ನಾನು ದೇವರಲ್ಲ,ತಪ್ಪು ಮಾಡಿದ್ದೇನೆ: ಪ್ರಧಾನಿ ಹೇಳಿಕೆ ಡ್ಯಾಮೇಜ್ ಕಂಟ್ರೋಲ್ ಎಂದ ಕೈ
SSLC-PUC Exam: ಪರೀಕ್ಷಾ ವೇಳಾಪಟ್ಟಿ ಪ್ರಕಟ: ವಿದ್ಯಾರ್ಥಿಗಳು ಗಮನಿಸಿ
INDWvsIREW: ಪ್ರತಿಕಾ ರಾವಲ್ ಭರ್ಜರಿ ಬ್ಯಾಟಿಂಗ್; ಐರ್ಲೆಂಡ್ ವಿರುದ್ದ ಸರಣಿ ಶುಭಾರಂಭ
Mega Concert: Black ಮಾರ್ಕೆಟ್ ಟಿಕೆಟ್ ಮಾರಾಟ ತಡೆಗೆ ಮಾರ್ಗಸೂಚಿ ಬೇಕು: ಪಿಐಎಲ್ ವಜಾ
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.