![Gun-Fire](https://www.udayavani.com/wp-content/uploads/2025/02/Gun-Fire-415x249.jpg)
![Gun-Fire](https://www.udayavani.com/wp-content/uploads/2025/02/Gun-Fire-415x249.jpg)
Team Udayavani, Apr 13, 2023, 6:20 AM IST
ಉಪ್ಪಿನಂಗಡಿ: ಟಿಕೆಟ್ ವಂಚಿತರಾದ ಪುತ್ತೂರು ಶಾಸಕ ಸಂಜೀವ ಮಠಂದೂರು ಅವರನ್ನು ಸಮಾಧಾನಿಸಲು ಅವರ ಮನೆಗೆ ಆಗಮಿಸಿದ ಬಿಜೆಪಿ ಜಿಲ್ಲಾಧ್ಯಕ್ಷರ ನೇತೃತ್ವದ ನಿಯೋಗಕ್ಕೆ ಮಠಂದೂರು ಬೆಂಬಲಿಗರಿಂದ ಘೇರಾವ್ ಹಾಕಿ ಘೋಷಣೆ ಕೂಗಿದ ಘಟನೆ ಬುಧವಾರ ನಡೆಯಿತು.
ಟಿಕೆಟ್ ವಂಚಿತ ಶಾಸಕರನ್ನು ಸಮಾಧಾನಿಸಿ ಪಕ್ಷದ ಚಟುವಟಿಕೆಯಲ್ಲಿ ತೊಡಗಿಸಿಕೊಳ್ಳುವಂತೆ ವಿನಂತಿಸಲು ಬಿಜೆಪಿ ಜಿಲ್ಲಾಧ್ಯಕ್ಷ ಸುದರ್ಶನ್, ಮುಖಂಡರಾದ ಕ್ಯಾ| ಗಣೇಶ್ ಕಾರ್ಣಿಕ್, ಅಪ್ಪಯ್ಯ ಮಣಿಯಾಣಿ, ರಾಧಾಕೃಷ್ಣ ಬೂಡಿಯಾರ್, ಚಂದ್ರಶೇಖರ್ ಬಪ್ಪಳಿಗೆ ಚನಿಲ ತಿಮ್ಮಪ್ಪ ಶೆಟ್ಟಿ, ಆಶಾ ತಿಮ್ಮಪ್ಪ ಗೌಡ, ಸಾಜ ರಾಧಾಕೃಷ್ಣ ಆಳ್ವ ಸೇರಿದಂತೆ ಹಲವು ಮುಖಂಡರು ಹಿರೇಬಂಡಾಡಿಯಲ್ಲಿರುವ ಶಾಸಕರ ಮನೆಗೆ ಬರುತ್ತಿದ್ದಂತೆಯೇ ಸುತ್ತುವರಿದ ಮಠಂದೂರು ಬೆಂಬಲಿಗರು ತಡೆಯೊಡ್ಡಿ ಶಾಸಕರಿಗೆ ಅವಕಾಶ ನೀಡದೇ ಅನ್ಯ ಕ್ಷೇತ್ರದ ಅಭ್ಯರ್ಥಿಗೆ ಟಿಕೆಟ್ ನೀಡಿದ್ದನ್ನು ಪ್ರಶ್ನಿಸಿದರು. ಕೆಲ ಹೊತ್ತಿನ ಬಳàಕ ಶಾಸಕ ಸಂಜೀವ ಮಠಂದೂರು ಕಾರ್ಯಕರ್ತರನ್ನು ಸಮಾಧಾನಿಸಿ ಮುಖಂಡರನ್ನು ಮನೆಯೊಳಗೆ ಆಹ್ವಾನಿಸಿದರು.
ಮಠಂದೂರು ಅವರನ್ನು ಸಮಾಧಾನಿಸುವ ವೇಳೆ ಟಿಕೆಟ್ ನಿರಾಕರಣೆಯನ್ನು ಕಟ್ಟಕಡೆಗೆ ತಿಳಿಸಿದ ಕ್ರಮ ಸರಿಯಲ್ಲ. ಮೊದಲೇ ತಿಳಿಸಿದ್ದರೆ ನಾನೇ ಸ್ಪರ್ಧೆಯಿಂದ ಹಿಂದೆ ಸರಿಯುತ್ತಿದ್ದೆ ಎಂದೂ ಶಾಸಕರು ತಿಳಿಸಿದ್ದರೆನ್ನಲಾಗಿದೆ.
Mandya: ನಾಗಮಂಗಲದಲ್ಲಿ ಆಕಸ್ಮಿಕ ಫೈರಿಂಗ್: 3 ವರ್ಷದ ಮಗು ಮೃತ್ಯು!
Kaup: ಸ್ಕೂಟಿ, ಕಾರಿಗೆ ಬಸ್ ಢಿಕ್ಕಿ; ಸವಾರನಿಗೆ ಗಾಯ
Thirthahalli: ಸಾಲ ಕಟ್ಟದ್ದಕ್ಕೆ ಕಿವಿಯೋಲೆ ಕಿತ್ತ ಬ್ಯಾಂಕ್ ಸಿಬ್ಬಂದಿ!
Padubidri: ಕಬ್ಬಿಣದ ತುಂಡು ಹೆಕ್ಕಿದ ಬಾಲಕರಿಗೆ ರೈಲ್ವೇ ಗ್ಯಾಂಗ್‌ಮನ್ ಹಲ್ಲೆ; ದೂರು
Restriction: ನಿಷೇಧವಿದ್ದರೂ ಗೂಡ್ಸ್ ವಾಹನಗಳಲ್ಲಿ ಜನರು ಬಿಳಿಗಿರಿ ರಂಗನ ಬೆಟ್ಟಕ್ಕೆ ಪಯಣ!
You seem to have an Ad Blocker on.
To continue reading, please turn it off or whitelist Udayavani.