ಸಂಟ್ಯಾರು ಸೇತುವೆ: ಅಪಾಯಕಾರಿ ಹೊಂಡ, ಮಣ್ಣಿನ ರಾಶಿ!
Team Udayavani, Jun 9, 2018, 12:49 PM IST
ಸಂಟ್ಯಾರು : ಮಾಣಿ – ಮೈಸೂರು ಹೆದ್ದಾರಿಯ ಸಂಟ್ಯಾರು ಸೇತುವೆ ಮಧ್ಯೆ ಭಾಗದಲ್ಲಿ ದೊಡ್ಡ ಗಾತ್ರ ಹೊಂಡ ಹಾಗೂ ಅದರ ಪಕ್ಕದಲ್ಲಿಯೇ ಮಳೆ ನೀರಿನಲ್ಲಿ ಕೊಚ್ಚಿಕೊಂಡು ಬಂದು ಬಿದ್ದಿರುವ ಮಣ್ಣಿನ ರಾಶಿ ಇರುವುದ ರಿಂದ ವಾಹನ ಸವಾರರಿಗೆ ಅಪಾಯಕಾರಿಯಾಗಿದೆ.
ಈ ಸೇತುವೆಯು ತೀರಾ ಇಕ್ಕಟ್ಟಾದ ಸ್ಥಿತಿಯಲ್ಲಿ ಮತ್ತು ಯು ಆಕಾರದ ಭಾರೀ ತಿರುವು ಹೊಂದಿರುವುದರಿಂದ ನಿರಂತರ ವಾಹನಗಳ ಅಪಘಾತ ಸಂಭವಿಸುತ್ತಲೇ ಇರುತ್ತದೆ. ಇದೀಗ ಮತ್ತಷ್ಟು ಅಪಾಯಕಾರಿ ಸನ್ನಿವೇಶಗಳು ಇದಕ್ಕೆ ಸೇರ್ಪಡೆಗೊಂಡಿವೆ. ಪುತ್ತೂರು ಕಡೆಯಿಂದ ಬರುವ ವಾಹನ ಸವಾರರು ಹೊಂಡ ತಪ್ಪಿಸಲು ಪ್ರಯತ್ನಿಸಿದಾಗ ಎದುರು ಭಾಗದಿಂದ ಯಾವುದೇ ವಾಹನ ಅದರಲ್ಲೂ ದ್ವಿಚಕ್ರ ಸವಾರರು ಬಂದಾಗ ಮಣ್ಣಿನ ರಾಶಿ ಮೇಲೆ ಹತೋಟಿ ತಪ್ಪಿ ಅವಘಡಕ್ಕೆ ಕಾರಣವಾಗುವ ಸಾಧ್ಯತೆ ಇದೆ. ಮಳೆ ಬರುವ ಸಂದರ್ಭದಲ್ಲಿ ನೀರು ಕೂಡ ನಿಲ್ಲುವುದರಿಂದ ವಾಹನ ಸಂಚಾರಕ್ಕೆ ಅಪಾಯಕಾರಿ ಪರಿಸ್ಥಿತಿ ಉಂಟಾಗಿದೆ. ನಿರಂತರ ಅಪಘಾತಗಳು ಸಂಭವವಿಸುವ ಈ ಸೇತುವೆ ಮಧ್ಯೆ ಇರುವ ಹೊಂಡ ಹಾಗೂ ರಸ್ತೆಯ ಮೇಲ್ಭಾಗದಲ್ಲಿ ಅಂಟಿಕೊಂಡಿರುವ ಮಣ್ಣಿನ ರಾಶಿಯಿಂದ ದುರಂತವನ್ನು ತಪ್ಪಿಸುವ ನಿಟ್ಟಿನಲ್ಲಿ ಸಂಬಂಧ ಪಟ್ಟ ಹೆದ್ದಾರಿ ಇಲಾಖಾಧಿಕಾರಿಗಳು, ಜನಪ್ರತಿನಿಧಿ ಗಮನಿಸಿ ತತ್‌ಕ್ಷಣ ಸೂಕ್ತ ಕ್ರಮ ಕೈಗೊಳ್ಳುವಂತೆ ಸಾರ್ವಜ ನಿಕರು ಹಾಗೂ ವಾಹನ ಸವಾರರು ಆಗ್ರಹಿಸಿದ್ದಾರೆ.
ಚರಂಡಿ ವ್ಯವಸ್ಥೆ ಇಲ್ಲ
ರಸ್ತೆ ಮಧ್ಯೆ ದೊಡ್ಡ ಗಾತ್ರದ ಹೊಂಡ ಹಾಗೂ ಮಳೆ ನೀರು ಹೋಗಲು ಸರಿಯಾದ ರೀತಿಯ ಚರಂಡಿ ವ್ಯವಸ್ಥೆ ಇಲ್ಲದೆ ನೀರು ಕೊಚ್ಚಿಕೊಂಡು ಬಂದ ಮಣ್ಣಿನ ಗುಡ್ಡವಿರುವುದರಿಂದ ದ್ವಿಚಕ್ರ ವಾಹನ ಸಂಚಾರಕ್ಕೆ ತೊಂದರೆಯಾಗುತ್ತಿದೆ. ಅಪಾಯ ತಪ್ಪಿಸಲು
ಪ್ರಯತ್ನಿಸುವ ಸಂದರ್ಭದಲ್ಲೂ ಅಪಘಾತವಾಗಬಹುದು. ಈ ನಿಟ್ಟಿನಲ್ಲಿ ತತ್‌ಕ್ಷಣ ಸಂಬಂಧಪಟ್ಟವರು ಕ್ರಮ ಕೈಗೊಳ್ಳಬೇಕು.
- ನವೀನ್ ಕಲ್ಲರ್ಪೆ
ದ್ವಿ ಚಕ್ರ ಸವಾರರು
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
MUST WATCH
ಕನ್ನಡಿಗರಿಗೆ ಬೇರೆ ಭಾಷೆ ಸಿನಿಮಾ ನೋಡೋ ಹಾಗೆ ಮಾಡಿದ್ದೆ ನಾವುಗಳು
ವಿಕ್ರಂ ಗೌಡ ಎನ್ಕೌಂಟರ್ ಪ್ರಕರಣ: ಮನೆ ಯಜಮಾನ ಜಯಂತ್ ಗೌಡ ಹೇಳಿದ್ದೇನು?
ಮಣಿಪಾಲ | ವಾಗ್ಶಾದಲ್ಲಿ ಗಮನ ಸೆಳೆದ ವಾರ್ಷಿಕ ಫ್ರೂಟ್ಸ್ ಮಿಕ್ಸಿಂಗ್ |
ಕೊಲ್ಲೂರಿನಲ್ಲಿ ಮಾಧ್ಯಮಗಳಿಗೆ ಪ್ರತಿಕ್ರಿಯೆ ನೀಡಿದ ಡಿಸಿಎಂ ಡಿ ಕೆ ಶಿವಕುಮಾರ್
ಉಡುಪಿ ಶ್ರೀ ಕೃಷ್ಣ ಮಠದಲ್ಲಿ ಬೃಹತ್ ಗೀತೋತ್ಸವಕ್ಕೆ ಅದ್ದೂರಿ ಚಾಲನೆ|
ಹೊಸ ಸೇರ್ಪಡೆ
Surathkal: ಎಐಯಿಂದ ಉದ್ಯೋಗ, ನಂಬಿಕೆಗೆ ಕುತ್ತು: ಪ್ರೊ| ಗೋವಿಂದನ್ ರಂಗರಾಜನ್
Result: ಮಹಾರಾಷ್ಟ್ರದಲ್ಲಿ ಎನ್‌ಡಿಎಗೆ ಜಯಭೇರಿ; ಮೋದಿ ನಾಯಕತ್ವಕ್ಕೆ ಮನ್ನಣೆ: ನಳಿನ್
Mangaluru: ಗೊಂದಲ ಮೂಡಿಸುವ ಬಿಜೆಪಿಗೆ ತಕ್ಕ ಪಾಠ: ಕೆಪಿಸಿಸಿ ಪ್ರ.ಕಾರ್ಯದರ್ಶಿ ಪದ್ಮರಾಜ್
Putturu: ಬಜೆಟ್‌ನಲ್ಲಿ ಹೊರಡಿಸಿರುವ ಆದೇಶ ಅನುಷ್ಠಾನಿಸದೆ ಕೃಷಿಕರಿಗೆ ವಂಚನೆ: ಮಠಂದೂರು
Udupi: ಪೇಜಾವರ ಶ್ರೀವಿಶ್ವಪ್ರಸನ್ನತೀರ್ಥ ಸ್ವಾಮೀಜಿ -ಗೃಹ ಸಚಿವ ಅಮಿತ್ ಶಾ ಭೇಟಿ
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.