ಸಾರಾ, ವಿನಯಾಪ್ರಸಾದ್‌ಗೆ ಪ್ರಶಸ್ತಿ, ಪುರಸ್ಕಾರ ಪ್ರದಾನ
Team Udayavani, Feb 5, 2018, 9:35 AM IST
ಉಳ್ಳಾಲ: ದಕ್ಷಿಣ ಕನ್ನಡ ಜಿಲ್ಲಾಡಳಿತ, ಕನ್ನಡ ಮತ್ತು ಸಂಸ್ಕೃತಿ ಇಲಾಖೆ ಹಾಗೂ ಅಬ್ಬಕ್ಕ ಉತ್ಸವ ಸಮಿತಿಯ ಆಶ್ರಯದಲ್ಲಿ ರವಿವಾರ ಸೋಮೇಶ್ವರ-ಕೊಲ್ಯದ ನಾಗಮಂಡಲ ಮೈದಾನದಲ್ಲಿ ನಡೆದ ಉಳ್ಳಾಲದ ವೀರರಾಣಿ ಅಬ್ಬಕ್ಕ ಉತ್ಸವ 2017-18ರ ಅಬ್ಬಕ್ಕ ಪ್ರಶಸ್ತಿಯನ್ನು ಹಿರಿಯ ಸಾಹಿತಿ ಸಾರಾ ಅಬೂಬಕ್ಕರ್ ಅವರಿಗೆ ಮತ್ತು ಅಬ್ಬಕ್ಕ ಪುರಸ್ಕಾರವನ್ನು ಹಿರಿಯ ಕಲಾವಿದೆ ವಿನಯಾ ಪ್ರಸಾದ್ ಅವರಿಗೆ ನೀಡಿ ಗೌರವಿಸಲಾಯಿತು.
ಕನ್ನಡ ಮತ್ತು ಸಂಸ್ಕೃತಿ ಹಾಗೂ ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ, ವಿಕಲ ಚೇತನ ಮತ್ತು ಹಿರಿಯ ನಾಗರಿಕರ ಸಬಲೀಕರಣ ಸಚಿವೆ ಉಮಾಶ್ರೀ ಅವರು ಅಬ್ಬಕ್ಕ ಪ್ರಶಸ್ತಿ ಮತ್ತು ಪುರಸ್ಕಾರವನ್ನು ಪ್ರದಾನ ಮಾಡಿದರು. ಉಳ್ಳಾಲದ ರಾಣಿ ಅಬ್ಬಕ್ಕ ನಾಡಿಗೆ ಸ್ವಾಭಿಮಾನವನ್ನು ಕಟ್ಟಿಕೊಟ್ಟ ಧೀಮಂತ ಮಹಿಳೆಯಾಗಿದ್ದು, ಅವರ ಕಾಲದಲ್ಲಿ ಇದ್ದ ಧರ್ಮ ಸಮನ್ವಯ ಪ್ರಸ್ತುತ ದಿನಗಳಲ್ಲೂ ಮುಂದುವರಿಯಬೇಕಾಗಿದೆ; ಸೌಹಾರ್ದಯುತ, ಸ್ವಸ್ಥ ಸಮಾಜ ಪುನರುತ್ಥಾನವಾಗಬೇಕಾಗಿದೆ ಎಂದು ಅವರು ಆಶಯ ವ್ಯಕ್ತಪಡಿಸಿದರು.
ರಂಗಮಂದಿರಕ್ಕೆ 8 ಕೋ. ರೂ.
ವೀರರಾಣಿ ಅಬ್ಬಕ್ಕನ ಹೆಸರಿನಲ್ಲಿ ಜಿಲ್ಲಾಮಟ್ಟದ ರಂಗಮಂದಿರ ಮತ್ತು ಅಬ್ಬಕ್ಕ ಭವನ ನಿರ್ಮಾಣಕ್ಕೆ 8 ಕೋ.ರೂ.ಗಳನ್ನು ಸರಕಾರ ಬಿಡುಗಡೆ ಮಾಡಿದೆ. ಇಲ್ಲಿನ ಸಚಿವರ ಒತ್ತಾಸೆಯ ಮೂಲಕ ಈ ಅನುದಾನ ಬಿಡುಗಡೆಗೊಂಡಿದ್ದು, ಅವರ ಅಭಿವೃದ್ಧಿಪರ ದೂರದೃಷ್ಟಿಯ ಕಾರಣದಿಂದ ಬೇಡಿಕೆಗೆ ಇಲ್ಲವೆನ್ನದೆ ನೀಡಲಾಗಿದೆ ಎಂದು ಸಚಿವೆ ಉಮಾಶ್ರೀ ತಿಳಿಸಿದರು.
ಆಹಾರ ಮತ್ತು ನಾಗರಿಕ ಪೂರೈಕೆ ಸಚಿವ ಯು.ಟಿ. ಖಾದರ್ ಅಧ್ಯಕ್ಷತೆ ವಹಿಸಿದ್ದರು. ಮಾಜಿ ಲೋಕಾಯುಕ್ತ ನ್ಯಾ| ಸಂತೋಷ್ ಹೆಗ್ಡೆ ಮಾತನಾಡಿದರು.
ಮೇಯರ್ ಕವಿತಾ ಸನಿಲ್, ಕರಾವಳಿ ಅಭಿವೃದ್ಧಿ ಪ್ರಾಧಿಕಾರದ ಅಧ್ಯಕ್ಷೆ ಶಾರದಾ ಮೋಹನ್ ಶೆಟ್ಟಿ, ಕರ್ನಾಟಕ ಬ್ಯಾರಿ ಸಾಹಿತ್ಯ ಅಕಾಡೆಮಿ ಅಧ್ಯಕ್ಷ ಕರಂಬಾರ್ ಮಹಮ್ಮದ್, ಕಸಾಪ ಜಿಲ್ಲಾಧ್ಯಕ್ಷ ಪ್ರದೀಪ್ ಕುಮಾರ್ ಕಲ್ಕೂರ, ಹಿರಿಯ ಸಾಹಿತಿ ಬಿ.ಎನ್. ಸುಮಿತ್ರಾಬಾಯಿ, ಉಳ್ಳಾಲ ನಗರಸಭಾ ಅಧ್ಯಕ್ಷ ಕುಂಞಿಮೋನು, ಸಮಾಜ ಸೇವಕ ಹೈದರ್ ಪರ್ತಿಪ್ಪಾಡಿ, ಮುಡಾ ಮಾಜಿ ಅಧ್ಯಕ್ಷ ಇಬ್ರಾಹಿಂ ಕೋಡಿಜಾಲ್, ಎಫ್‌ಕೆಸಿಸಿಐ ಹಿರಿಯ ಉಪಾಧ್ಯಕ್ಷ ಸುಧಾಕರ ಶೆಟ್ಟಿ, ಛೋಟಾ ಮಂಗಳೂರು ಲಯನ್ಸ್ ಕ್ಲಬ್ ಅಧ್ಯಕ್ಷ ಡಾ| ಶಿವಕುಮಾರ್ ಮಗದ, ಗ್ರಾ.ಪಂ. ಸದಸ್ಯ ದೀಪಕ್ ಪಿಲಾರ್, ನ್ಯಾಯವಾದಿ ಗಂಗಾಧರ್ ಉಳ್ಳಾಲ, ಸೂರಜ್ ಶಿಕ್ಷಣ ಸಂಸ್ಥೆಯ ಅಧ್ಯಕ್ಷ ಡಾ| ಮಂಜುನಾಥ್ ರೇವಣRರ್, ವಿದುಷಿ ರಾಜಶ್ರೀ ಉಳ್ಳಾಲ, ಕೌನ್ಸಿಲರ್ ರಝಿಯಾ ಇಬ್ರಾಹಿಂ ಉಪಸ್ಥಿತರಿದ್ದರು. ರಾಜ್ಯೋತ್ಸವ ಪ್ರಶಸ್ತಿ ಹಾಗೂ ಶಾಂತಲಾ ನಾಟ್ಯ ಪ್ರಶಸ್ತಿ ಪುರಸ್ಕೃತ ಉಳ್ಳಾಲ ಮೋಹನ್ ಕುಮಾರ್ ಅವರನ್ನು ಸಮ್ಮಾನಿಸಲಾಯಿತು.
ಉತ್ಸವ ಸಮಿತಿ ತಾರಾನಾಥ ರೈ, ಪಿ.ಡಿ. ಶೆಟ್ಟಿ, ತ್ಯಾಗಂ ಹರೇಕಳ, ನಿರ್ಮಲ್ ಕುಮಾರ್, ಪುಷ್ಕಳ್ ಕುಮಾರ್, ಲಕ್ಷ್ಮೀನಾರಾಯಣ ರೈ ಹರೇಕಳ, ಸುವಾಸಿನಿ ಬಬ್ಬುಕಟ್ಟೆ, ದೇವಕಿ ಆರ್. ಉಳ್ಳಾಲ್, ರತ್ನಾವತಿ ಬೈಕಾಡಿ, ಪ್ರಭಾಕರ ಜೋಗಿ ಉಪಸ್ಥಿತರಿದ್ದರು.
ದಿನಕರ ಉಳ್ಳಾಲ ಸ್ವಾಗತಿಸಿ ಪ್ರಸ್ತಾವನೆಗೈದರು. ಧನಲಕ್ಷ್ಮೀ ಗಟ್ಟಿ ಮತ್ತು ಭಾಸ್ಕರ ರೈ ಕುಕ್ಕುವಳ್ಳಿ ಕಾರ್ಯಕ್ರಮ ನಿರ್ವಹಿಸಿದರು. ಕೋಶಾಧಿಕಾರಿ ಆನಂದ ಅಸೈಗೋಳಿ ವಂದಿಸಿದರು.
ರಾಣಿ ಅಬ್ಬಕ್ಕ ಪ್ರಗತಿಪರ ಚಿಂತನೆ ಗಳನ್ನು ಮೈಗೂಡಿಸಿಕೊಂಡಿದ್ದರು. ಎಲ್ಲ ಧರ್ಮ ದವರನ್ನು ಸೇರಿಸಿಕೊಂಡು ವ್ಯಾಪಾರ ಒಪ್ಪಂದಗಳನ್ನು ಮಾಡಿದಾಕೆ. ಸಮಾಜದ ಅಭಿವೃದ್ಧಿಗಾಗಿ ತನ್ನ ಪತಿ ಮತ್ತು ಪೋರ್ಚುಗೀಸರ ವಿರುದ್ಧ ಹೋರಾಡಿದ ದಿಟ್ಟ ಮಹಿಳೆ.
– ಸಾರಾ ಅಬೂಬಕ್ಕರ್
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
MUST WATCH
ದೈವ ನರ್ತಕರಂತೆ ಗುಳಿಗ ದೈವದ ವೇಷ ಭೂಷಣ ಧರಿಸಿ ಕೋಲ ಕಟ್ಟಿದ್ದ ಅನ್ಯ ಸಮಾಜದ ಯುವಕ
ಹಕ್ಕಿಗಳಿಗಾಗಿ ಕಲಾತ್ಮಕ ವಸ್ತುಗಳನ್ನು ತಯಾರಿಸುತ್ತಿರುವ ಪಕ್ಷಿ ಪ್ರೇಮಿ
ಮಂಗಳೂರಿನ ನಿಟ್ಟೆ ವಿಶ್ವವಿದ್ಯಾನಿಲಯದ ತಜ್ಞರ ಅಧ್ಯಯನದಿಂದ ಬಹಿರಂಗ
ಈ ಹೋಟೆಲ್ ಗೆ ಪೂರಿ, ಬನ್ಸ್, ಕಡುಬು ತಿನ್ನಲು ದೂರದೂರುಗಳಿಂದಲೂ ಜನ ಬರುತ್ತಾರೆ
ಹರೀಶ್ ಪೂಂಜ ಪ್ರಚೋದನಾಕಾರಿ ಹೇಳಿಕೆ ವಿರುದ್ಧ ಪ್ರಾಣಿ ಪ್ರಿಯರ ಆಕ್ರೋಶ
ಹೊಸ ಸೇರ್ಪಡೆ
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.