ಸಂಸ್ಕಾರಭರಿತ ಶಿಕ್ಷಣದಿಂದ ಸತ್‌ಸಮಾಜ: ರಾಜ್ಯಪಾಲ


Team Udayavani, Jan 21, 2018, 11:18 AM IST

2001mlr41.jpg

ಮಂಗಳೂರು:  ಶಿಕ್ಷಣ  ವಿದ್ಯಾರ್ಥಿಗಳಲ್ಲಿ  ಜ್ಞಾನದ ಜತೆಗೆ ಸಂಸ್ಕಾರವನ್ನು  ಬೆಳೆಸಬೇಕು ಸಂಸ್ಕಾರ ಭರಿತ ಶಿಕ್ಷಣದಿಂದ ಸತ್‌ಸಮಾಜ ನಿರ್ಮಾಣ ವಾಗುತ್ತದೆ ಎಂದು  ಕರ್ನಾಟಕ ರಾಜ್ಯಪಾಲ ವಜೂ ಭೈರುಡಾ ಭೈವಾಲಾ ಹೇಳಿದರು. 

ನಗರದ ಕೊಡಿಯಾಲಬೈಲ್‌ ಶಾರದಾ ವಿದ್ಯಾಲಯದ ರಜತ ಮಹೋತ್ಸವ ಸಮಾರಂಭವನ್ನು  ಶನಿವಾರ ಉದ್ಘಾಟಿಸಿ ಮಾತನಾಡಿದ ಅವರು, ಭಾರತೀಯ ಸಂಸ್ಕೃತಿಯಲ್ಲಿ ಶಿಕ್ಷಣವೆಂಬುದು ಉದಾತ್ತ  ಮೌಲ್ಯಗಳ ನೆಲೆಗಟ್ಟಿನ ಮೇಲೆ ಬೆಳೆದು ಬಂದಿದೆ. ಶಾಂತಿ, ಅಹಿಂಸೆ,  ಸಹನೆ, ಚಿಂತನಶೀಲತೆ, ವೈಚಾರಿಕತೆ, ವಿನಯಶೀಲತೆ, ಸತ್‌ವಿಚಾರ, ಸನ್ನಡತೆ ಮುಂತಾದ ಮೌಲ್ಯಗಳ ಆಧಾರಿತ ಶಿಕ್ಷಣ ಸಫಲತೆಯನ್ನು ತಂದುಕೊಡುತ್ತದೆ. ಆರ್‌ಎಸ್‌ಎಸ್‌ ಸರಸಂಘಚಾಲಕ ಗುರೂಜಿಯವರು ಶಿಕ್ಷಣದ ಸ್ವರೂಪದ ವಿಶ್ಲೇಷಣೆ ಮಾಡುತ್ತಾ ಈ ವಿಚಾರಗಳನ್ನು ಉಲ್ಲೇಖೀಸಿದ್ದಾರೆ. ಈ ಮೌಲ್ಯಗಳು  ವಿದೇಶಿ ಶಿಕ್ಷಣ ವ್ಯವಸ್ಥೆಯಲ್ಲಿ  ದುರ್ಲಭ. ಭಾರತೀಯ ಸಂಸ್ಕೃತಿ ಆಧಾರಿತ ಶಿಕ್ಷಣ ವ್ಯವಸ್ಥೆಯಲ್ಲಿ  ಇಂತಹ ಮೌಲ್ಯಗಳು ಅಂತರ್ಗತವಾಗಿರುತ್ತವೆ ಎಂದರು.

ಇಂದು ಭಾರತೀಯ ಸಂಸ್ಕೃತಿಯ ನೆಲೆಗಟ್ಟಿನಲ್ಲಿ  ಶಿಕ್ಷಣ ನೀಡುವ ಸಂಸ್ಥೆಗಳ ಸಂಖ್ಯೆ ದೇಶದಲ್ಲಿ ಕಡಿಮೆ ಇದೆ. ಮಂಗಳೂರಿನ ಶಾರದಾ ವಿದ್ಯಾಲಯ ಭಾರತೀಯ ಸಂಸ್ಕೃತಿಯ ಶಿಕ್ಷಣದಲ್ಲಿ ಅಳವಡಿಸಿಕೊಂಡು ಶಿಕ್ಷಣ ನೀಡುವ ಸಂಸ್ಥೆಗಳ ಲ್ಲೊಂದಾಗಿದೆ. ಸಂಸ್ಕಾರಭರಿತ ಯುವ ಸಮೂಹವನ್ನು ನಿರ್ಮಿಸುವ ಕಾರ್ಯ ಮಾಡುತ್ತಿದೆ ಎಂದವರು ಹೇಳಿದರು. 

ವಿದ್ಯಾಸಂಸ್ಥೆಗಳು ಜ್ಞಾನ ದೇಗುಲಗಳು: ಹೆಗ್ಗಡೆ ಅಧ್ಯಕ್ಷತೆ  ವಹಿಸಿದ್ದ ಶ್ರೀ ಕ್ಷೇತ್ರ ಧರ್ಮಸ್ಥಳದ ಧರ್ಮಾಧಿಕಾರಿ ಡಾ| ಡಿ. ವೀರೇಂದ್ರ ಹೆಗ್ಗಡೆ ಮಾತನಾಡಿ, ವಿದ್ಯಾಸಂಸ್ಥೆಗಳು ಜ್ಞಾನ ದೇಗುಲಗಳು. ಬದುಕು, ಸಮಾಜ, ದೇಶವನ್ನು  ಕಟ್ಟುವ ಕಾರ್ಯ ವಿದ್ಯಾಸಂಸ್ಥೆಗಳಿಂದಾಗುತ್ತದೆ ಎಂದರು.

 ಗುಣಮಟ್ಟದ ಶಿಕ್ಷಣ: ಸಚಿವ ಸುರೇಶ್‌ ಪ್ರಭು ಕೇಂದ್ರ ವಾಣಿಜ್ಯ ಮತ್ತು ಕೈಗಾರಿಕಾ ಖಾತೆ ಸಚಿವ ಸುರೇಶ್‌ ಪ್ರಭು ಅವರು ರಜತ ಮಹೋತ್ಸವ ಸ್ಮರಣ ಸಂಚಿಕೆ  ರಜತ ಪ್ರಭಾ ಬಿಡುಗಡೆಗೊಳಿಸಿ ಮಾತನಾಡಿ, ಶಿಕ್ಷಣ ಪಡೆಯುವವರ ಸಂಖ್ಯೆ ಹೆಚ್ಚಿಸುವುದಕ್ಕೆ ಆದ್ಯತೆಯ ಜತೆಗೆ ಗುಣಮಟ್ಟದ ಶಿಕ್ಷಣವನ್ನು ನೀಡುವತ್ತಲೂ ವಿಶೇಷ ಗಮನ ನೀಡುವುದು ಅವಶ್ಯ ಶಿಕ್ಷಣದ ಜತೆಗೆ ಜೀವನ ಮೌಲ್ಯಗಳನ್ನು ತುಂಬಿಸುವ ಕಾರ್ಯವೂ ಆಗಬೇಕು. ಪಠ್ಯದ ಜತೆಗೆ ಜೀವನ ಶಿಕ್ಷಣವೂ ದೊರೆಯಬೇಕು. ಆಗ ಅವರು ಜೀವನದಲ್ಲಿ ಯಶಸ್ವಿಯಾಗಲು ಸಾಧ್ಯವಾಗುತ್ತದೆ ಎಂದರು. 

ನಿಟ್ಟೆ ವಿವಿ ಕುಲಾಧಿಪತಿ ಎನ್‌. ವಿನಯ ಹೆಗ್ಡೆ ಮಾತನಾಡಿ, ಗುಣಮಟ್ಟದ ಶಿಕ್ಷಣ ನೀಡುವಲ್ಲಿ  ಶಿಕ್ಷಕ ವರ್ಗ ನಿರ್ವಹಿಸುವ ಪಾತ್ರ ಮಹತ್ತರವಾದುದು. ಈ ಬಗ್ಗೆಯೂ ವಿಶೇಷ ಗಮನ ನೀಡುವುದು ಅವಶ್ಯವಾದುದು ಎಂದರು.

ಸಚ್ಚಾರಿತ್ರ ನಿರ್ಮಾಣ: ಶ್ರೀ ವಿಶ್ವಪ್ರಸನ್ನತೀರ್ಥ ಅಶೀರ್ವಚನ ನೀಡಿದ  ಉಡುಪಿ ಪೇಜಾವರ ಮಠದ ಶ್ರೀ ವಿಶ್ವಪ್ರಸನ್ನ ತೀರ್ಥ ಸ್ವಾಮೀಜಿಯವರು ಕ್ಷುಲ್ಲಕ ಕಾರಣಗಳಿಗೂ ಮಕ್ಕಳು ವಿದ್ಯಾರ್ಥಿದೆಸೆಯಲ್ಲಿ ಅತಿರೇಕದ ಕ್ರಮಗಳನ್ನು ಅನುಸರಿಸುತ್ತಿರುವುದು ಕಂಡುಬರುತ್ತಿದೆ. ಎಳೆಯ ಪ್ರಾಯದಲ್ಲೇ ದುಶ್ಚಟಗಳಿಗೆ ಬಲಿಯಾಗಿ ತಮ್ಮ ಬದುಕು, ಭವಿಷ್ಯವನ್ನು ಹಾಳುಮಾಡುವುದರ ಜತೆಗೆ ಕುಟುಂಬ, ಸಮಾಜದ ನೆಮ್ಮದಿಯನ್ನು  ಕೆಡಿಸುವ ಬಹಳಷ್ಟು  ಘಟನೆಗಳನ್ನು ಕಾಣುತ್ತೇವೆ.  ಇದಕ್ಕೆ ಮುಖ್ಯ ಕಾರಣ ಶಿಕ್ಷಣದ ಜತೆಗೆ ಸಂಸ್ಕೃತಿ, ಸಂಸ್ಕಾರದ ಜ್ಞಾನ ನೀಡದಿರುವುದು ಎಂದರು. 

ನಳಿನ್‌ ಕುಮಾರ್‌ ಕಟೀಲು ಅತಿಥಿಯಾಗಿದ್ದರು. ಸಮ್ಮಾನ ಶಾರದಾ ವಿದ್ಯಾಸಂಸ್ಥೆಯ ಅಭಿವೃದ್ಧಿ ಮತ್ತು ಸಾಧನೆಗೆ ವಿಶೇಷವಾಗಿ ಶ್ರಮಿಸಿದ ಸಂಸ್ಥೆಯ ಅಧ್ಯಕ್ಷ  ಪ್ರೊ| ಎಂ.ಬಿ. ಪುರಾಣಿಕ್‌ ಅವರನ್ನು ಪತ್ನಿ ಸುನಂದಾ ಪುರಾಣಿಕ್‌ ಸಹಿತ ಎಸ್‌ಕೆಡಿಬಿ ಸಂಸ್ಥೆಯ ವತಿಯಿಂದ  ಸಮ್ಮಾನಿಸಲಾಯಿತು. 

ಪ್ರಸ್ತಾವನೆಗೈದ ಪ್ರೊ| ಎಂ.ಬಿ. ಪುರಾಣಿಕ್‌ ಅವರು 1992ರಲ್ಲಿ ಕೊಡಿಯಾಲ್‌ಬೈಲ್‌ ಎಸ್‌ಕೆಡಿಬಿ ಆವರಣದೊಳಗೆ ದಿ|ಹರಿದಾಸ ಆಚಾರ್ಯ ಅವರ ಸ್ಥಾಪಕಾಧ್ಯಕ್ಷತೆಯಲ್ಲಿ ಶೈಕ್ಷಣಿಕ ಸೇವಾ ಕಾರ್ಯದ ಉದ್ದೇಶದೊಂದಿಗೆ ತುಳುನಾಡು ಎಜು ಕೇಶನಲ್‌ ಟ್ರಸ್ಟ್‌ನ ಆಶ್ರಯದಲ್ಲಿ ವಿದ್ಯಾಲಯವು ಸ್ಥಾಪನೆಯಾಯಿತು. ಇದೀಗ ಸಾರ್ಥಕ 25 ವರ್ಷಗಳ ಸಂಭ್ರಮದಲ್ಲಿದೆ. ಇದರ ಜತೆಗೆ ಶಾರದಾ ಪದವಿಪೂರ್ವ ಕಾಲೇಜು. ಶಾರದಾ ಪ್ರಥಮ ದರ್ಜೆ ಕಾಲೇಜು ಮುಂತಾದ ವಿದ್ಯಾಸಂಸ್ಥೆಗಳನ್ನು  ಹೊಂದಿದೆ  ಎಂದು ವಿವರಿಸಿದರು.

ಟ್ರಸ್ಟಿ ಎಸ್‌. ಪ್ರದೀಪಕುಮಾರ ಕಲ್ಕೂರ ಸ್ವಾಗತಿಸಿ ದರು. ಪ್ರೊ| ಲೀಲಾ ಉಪಾಧ್ಯಾಯ ಅಭಿನಂದನ ಭಾಷಣ ಮಾಡಿದರು. ಸಂಸ್ಥೆಯ ಉಪಾಧ್ಯಕ್ಷ ಕೆ. ಎಸ್‌. ಕಲ್ಲೂರಾಯ, ಕಾರ್ಯದರ್ಶಿ ಎಂ.ಎಸ್‌. ಶಾಸ್ತ್ರಿ, ಎಚ್‌. ಸೀತಾರಾಮ ಆಚಾರ್ಯ ಉಪಸ್ಥಿತರಿದ್ದರು. ಪ್ರಾಂಶುಪಾಲೆ ಸುನೀತಾ ವಿ.ಮಡಿ ವಂದಿಸಿದರು. ಶಾರದಾ ವಿದ್ಯಾಲಯದ ಉಪಪ್ರಾಂಶುಪಾಲ ದಯಾನಂದ ಕಟೀಲು ನಿರೂಪಿಸಿದರು.

ಅಚ್ಛಾ ದೇಖಾ ನಹೀ..ಅಚ್ಛಾ ಹೋನಾ ಹೈ
ವ್ಯಸನ ಮತ್ತು ಫ್ಯಾಶನ್‌ನಿಂದ ಯುವಜನತೆ ಮುಕ್ತರಾಗಬೇಕು. ನಾವು ಬಾಹ್ಯ ಸೌಂದರ್ಯಕ್ಕೆ ಹೆಚ್ಚು ಒತ್ತು ನೀಡುವ ಬದಲು ವ್ಯಕ್ತಿತ್ವವನ್ನು ಸುಂದರಗೊಳಿಸಬೇಕು. ಅಚ್ಛಾ ದೇಖಾನಹೀ.. ಅಚ್ಛಾ ಹೋನಾ ಹೈ (ಸುಂದರವಾಗಿ ಕಾಣುವುದಲ್ಲ. ಒಳ್ಳೆಯ ವ್ಯಕ್ತಿಯಾಗಿ ಮೂಡಿ ಬರಬೇಕು) ಎಂದು ರಾಜ್ಯಪಾಲ ವಜೂಭಾವಾಲಾ ವಿದ್ಯಾರ್ಥಿಗಳಿಗೆ ಕಿವಿಮಾತು ಹೇಳಿದರು.

ವ್ಯಸನ ಹೇಗೆ ದುರಂತಗಳಿಗೆ ಕಾರಣವಾಗ ಬಹುದು ಎಂಬುದಕ್ಕೆ  ಇತ್ತೀಚೆಗೆ ಮಂಗಳೂರು ವಿಮಾನ ನಿಲ್ದಾಣದಲ್ಲಿ ಪೈಲಟ್‌ ಓರ್ವರು ಮದ್ಯಪಾನ ಸೇವನೆ ಮಾಡಿ ವಿಮಾನ ಓಡಿಸಲು ಮುಂದಾಗಿದ್ದ ಘಟನೆಯನ್ನು ವಿವರಿಸಿ ಆತನ ಕೃತ್ಯದಿಂದ ವಿಮಾನದಲ್ಲಿದ್ದ ನೂರಾರು ಪ್ರಯಾಣಿ ಕರು ಆಪಾಯದಲ್ಲಿ ಸಿಲುಕುವ ಪರಿಸ್ಥಿತಿ ಎದುರಾ ಗಿತ್ತು ಎಂದು ಪೇಜಾವರ ಮಠದ ಕಿರಿಯ ಯತಿ ಶ್ರೀ ವಿಶ್ವಪ್ರಸನ್ನ ತೀರ್ಥ ಶ್ರೀಪಾದರು ಹೇಳಿದರು.

ಟಾಪ್ ನ್ಯೂಸ್

Video: ನ್ಯಾಯ ಕೇಳಲು ಬಂದ ವ್ಯಕ್ತಿಗೆ ಖಾಕಿಯಿಂದ 41 ಸೆಕೆಂಡ್‌ಗಳಲ್ಲಿ 31 ಬಾರಿ ಕಪಾಳ ಮೋಕ್ಷ

Video: ನ್ಯಾಯ ಕೇಳಲು ಬಂದ ವ್ಯಕ್ತಿಗೆ ಖಾಕಿಯಿಂದ 41 ಸೆಕೆಂಡ್‌ಗಳಲ್ಲಿ 31 ಬಾರಿ ಕಪಾಳ ಮೋಕ್ಷ

Mumbai: ಚಿಕಿತ್ಸೆಗೆಂದು ಮುಂಬೈಗೆ ಹೋಗಿದ್ದ ನಾಸಿಕ್ ನ ಒಂದೇ ಕುಟುಂಬದ ಮೂವರ ದುರಂತ ಸಾವು

Mumbai: ಚಿಕಿತ್ಸೆಗೆಂದು ಮುಂಬೈಗೆ ಹೋಗಿದ್ದ ನಾಸಿಕ್ ನ ಒಂದೇ ಕುಟುಂಬದ ಮೂವರ ದುರಂತ ಸಾ*ವು

Kadur: ದೇಗುಲ ಕಂಪೌಂಡ್‌ ಪ್ರವೇಶಿಸಿದರೆಂದು ದಲಿತರಿಗೆ ದಂಡ; ಸವರ್ಣೀಯರಿಂದ ದೇಗುಲಕ್ಕೆ ಬೀಗ

Kadur: ದೇಗುಲ ಕಂಪೌಂಡ್‌ ಪ್ರವೇಶಿಸಿದರೆಂದು ದಲಿತರಿಗೆ ದಂಡ; ಸವರ್ಣೀಯರಿಂದ ದೇಗುಲಕ್ಕೆ ಬೀಗ

0055

BBK11: ಮಂಜು ಅವರದ್ದು ಚೀಪ್ ಮೆಂಟಲಿಟಿ‌ ಎಂದ ರಜತ್; ಭವ್ಯ – ಮೋಕ್ಷಿತಾ ವಾಗ್ವಾದ

9-ullala

Ullala: ಸೇತುವೆಗೆ ತೇಪೆ ಹಚ್ಚುವ ಕಾಮಗಾರಿ; ರಾ. ಹೆದ್ದಾರಿಯಲ್ಲಿ ವಾಹನ ಸಂಚಾರ ವ್ಯತ್ಯಯ

BGT: ಆಸೀಸ್‌ ಮಾಧ್ಯಮದ ವಿರುದ್ದ ವಿರಾಟ್‌ ಗರಂ: ಏರ್‌ಪೋರ್ಟ್‌ ನಲ್ಲಿ ವರದಿಗಾರ್ತಿ ಜತೆ ಜಗಳ

BGT: ಆಸೀಸ್‌ ಮಾಧ್ಯಮದ ವಿರುದ್ದ ವಿರಾಟ್‌ ಗರಂ: ಏರ್‌ಪೋರ್ಟ್‌ ನಲ್ಲಿ ವರದಿಗಾರ್ತಿ ಜತೆ ಜಗಳ

8-belthangady

Belthangady: ಕ್ರಿಸ್ಮಸ್‌ ಹಬ್ಬಕ್ಕೆ ವಿದ್ಯುತ್ ಅಲಂಕಾರ ಮಾಡುವ ವೇಳೆ ಶಾಕ್: ಬಾಲಕ ಸಾವು


ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು

9-ullala

Ullala: ಸೇತುವೆಗೆ ತೇಪೆ ಹಚ್ಚುವ ಕಾಮಗಾರಿ; ರಾ. ಹೆದ್ದಾರಿಯಲ್ಲಿ ವಾಹನ ಸಂಚಾರ ವ್ಯತ್ಯಯ

6

Mangaluru: ನಂತೂರು ವೃತ್ತ; ಸಂಚಾರ ಸ್ವಲ್ಪ ನಿರಾಳ

3

Belma: ಕುಸಿತ ಭೀತಿಯಲ್ಲಿರುವ ಮನೆ; ಕಾಂಕ್ರೀಟ್‌ ತಡೆಗೋಡೆಗೆ ಪಿಡಬ್ಲ್ಯುಡಿ ಪ್ರಸ್ತಾವ

7-lokayuktha

Surathkal: ಲೋಕಾಯುಕ್ತ ಪೊಲೀಸರ ಬಲೆಗೆ ಬಿದ್ದ ಮುಲ್ಕಿ ಕಂದಾಯ ನಿರೀಕ್ಷಕ

2

Mudbidri: ಸರಕಾರಿ ಬಸ್ಸಿಗಿಲ್ಲ ನಿಲ್ದಾಣ

MUST WATCH

udayavani youtube

ದೈವ ನರ್ತಕರಂತೆ ಗುಳಿಗ ದೈವದ ವೇಷ ಭೂಷಣ ಧರಿಸಿ ಕೋಲ ಕಟ್ಟಿದ್ದ ಅನ್ಯ ಸಮಾಜದ ಯುವಕ

udayavani youtube

ಹಕ್ಕಿಗಳಿಗಾಗಿ ಕಲಾತ್ಮಕ ವಸ್ತುಗಳನ್ನು ತಯಾರಿಸುತ್ತಿರುವ ಪಕ್ಷಿ ಪ್ರೇಮಿ

udayavani youtube

ಮಂಗಳೂರಿನ ನಿಟ್ಟೆ ವಿಶ್ವವಿದ್ಯಾನಿಲಯದ ತಜ್ಞರ ಅಧ್ಯಯನದಿಂದ ಬಹಿರಂಗ

udayavani youtube

ಈ ಹೋಟೆಲ್ ಗೆ ಪೂರಿ, ಬನ್ಸ್, ಕಡುಬು ತಿನ್ನಲು ದೂರದೂರುಗಳಿಂದಲೂ ಜನ ಬರುತ್ತಾರೆ

udayavani youtube

ಹರೀಶ್ ಪೂಂಜ ಪ್ರಚೋದನಾಕಾರಿ ಹೇಳಿಕೆ ವಿರುದ್ಧ ಪ್ರಾಣಿ ಪ್ರಿಯರ ಆಕ್ರೋಶ

ಹೊಸ ಸೇರ್ಪಡೆ

7

Chikkaballapur: 5 ವರ್ಷದಲ್ಲಿ 514 ತಾಯಿ-ಮಗು ಸಾವಿನ ಪ್ರಕರಣ!

ಪರ್ಯಾಯ ಶ್ರೀ ಪುತ್ತಿಗೆ ಶ್ರೀಕೃಷ್ಣ ಮಠ: ಸ್ಮೃತಿ ಪ್ರತಿಭಾ,ಗೀತಾ ತ್ರಯೋದಶಾವಧಾನ’ ಸಂಪನ್ನ

ಪರ್ಯಾಯ ಶ್ರೀ ಪುತ್ತಿಗೆ ಶ್ರೀಕೃಷ್ಣ ಮಠ: ಸ್ಮೃತಿ ಪ್ರತಿಭಾ,ಗೀತಾ ತ್ರಯೋದಶಾವಧಾನ’ ಸಂಪನ್ನ

Video: ನ್ಯಾಯ ಕೇಳಲು ಬಂದ ವ್ಯಕ್ತಿಗೆ ಖಾಕಿಯಿಂದ 41 ಸೆಕೆಂಡ್‌ಗಳಲ್ಲಿ 31 ಬಾರಿ ಕಪಾಳ ಮೋಕ್ಷ

Video: ನ್ಯಾಯ ಕೇಳಲು ಬಂದ ವ್ಯಕ್ತಿಗೆ ಖಾಕಿಯಿಂದ 41 ಸೆಕೆಂಡ್‌ಗಳಲ್ಲಿ 31 ಬಾರಿ ಕಪಾಳ ಮೋಕ್ಷ

Atlee to collaborate with Salman Khan

Atlee Kumar; ಸಲ್ಮಾನ್‌ ಖಾನ್‌ ಜತೆಗೆ ಅಟ್ಲಿ ಸಿನಿಮಾ

11-

ಪ್ರಧಾನ ಸಂಪಾದಕ ನ್ಯೂಯಾರ್ಕ್ ನ ಬೆಂಕಿ ಬಸಣ್ಣ ವಿರಚಿತ ‘ವಿಶ್ವಕನ್ನಡ ಕೂಟಗಳ ಕೈಪಿಡಿ’ ಬಿಡುಗಡೆ

Thanks for visiting Udayavani

You seem to have an Ad Blocker on.
To continue reading, please turn it off or whitelist Udayavani.