ಮೈರ ಸತ್ಯಧರ್ಮ ಜೋಡುಕೆರೆ ಕಂಬಳಕ್ಕೆ ಚಾಲನೆ
Team Udayavani, Nov 30, 2019, 4:49 PM IST
ಪುಂಜಾಲಕಟ್ಟೆ: ಬಂಟ್ವಾಳ ತಾ| ಉಳಿ ಗ್ರಾಮದ ಕಕ್ಯಪದವಿನ ಮೈರ ಬರ್ಕೆಜಾಲುನಲ್ಲಿ ಮೈರ ಶ್ರೀ ರಾಮಾಂಜನೇಯ ಗೆಳೆಯರ ಬಳಗದ ವತಿಯಿಂದ ನಡೆಯುವ ಏಳನೇ ವರ್ಷದ ಪ್ರಯುಕ್ತ ನಡೆದ ಸತ್ಯ-ಧರ್ಮ ಜೋಡುಕರೆ ಬಯಲು ಕಂಬಳಕ್ಕೆ ಶನಿವಾರ ಚಾಲನೆ ನೀಡಲಾಯಿತು.
ಪ್ರಗತಿಪರ ಕೃಷಿಕ ರವೀಂದ್ರ ಅಡಪ ದಿಡಿಂಬಿಲ ಅವರು ಕಂಬಳದ ಕರೆಯನ್ನು ಉದ್ಘಾಟಿಸಿ ಕಂಬಳಕ್ಕೆ ಚಾಲನೆ ನೀಡಿದರು.
ಬಳಿಕ ನಡೆದ ಸಭಾ ಕಾರ್ಯಕ್ರಮವನ್ನು ಪ್ರಗತಿಪರ ಕೃಷಿಕ ಹಾಗೂ ಕಂಬಳ ಕೋಣಗಳ ಯಜಮಾನ ಸುರೇಶ್ ಶೆಟ್ಟಿ ಮಿಯ್ನಾರು ಅವರು ಉದ್ಘಾಟಿಸಿದರು. ಉಪ್ಪಿನಂಗಡಿ ದಂತ ವೈದ್ಯ ಡಾ.ರಾಜಾರಾಂ ಕೋಂಗುಜೆ ಅವರು ಅಧ್ಯಕ್ಷತೆ ವಹಿಸಿ ಮಾತನಾಡಿ, ಹಿಂದೆ ಕೃಷಿ ಕಾರ್ಯಗಳು ಮುಗಿದು ಮನೋರಂಜನೆಗಾಗಿ ತೊಡಗಿಸಿಕೊಂಡ ಕೋಣಗಳ ಓಟ ಇಂದು ವೈಭವದ ಆಧುನಿಕ ಹೈಟೆಕ್ ಕಂಬಳವಾಗಿ ರೂಪಾಂತರಗೊಂಡಿರುವುದು ಸಂತಸವಾಗಿದೆ.
ಕಂಬಳ ಕ್ರೀಡೆ ಜಾತಿ ಧರ್ಮ ಮರೆತು ಜನರನ್ನು ಭಾವನಾತ್ಮವಾಗಿ ಬೆಸೆಯುವ ಕ್ರೀಡೆಯಾಗಿದೆ. ಬೇರೆ ಬೇರೆ ಊರಿನ ಜನರು ಒಂದೆಡೆ ಸೇರಿ ತಮ್ಮ ಕೃಷಿ ಕಾರ್ಯಗಳ ಬಗ್ಗೆ ಮಾತುಕತೆ ನಡೆಸಲು ಕಂಬಳ ಪೂರಕವಾಗಿದೆ ಎಂದರು.
ತೀರಾ ಗ್ರಾಮೀಣ ಪ್ರದೇಶದಲ್ಲಿ ಪ್ರಸಕ್ತ ಕಂಬಳ ಋತುವಿನ ಪ್ರಥಮ ಕಂಬಳ ಸಂಘಟಿಸಲು ಶ್ರಮ ವಹಿಸಿದ ಮೈರ ಶ್ರೀ ರಾಮಾಂಜನೇಯ ಗೆಳೆಯರ ಬಳಗ ಅಭಿನಂದಾರ್ಹರು. ಕಂಬಳ ಯಶಸ್ವಿಯಾಗಲಿ ಎಂದು ಹೇಳಿದರು.
ವೇ| ಮೂ| ವಾಸುದೇವ ಭಟ್ ಅವರು ಪೂಜಾ ವಿಧಿಗಳನ್ನು ನಿರ್ವಹಿಸಿದರು . ಸತ್ಯ ಧರ್ಮ ಕಂಬಳ ಸಮಿತಿ ಅಧ್ಯಕ್ಷ ರವಿ ಕಕ್ಯಪದವು, ಕಂಬಳ ಜಿಲ್ಲಾ ಸಮಿತಿ ಅಧ್ಯಕ್ಷ ಪಿ.ಆರ್.ಶೆಟ್ಟಿ, ಸತ್ಯ ಧರ್ಮ ಕಂಬಳ ಸಮಿತಿ ಕಾರ್ಯಾಧ್ಯಕ್ಷ ಲತೀಶ್ ಕುಕ್ಕಾಜೆ, ಶ್ರೀ ರಾಮಾಂಜನೇಯ ಗೆಳೆಯರ ಬಳಗದ ಅಧ್ಯಕ್ಷ ಮಹೇಂದ್ರ ಕಾಯರ್‌ಗುರಿ, ಕೋಶಾಧಿಕಾರಿ ಉಮೇಶ್ ಪೂಜಾರಿ, ಗೆಳೆಯರ ಬಳಗದ ಪದಾಧಿಕಾರಿಗಳಾದ ನ್ಯಾಯವಾದಿ ರಂಜಿತ್ ಮೈರ, ಪುರುಷೋತ್ತಮ ಪಲ್ಕೆ, ಕುಸುಮಾಧರ ಉರ್ಕಿ, ಪ್ರಮುಖರಾದ ಚಿದಾನಂದ ರೈ, ಗಂಗಾಧರ ಪೂಜಾರಿ ಕಜೆಕಾರು, ಪ್ರವೀಣ್ ಶೆಟ್ಟಿ ಕಿಂಜಾಲು, ಸುಧಾಕರ ಶೆಟ್ಟಿ ಶಂಕರಬೆಟ್ಟು, ಪ್ರದೀಪ್, ದಿನೇಶ್ ಪೂಜಾರಿ ಕುಕ್ಕಾಜೆ, ಶಿವಪ್ಪ ಪೂಜಾರಿ ಜೇಡರಬೆಟ್ಟು, ಸುಂದರ ಪೂಜಾರಿ ಕೊಲೆಂಜಿರಕೊಡಿ, ಜಯ ಪೂಜಾರಿ ಕುಕ್ಕಾಜೆ, ಮಹಮ್ಮದ್, ಯೋಗೀಶ್ ಪೂಜಾರಿ, ರಫೀಕ್ ಬನತ್ತಪಲ್ಕೆ, ಶಾಂತಪ್ಪ ಪೂಜಾರಿ ಹಟದಡ್ಕ, ದಯಾನಂದ ಮುಂಡ್ರೇಲು, ಲಿಂಗಪ್ಪ ಗೌಡ ಮಹಮ್ಮಾಯಿ, ಪ್ರಶಾಂತ ಪೂಜಾರಿ ಮತ್ತಿತರರು ಉಪಸ್ಥಿತರಿದ್ದರು.
ಗೆಳೆಯರ ಬಳಗದ ಸ್ಥಾಪಕಾಧ್ಯಕ್ಷ ಶಿವಾನಂದ ಮೈರ ಸ್ವಾಗತಿಸಿದರು. ಪ್ರಶಾಂತ ಮೈರ ಕಾರ್ಯಕ್ರಮ ನಿರೂಪಿಸಿದರು.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
MUST WATCH
ದೈವ ನರ್ತಕರಂತೆ ಗುಳಿಗ ದೈವದ ವೇಷ ಭೂಷಣ ಧರಿಸಿ ಕೋಲ ಕಟ್ಟಿದ್ದ ಅನ್ಯ ಸಮಾಜದ ಯುವಕ
ಹಕ್ಕಿಗಳಿಗಾಗಿ ಕಲಾತ್ಮಕ ವಸ್ತುಗಳನ್ನು ತಯಾರಿಸುತ್ತಿರುವ ಪಕ್ಷಿ ಪ್ರೇಮಿ
ಮಂಗಳೂರಿನ ನಿಟ್ಟೆ ವಿಶ್ವವಿದ್ಯಾನಿಲಯದ ತಜ್ಞರ ಅಧ್ಯಯನದಿಂದ ಬಹಿರಂಗ
ಈ ಹೋಟೆಲ್ ಗೆ ಪೂರಿ, ಬನ್ಸ್, ಕಡುಬು ತಿನ್ನಲು ದೂರದೂರುಗಳಿಂದಲೂ ಜನ ಬರುತ್ತಾರೆ
ಹರೀಶ್ ಪೂಂಜ ಪ್ರಚೋದನಾಕಾರಿ ಹೇಳಿಕೆ ವಿರುದ್ಧ ಪ್ರಾಣಿ ಪ್ರಿಯರ ಆಕ್ರೋಶ
ಹೊಸ ಸೇರ್ಪಡೆ
Malpe: ಮನೆ ಮನೆಗಳಲ್ಲಿ ಕ್ಯಾರೋಲ್ ಗಾಯನ
Turkey: ಟೇಕ್ ಆಫ್ ವೇಳೆ ಆಂಬ್ಯುಲೆನ್ಸ್ ಹೆಲಿಕಾಪ್ಟರ್ ಪತನ; ನಾಲ್ವರು ಮೃ*ತ್ಯು
87th Kannada Sahitya Sammelana: ದೃಶ್ಯರಂಗ ತಂಡದವರಿಂದ ಸಿನಿಮಾಗಾಗಿ “ನಿಧಿ ’ ಮಾರಾಟ!
Mangaluru: ಕ್ರಿಸ್ಮಸ್ ಸಂಭ್ರಮ; ‘ಮಿನುಗು ತಾರೆ’ಗಳ ಮೆರುಗು
Health: ಶೀಘ್ರ ಕ್ಯಾನ್ಸರ್ ಪತ್ತೆ, ಶಸ್ತ್ರಚಿಕಿತ್ಸೆ ತಿಳಿವಳಿಕೆ ಯಾಕೆ ಮುಖ್ಯ?
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.