ಸವಣೂರು: ಹೋಬಳಿ ಕೇಂದ್ರ ಘೋಷಣೆ ಮಾಡಿ ಇನ್ನಾದರೂ

Team Udayavani, Nov 23, 2017, 4:10 PM IST

22-Nov-13.jpg

ಸವಣೂರು: ವೇಗವಾಗಿ ಬೆಳೆಯುತ್ತಿರುವ ಪುತ್ತೂರು ತಾಲೂಕಿನ ಸವಣೂರನ್ನು ಹೋಬಳಿ ಕೇಂದ್ರವನ್ನಾಗಿ ಮಾಡಬೇಕೆಂಬ ಕೂಗು ಸಾರ್ವಜನಿಕ ವಲಯದಿಂದ ಕೇಳಿ ಬರುತ್ತಿದೆ. ಇದು ಪುತ್ತೂರು ತಾಲೂಕು ವ್ಯಾಪ್ತಿಯಲ್ಲಿದೆ. ಆದರೆ, ವಿಧಾನಸಭೆ ಕ್ಷೇತ್ರ ಸುಳ್ಯ, ಕಂದಾಯ ಹೋಬಳಿ ಕಡಬ, ಪೊಲೀಸ್‌ ಠಾಣೆ ಬೆಳ್ಳಾರೆ – ಹೀಗೆ ಸವಣೂರಿಗೆ ವಿವಿಧ ರೀತಿಯ ಸಂಪರ್ಕಗಳಿರುವುದು ವಿಶೇಷ.

ಸುಮಾರು ಮೂರು ದಶಕಗಳಿಂದ ಶ್ರವಣರ ಊರು ಸವಣೂರು ಎಂಬ ಪುಟ್ಟ ಹಳ್ಳಿ ಅನೇಕ ಕಾರಣಗಳಿಂದ ವೇಗವಾಗಿ ಬೆಳೆಯುತ್ತಿದೆ. ಶಿಕ್ಷಣ ಸಂಸ್ಥೆಗಳು, ಕಂದಾಯ ಕಚೇರಿ, ವಸತಿ ಸಮುಚ್ಚಯ, ಗ್ರಾ.ಪಂ., ಪೆಟ್ರೋಲ್‌ ಪಂಪ್‌, ವಾಣಿಜ್ಯ ಸಂಕೀರ್ಣ, ರಾಷ್ಟ್ರೀಕೃತ ಬ್ಯಾಂಕ್‌, ಸಹಕಾರ ಸಂಘಗಳು, ಸಭಾಭವನ ಮೊದಲಾದ ಆವಶ್ಯಕತೆಗಳು ಬೆಳವಣಿಗೆಗೆ ಪೂರಕವಾಗಿ ಇಲ್ಲಿವೆ.

ಸವಣೂರು ಹೋಬಳಿ ಕೇಂದ್ರವಾದರೆ ಬೆಳಂದೂರು, ಸವಣೂರು, ಕಾಣಿಯೂರು ಗ್ರಾ.ಪಂ. ವ್ಯಾಪ್ತಿಯ ಗ್ರಾಮಗಳಾದ ಬೆಳಂದೂರು, ಕುದ್ಮಾರು, ಕಾçಮಣ, ಪಾಲ್ತಾಡಿ, ಸವಣೂರು, ಪುಣcಪ್ಪಾಡಿ, ಕಾಣಿಯೂರು, ಚಾರ್ವಾಕ, ದೋಳ್ಪಾಡಿಯ ಸಾರ್ವಜನಿಕರಿಗೂ ಅನುಕೂಲವಾಗಲಿದೆ. ಸವಣೂರಿನಲ್ಲಿ ಹೋಬಳಿ ಕೇಂದ್ರವಾದರೆ ಇದಕ್ಕೆ ಹೊಂದಿಕೊಂಡ 9 ಗ್ರಾಮಗಳಿಗೆ ಮತ್ತು ಇತರ 4 ಗ್ರಾಮಗಳಿಗೆ ಪರೋಕ್ಷವಾಗಿ ಕೇಂದ್ರವಾಗುತ್ತದೆ.

ಕಡಬ ದೂರ
ಪ್ರಸ್ತುತ ಈ ಭಾಗದ ಗ್ರಾಮದ ಜನರಿಗೆ ಕಂದಾಯ ಹೋಬಳಿ ಕಡಬ. ಇಲ್ಲಿಗೆ ಸಂಪರ್ಕ ಬಹಳ ತ್ರಾಸದಾಯಕ. ಕಂದಾಯ ಇಲಾಖೆಯ ಕೆಲಸಗಳು ತುಸು ನಿಧಾನ ಗತಿಯಲ್ಲೇ ನಡೆಯುತ್ತಿರುವುದರಿಂದ ಒಂದೇ ಕೆಲಸಕ್ಕೆ ಹಲವು ಬಾರಿ ತೆರಳಬೇಕಾದ ಅನಿವಾರ್ಯ. ಕಡಬಕ್ಕೆ ಸವಣೂರು, ಕಾಣಿಯೂರಿನಿಂದ ನೇರವಾಗಿ ಯಾವುದೇ ಬಸ್‌ ಸಂಪರ್ಕವಿಲ್ಲ. ಪಂಜಕ್ಕೆ ತೆರಳಿ ಅಲ್ಲಿಂದ ಬೇರೆ ಬಸ್‌ ಹಿಡಿದು ಹೋಗಬೇಕಾದ ಪರಿಸ್ಥಿತಿ. ಹಾಗಾಗಿ ಸವಣೂರಿನಲ್ಲಿ ಕಂದಾಯ ಹೋಬಳಿ ಕೇಂದ್ರ ತೆರೆ ಯುವುದು ಆವಶ್ಯಕ. ಸಂಬಂಧಿಸಿದವರು ಈ ಕುರಿತು ಗಮನ ಹರಿಸುವುದು ಅಗತ್ಯವಾಗಿದೆ.

ಪಹಣಿ ಪತ್ರ ಸಿಗುತ್ತಿಲ್ಲ
ಸಾರ್ವಜನಿಕರಿಗೆ ಎಲ್ಲ ಸೇವೆಗಳನ್ನು ಒಂದೇ ಕಡೆ ನೀಡಬೇಕೆಂಬ ಸರಕಾರದ ಉದ್ದೇಶದಿಂದ ಪಹಣಿ ಪತ್ರ, ಸಂದ್ಯಾ ಸುರಕ್ಷಾ, ಸರಕಾರದ ವಿವಿಧ ಪಿಂಚಣಿ ಯೋಜನೆಗಳಿಗೆ ಗ್ರಾ.ಪಂ.ಗಳಲ್ಲಿ ಬಾಪೂಜಿ ಸೇವಾ ಕೇಂದ್ರವನ್ನು ಆರಂಭಿಸುವಂತೆ ಸೂಚಿಸಲಾಗಿತ್ತು. ಆದರೆ ಗ್ರಾ.ಪಂ.ನಲ್ಲಿ ಪಹಣಿ ಪತ್ರವೇ ಸಿಗುತ್ತಿಲ್ಲ. ಪಹಣಿ ಪತ್ರದ ಕಾಗದ ಆವಶ್ಯಕತೆಗೆ ತಕ್ಕಂತೆ ಪೂರೈಕೆಯಾಗುತ್ತಿಲ್ಲ. ಇದರಿಂದ ಸಾರ್ವಜನಿರಿಗೆ ಪ್ರಯೋಜನವಾಗಿಲ್ಲ.

ಸೇರ್ಪಡೆಗೆ ವಿರೋಧ
ಸರಕಾರ ಘೋಷಣೆ ಮಾಡಿರುವ ಹೊಸ ತಾಲೂಕು ಕಡಬಕ್ಕೆ ಈ ಭಾಗದ ಬೆಳಂದೂರು, ಸವಣೂರು, ಕಾಣಿಯೂರು ಗ್ರಾ.ಪಂ. ವ್ಯಾಪ್ತಿಯ ಗ್ರಾಮಗಳಾದ ಬೆಳಂದೂರು, ಕುದ್ಮಾರು, ಕಾçಮಣ, ಪಾಲ್ತಾಡಿ, ಸವಣೂರು, ಪುಣcಪ್ಪಾಡಿ, ಕಾಣಿಯೂರು, ಚಾರ್ವಾಕ, ದೋಳ್ಪಾಡಿಯ ಸೇರ್ಪಡೆ ವಿಚಾರ ಜನರಲ್ಲಿ ಆತಂಕಕ್ಕೆಡೆ ಮಾಡಿದೆ. ಈಗಿರುವಂತೆಯೇ ಈ ಮೂರು ಗ್ರಾ.ಪಂ. ವ್ಯಾಪ್ತಿಯ ಗ್ರಾಮಗಳನ್ನು ಪುತ್ತೂರು ತಾಲೂಕಿನಲ್ಲಿಯೇ ಉಳಿಸಿ, ಸವಣೂರನ್ನು ಹೋಬಳಿ ಕೇಂದ್ರವನ್ನಾಗಿ ಮಾಡ ಬೇಕೆಂಬುದು ಜನರ ಆಶಯ. ಹೋಬಳಿ ಕೇಂದ್ರ ರಚನೆಗೆ ಆವಶ್ಯವಿರುವ ನಿವೇಶನವನ್ನು ನೀಡಲು ಸವಣೂರು ಗ್ರಾ. ಪಂ.ನ ಈ ಹಿಂದಿನ ಆಡಳಿತ ಮಂಡಳಿಯಲ್ಲಿ ನಿರ್ಣಯಿಸಲಾಗಿತ್ತು.

ಸವಣೂರಿನ ವಿಶೇಷತೆ
ತಾಲೂಕು- ಪುತ್ತೂರು, ವಿಧಾನಸಭೆ ಕ್ಷೇತ್ರ- ಸುಳ್ಯ, ಕಂದಾಯ ಹೋಬಳಿ- ಕಡಬ, ಪೊಲೀಸ್‌ ಠಾಣೆ- ಬೆಳ್ಳಾರೆ.

ಪ್ರಸ್ತಾವನೆ ಇಲ್ಲ
ಸವಣೂರು, ಬೆಳಂದೂರು, ಕಾಣಿಯೂರು ಗ್ರಾ.ಪಂ. ವ್ಯಾಪ್ತಿಯ ಗ್ರಾಮಗಳು ಪ್ರಸ್ತಾವಿತ ಕಡಬ ತಾಲೂಕಿಗೆ ಸೇರ್ಪಡೆಯಾಗಿದ್ದು, ಕಡಬ ಹೋಬಳಿ ಕೇಂದ್ರಕ್ಕೊಳಪಟ್ಟ ಎಲ್ಲ ಗ್ರಾಮಗಳು ಪ್ರಸ್ತಾವಿತ ಕಡಬ ತಾಲೂಕಿನಲ್ಲೇ ಇದೆ. ಹೊಸ ಹೋಬಳಿ ರಚನೆ ಕುರಿತಂತೆ ಯಾವುದೇ ಪ್ರಸ್ತಾವನೆ ಇಲ್ಲ.
ಜಾನ್‌ ಪ್ರಕಾಶ್‌ ರೋಡ್ರಿಗಸ್‌
   ವಿಶೇಷ ತಹಶೀಲ್ದಾರರು, ಕಡಬ

 ಪ್ರವೀಣ್‌ ಚೆನ್ನಾವರ

ಟಾಪ್ ನ್ಯೂಸ್

Mangaluru: Bangladeshi national arrested for illegally residing in the city

Mangaluru: ಅಕ್ರಮವಾಗಿ ನೆಲೆಸಿದ್ದ ಬಾಂಗ್ಲಾ ಪ್ರಜೆಯ ಬಂಧನ

Real estate businessman shot while traveling in car

Belagavi: ಕಾರಿನಲ್ಲಿ ಹೋಗುತ್ತಿದ್ದ ರಿಯಲ್‌ ಎಸ್ಟೇಟ್‌ ಉದ್ಯಮಿ ಮೇಲೆ ಗುಂಡಿನ ದಾಳಿ

Sandalwood: ಹೊಸ ವರ್ಷ ಹಳೇ ಸಮಸ್ಯೆ… ಮತ್ತೆ ಥಿಯೇಟರ್‌ ರಗಳೆ

Sandalwood: ಹೊಸ ವರ್ಷ ಹಳೇ ಸಮಸ್ಯೆ… ಮತ್ತೆ ಥಿಯೇಟರ್‌ ರಗಳೆ

3-dog

German Shepherd: ಕೋಳಿ ತಿಂದಿದ್ದಕ್ಕೆ ಜರ್ಮನ್‌ ಶೆಫ‌ರ್ಡ್‌ ನಾಯಿ ಕೊಂದ!

Elephant: ಬೆಳಗಾವಿಯ ಖಾನಾಪುರದಲ್ಲಿ ಸೆರೆ ಹಿಡಿದ ಗಂಡಾನೆ ಸಕ್ರೆಬೈಲು ಆನೆ ಬಿಡಾರಕ್ಕೆ

Elephant: ಬೆಳಗಾವಿಯ ಖಾನಾಪುರದಲ್ಲಿ ಸೆರೆ ಹಿಡಿದ ಗಂಡಾನೆ ಸಕ್ರೆಬೈಲು ಆನೆ ಬಿಡಾರಕ್ಕೆ

Helmet: ಹೀಗೂ ಉಂಟೇ…! ಹೆಲ್ಮೆಟ್ ಧರಿಸಿಲ್ಲ ಎಂದು ಪಾದಚಾರಿಗೆ ದಂಡ ವಿಧಿಸಿದ ಪೊಲೀಸ್

Man Fined: ಹೀಗೂ ಉಂಟೇ…! ಹೆಲ್ಮೆಟ್ ಧರಿಸಿಲ್ಲ ಎಂದು ಪಾದಚಾರಿಗೆ ದಂಡ ವಿಧಿಸಿದ ಪೊಲೀಸ್

ಮುಧೋಳ: ಮದುವೆಯಾದ ಒಂದೇ ತಿಂಗಳಲ್ಲಿ ಪತ್ನಿ ಪರಾರಿ… ಮದುವೆ ಮಾಡಿಸಿದ ಬ್ರೋಕರ್ ಗಳೂ ನಾಪತ್ತೆ

ಮುಧೋಳ: ಮದುವೆಯಾದ ಒಂದೇ ತಿಂಗಳಲ್ಲಿ ಪತ್ನಿ ಪರಾರಿ… ಮದುವೆ ಮಾಡಿಸಿದ ಬ್ರೋಕರ್ ಗಳೂ ನಾಪತ್ತೆ

ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು

Bantwal: ಕಾಂಟ್ರಾಕ್ಟ್ ಕ್ಯಾರೇಜ್‌ ಬಸ್‌ ಪ್ರಯಾಣ ದರ ಏರಿಕೆ

Bantwal: ಕಾಂಟ್ರಾಕ್ಟ್ ಕ್ಯಾರೇಜ್‌ ಬಸ್‌ ಪ್ರಯಾಣ ದರ ಏರಿಕೆ

Vitla ಬೋಳಂತೂರು ಮನೆ ದರೋಡೆ ಪ್ರಕರಣ: ತನಿಖೆ ಚುರುಕು

Vitla ಬೋಳಂತೂರು ಮನೆ ದರೋಡೆ ಪ್ರಕರಣ: ತನಿಖೆ ಚುರುಕು

Narimogru: ಕಾಲೇಜು ವಿದ್ಯಾರ್ಥಿನಿ ಆತ್ಮಹ*ತ್ಯೆ

Narimogru: ಕಾಲೇಜು ವಿದ್ಯಾರ್ಥಿನಿ ಆತ್ಮಹ*ತ್ಯೆ

Uppinangady: ಚಿನ್ನಾಭರಣ ಕಳವು ಪ್ರಕರಣ: ಆರೋಪಿ ಮಹಿಳೆ ಸೆರೆ

Uppinangady: ಚಿನ್ನಾಭರಣ ಕಳವು ಪ್ರಕರಣ: ಆರೋಪಿ ಮಹಿಳೆ ಸೆರೆ

Sullia: Airavata bus stopped

Sullia: ಕೆಟ್ಟು ನಿಂತ ಐರಾವತ ಬಸ್‌

MUST WATCH

udayavani youtube

ಕೇರಳದ ಉತ್ಸವದ ಆನೆ ರೌದ್ರಾವತಾರ: ಹಲವರಿಗೆ ಗಾಯ | ವಿಡಿಯೋ ಸೆರೆ

udayavani youtube

ಫೋನ್ ಪೇ ಹೆಸರಿನಲ್ಲಿ ಹೇಗೆಲ್ಲಾ ಮೋಸ ಮಾಡುತ್ತಾರೆ ನೋಡಿ !

udayavani youtube

ನಿಮ್ಮ ತೋಟಕ್ಕೆ ಬೇಕಾದ ಗೊಬ್ಬರವನ್ನು ನೀವೇ ತಯಾರಿಸಬೇಕೆ ? ಇಲ್ಲಿದೆ ಸರಳ ಉಪಾಯ

udayavani youtube

ಮೈಲಾರಲಿಂಗ ಸ್ವಾಮಿ ಹೆಸರಿನಲ್ಲಿ ಒಂಟಿ ಮನೆಗಳೇ ಇವರ ಟಾರ್ಗೆಟ್ |

udayavani youtube

ದೈವ ನರ್ತಕರಂತೆ ಗುಳಿಗ ದೈವದ ವೇಷ ಭೂಷಣ ಧರಿಸಿ ಕೋಲ ಕಟ್ಟಿದ್ದ ಅನ್ಯ ಸಮಾಜದ ಯುವಕ

ಹೊಸ ಸೇರ್ಪಡೆ

4-bng

Bengaluru: ಮಲಗಿದ ನಾಯಿ ಮೇಲೆ ಕಾರು ಹತ್ತಿಸಿದ ಚಾಲಕ!

Mangaluru: Bangladeshi national arrested for illegally residing in the city

Mangaluru: ಅಕ್ರಮವಾಗಿ ನೆಲೆಸಿದ್ದ ಬಾಂಗ್ಲಾ ಪ್ರಜೆಯ ಬಂಧನ

Real estate businessman shot while traveling in car

Belagavi: ಕಾರಿನಲ್ಲಿ ಹೋಗುತ್ತಿದ್ದ ರಿಯಲ್‌ ಎಸ್ಟೇಟ್‌ ಉದ್ಯಮಿ ಮೇಲೆ ಗುಂಡಿನ ದಾಳಿ

Sandalwood: ಹೊಸ ವರ್ಷ ಹಳೇ ಸಮಸ್ಯೆ… ಮತ್ತೆ ಥಿಯೇಟರ್‌ ರಗಳೆ

Sandalwood: ಹೊಸ ವರ್ಷ ಹಳೇ ಸಮಸ್ಯೆ… ಮತ್ತೆ ಥಿಯೇಟರ್‌ ರಗಳೆ

3-dog

German Shepherd: ಕೋಳಿ ತಿಂದಿದ್ದಕ್ಕೆ ಜರ್ಮನ್‌ ಶೆಫ‌ರ್ಡ್‌ ನಾಯಿ ಕೊಂದ!

Thanks for visiting Udayavani

You seem to have an Ad Blocker on.
To continue reading, please turn it off or whitelist Udayavani.