102 ವರ್ಷಗಳಲ್ಲಿ ಸಾವಿರಾರು ವಿದ್ಯಾರ್ಥಿಗಳ ಬದುಕು ಬೆಳಗಿಸಿದ ಸವಣೂರು ಶಾಲೆ
ಅಜಲಾಡಿಬೀಡು ಕರಿಯಪ್ಪ ಬಂಟಮುಗೇರುಗುತ್ತು ಮುಂದಾಳತ್ವದಲ್ಲಿ ತೆರೆದ ಶಾಲೆ
Team Udayavani, Nov 5, 2019, 5:26 AM IST
19ನೆಯ ಶತಮಾನದ ಉತ್ತರಾರ್ಧದಲ್ಲಿ ಬ್ರಿಟಿಷ್ ಆಡಳಿತದಡಿ, ಊರ ಹಿರಿಯರ ಮುತುವರ್ಜಿಯಲ್ಲಿ ಸ್ಥಾಪನೆಗೊಂಡು ಈಗಲೂ ವಿದ್ಯೆಯ ಬೆಳಕನ್ನು ಪಸರಿಸುತ್ತಿರುವ ಹಲವು ಸರಕಾರಿ ಶಾಲೆಗಳು ಅವಿಭಜಿತ ದಕ್ಷಿಣ ಕನ್ನಡ ಜಿಲ್ಲೆಯಲ್ಲಿವೆ. ಈಗಿನ ಆಂಗ್ಲ ಮಾಧ್ಯಮ ಶಿಕ್ಷಣದ ಆಕರ್ಷಣೆಯ ನಡುವೆ ಈ ಶಾಲೆಗಳು ಸುತ್ತಮುತ್ತಲಿನ ಊರುಗಳಿಗೆ ಅಕ್ಷರಶಃ ಜ್ಞಾನ ದೇಗುಲಗಳೇ ಆಗಿವೆ. ಕರ್ನಾಟಕ ರಾಜ್ಯೋತ್ಸವ ಸಂದರ್ಭದಲ್ಲಿ ಇಂತಹ ಶತಮಾನದ ಹಿರಿಮೆಯ ಕನ್ನಡ ಮಾಧ್ಯಮ ಸರಕಾರಿ ಶಾಲೆಗಳನ್ನು ಗುರುತಿಸಿ ಪರಿಚಯಿಸುವ ಪ್ರಯತ್ನ ನಮ್ಮದು.
1917 ಶಾಲೆ ಆರಂಭ
220 ಮಕ್ಕಳ ಕಲಿಕೆ
ಸವಣೂರು: ಶ್ರವಣರ ಊರು ಸವಣೂರಿನ ಸರಕಾರಿ ಹಿರಿಯ ಪ್ರಾಥಮಿಕ ಶಾಲೆಗೆ 102ರ ಸಂಭ್ರಮ. ಶಿಕ್ಷಣ ಸಂಸ್ಥೆಗಳಿಂದ ಶಿಕ್ಷಣದೂರು ಆಗಿದೆ. ಸವಣೂರಿನ ಈ ಶಾಲೆಯಲ್ಲಿ ನೂರು ವರ್ಷಗಳಲ್ಲಿ ವಿದ್ಯೆ ಕಲಿತವರು ವಿವಿಧೆಡೆ ಉನ್ನತ ಉದ್ಯೋಗ ಪಡೆದುಕೊಂಡಿದ್ದಾರೆ. ಸಾಮಾಜಿಕ, ಧಾರ್ಮಿಕ, ರಾಜಕೀಯವಾಗಿ ಬೆಳೆದು ಬಂದಿದ್ದಾರೆ. ಕಿರಿಯ ಪ್ರಾಥಮಿಕ ಶಾಲೆಯಾಗಿ ಆರಂಭಗೊಂಡ ಈ ಶಿಕ್ಷಣ ಸಂಸ್ಥೆ ಈಗ ಸರಕಾರಿ ಉನ್ನತೀಕರಿಸಿದ ಹಿರಿಯ ಪ್ರಾಥಮಿಕ ಶಾಲೆಯಾಗಿ ಮೇಲ್ದರ್ಜೆಗೇರಿದೆ.1917ರ ಡಿ. 15ರಂದು ಚಾಪಲ್ಲ ಎನ್ನುವಲ್ಲಿ ಕಿರಿಯ ಪ್ರಾಥಮಿಕ ಶಾಲೆಯಾಗಿ ಆರಂಭಗೊಳ್ಳುವ ಮೂಲಕ ಜ್ಞಾನಮಂದಿರವೊಂದು ರೂಪುಗೊಂಡಿತು. ಅಜಲಾಡಿಬೀಡು ಕರಿಯಪ್ಪ ಬಂಟಮುಗೇರುಗುತ್ತು ಅವರ ಮುಖಂಡತ್ವದಲ್ಲಿ ಊರಿನವರು ಸೇರಿ ಶಾಲೆಗೊಂದು ಸೂರು ಮಾಡಿದರೆಂದು ಹೇಳಲಾಗಿದೆ.1963ರ ವರೆಗೂ ಕಿರಿಯ ಪ್ರಾಥಮಿಕ ಶಾಲೆಯಾಗಿದ್ದ ಇದು ಜು. 8,1963ರಂದು ಹಿರಿಯ ಪ್ರಾಥಮಿಕ ಶಾಲೆಯಾಗಿ ಮೇಲ್ದರ್ಜೆಗೇರಿ ಜಿಲ್ಲಾ ಬೋರ್ಡ್‌ನ ಉಸ್ತುವಾರಿಯಲ್ಲಿದ್ದ ಈ ಶಾಲೆಯು ಸವಣೂರು ಬಸದಿ ಬಳಿಯ ಕಟ್ಟಡವೊಂದರಲ್ಲಿ 1970ರ ಎ. 15ರ ವರೆಗೆ ನಡೆಯಿತು.
ಪಬ್ಲಿಕ್ ಸ್ಕೂಲ್‌ಗೆ ಬೇಡಿಕೆ
ಅನಂತರ ಸವಣೂರು, ಪುಣcಪ್ಪಾಡಿ ಗ್ರಾಮದ ಶಿಕ್ಷಣಾಸಕ್ತರು ಸೇರಿಕೊಂಡು ತಾಲೂಕು ಅಭಿವೃದ್ಧಿ ಮಂಡಳಿ, ಗ್ರಾ.ಪಂ.ನ ಸಹಕಾರದಲ್ಲಿ ಈಗಿರುವ ಸ್ಥಳದಲ್ಲಿ ಸುಂದರವಾದ ವಿದ್ಯಾದೇಗುಲ ನಿರ್ಮಿಸಿದರು. ಅಂದು 200 ಮಕ್ಕಳನ್ನು ಹೊಂದಿದ್ದ ಈ ಶಿಕ್ಷಣ ಸಂಸ್ಥೆ ಈಗಲೂ ಅದನ್ನು ಉಳಿಸಿಕೊಂಡಿದೆ. ಪ್ರಸ್ತುತ 220 ಮಕ್ಕಳು ಈ ಶಾಲೆಯಲ್ಲಿದ್ದಾರೆ. 1ರಿಂದ 8ನೇ ತರತಿವರೆಗೆ ಇಲ್ಲಿ ಶಿಕ್ಷಣ ನೀಡಲಾಗುತ್ತಿದೆ. ಇದನ್ನು ಕರ್ನಾಟಕ ಪಬ್ಲಿಕ್ ಸ್ಕೂಲ್ ಆಗಿ ಮಾಡಬೇಕೆನ್ನುವ ಬೇಡಿಕೆಯೂ ಇದೆ.
ಸೇವೆ ಸಲ್ಲಿಸಿದ ಗುರುಗಳು
ದೂಮಣ್ಣ ಶೆಟ್ಟಿ, ಅಣ್ಣಿ ರೈ, ಕೆ.ಜಿ. ಪೂಜಾರಿ, ಜನಾರ್ದನಯ್ಯ, ಬಾಲಕೃಷ್ಣ ರೈ ದೇವಸ್ಯ, ಕುಶಾಲಪ್ಪ ಗೌಡ, ಉಷಾ, ಮುದರ ಕಲ್ಕಾಡಿ, ಗಂಗಾಧರ ಸಂಪ್ಯ, ಟಿ.ಜೆ. ಕುಮಾರ್ ಅವರು ಸವಣೂರು ಶಾಲೆಯಲ್ಲಿ ಶಿಕ್ಷಕರಾಗಿ ಸೇವೆ ಸಲ್ಲಿಸಿದ್ದರು. ಸಾವಿರಾರು ಶಿಷ್ಯರ ಮೂಲಕ ಅವರ ಆದರ್ಶಗಳು ಇಂದಿಗೂ ಬದುಕಿವೆ.
ಅನಂತಾಡಿ ಮುತ್ತಣ್ಣ ರೈ, ಟಿ.ಎಸ್. ಆಚಾರ್, ರಾಮ ಭಟ್ ಕುಕ್ಕುಜೆ, ಐತ್ತಪ್ಪ ನಾಯ್ಕ, ಟಿ. ವಿಜಯಲಕ್ಷ್ಮೀ, ಶಂಕರನಾರಾಯಣ ಭಟ್, ಪುಷ್ಪಾವತಿ ಬಿ., ಹರಿನಾರಾಯಣ ಎಂ., ಕುಶಾಲಪ್ಪ ಗೌಡ ಟಿ., ಸರೋಜಾ ಪಿ.ಕೆ., ಸೀತಾರಾಮ ಕೆ.ಜಿ., ಆನಂದ ಬೆದ್ರಂಪಾಡಿ, ಪಿ.ಡಿ. ಗಂಗಾಧರ ರೈ, ಪಾರ್ವತಿ, ಅಶ್ವಿತಾ, ಭವ್ಯಾ, ದಯಾಮಣಿ, ಪ್ರಶಾಂತ್, ಶಾರದಾ ಎಂ., ಭವ್ಯಾ ಕೆ., ಗೀತಾ ಕುಮಾರಿ, ಮೊಂತಿಮೇರಿ ರೋಡ್ರಿಗಸ್, ಸರೋಜಾ ಕೆ., ನಾಗೇಶ್ ಇರುವೈಲು, ಗುಡ್ಡಪ್ಪ ಪೂಜಾರಿ, ವಿಷ್ಣು ಭಟ್, ಶಾರದಾ ಕೊಡವೂರು, ಸಂಜೀವ ಶೆಟ್ಟಿ, ಲಕ್ಷ್ಮೀ ಪುಳಿಕುಕ್ಕು, ರಾಮಚಂದ್ರ ಭಟ್, ವಿನಯವತಿ, ಸುಧಾ, ಲಕ್ಷ್ಮೀ ನಾರಾಯಣ, ಕುಮಾರ್ ಕಬಕ, ಪ್ರಭಾ, ಸವಿತಾ, ವನಜಾ, ಸ್ವರ್ಣಲತಾ, ಸಂತೋಷ ಕುಮಾರಿ, ವಿಜಯ ನಾಯ್ಕ, ಮೋಹನ ಭಟ್, ಉಷಾ, ನಿವೇದಿತಾ, ಯಾದವಿ, ಜ್ಯೋತಿ, ಮೋಕ್ಷಾ, ಕುಸುಮಾ, ವಸಂತಿ ಕೆ., ದೇವಮ್ಮ ಸಹಿತ ಹಲವರು ಈ ಶಾಲೆಯಲ್ಲಿ ಸೇವೆ ಸಲ್ಲಿಸಿದ್ದಾರೆ.
ಪ್ರಸ್ತುತ ಮುಖ್ಯ ಗುರುಗಳಾಗಿ ಹರಿಶಂಕರ ಭಟ್, ದೈಹಿಕ ಶಿಕ್ಷಣ ಶಿಕ್ಷಕ ಬಾಲಕೃಷ್ಣ ಕೆ., ಶಿಕ್ಷಕರಾಗಿ ಕುಶಾಲಪ್ಪ ಬರೆಮೇಲು, ತುಳಸಿ ಎಚ್., ಆಶಾಲತಾ, ಛತ್ರ ಕುಮಾರ್, ಆಶಾ, ಮೇಬಲ್ ರೋಡ್ರಿಗಸ್, ಅತಿಥಿ ಶಿಕ್ಷಕಿಯಾಗಿ ಸರಿತಾ ಕೆ. ಕರ್ತವ್ಯ ನಿರ್ವಹಿಸುತ್ತಿದ್ದಾರೆ.
ಮುಳಿಹುಲ್ಲಿನಿಂದ ತಾರಸಿಯತ್ತ
ಅಂದು ಮುಳಿಹುಲ್ಲಿನ ಛಾವಣಿಯಾಗಿದ್ದ ಶಾಲೆ ಈಗ ತಾರಸಿ ಕಂಡಿದೆ. ಈ ಶಾಲೆಯ ಶತಮಾನೋತ್ಸವವನ್ನು ಅವಿಸ್ಮರಣೀಯವಾಗಿರಿಸುವ ನಿಟ್ಟಿನಲ್ಲಿ 2017ರಲ್ಲಿ ಸುಮಾರು 23 ಲಕ್ಷ ರೂ. ವೆಚ್ಚದಲ್ಲಿ ಗ್ಯಾಲರಿ ನಿರ್ಮಿಸಲಾಗಿದೆ. 25 ಲಕ್ಷ ರೂ. ವೆಚ್ಚದಲ್ಲಿ ನೂತನ ಕೊಠಡಿಗಳನ್ನು ನಿರ್ಮಿಸಲಾಗಿದೆ.
ಈ ಶಾಲಾ ಆರಂಭಕ್ಕೆ ಮುನ್ನ ಸ್ಥಳೀಯವಾಗಿ ಯಾವುದೇ ಶಾಲೆಗಳಿರಲಿಲ್ಲ. ಈ ಶಾಲೆಗೆ ಸರ್ವೆ, ಸವಣೂರು, ಬೆಳಂದೂರು, ಕುದ್ಮಾರು, ಪುಣcಪ್ಪಾಡಿ, ಪಾಲ್ತಾಡಿ, ಕಾಯ್ಮಣ, ಕಾಣಿಯೂರು ಮುಂತಾದ ಭಾಗಗಳಿಂದ ವಿದ್ಯಾರ್ಥಿಗಳು ಬರುತ್ತಿದ್ದರು. ಈಗ ಎಲ್ಲ ಗ್ರಾಮಗಳಲ್ಲೂ ಶಾಲೆಗಳಾಗಿವೆ. ಪಕ್ಕದ ಪುಣಪ್ಪಾಡಿ ಪ್ರಾಥಮಿಕ ಶಾಲೆ 92 ವರ್ಷಗಳನ್ನು ಕಂಡಿದೆ.
ಪಬ್ಲಿಕ್ ಸ್ಕೂಲ್‌ಗೆ ಬೇಡಿಕೆ
ಅನಂತರ ಸವಣೂರು, ಪುಣcಪ್ಪಾಡಿ ಗ್ರಾಮದ ಶಿಕ್ಷಣಾಸಕ್ತರು ಸೇರಿಕೊಂಡು ತಾಲೂಕು ಅಭಿವೃದ್ಧಿ ಮಂಡಳಿ, ಗ್ರಾ.ಪಂ.ನ ಸಹಕಾರದಲ್ಲಿ ಈಗಿರುವ ಸ್ಥಳದಲ್ಲಿ ಸುಂದರವಾದ ವಿದ್ಯಾದೇಗುಲ ನಿರ್ಮಿಸಿದರು. ಅಂದು 200 ಮಕ್ಕಳನ್ನು ಹೊಂದಿದ್ದ ಈ ಶಿಕ್ಷಣ ಸಂಸ್ಥೆ ಈಗಲೂ ಅದನ್ನು ಉಳಿಸಿಕೊಂಡಿದೆ. ಪ್ರಸ್ತುತ 220 ಮಕ್ಕಳು ಈ ಶಾಲೆಯಲ್ಲಿದ್ದಾರೆ. 1ರಿಂದ 8ನೇ ತರತಿವರೆಗೆ ಇಲ್ಲಿ ಶಿಕ್ಷಣ ನೀಡಲಾಗುತ್ತಿದೆ. ಇದನ್ನು ಕರ್ನಾಟಕ ಪಬ್ಲಿಕ್ ಸ್ಕೂಲ್ ಆಗಿ ಮಾಡಬೇಕೆನ್ನುವ ಬೇಡಿಕೆಯೂ ಇದೆ.
ಸೇವೆ ಸಲ್ಲಿಸಿದ ಗುರುಗಳು
ದೂಮಣ್ಣ ಶೆಟ್ಟಿ, ಅಣ್ಣಿ ರೈ, ಕೆ.ಜಿ. ಪೂಜಾರಿ, ಜನಾರ್ದನಯ್ಯ, ಬಾಲಕೃಷ್ಣ ರೈ ದೇವಸ್ಯ, ಕುಶಾಲಪ್ಪ ಗೌಡ, ಉಷಾ, ಮುದರ ಕಲ್ಕಾಡಿ, ಗಂಗಾಧರ ಸಂಪ್ಯ, ಟಿ.ಜೆ. ಕುಮಾರ್ ಅವರು ಸವಣೂರು ಶಾಲೆಯಲ್ಲಿ ಶಿಕ್ಷಕರಾಗಿ ಸೇವೆ ಸಲ್ಲಿಸಿದ್ದರು. ಸಾವಿರಾರು ಶಿಷ್ಯರ ಮೂಲಕ ಅವರ ಆದರ್ಶಗಳು ಇಂದಿಗೂ ಬದುಕಿವೆ.
ಅನಂತಾಡಿ ಮುತ್ತಣ್ಣ ರೈ, ಟಿ.ಎಸ್. ಆಚಾರ್, ರಾಮ ಭಟ್ ಕುಕ್ಕುಜೆ, ಐತ್ತಪ್ಪ ನಾಯ್ಕ, ಟಿ. ವಿಜಯಲಕ್ಷ್ಮೀ, ಶಂಕರನಾರಾಯಣ ಭಟ್, ಪುಷ್ಪಾವತಿ ಬಿ., ಹರಿನಾರಾಯಣ ಎಂ., ಕುಶಾಲಪ್ಪ ಗೌಡ ಟಿ., ಸರೋಜಾ ಪಿ.ಕೆ., ಸೀತಾರಾಮ ಕೆ.ಜಿ., ಆನಂದ ಬೆದ್ರಂಪಾಡಿ, ಪಿ.ಡಿ. ಗಂಗಾಧರ ರೈ, ಪಾರ್ವತಿ, ಅಶ್ವಿತಾ, ಭವ್ಯಾ, ದಯಾಮಣಿ, ಪ್ರಶಾಂತ್, ಶಾರದಾ ಎಂ., ಭವ್ಯಾ ಕೆ., ಗೀತಾ ಕುಮಾರಿ, ಮೊಂತಿಮೇರಿ ರೋಡ್ರಿಗಸ್, ಸರೋಜಾ ಕೆ., ನಾಗೇಶ್ ಇರುವೈಲು, ಗುಡ್ಡಪ್ಪ ಪೂಜಾರಿ, ವಿಷ್ಣು ಭಟ್, ಶಾರದಾ ಕೊಡವೂರು, ಸಂಜೀವ ಶೆಟ್ಟಿ, ಲಕ್ಷ್ಮೀ ಪುಳಿಕುಕ್ಕು, ರಾಮಚಂದ್ರ ಭಟ್, ವಿನಯವತಿ, ಸುಧಾ, ಲಕ್ಷ್ಮೀ ನಾರಾಯಣ, ಕುಮಾರ್ ಕಬಕ, ಪ್ರಭಾ, ಸವಿತಾ, ವನಜಾ, ಸ್ವರ್ಣಲತಾ, ಸಂತೋಷ ಕುಮಾರಿ, ವಿಜಯ ನಾಯ್ಕ, ಮೋಹನ ಭಟ್, ಉಷಾ, ನಿವೇದಿತಾ, ಯಾದವಿ, ಜ್ಯೋತಿ, ಮೋಕ್ಷಾ, ಕುಸುಮಾ, ವಸಂತಿ ಕೆ., ದೇವಮ್ಮ ಸಹಿತ ಹಲವರು ಈ ಶಾಲೆಯಲ್ಲಿ ಸೇವೆ ಸಲ್ಲಿಸಿದ್ದಾರೆ.
ಪ್ರಸ್ತುತ ಮುಖ್ಯ ಗುರುಗಳಾಗಿ ಹರಿಶಂಕರ ಭಟ್, ದೈಹಿಕ ಶಿಕ್ಷಣ ಶಿಕ್ಷಕ ಬಾಲಕೃಷ್ಣ ಕೆ., ಶಿಕ್ಷಕರಾಗಿ ಕುಶಾಲಪ್ಪ ಬರೆಮೇಲು, ತುಳಸಿ ಎಚ್., ಆಶಾಲತಾ, ಛತ್ರ ಕುಮಾರ್, ಆಶಾ, ಮೇಬಲ್ ರೋಡ್ರಿಗಸ್, ಅತಿಥಿ ಶಿಕ್ಷಕಿಯಾಗಿ ಸರಿತಾ ಕೆ. ಕರ್ತವ್ಯ ನಿರ್ವಹಿಸುತ್ತಿದ್ದಾರೆ.
ಸವಣೂರು ಶಾಲೆಯ ಶತಮಾನೋತ್ಸವ ಸಂಭ್ರಮವನ್ನು 2 ವರ್ಷಗಳ ಹಿಂದೆ ಅದ್ದೂರಿಯಾಗಿ ಆಚರಿಸಲಾಗಿದೆ. ಇಂತಹ ಶಾಲೆಯಲ್ಲಿ ಮುಖ್ಯಗುರುವಾಗಿ ಕರ್ತವ್ಯ ನಿರ್ವಹಣೆ ಮಾಡುತ್ತಿರುವುದು ನನಗೆ ಹೆಮ್ಮೆ ಎನಿಸಿದೆ. ಶಾಲಾಭಿವೃದ್ಧಿಯ ನಿಟ್ಟಿನಲ್ಲಿ ಎಲ್ಲರ ಸಹಕಾರ ಅಭಿನಂದನಾರ್ಹ.
-ಹರಿಶಂಕರ್ ಭಟ್, ಮುಖ್ಯ ಗುರುಗಳು
ಸವಣೂರು ಶಾಲೆಯ ಹಳೆ ವಿದ್ಯಾರ್ಥಿಯಾಗಿದ್ದು, ಅದೇ ಶಾಲೆಯ ಶತಮಾನೋತ್ಸವ ಸಮಿತಿಯ ಅಧ್ಯಕ್ಷನಾಗಿ ಕಾರ್ಯನಿರ್ವಹಣೆಯ ಅವಕಾಶ ಒದಗಿದ್ದು ನನ್ನ ಸುಯೋಗ. ತಾಲೂಕು ಪಂಚಾಯತ್ ಉಪಾಧ್ಯಕ್ಷನಾಗಿ, ಪ್ರಸ್ತುತ ಎಪಿಎಂಸಿ ಅಧ್ಯಕ್ಷನಾಗಿ ಅವಕಾಶ ದೊರಕಿದ್ದು ಸವಣೂರು ಶಾಲೆಯಲ್ಲಿ ಪಡೆದ ಶಿಕ್ಷಣದಿಂದ ಎಂದು ನಂಬಿದ್ದೇನೆ. ಶಿಕ್ಷಣ ಸಂಸ್ಥೆ ದೇವಾಲಯಕ್ಕೆ ಸಮಾನ.
– ದಿನೇಶ್ ಮೆದು, ಅಧ್ಯಕ್ಷರು, ಎಪಿಎಂಸಿ ಪುತ್ತೂರು ಹಾಗೂ ಶಾಲಾ ಶತಮಾನೋತ್ಸವ ಸಮಿತಿ
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
MUST WATCH
ದೈವ ನರ್ತಕರಂತೆ ಗುಳಿಗ ದೈವದ ವೇಷ ಭೂಷಣ ಧರಿಸಿ ಕೋಲ ಕಟ್ಟಿದ್ದ ಅನ್ಯ ಸಮಾಜದ ಯುವಕ
ಹಕ್ಕಿಗಳಿಗಾಗಿ ಕಲಾತ್ಮಕ ವಸ್ತುಗಳನ್ನು ತಯಾರಿಸುತ್ತಿರುವ ಪಕ್ಷಿ ಪ್ರೇಮಿ
ಮಂಗಳೂರಿನ ನಿಟ್ಟೆ ವಿಶ್ವವಿದ್ಯಾನಿಲಯದ ತಜ್ಞರ ಅಧ್ಯಯನದಿಂದ ಬಹಿರಂಗ
ಈ ಹೋಟೆಲ್ ಗೆ ಪೂರಿ, ಬನ್ಸ್, ಕಡುಬು ತಿನ್ನಲು ದೂರದೂರುಗಳಿಂದಲೂ ಜನ ಬರುತ್ತಾರೆ
ಹರೀಶ್ ಪೂಂಜ ಪ್ರಚೋದನಾಕಾರಿ ಹೇಳಿಕೆ ವಿರುದ್ಧ ಪ್ರಾಣಿ ಪ್ರಿಯರ ಆಕ್ರೋಶ
ಹೊಸ ಸೇರ್ಪಡೆ
PAK Vs SA: ಸೆಂಚುರಿಯನ್ ಟೆಸ್ಟ್ ಪಾಕಿಸ್ಥಾನ 211ಕ್ಕೆ ಆಲೌಟ್
Test cricket: ಮ್ಯಾಚ್ ರೆಫರಿಯಾಗಿ ನೂರು ಟೆಸ್ಟ್ ಪೂರ್ತಿಗೊಳಿಸಿದ ಆ್ಯಂಡಿ ಪೈಕ್ರಾಫ್ಟ್
Pro Kabaddi League: ಯುಪಿ ಯೋಧಾಸ್,ಪಾಟ್ನಾ ಪೈರೇಟ್ಸ್ ಸೆಮಿಫೈನಲಿಗೆ
IND Vs AUS ಬಾಕ್ಸಿಂಗ್ ಡೇ ಟೆಸ್ಟ್: ಆಸ್ಟ್ರೇಲಿಯ ರನ್ ಓಟಕ್ಕೆ ಬುಮ್ರಾ ಬ್ರೇಕ್
Padubidri: ಕಾರು ಢಿಕ್ಕಿ; ಪಾದಚಾರಿ ಸಾವು
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.