ಸಾಂಸ್ಕೃತಿಕ ಶ್ರೀಮಂತಿಕೆ ಉಳಿಸಿ ಬೆಳೆಸಿ
Team Udayavani, Jan 13, 2018, 8:42 AM IST
ಮೂಡಬಿದಿರೆ: ಬ್ರಿಟಿಷ್ ಮಾದರಿಯ ಆಡಳಿತ, ಅಭಿವೃದ್ಧಿ ಪರಿ ಕಲ್ಪನೆಯಿಂದ ಹೊರಬಂದು ದೇಶದ ಸಾಂಸ್ಕೃತಿಕ ಅನನ್ಯತೆ ಉಳಿಸಿ ಬೆಳೆಸ ಬೇಕಾಗಿದೆ ಎಂದು ನಾಗಾಲ್ಯಾಂಡ್ ರಾಜ್ಯ ಪಾಲಪಿ.ಬಿ. ಆಚಾರ್ಯ ಹೇಳಿದರು. ಆಳ್ವಾಸ್ ಶಿಕ್ಷಣ ಪ್ರತಿಷ್ಠಾನ ಆಶ್ರಯ ದಲ್ಲಿ ವಿದ್ಯಾಗಿರಿ ಸನಿಹದ ಪುತ್ತಿಗೆ ಗ್ರಾಮ, ವಿವೇಕಾನಂದ ನಗರದ ಶ್ರೀಮತಿ ವನಜಾಕ್ಷಿ ಕೆ. ಶ್ರೀಪತಿ ಭಟ್ ವೇದಿಕೆ ಯಲ್ಲಿ ಶುಕ್ರವಾರ ಸಂಜೆ 24ನೇ ವರ್ಷದ ಆಳ್ವಾಸ್ ವಿರಾಸತ್ -2018 ಉತ್ಸವ ಉದ್ಘಾಟಿಸಿ ಅವರು ಮಾತನಾಡಿದರು.
ಸೃಜನಶೀಲತೆ, ಉದ್ಯಮಶೀಲತೆ, ಸಾಂಸ್ಕೃತಿಕ ಅಭಿರುಚಿಗಳಿಂದ ದೇಶದಲ್ಲೇ ವಿಭಿನ್ನವಾಗಿ ನಿಲ್ಲುವ ಕರಾವಳಿಯವರು ಇಡಿಯ ಭಾರತದ ಉನ್ನತಿಗೆ ಕೊಡುಗೆ ನೀಡಲು ಮುಂದಾಗಬೇಕು ಎಂದು ಕರೆ ನೀಡಿದ ಆಚಾರ್ಯರು ವಿಶೇಷವಾಗಿ, ವಿಪುಲ ಸಂಪನ್ಮೂಲಗಳಿದ್ದೂ ಅಭಿ ವೃದ್ಧಿ ಯಲ್ಲಿ ಹಿಂದೆ ಬಿದ್ದಿರುವ ಈಶಾನ್ಯ ಭಾರತದ 8 ರಾಜ್ಯಗಳಲ್ಲಿ ಶಿಕ್ಷಣ ಸಂಸ್ಥೆ, ಉದ್ಯಮ ಹುಟ್ಟುಹಾಕಲು ನೀವೇಕೆ ಮನಸ್ಸು ಮಾಡಬಾರದು ಎಂದು ಕರಾವಳಿಯ ಸಾಹಸಿಗರನ್ನು ಪ್ರಶ್ನಿಸಿ ದರು. ತಮ್ಮ ಕೋರಿಕೆ ಮೇರೆಗೆ ನಾಗಾಲ್ಯಾಂಡ್‌ನ ನಾಗಾ ಜನಾಂಗದ 20 ವಿದ್ಯಾರ್ಥಿಗಳಿಗೆ ಉಚಿತ ಶಿಕ್ಷಣ ನೀಡಲು ಮುಂದೆ ಬಂದ ಆಳ್ವಾಸ್ ಶಿಕ್ಷಣ ಪ್ರತಿಷ್ಠಾನವು ಪುರೋಹಿ ಜನಾಂಗದ ಐವರು ಯುವತಿಯರಿಗೆ ಉಚಿತ ನರ್ಸಿಂಗ್ ಶಿಕ್ಷಣ ನೀಡಲು ಮನ ಮಾಡಿರುವುದನ್ನು ಉಲ್ಲೇಖೀಸಿ, ಒಂದು ದೇಶವನ್ನು ಸಾಂಸ್ಕೃತಿಕವಾಗಿ ಹೇಗೆ ಕಟ್ಟ ಬಹುದು ಎಂಬುದಕ್ಕೆ ಆಳ್ವಾಸ್ ದೇಶಕ್ಕೇ ಮಾದರಿ ಎಂದು ಶ್ಲಾಘಿಸಿದರು.
ದೇಶ ಕಟ್ಟಲು ದ್ವೇಷ ಬಿಡಿ: ಹೆಗ್ಗಡೆ
ಸಮಾರಂಭದ ಅಧ್ಯಕ್ಷತೆ ವಹಿಸಿದ್ದ ಡಾ| ಡಿ. ವೀರೇಂದ್ರ ಹೆಗ್ಗಡೆ ಅವರು “ದೇಶ ಕಟ್ಟಲು ದ್ವೇಷ ಬಿಡ ಬೇಕು’ ಎಂದು ವಿಶೇಷ ಮನವಿ ಮಾಡಿದರು. ನಿಜವಾದ ಭಾರತ ದೇಶ ಇಲ್ಲಿದೆ. ನೀವೆಲ್ಲರೂ ದೊಡ್ಡ ಸಮುದ್ರದ ಮೀನುಗಳು, ಭಾರತದ ನಾಗರಿಕರು. ನೀವೆಲ್ಲರೂ ಸಮಾನರು. ನಿಮ ಗೆಲ್ಲ ರಿಗೂ ಸಮಾನ ಅವಕಾಶಗಳಿವೆ. ಭಾರತದ ಮುಂದಿನ ಭವಿಷ್ಯ ನಿಮ್ಮಂಥ ಯುವಜನರ ಮೇಲಿದೆ. ಈ ದೇಶದ ಸಂಸ್ಕೃತಿಯನ್ನು, ಭಾವ ನಾತ್ಮಕತೆಯನ್ನು ಉಳಿಸಿ ಈ ದೇಶ ವೆಂಬ ದೊಡ್ಡ ಕುಟುಂಬದ ಹಿತ ಕಾಯುವ ಜವಾಬ್ದಾರಿಯ ರಾಯಭಾರಿ ಗಳು ನೀವು ಎಂದು ಡಾ| ಹೆಗ್ಗಡೆ ಯವರು ನುಡಿದರು.
ಆಳ್ವಾಸ್ ವಿರಾಸತ್ ಪ್ರಶಸ್ತಿ ಪ್ರದಾನ
ಹಿಂದೂಸ್ತಾನಿ ಗಾಯಕ ಸಹೋ ದರರಾದ ಪಂ| ರಾಜನ್-ಸಾಜನ್ ಮಿಶ್ರಾ ಅವರಿಗೆ ಆಳ್ವಾಸ್ ಶಿಕ್ಷಣ ಪ್ರತಿಷ್ಠಾನದ ಅಧ್ಯಕ್ಷ ಡಾ| ಎಂ. ಮೋಹನ ಆಳ್ವರು ಡಾ| ವೀರೇಂದ್ರ ಹೆಗ್ಗಡೆ, ಪಿ.ಬಿ. ಆಚಾರ್ಯರ ಜತೆಗೂಡಿ “ಆಳ್ವಾಸ್ ವಿರಾಸತ್ ಪ್ರಶಸ್ತಿ-2018′ ಪ್ರದಾನಗೈದರು. ಆಳ್ವಾಸ್ ಪಿಆರ್‌ಒ ಡಾ| ಪದ್ಮ ನಾಭ ಶೆಣೈ ಸಮ್ಮಾನ ಪತ್ರ ವಾಚಿಸಿದರು.
ಸೂರ್ಯಗಾಯತ್ರಿ ಗಾಯನದ ಮೂಲಕ ಪಂ| ರಾಜನ್ ಸಾಜನ್ ಮಿಶ್ರಾಗೆ ಗೌರವ ಸಲ್ಲಿಸಿದರು. ಆಳ್ವಾಸ್ ಶಿಕ್ಷಣ ಪ್ರತಿಷ್ಠಾನದ ಅಧ್ಯಕ್ಷ ಡಾ| ಎಂ. ಮೋಹನ ಆಳ್ವ ಸ್ವಾಗತಿಸಿದರು. ಕವಿತಾ ಬಾಲಕೃಷ್ಣ ಆಚಾರ್ಯ, ಮಿಜಾರುಗುತ್ತು ಆನಂದ ಆಳ್ವ, ನಳಿನ್‌ಕುಮಾರ್ ಕಟೀಲು, ಕ್ಯಾ| ಗಣೇಶ್ ಕಾರ್ಣಿಕ್, ಶಾಸಕ ಕೆ. ಅಭಯಚಂದ್ರ, ಕೆ. ಅಮರನಾಥ ಶೆಟ್ಟಿ, ಡಾ| ಎಂ. ಎನ್. ರಾಜೇಂದ್ರ ಕುಮಾರ್, ನರೋತ್ತಮ್ ಮಿಶ್ರಾ, ಅಬ್ದುಲ್ಲಾ ಕುಂಞಿ, ಮಹಾ ಬಲೇಶ್ವರ ಎಂ. ಎಸ್., ರಾಕೇಶ್ ಶರ್ಮ , ಡಾ| ಎಂ.ಕೆ. ರಮೇಶ್, ಶಶಿಧರ ಶೆಟ್ಟಿ, ಜಯಶ್ರೀ ಅಮರನಾಥ ಶೆಟ್ಟಿ, ಸುರೇಶ್ ಶೆಟ್ಟಿ ಗುರ್ಮೆ ಕಾಪು, ಸುರೇಶ್ ಭಂಡಾರಿ ಕಡಂದಲೆ, ಹರೀಶ್ ಶೆಟ್ಟಿ ಐಕಳ, ಮಂಜುನಾಥ ಭಂಡಾರಿ, ಪ್ರಸನ್ನ ಶೆಟ್ಟಿ, ಎಚ್.ಎಸ್. ಶೆಟ್ಟಿ ಬೆಂಗಳೂರು, ಕಿಶೋರ್ ಆಳ್ವ, ಕೆ. ಶ್ರೀಪತಿ ಭಟ್, ಮೋಹಿನಿ ಶೆಟ್ಟಿ, ದೇವಿಪ್ರಸಾದ್ ಶೆಟ್ಟಿ, ಮುಸ್ತಾಫ ಎಸ್. ಎಂ., ರಾಮಚಂದ್ರ ಶೆಟ್ಟಿ, ಬಾಲಕೃಷ್ಣ ಆಳ್ವ ಮುಖ್ಯ ಅತಿಥಿಗಳಾಗಿದ್ದರು. ದೀಪಾ ರತ್ನಾಕರ್ ಕಾರ್ಯಕ್ರಮ ನಿರೂಪಿಸಿದರು.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
Mangaluru;ಅಕ್ರಮ ಮರಳುಗಾರಿಕೆ ಅಡ್ಡೆಗೆ ಗಣಿ ಇಲಾಖೆ ದಾಳಿ: 5 ದೋಣಿ ವಶಕ್ಕೆ
Mangaluru: ಕುಮಾರಸ್ವಾಮಿ ಯಾವಾಗ, ಹೇಗೆ ಬೇಕಾದರೂ ಟರ್ನ್ ಆಗುತ್ತಾರೆ: ಜಮೀರ್ ಅಹಮದ್
Mangaluru: ನೋಟು ಬ್ಯಾನ್‌ಗೆ 8 ವರ್ಷ: ಹುಂಡಿಗೆ ಹಾಕೋದು ನಿಂತಿಲ್ಲ!
Mangaluru: ಡಿಜಿಟಲ್ ಅರೆಸ್ಟ್, ಷೇರು ಮಾರುಕಟ್ಟೆ ಹೂಡಿಕೆ ವಂಚನೆ ಪ್ರಕರಣ; ಮೂವರ ಬಂಧನ
ವಿಡಿಯೋ | Mangaluru; ಕದ್ರಿ ಪೊಲೀಸ್ ಠಾಣೆ ಬಳಿ ಇದ್ದಕ್ಕಿದ್ದಂತೆ ಹೊತ್ತಿ ಉರಿದ ಕಾರು
MUST WATCH
ಹೊಸ ಸೇರ್ಪಡೆ
Manipu: ಸಿಎಂ ಬಿರೇನ್ ಸಿಂಗ್ ಮನೆಗೆ ನುಗ್ಗಲು ಯತ್ನಿಸಿದ ಗುಂಪು; ಹೆಚ್ಚಿದ ಹಿಂಸಾಚಾರ
Racial Remark: ಕುಮಾರಸ್ವಾಮಿಯವರ “ಕರಿಯ” ಎಂದದ್ದು ತಪ್ಪು: ಡಿ.ಕೆ.ಶಿವಕುಮಾರ್
Illegal Property Case: ಸಚಿವ ಜಮೀರ್ ಅಹ್ಮದ್‌ಖಾನ್‌ಗೆ ಲೋಕಾಯುಕ್ತದಿಂದ ನೋಟಿಸ್
Mangaluru: ವೆನ್ಲಾಕ್ ಆಸ್ಪತ್ರೆ 10 ಕೋಟಿ ರೂ. ವೆಚ್ಚದಲ್ಲಿ ಆಧುನೀಕರಣ: ಸಚಿವ ದಿನೇಶ್
Space Science: ಸ್ಪೇಸ್‌ಎಕ್ಸ್‌ನಿಂದ ಮೊದಲ ಬಾರಿ ಇಸ್ರೋ ಉಪಗ್ರಹ ನಭಕ್ಕೆ!
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.