ಮೊಡಂಕಾಪು ಪ.ಜಾ.-ಪಂ. ಬಾಲಕರ ಹಾಸ್ಟೆಲ್ ಕಟ್ಟಡ ಶಿಥಿಲ
5 ದಶಕ ಹಳೆಯ ಕಟ್ಟಡ; ಪಂಚಾಂಗ-ಗೋಡೆಗಳಲ್ಲಿ ಬಿರುಕು
Team Udayavani, Oct 19, 2019, 4:33 AM IST
ಮೊಡಂಕಾಪು ಪ. ಜಾತಿ-ಪಂಗಡದ ಬಾಲಕರ ಹಾಸ್ಟೆಲ್‌ನ ಶಿಥಿಲ ಕಟ್ಟಡ.
ಕಲ್ಲಡ್ಕ: ಐದು ದಶಕಗಳ ಪೂರ್ವದಲ್ಲಿ ನಿರ್ಮಾಣಗೊಂಡ, ಬಂಟ್ವಾಳ ಸಮಾಜ ಕಲ್ಯಾಣ ಇಲಾಖೆಯ ಸುಪರ್ದಿಯಲ್ಲಿರುವ ಮೊಡಂಕಾಪು ಪ. ಜಾತಿ-ಪಂಗಡದ ಬಾಲಕರ ಹಾಸ್ಟೆಲ್ ಕಟ್ಟಡ ಶಿಥಿಲವಾಗಿ ಅಪಾಯ ಆಹ್ವಾನಿಸುತ್ತಿದ್ದರೂ ಅಧಿಕಾರಿಗಳಿಂದ ಸುಣ್ಣಬಣ್ಣದ ನಿರ್ವಹಣೆ ಮುಂದುವರಿದಿದೆ.
ಕಟ್ಟಡದ ಪಂಚಾಂಗದಲ್ಲಿ, ಗೋಡೆಗಳಲ್ಲಿ ಬಿರುಕುಗಳಿವೆ. ಜೋರು ಮಳೆ ಬಂದರೆ ಛಾವಣಿ ಸೋರುತ್ತದೆ. 55 ವಿದ್ಯಾರ್ಥಿಗಳಿರುವ ಈ ಹಾಸ್ಟೆಲ್ ಕಟ್ಟಡ ದುಃಸ್ಥಿತಿಯಲ್ಲಿದ್ದು, ನೂತನ ಕಟ್ಟಡ ನಿರ್ಮಾಣದ ಯೋಜನೆ ಹಾಕಬೇಕಾಗಿದೆ. ಆದರೆ ಇಲಾಖೆ ಕಟ್ಟಡಕ್ಕೆ ಬರೀ ಸುಣ್ಣ-ಬಣ್ಣದ ಲೇಪನ ಮಾಡಿ ಕೈತೊಳೆದುಕೊಳ್ಳುತ್ತಿದೆ.
10 ಲಕ್ಷ ರೂ. ಬಿಡುಗಡೆ
ಹಾಲಿ ಶೈಕ್ಷಣಿಕ ವರ್ಷದಲ್ಲಿ ಹಾಸ್ಟೆಲ್ ನಿರ್ವಹಣೆಗಾಗಿ ಅಂದಾಜು 10 ಲಕ್ಷ ರೂ. ಬಿಡುಗಡೆ ಆಗಿದೆ. ಅದರಲ್ಲಿ ಅಲ್ಲಲ್ಲಿ ದುರಸ್ತಿ, ಕಟ್ಟಡ ಪೂರ್ತಿ ಸುಣ್ಣ ಬಳಿದು ಮುಕ್ತಾಯ ಮಾಡುವುದು ಇಲಾಖೆಯ ಯೋಜನೆ.
ಕಟ್ಟಡ ದುರ್ಬಲ
ಹಾಸ್ಟೆಲ್ ಕಟ್ಟಡ ದುರ್ಬಲಗೊಂಡಿರುವು ದರಿಂದ ಅಲ್ಲಿನ ವಿದ್ಯಾರ್ಥಿಗಳಿಗೆ ಸುರಕ್ಷತೆಯ ಭೀತಿಯಿದೆ. ಇಲ್ಲಿರುವ ವಿದ್ಯಾರ್ಥಿಗಳಲ್ಲಿ ಶೇ. 60ಕ್ಕೂ ಹೆಚ್ಚು ಮಂದಿ ಹೊರ ಜಿಲ್ಲೆಯವರು. ಇಲಾಖೆ ಕೂಡ ಹಾಸ್ಟೆಲ್ ಕಟ್ಟಡದ ಸುಸ್ಥಿತಿಯ ಬಗ್ಗೆ ಹೆಚ್ಚಿನ ಗಮನ ಹರಿಸಿದಂತಿಲ್ಲ. ಶಾಶ್ವತ ಅನುದಾನವನ್ನು ಬಿಡುಗಡೆಗೊಳಿಸಿ ನೂತನ ಕಟ್ಟಡ ನಿರ್ಮಿಸಬೇಕಾದ ಅನಿವಾರ್ಯವನ್ನು ಸರಕಾರಕ್ಕೆ ಮನದಟ್ಟು ಮಾಡಬೇಕಾಗಿದೆ. ಇದರಿಂದ ವಿದ್ಯಾರ್ಥಿಗಳಿಗೆ ಭೀತಿಯಿಲ್ಲದೆ ಕಲಿಯುವ ವಾತಾವರಣ ನಿರ್ಮಾಣವಾಗಲಿದೆ.
ವರದಿ ಪಡೆದು ಸೂಕ್ತ ಕ್ರಮ
ಹಾಸ್ಟೆಲ್ ಕಟ್ಟಡ ದುರ್ಬಲಗೊಂಡಿರುವ ಬಗ್ಗೆ ಮಾಹಿತಿ ಪಡೆದು, ಸಂಬಂಧಪಟ್ಟ ಅಧಿಕಾರಿ ಹಾಗೂ ಎಂಜಿನಿಯರಿಂಗ್ ವಿಭಾಗದಿಂದ ವರದಿಯನ್ನು ಸ್ವೀಕರಿಸಿ
ಸೂಕ್ತ ಕ್ರಮ ಕೈಗೊಳ್ಳಲಾಗುವುದು.
- ರಾಜೇಶ್ ನಾೖಕ್ ಉಳಿಪ್ಪಾಡಿಗುತ್ತು, ಶಾಸಕರು
ಮೇಲಧಿಕಾರಿಗಳ ಗಮನಕ್ಕೆ
ಹಾಸ್ಟೆಲ್ ಕಟ್ಟಡ ದುರಸ್ತಿಗಾಗಿ 10 ಲಕ್ಷ ರೂ. ಅನುದಾನ ಬಂದಿದೆ. ಮಳೆಗಾಲದಲ್ಲಿ ಮಳೆ ನೀರು ಸೋರುತ್ತಿರುವ ಹಿನ್ನೆಲೆಯಲ್ಲಿ ಹೆಂಚುಗಳನ್ನು ಬದಲಿಸಿದ್ದೇವೆ. ಗೋಡೆಗಳಿಗೆ ಪೈಂಟಿಂಗ್ ಆಗದೆ ಹಲವು ವರ್ಷಗಳಾದ ಕಾರಣ ಪೈಂಟಿಂಗ್ ಕೆಲಸ ನಡೆದಿದೆ. ಪ್ರತಿ ವರ್ಷ ರಿಪೇರಿ ಮಾಡುತ್ತಾ ಇದ್ದೇವೆ. ರಿಪೇರಿ ಕಾಮಗಾರಿಗೆ ಸರಕಾರಕ್ಕೆ 35 ಲಕ್ಷ ರೂ. ಹೆಚ್ಚುವರಿ ಪ್ರಸ್ತಾವನೆ ಕಳುಹಿಸಲಾಗಿದೆ. ನೂತನ ಕಟ್ಟಡ ನಿರ್ಮಾಣದ ಬಗ್ಗೆ ಮೇಲಧಿಕಾರಿಗಳ ಗಮನಕ್ಕೆ ತರಲಾಗುವುದು.
- ಮೋಹನ್, ಸಹಾಯಕ ನಿರ್ದೇಶಕರು, ಸಮಾಜ ಕಲ್ಯಾಣ ಇಲಾಖೆ, ಬಂಟ್ವಾಳ
- ರಾಜಾ ಬಂಟ್ವಾಳ
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
MUST WATCH
ಹೊಸ ಸೇರ್ಪಡೆ
Election Results: ಮಹಾರಾಷ್ಟ್ರ, ಝಾರ್ಖಂಡ್ ನಲ್ಲಿ ಮತ ಎಣಿಕೆ ಪ್ರಕ್ರಿಯೆ ಆರಂಭ
ಉಪ ಚುನಾವಣಾ ಫಲಿತಾಂಶ: ಸಂಡೂರು, ಚನ್ನಪಟ್ಟಣ, ಶಿಗ್ಗಾಂವಿ ಕ್ಷೇತ್ರಗಳ ಮತ ಎಣಿಕೆ ಆರಂಭ
BJP Internal Politics: ಬಿಜೆಪಿಯ ಬೇಗುದಿ ಇತ್ಯರ್ಥಕ್ಕೆ ಡಿಸೆಂಬರ್‌ನಲ್ಲಿ ಮುಹೂರ್ತ?
Naxal Vikram Gowda: ನೆಟ್ಟಣದಿಂದ ಮುರ್ಡೇಶ್ವರಕ್ಕೆ ರೈಲಿನಲ್ಲಿ ಪ್ರಯಾಣಿಸಿದ್ದ ನಕ್ಸಲರು!
Vikram Gowda Encounter: ಭೀತಿಗ್ರಸ್ತ ಪೀತಬೈಲು ಪರಿಸರದಲ್ಲಿ ನೀರವ ಮೌನ
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.