ಬೇಸಗೆಯಲ್ಲಿ ನೀರಿಗೆ ಬರ; ಮಳೆಗಾಲದಲ್ಲಿ ರಸ್ತೆ ದುಃಸ್ಥಿತಿ
Team Udayavani, Jul 28, 2018, 10:55 AM IST
ಆಲಂಕಾರು : ಮಳೆಗಾಲ ಮಾತ್ರವಲ್ಲದೆ ಬೇಸಗೆ ಕಾಲದಲ್ಲಿಯೂ ಇಲ್ಲಿನ ಜನರ ಪಾಡು ಕೇಳುವವರಿಲ್ಲ! ಆಲಂಕಾರು ಗ್ರಾಮದ ಬುಡೇರಿಯಾ ಜನತೆ ದುರದೃಷ್ಟ ವಂತರು ಎಂದರೆ ತಪ್ಪಾಗಲಾರದು. ಇಲ್ಲಿನವರು ಬೇಸಗೆಯಲ್ಲಿ ನೀರಿನ ಬರವನ್ನು ಎದುರಿಸಬೇಕು. ಮಳೆಗಾಲದಲ್ಲಿ ರಸ್ತೆ ದುರವಸ್ಥೆಯಿಂದ ಇಲ್ಲಿ ಸಂಚಾರ ಕಷ್ಟಕರ. ರಸ್ತೆಗಳಿಗೆ ಸಮರ್ಪಕ ಚರಂಡಿ ವ್ಯವಸ್ಥೆ ಮಾಡಿಲ್ಲ. ಜತೆಗೆ ಬೇಸಗೆಯಲ್ಲಿ ಅಕ್ರಮ ಮರಳುಗಾರಿಕೆಯೇ ರಸ್ತೆಗಳ ಅವ್ಯವಸ್ಥೆಗೆ ಮೂಲ ಕಾರಣವಾಗಿದೆ.
ಬುಡೇರಿಯಾ ಸಂಪರ್ಕ ಕಡಿತ
ರಸ್ತೆ ಕೆಸರುಮಯವಾಗಿರುವ ಕಾರಣ ಅತೀ ಹೆಚ್ಚು ದೈವದ ಕ್ಷೇತ್ರವಿರುವ ಬುಡೇರಿಯಾಕ್ಕೆ ವಾಹನ ಸಂಚಾರ ಅತ್ಯಂತ ದುಸ್ತರವಾಗಿದೆ. ಜತೆಗೆ ಚಾಮೆತ್ತಡ್ಕ, ಪೊಸೋನಿಗೆ ಸಂಪರ್ಕಿಸುವ ರಸ್ತೆಗೆ ಚರಂಡಿ ಇಲ್ಲದ ಕಾರಣ ಚಾಮೆತ್ತಡ್ಕದಲ್ಲಿ ಕಚ್ಚಾ ರಸ್ತೆಯು ಸುಮಾರು 100 ಮೀ. ದೂರದ ವರೆಗೆ ಸಂಪೂರ್ಣ ಕೆಸರು ಮಯವಾಗಿದೆ. ಇಲ್ಲಿ ನಡೆದಾಡಲೂ ಅಸಾಧ್ಯ. ಈ ರಸ್ತೆಯಲ್ಲಿ ವಾಹನ ಸಂಚಾರ ಸಂಪೂರ್ಣ ಸ್ಥಗಿತಗೊಂಡಿದೆ. ಇದರಿಂದಾಗಿ ಈ ಭಾಗದ ಜನತೆ ಆಲಂಕಾರಿಗೆ ತೆರ ಳಬೇಕಿದ್ದರೆ ಸುತ್ತು ಬಳಸಿ ಹೋಗ ಬೇಕು. ಇಲ್ಲಿ ರುವ ಎಂಡೋ ಸಂತ್ರಸ್ತರು ಎಂಡೋ ಪಾಲನ ಕೇಂದ್ರಗಳಿಗೆ ತೆರಳಲಾಗದೆ ಸಂಕಷ್ಟದಲ್ಲಿದ್ದಾರೆ. ರಸ್ತೆ ಹದಗೆಟ್ಟಿರುವ ಕಾರಣ ಪೊಯ್ಯಲಡ್ಡ, ಬಡ್ಡಮೆ, ನೀರಕಣಿ ಮೊದಲಾದ ಪ್ರದೇಶಗಳು ವಾಹನ ಸಂಚಾರವನ್ನು ಕಳೆದುಕೊಳ್ಳುವ ಭೀತಿ ಎದುರಾಗಿದೆ.
ಮರಳು ಸಾಗಾಟ ಕಾರಣ?
ಬೇಸಗೆಯಲ್ಲಿ ಬುಡೇರಿಯಾ ಸಮೀಪದ ಕುಮಾರಧಾರಾ ನದಿಯಿಂದ ಮರಳು ಸಾಗಾಟವಾಗುತ್ತದೆ. ಮರಳು ವಾಹನಗಳ ಹೆಚ್ಚಿನ ಸಂಚಾರದಿಂದಾಗಿ ರಸ್ತೆ ಗುಂಡಿಮಯವಾಗುತ್ತಿದೆ ಎನ್ನುವುದು ಸ್ಥಳೀಯರ ಆರೋಪವಾಗಿದೆ. ಇಲ್ಲಿ ಬೇಸಗೆಯಲ್ಲಿ ರಾತ್ರಿ, ಹಗಲು ನಿರಂತರ ಮರಳುಗಾರಿಕೆ ನಡೆಯುತ್ತಿದ್ದರೂ ಸ್ಥಳೀಯಾಡಳಿತ ಮೌನವಾಗಿದೆ. ಅಂಗನವಾಡಿಗೆ ತೆರಳುವ ಪುಟಾಣಿಗಳಿಗೂ ಹೋಗಲು ತೊಂದರೆ ಇದೆ. ಮರಳು ಉದ್ದಿಮೆದಾರರು ರಸ್ತೆಯ ಗುಂಡಿಯನ್ನು ಮುಚ್ಚುವ ಕಾರ್ಯ ಮಾಡುತ್ತಿಲ್ಲ. ಮರಳಿನ ದೊಡ್ಡ ಲಾರಿಗಳ ಸಂಚಾರದಿಂದ ಸೋರ್ವಲ್ತಡಿಯಲ್ಲಿ ರಸ್ತೆ ಮೋರಿಯೊಂದರಲ್ಲಿ ಬಿರುಕು ಕಂಡು ಬಂದಿದೆ. ಮೋರಿಯು ತೋರ್ವಲ್ತಡಿ ಎನ್ನುವಲ್ಲಿ ಸಂಪರ್ಕ ಕಡಿದುಕೊಳ್ಳುವ ಆತಂಕ ಎದುರಾಗಿದೆ.
15 ದಿನ ಮುಳುಗಿದ ಸೇತುವೆ
ಬುಡೇರಿಯಾ – ಪಜ್ಜಡ್ಕ – ಚಾಮೆತ್ತಡ್ಕ ಮಧ್ಯೆ ಹರಿಯುವ ಕಿರು ತೋಡಿಗೆ ಕೆಮ್ಮಟೆಯಲ್ಲಿ ನಿರ್ಮಿಸಿರುವ ಕಿರು ಸೇತುವೆಯು ಕಳೆದ 15 ದಿನಗಳಿಂದ ಮುಳುಗಿದೆ. ಈ ಭಾಗದಲ್ಲಿ ಸಂಚಾರ ಅಸ್ತವ್ಯಸ್ತಗೊಂಡಿದೆ. ಪರಿಣಾಮ ಇಲ್ಲಿನ ಜನರು ಕುಂತೂರನ್ನು ಸಂಪರ್ಕಿಸಲು ಸುಮಾರು 5 ಕಿ.ಮೀ. ಸುತ್ತು ಬಳಸಿ ಹೋಗಬೇಕಾಗಿದೆ.
ಕೆಂಪು ಕಲ್ಲು ಹಾಕುವ ಪ್ರಕ್ರಿಯೆ
ಕೆಟ್ಟು ಹೋಗಿರುವ ರಸ್ತೆಗಳಿಗೆ ಕೆಂಪು ಕಲ್ಲು ಹಾಕಿ ಸರಿಪಡಿಸುವ ಕಾಮಗಾರಿ ನಡೆ ಸಲಾಗುತ್ತಿದೆ. ದುರಸ್ತಿ ಕಾರ್ಯದ ವೆಚ್ಚ ಪಟ್ಟಿ ತಯಾರಿಸಲು ಎಂಜಿನಿಯರ್ ಅವರನ್ನು ಸ್ಥಳಕ್ಕೆ ಕರೆಸಿಕೊಳ್ಳಲಾಗಿದೆ. ಎಂಜಿನಿಯರ್ ಕೂಲಿಯಾಳು, ರಸ್ತೆಗೆ ಹಾಕಲಾದ ಕೆಂಪು ಕಲ್ಲಿನ ವೆಚ್ಚದ ಪಟ್ಟಿ ನೀಡಿದ ತತ್‌ಕ್ಷಣ ಪಂಚಾಯತ್‌ನಿಂದ ಮೊತ್ತವನ್ನು ಪಾವತಿಸಲಾಗುವುದು.
- ಸುಧಾಕರ ಪೂಜಾರಿ ಕಲ್ಲೇರಿ
ಗ್ರಾ.ಪಂ. ಉಪಾಧ್ಯಕ್ಷರು
ವಿಶೇಷ ವರದಿ
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
MUST WATCH
ದೈವ ನರ್ತಕರಂತೆ ಗುಳಿಗ ದೈವದ ವೇಷ ಭೂಷಣ ಧರಿಸಿ ಕೋಲ ಕಟ್ಟಿದ್ದ ಅನ್ಯ ಸಮಾಜದ ಯುವಕ
ಹಕ್ಕಿಗಳಿಗಾಗಿ ಕಲಾತ್ಮಕ ವಸ್ತುಗಳನ್ನು ತಯಾರಿಸುತ್ತಿರುವ ಪಕ್ಷಿ ಪ್ರೇಮಿ
ಮಂಗಳೂರಿನ ನಿಟ್ಟೆ ವಿಶ್ವವಿದ್ಯಾನಿಲಯದ ತಜ್ಞರ ಅಧ್ಯಯನದಿಂದ ಬಹಿರಂಗ
ಈ ಹೋಟೆಲ್ ಗೆ ಪೂರಿ, ಬನ್ಸ್, ಕಡುಬು ತಿನ್ನಲು ದೂರದೂರುಗಳಿಂದಲೂ ಜನ ಬರುತ್ತಾರೆ
ಹರೀಶ್ ಪೂಂಜ ಪ್ರಚೋದನಾಕಾರಿ ಹೇಳಿಕೆ ವಿರುದ್ಧ ಪ್ರಾಣಿ ಪ್ರಿಯರ ಆಕ್ರೋಶ
ಹೊಸ ಸೇರ್ಪಡೆ
ಮುದ್ರಣ ಕಾಶಿಯಲ್ಲಿ ಕ್ಯಾಲೆಂಡರ್ ಮುದ್ರಣ ಭರಾಟೆ; ಕ್ಯಾಲೆಂಡರ್-ತೂಗು ಪಂಚಾಂಗಗಳಿಗೆ ಖ್ಯಾತಿ
Manmohan Singh: ನವಭಾರತದ ಚಾಣಕ್ಯ ಅಸ್ತಂಗತ: ದೇಶಕ್ಕೆ ತುಂಬಲಾರದ ನಷ್ಟ: ಯು.ಟಿ. ಖಾದರ್
Mangaluru: ಅಪಾರ್ಟ್‌ಮೆಂಟ್, ಮಾಲ್‌ಗಳಲ್ಲಿ ತ್ಯಾಜ್ಯ ಸಂಸ್ಕರಣೆ ಕಡ್ಡಾಯ
Gadg; ಜಗಳ ಬಿಡಿಸಲು ಬಂದ ಯುವಕನ ಕತ್ತಿಗೆ ಸ್ಕ್ರೂ ಡ್ರೈವರ್ ಚುಚ್ಚಿದ ದುಷ್ಕರ್ಮಿಗಳು
26/11 ದಾಳಿಯ ಸಂಚುಕೋರ ಅಬ್ದುಲ್ ರೆಹಮಾನ್ ಮಕ್ಕಿ ಪಾಕಿಸ್ತಾನದಲ್ಲಿ ಹೃದಯಾಘಾತದಿಂದ ಸಾ*ವು
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.