ಬೆಟ್ಟಂಪಾಡಿ ಶಾಲೆ ಕಟ್ಟಡ ದುರಸ್ತಿಗೆ ಮಕ್ಕಳ ಕೊರತೆ ನೆಪ!
Team Udayavani, Jun 2, 2018, 4:15 AM IST
ನಿಡ್ಪಳ್ಳಿ : ಸಮೂಹ ಸಂಪನ್ಮೂಲ ಕೇಂದ್ರವೂ ಇರುವ ಬೆಟ್ಟಂಪಾಡಿ ದ.ಕ. ಜಿ.ಪಂ. ಹಿ.ಪ್ರಾ. ಶಾಲೆಯ ಛಾವಣಿ ಗೆದ್ದಲು ಹಿಡಿದಿದ್ದು, ಪಕ್ಕಾಸು, ರೀಪು ಸಂಪೂರ್ಣ ಶಿಥಿಲಗೊಂಡಿವೆ. ಮಳೆಗಾಲದ ಅವಧಿಯಾಗಿದ್ದು, ಶಾಲೆಯೂ ಪುನಾರಂಭವಾಗಿದ್ದರಿಂದ ಛಾವಣಿಯ ತ್ವರಿತ ದುರಸ್ತಿ ಮಾಡಿಸಬೇಕಾಗಿದೆ. ಶಾಲೆ ಕಟ್ಟಡ ಬಹಳ ಹಳೆಯದಾಗಿದ್ದು, ದುರಸ್ತಿ ಮಾಡಿಸುವಂತೆ ಜನಪ್ರತಿನಿಧಿಗಳು ಹಾಗೂ ಇಲಾಖೆ ಅಧಿಕಾರಿಗಳಿಗೆ ಲಿಖಿತ ಮನವಿ ಸಲ್ಲಿಸಿದರೂ ಯಾವುದೇ ಸ್ಪಂದನೆ ಸಿಕ್ಕಿಲ್ಲ. ಮಾಡಿನ ಪಕ್ಕಾಸು ಮತ್ತು ರೀಪುಗಳು ಅಲ್ಲಲ್ಲಿ ತುಂಡಾಗಿ ಬೀಳುತ್ತಿದ್ದು, ರೀಪುಗಳು ಮುರಿದ ಜಾಗಕ್ಕೆ ಕಬ್ಬಿಣದ ಸರಳು ಇಟ್ಟು, ಹಂಚುಗಳು ಬೀಳದಂತೆ ನಿಲ್ಲಿಸಲಾಗಿದೆ. ಹಂಚುಗಳು ಮಕ್ಕಳ ತಲೆ ಮೇಲೆ ಬಿದ್ದರೆ ಏನು ಗತಿ? ಮಳೆ ಬರುವ ಸಂದರ್ಭದಲ್ಲಿ ಛಾವಣಿಯು ಸೋರುತ್ತಿದ್ದು, ಗೋಡೆಗಳಿಗೆ ಹಾನಿಯಾಗುವ ಸಂಭವವಿದೆ. ಕಟ್ಟಡ ದುರಸ್ತಿಗೆ ಮನವಿ ಸಲ್ಲಿಸಿದರೆ, ಮಕ್ಕಳ ಸಂಖ್ಯೆ ಎಷ್ಟಿದೆ? ಮಕ್ಕಳ ಸಂಖ್ಯೆ ಕಡಿಮೆ ಇದ್ದರೆ ಹೊಸ ಕಟ್ಟಡದ ಅಗತ್ಯವೇನಿದೆ? ಮೊದಲು ಮಕ್ಕಳ ಸಂಖ್ಯೆ ಹೆಚ್ಚಿಸಲು ಪ್ರಯತ್ನಿಸಿ ಎಂದು ಅಧಿಕಾರಿಗಳು ನೆಪ ಹೇಳುತ್ತಾರೆ. ಇರುವ ಮಕ್ಕಳ ಸುರಕ್ಷತೆಗಾಗಿ ಉಳಿಯಲು ಕಟ್ಟಡ ದುರಸ್ತಿ ಆಗಬೇಕು ಎನ್ನುವುದು ಎಸ್.ಡಿ.ಎಂ.ಸಿ. ಸದಸ್ಯರ ಕಳಕಳಿ.
ಹಳೆ ಕಟ್ಟಡ ಕೆಡವಲು ಮನವಿ
ಬಹಳ ವರ್ಷಗಳ ಹಿಂದೆ ಕಟ್ಟಿರುವ ಮಣ್ಣಿನ ಗೋಡೆಯ ಉದ್ದನೆಯ ಒಂದು ಕಟ್ಟಡವಿದೆ. ಅದನ್ನು ಕೆಡವು ಶಾಲೆಗೆ ಹೊಸ ರೂಪ ನೀಡುವಂತೆ ಮೂರು ವರ್ಷಗಳ ಹಿಂದೆಯೇ ಶಿಕ್ಷಣ ಇಲಾಖೆಗೆ ಬರೆಯಲಾಗಿದೆ. ಈವರೆಗೂ ಕಾರ್ಯಗತವಾಗಿಲ್ಲ ಎಂಬುದೇ ಬೇಸರದ ಸಂಗತಿ ಎಂದು ಅಧ್ಯಕ್ಷರು ಹೇಳುತ್ತಿದ್ದಾರೆ.
ದುರಸ್ತಿಗೆ ಬೇಕು 10 ಲಕ್ಷ ರೂ.
ಹಳೆಯ ಶಾಲೆಯಾಗಿರುವ ಕಾರಣ ಇಲ್ಲಿ ಈವರೆಗೂ ಆವರಣ ಗೋಡೆಯಿಲ್ಲ. ಶಾಲೆಗೆ ಹೊಂದಿಕೊಂಡೇ ಖಾಸಗಿ ರಸ್ತೆ ಹಾದು ಹೋಗುತ್ತದೆ. ಹೀಗಾಗಿ, ಶಾಲೆ ಜಾಗಕ್ಕೆ ಗೋಡೆ ನಿರ್ಮಿಸಬೇಕಿದೆ. ಆಟದ ಮೈದಾನ ಹಾಗೂ ದೈಹಿಕ ಶಿಕ್ಷಣ ಶಿಕ್ಷಕರಿದ್ದಾರೆ. ಶೌಚಾಲಯವಿದೆ, ಶಿಕ್ಷಕರೂ ಸಾಕಷ್ಟು ಸಂಖ್ಯೆಯಲ್ಲಿದ್ದಾರೆ. ಆದರೆ, ರಂಗಮಂದಿರ ಮುರುಕಲಾಗಿದೆ. ಶಾಲೆಗೆ ಬರುವ ರಸ್ತೆಗೆ ಕಾಂಕ್ರೀಟ್ ಕಾಮಗಾರಿಯೂ ಅರ್ಧದಲ್ಲೇ ನಿಲ್ಲಿಸಿದ್ದು, ಪೂರ್ತಿಯಾಗಿಲ್ಲ. ಒಟ್ಟು ದುರಸ್ತಿಗೆ 10 ಲಕ್ಷ ರೂ. ಖರ್ಚಾಗುತ್ತದೆ ಎಂದು ಅಂದಾಜಿಸಲಾಗಿದೆ.
– ಜತ್ತಪ್ಪ ಗೌಡ ಬಳ್ಳಿತ್ತಡ್ಡ, ಎಸ್‌ಡಿಎಂಸಿ ಅಧ್ಯಕ್ಷರು
ದುರಸ್ತಿಗೆ ಪ್ರಯತ್ನ
ಶಾಲೆಯ ಸ್ಥಿತಿಗತಿ ಬಗ್ಗೆ ಜಿಲ್ಲಾ ಪಂಚಾಯತ್ ಅಧ್ಯಕ್ಷರು ಹಾಗೂ ಅಧಿಕಾರಿಗಳ ಗಮನಕ್ಕೆ ತಂದು ದುರಸ್ತಿಗಾಗಿ ಒತ್ತಡ ತರಲಾಗಿದೆ. ಸಕಾರಾತ್ಮಕ ಸ್ಪಂದನೆ ದೊರಕಿದ್ದು, ದುರಸ್ತಿಗೆ ಪ್ರಯತ್ನಿಸಲಾಗುವುದು.
– ಜಗನ್ನಾಥ ಶೆಟ್ಟಿ ಕೊಮ್ಮಂಡ, ಸದಸ್ಯರು, ಬೆಟ್ಟಂಪಾಡಿ ಗ್ರಾ.ಪಂ.
— ಗಂಗಾಧರ ಸಿ.ಎಚ್.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
MUST WATCH
ದೈವ ನರ್ತಕರಂತೆ ಗುಳಿಗ ದೈವದ ವೇಷ ಭೂಷಣ ಧರಿಸಿ ಕೋಲ ಕಟ್ಟಿದ್ದ ಅನ್ಯ ಸಮಾಜದ ಯುವಕ
ಹಕ್ಕಿಗಳಿಗಾಗಿ ಕಲಾತ್ಮಕ ವಸ್ತುಗಳನ್ನು ತಯಾರಿಸುತ್ತಿರುವ ಪಕ್ಷಿ ಪ್ರೇಮಿ
ಮಂಗಳೂರಿನ ನಿಟ್ಟೆ ವಿಶ್ವವಿದ್ಯಾನಿಲಯದ ತಜ್ಞರ ಅಧ್ಯಯನದಿಂದ ಬಹಿರಂಗ
ಈ ಹೋಟೆಲ್ ಗೆ ಪೂರಿ, ಬನ್ಸ್, ಕಡುಬು ತಿನ್ನಲು ದೂರದೂರುಗಳಿಂದಲೂ ಜನ ಬರುತ್ತಾರೆ
ಹರೀಶ್ ಪೂಂಜ ಪ್ರಚೋದನಾಕಾರಿ ಹೇಳಿಕೆ ವಿರುದ್ಧ ಪ್ರಾಣಿ ಪ್ರಿಯರ ಆಕ್ರೋಶ
ಹೊಸ ಸೇರ್ಪಡೆ
Airtel Outage:ದೇಶದ ಹಲವೆಡೆ ಏರ್ ಟೆಲ್ Network ಸಮಸ್ಯೆ; ಏರ್ ಟೆಲ್ ಗ್ರಾಹಕರಿಂದ ದೂರು
BBK11: ದಯವಿಟ್ಟು ಬಿಗ್ ಬಾಸ್ ಮನೆಯಿಂದ ಹೋಗು.. ಚೈತ್ರಾಗೆ ಕೈಮುಗಿದು ಕೇಳಿಕೊಂಡ ರಜತ್
Belagavi: ನಕಲಿ ಗಾಂಧಿಗಳನ್ನು ಮೆಚ್ಚಿಸಲು ಕನ್ನಡಿಗರ ತೆರಿಗೆ ಹಣ ಪೋಲು: ಜಗದೀಶ್ ಶೆಟ್ಟರ್
Sonu Sood: ನನಗೆ ಸಿಎಂ, ಡಿಸಿಎಂ ಹುದ್ದೆಗೆ ಆಫರ್ ಬಂದಿತ್ತು ಆದರೆ, ಸೋನು ಸೂದ್ ಹೇಳಿದ್ದೇನು?
Manipal: ಅಪಘಾತ ತಡೆಯಲು ಹೀಗೆ ಮಾಡಿ!
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.