ಸ್ಕೌಟ್ಸ್ ಗೈಡ್ಸ್ ಸಾಂಸ್ಕೃತಿಕ ಜಾಂಬೂರಿಯಲ್ಲಿ ವಿಜ್ಞಾನ ಮೇಳ : ಇನ್ನು ಎರಡೇ ದಿನ
Team Udayavani, Dec 19, 2022, 6:20 AM IST
ಮೂಡುಬಿದಿರೆ: ಅಂತಾರಾಷ್ಟ್ರೀಯ ಸ್ಕೌಟ್ಸ್ ಗೈಡ್ಸ್ ಸಾಂಸ್ಕೃತಿಕ ಜಾಂಬೂರಿಯ ಅಂಗವಾಗಿ ನಡೆಯುವ ಐದು ಮೇಳಗಳ ಪೈಕಿ ವಿಜ್ಞಾನ ಮೇಳಗಳ ವೀಕ್ಷಕರ ಕುತೂಹಲ ಕೆರಳಿಸಿ ವಿಜ್ಞಾನದ ಈಚಿನ ಬೆಳವಣಿಗೆಗಳ ಬಗ್ಗೆ ಆಸಕ್ತಿ ಮೂಡಿಸಲಿದೆ.
ಜಾಂಬೂರಿಯಲ್ಲಿ ಭಾಗವಹಿಸುವ ಎಲ್ಲ ಸ್ಕೌಟ್ – ಗೈಡ್ ವಿದ್ಯಾರ್ಥಿಗಳು, ಪೋಷಕರಿಗೆ ಒಟ್ಟು 12 ವಿಭಾಗಗಳಲ್ಲಿ ವಿಜ್ಞಾನ ಲೋಕವನ್ನು ಪರಿಚಯಿಸುವ, ವೈಜ್ಞಾನಿಕ ಚಿಂತನೆಯನ್ನು ಬೆಳೆಸುವ ಕಾರ್ಯ ನಡೆಯಲಿದೆ. ದಿನಕ್ಕೆ 10 ಸಾವಿರಕ್ಕೂ ಅಧಿಕ ವಿದ್ಯಾರ್ಥಿಗಳು ಅದಕ್ಕಿಂತ ಅಧಿಕ ಸಂಖ್ಯೆಯಲ್ಲಿ ಸಾರ್ವಜನಿಕರು ಭಾಗವಹಿಸುವ ನಿರೀಕ್ಷೆ ಇದೆ. ಎಲ್ಲ
ರಿಗೂ ಊಟೋಪಚಾರವೂ ಇರಲಿದೆ.
ಮೇಳದ ವೈಶಿಷ್ಟ್ಯ
– ವಿಜ್ಞಾನ ಮೇಳದಲ್ಲಿ ಇಸ್ರೋ, ಐಐಎಸ್ಸಿ, ಸಿತಾರ್ ಇತ್ಯಾದಿ ಕಡೆಗಳಿಂದ ವಿಜ್ಞಾನಿಗಳು ಆಗಮಿಸಲಿದ್ದಾರೆ. ಅವರ ವೈಜ್ಞಾನಿಕ ಉಪಕರಣಗಳನ್ನು ಪ್ರದರ್ಶಿಸಲಾಗುವುದು.
– ಸ್ಪರ್ಧಾ ವಿಭಾಗದಲ್ಲಿ ವಿದ್ಯಾರ್ಥಿಗ ಳಿಗೆ ಆಕರ್ಷಕ ಬಹುಮಾನಗಳ ಜತೆಗೆ ಭಾಗವಹಿಸಿದ ಪ್ರತಿಯೊಬ್ಬರಿಗೂ ಪ್ರಮಾಣಪತ್ರ ನೀಡಲಾಗುತ್ತದೆ.
– ವಿಜ್ಞಾನಿಗಳ ಜತೆಗೆ ಸಂವಾದ
– ಆಳ್ವಾಸ್ ವಿಜ್ಞಾನ ಮತ್ತು ಎಂಜಿನಿಯರಿಂಗ್ ವಿಭಾಗದ ವಿದ್ಯಾರ್ಥಿಗಳಿಂದ ಹಾಗೂ ವಿವಿಧ ಎಂಜಿನಿಯರಿಂಗ್ ಕಾಲೇಜುಗಳ ವತಿಯಿಂದ ವಸ್ತು ಪ್ರದರ್ಶನ ನಡೆಯಲಿದೆ.
– ವಿವಿಧ ರಾಜ್ಯಗಳ ಸಾಂಪ್ರದಾಯಿಕ ಹಾಗೂ ವೈಜ್ಞಾನಿಕ ಆಟಿಕೆಗಳ ಪ್ರದ ರ್ಶನ ಮತ್ತು ಮಾರಾಟ ಇರಲಿದೆ.
– ಮತ್ಸéಗಳು, ಟೆಲಿಸ್ಕೋಪ್, ವಿಮಾನ ಪ್ರದರ್ಶನ ಸಂಯೋಜಿಸಲಾಗಿದೆ. ಹ್ಯಾಮ್ ರೇಡಿಯೋ , ನೇಚರ್ ಕ್ಲಬ್, ಬರ್ಡ್ ಕ್ಲಬ್‌ಗಳೂ ಪಾಲ್ಗೊಳ್ಳಲಿವೆ.
– ಅಗಸ್ತ್ಯ ಫೌಂಡೇಶನ್ ಸಂಸ್ಥೆ ಹಾಗೂ ನಿರ್ಮಿತಿ ಕೇಂದ್ರಗಳಿಂದ ಮಾದರಿಗಳ ಪ್ರದರ್ಶನ ಹಾಗೂ ಪ್ರಾತ್ಯಕ್ಷಿಕೆ, ಭಾರತದ ಭೂವೈಜ್ಞಾನಿಕ ಸಮೀಕ್ಷೆ ವತಿಯಿಂದ ವಿವಿಧ ರೀತಿಯ ಕಲ್ಲುಗಳ ಪ್ರದರ್ಶನ ಮತ್ತು ಮಾಹಿತಿ ಇರಲಿದೆ.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
MUST WATCH
ಹೊಸ ಸೇರ್ಪಡೆ
Vyasanagar: ಮಣ್ಣಿನ ಒಳ ರಸ್ತೆಗಳಿಗೆ ಬೇಕು ಬೀದಿದೀಪ
Mangalore: ಅಡ್ಯಾರ್ ಕಣ್ಣೂರಿನಲ್ಲಿ ತ್ಯಾಜ್ಯ ಸುಡುವಿಕೆಯಿಂದ ಪರಿಸರ ಮಾಲಿನ್ಯ
Dandeli ನಗರ ಠಾಣೆಯ ತನಿಖಾ ವಿಭಾಗದ ಪಿಎಸ್ಐಯಾಗಿ ಕಿರಣ್ ಪಾಟೀಲ್ ಅಧಿಕಾರ ಸ್ಬೀಕಾರ
Thirthahalli: ತುಂಗಾ ನದಿಯಲ್ಲಿ ಅಪರಿಚಿತ ಮೃತದೇಹ ಪತ್ತೆ
Waqf issue: ಅಲ್ಲಾನ ಹೆಸರಲ್ಲಿ ಅಲ್ಲಾನಿಗೆ ದೋಖಾ: ಕೇಂದ್ರ ಸಚಿವೆ ಶೋಭಾ ಕರಂದ್ಲಾಜೆ
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.