ಉಜಿರೆ ಎಸ್‌ಡಿಎಂ ಕಾಲೇಜಿಗೆ ಅಗ್ರ ಶ್ರೇಯಾಂಕ; ಇಂಡಿಯಾಟುಡೇ ನಿಯತಕಾಲಿಕೆಯ ರಾಷ್ಟ್ರೀಯ ಸಮೀಕ್ಷೆ
Team Udayavani, Jul 1, 2020, 6:02 AM IST
ಬೆಳ್ತಂಗಡಿ: ಪ್ರಸಕ್ತ ವರ್ಷ ಇಂಡಿಯಾ ಟುಡೇ ಶೈಕ್ಷಣಿಕ ಕೋರ್ಸ್‌ಗಳ ನಿರ್ವಹಣ ಸಾಧನೆಯ ಅಂಶಗಳನ್ನು ಪರಿಗಣಿಸಿ ನಡೆಸಿದ ರಾಷ್ಟ್ರೀಯ ಸಮೀಕ್ಷೆಯಲ್ಲಿ ಉಜಿರೆಯ ಎಸ್‌ಡಿಎಂ ಕಾಲೇಜು ಅಗ್ರ ಶ್ರೇಯಾಂಕ ಪಡೆದು ಮನ್ನಣೆ ಗಳಿಸಿದೆ.
ಸಮೀಕ್ಷೆಯ ಎಲ್ಲ ಮಾಪನಾಂಶಗಳನ್ವಯ ಕಾಲೇಜಿನ ಬಿಸಿಎ ವಿಭಾಗವು ಅಗ್ರಮಾನ್ಯ ಶ್ರೇಯಾಂಕದೊಂದಿಗೆ ಮುಂಚೂಣಿ ಪ್ರಾಶಸ್ತ್ಯ ಪಡೆದು ಗಮನ ಸೆಳೆದಿದೆ.
ರಾಷ್ಟ್ರದ ಪದವಿ, ಸ್ನಾತಕೋತ್ತರ ಕೇಂದ್ರಗಳಲ್ಲಿ ಲಭಿಸುತ್ತಿರುವ ವಿವಿಧ ಕೋರ್ಸ್‌ಗಳ ನಿರ್ವಹಣೆ ಮತ್ತು ಸಾಧನೆಯನ್ನು ಅಳೆಯಲು ಇಂಡಿಯಾ ಟುಡೇ ನಿಯತಕಾಲಿಕವು ಈ ಸಮೀಕ್ಷೆ ನಡೆಸಿತ್ತು. ಜುಲೈ 6ರ ವಿಶೇಷ ಸಂಚಿಕೆಯಲ್ಲಿ ಈ ಕುರಿತ ಸಮಗ್ರ ಮಾಹಿತಿ ಪ್ರಕಟಿಸಿದೆ.
ಬಿಸಿಎ ಮುಂಚೂಣಿಯಲ್ಲಿ
ಎಸ್‌ಡಿಎಂ ಕಾಲೇಜಿನ ಬಿಸಿಎ ವಿಭಾಗವು ಎಲ್ಲ ಮಾಪನಾಂಶಗಳ ಅನ್ವಯ ಮುಂಚೂಣಿ ಸಾಧನೆ ತನ್ನದಾಗಿಸಿಕೊಂಡಿದೆ. ಈ ಶತಮಾನದ ಭಾರತದ ಉದಯೋನ್ಮುಖ ಸಂಸ್ಥೆ (Emerging Colleges of
the Century) ಎಂಬ ಮಾನದಂಡದಡಿ ಐದನೇ ರ್‍ಯಾಂಕ್‌ತನ್ನದಾಗಿಸಿ ಕೊಳ್ಳಲು ಈ ವಿಭಾಗದ ಕೊಡುಗೆ ಕಾರಣವಾಗಿದೆ.
ವಿದ್ಯಾರ್ಥಿ ಮತ್ತು ವಿದ್ಯಾರ್ಥಿನಿಯರ ಪ್ರಮಾಣವಾರು ಸಾಧನೆಯಲ್ಲಿ 3ನೇ ರ್‍ಯಾಂಕ್ ಪಡೆದಿದೆ. ಅತ್ಯಂತ ಕಡಿಮೆ ಶುಲ್ಕ ನಿಗದಿಗೊಳಿಸಿದ ಕಾಲೇಜುಗಳ ಪಟ್ಟಿಯಲ್ಲಿ 6ನೇ ರ್‍ಯಾಂಕ್ ಪಡೆಯುವುದಕ್ಕೆ ಸಹಾಯಕವಾಗಿದೆ. ಪಾವತಿಸಿದ ಶುಲ್ಕಕ್ಕೆ ಅನುಗುಣವಾದ ಗುಣಮಟ್ಟದ ಶಿಕ್ಷಣ ನೀಡಿದ ಕಾಲೇಜು ಗಳ ಪಟ್ಟಿಯಲ್ಲಿ 5ನೇ ರ್‍ಯಾಂಕ್ ತನ್ನದಾಗಿಸಿಕೊಂಡಿದೆ.
ಕಡಿಮೆ ಶುಲ್ಕ ನಿಗದಿಗೊಳಿಸಿದ ಕೋರ್ಸ್‌ಗಳ ಪಟ್ಟಿಯಲ್ಲಿ ಪತ್ರಿಕೋದ್ಯಮ ಮತ್ತು ಸಮೂಹ ಸಂವಹನ ವಿಭಾಗವು 8ನೇ ರ್‍ಯಾಂಕ್, ಪಾವತಿ ಸಿದ ಶುಲ್ಕಕ್ಕನುಗುಣವಾದ ಗುಣ ಮಟ್ಟದ ಶಿಕ್ಷಣದ ಮಾಪನಾಂಶದ ಪಟ್ಟಿಯಲ್ಲಿ 4ನೇ ರ್‍ಯಾಂಕ್ ಗಳಿಸಿದೆ.
ಬಿಬಿಎ ವಿಭಾಗವು ಕಡಿಮೆ ಶುಲ್ಕದ ಕೋರ್ಸ್‌ಗಳ ಪಟ್ಟಿಯಲ್ಲಿ 8ನೇ ರ್‍ಯಾಂಕ್ ಪಡೆದಿದೆ. ವಿದ್ಯಾರ್ಥಿ – ವಿದ್ಯಾರ್ಥಿನಿಯರ ಪ್ರಮಾಣವಾರು ದಾಖಲಾತಿ ದೃಷ್ಟಿಯಿಂದ ಕಲಾ ವಿಭಾಗವು ಮೊದಲ ರ್‍ಯಾಂಕ್ ಗಳಿಸಿದೆ. ಕಾಲೇಜಿಗೆ ಲಭಿಸಿದ ಈ ಮನ್ನಣೆಗೆ ಸಂಸ್ಥೆಯ ಅಧ್ಯಕ್ಷ ಡಾ| ವೀರೇಂದ್ರ ಹೆಗ್ಗಡೆ ಅಭಿನಂದಿಸಿದ್ದಾರೆ ಎಂದು ಪ್ರಾಂಶುಪಾಲ ಡಾ| ಸತೀಶ್ಚಂದ್ರ ಎಸ್. ತಿಳಿಸಿದ್ದಾರೆ.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
MUST WATCH
ಹೊಸ ಸೇರ್ಪಡೆ
By Election: ಶಿಗ್ಗಾಂವಿ ಸವಿ ಬೊಮ್ಮಾಯಿ ಪುತ್ರನಿಗೋ, ಯಾಸಿರ್ ಪಠಾಣಗೋ?
King Cobra: “ಕಾಳಿಂಗ’ ಸರ್ಪಕ್ಕೆ ಕನ್ನಡದ್ದೇ ವೈಜ್ಞಾನಿಕ ಹೆಸರು!
Mysuru:’ಕರ್ನಾಟದಲ್ಲಿ “ಗ್ಯಾರಂಟಿ’ ಹೆಸರಲ್ಲಿ ಲೂಟಿ, ಮಹಾರಾಷ್ಟ್ರದಲ್ಲಿ ನೀವು ಘೋಷಿಸಬೇಡಿ’
By Election: ಚನ್ನಪಟ್ಟಣದಲ್ಲಿ ಎಚ್.ಡಿ.ದೇವೇಗೌಡ Vs ಡಿ.ಕೆ.ಶಿವಕುಮಾರ್ ಮೇಕೆದಾಟು ಜಟಾಪಟಿ
Active Politics: ನಾನು ಎಂದೂ ಮಂಡ್ಯ ಕ್ಷೇತ್ರ ಬಿಡುವುದಿಲ್ಲ: ಮಾಜಿ ಸಂಸದೆ ಸುಮಲತಾ
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.