ಎಸ್‌ಡಿಎಂ ಪ್ರೌಢಶಾಲೆ: ಇವಿಎಂ ಬಳಸಿ ಮತದಾನ
Team Udayavani, Jul 1, 2018, 12:59 PM IST
ಬೆಳ್ತಂಗಡಿ : ಮಕ್ಕಳಲ್ಲಿ ಚುನಾವಣೆಯ ಕುರಿತು ಅರಿವು ಮೂಡಿಸುವ ಹಿನ್ನೆಲೆಯಲ್ಲಿ ಬ್ಯಾಲೆಟ್ ಉಪಯೋಗಿಸಿ ವಿದ್ಯಾರ್ಥಿ ಸಂಘದ ಪದಾಧಿಕಾರಿಗಳನ್ನು ಆರಿಸುವುದು ಈಗ ಸಾಮಾನ್ಯ. ಆದರೆ ಉಜಿರೆ ಎಸ್ ಡಿಎಂ ಅನುದಾನಿತ ಪ್ರೌಢಶಾಲೆ ಈ ನಿಟ್ಟಿನಲ್ಲಿ ಒಂದು ಹೆಜ್ಜೆ ಮುಂದಿಟ್ಟು ಎಲೆಕ್ಟ್ರಾನಿಕ್ ವೋಟಿಂಗ್ ಮೆಷಿನ್ ಬಳಕೆ ಮಾಡಿ ಶಾಲಾ ನಾಯಕರನ್ನು ಆರಿಸಿದೆ.
ಎಸ್‌ಡಿಎಂ ಪೊಲಿಟೆಕ್ನಿಕ್ ಇನ್ನೋವೇಶನ್ ಕ್ಲಬ್ ತಯಾರಿಸಿದ ಇವಿಎಂ ಮೂಲಕ ಶುಕ್ರವಾರ ಚುನಾವಣೆ ನಡೆದಿದೆ. ಎಸ್‌ಡಿಎಂ ಡಿಪ್ಲೊಮಾ ಕಾಲೇಜಿನ ಪ್ರಾಧ್ಯಾಪಕರಾದ ಸಂಪತ್‌ಕುಮಾರ್ ಹಾಗೂ ನಿಕಿತ್ ಡಿ.ಆರ್. ನೇತೃತ್ವ ವಹಿಸಿದ್ದರು. ವಿದ್ಯಾರ್ಥಿಗಳು ಸರತಿ ಸಾಲಿನಲ್ಲಿ ಬಂದು ತಮ್ಮ ಶಾಲಾ ಗುರುತಿನ ಚೀಟಿ ಪ್ರದರ್ಶಿಸಿ ಮತದಾನ ಕಾರ್ಯದಲ್ಲಿ ಪಾಲ್ಗೊಂಡಿದ್ದರು.
ಚುನಾವಣಾ ಆಯೋಗದ ಮಾದರಿಯ ಹಾಗೂ ಪರಿಸರ ಸ್ನೇಹಿ ವಿಧಾನದ ಮೂಲಕ ಮತದಾನ ನಡೆಸಿದ್ದೇವೆ. ಸಮಯ ಉಳಿತಾಯ, ಪೇಪರ್ ಮಿತವಾದ ಬಳಕೆಯ ಜತೆಗೆ ಮಕ್ಕಳಲ್ಲಿ ಮತದಾನದ ಜಾಗೃತಿಯ ದೃಷ್ಟಿಯಿಂದ ಈ ಪ್ರಯತ್ನ ಮಾಡಲಾಗಿದೆ ಎಂದು ಶಾಲೆಯ ಚುನಾವಣಾಧಿಕಾರಿ ರಮೇಶ್ ಮಯ್ಯ ತಿಳಿಸಿದ್ದಾರೆ.
ಮೊದಲು ನಾವು ಚೀಟಿಯನ್ನು ಬಳಸಿ ವೋಟು ಮಾಡುತ್ತಿದ್ದೆವು. ಆದರೆ ನಮ್ಮ ಶಾಲೆಯಲ್ಲಿ ಮೊದಲ ಬಾರಿಗೆ ಇವಿಎಂ ಬಳಸಲಾಗಿದೆ ಎಂದು ವಿದ್ಯಾರ್ಥಿಗಳು ಸಂತಸ ವ್ಯಕ್ತಪಡಿಸಿದ್ದಾರೆ. ಕಾರ್ಯಕ್ರಮವನ್ನು ಎಸ್‌ಡಿಎಂ ಟ್ರಸ್ಟಿನ ಕಾರ್ಯ ನಿರ್ವಹಣಾಧಿಕಾರಿ ಶಶಿಧರ್ ಶೆಟ್ಟಿ, ಸೋಮಶೇಖರ್ ಶೆಟ್ಟಿ ಉದ್ಘಾಟಿಸಿದರು.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
MUST WATCH
ಹೊಸ ಸೇರ್ಪಡೆ
BJP Politics: ಬಿ.ಎಸ್.ಯಡಿಯೂರಪ್ಪ ಅಖಾಡಕ್ಕೆ!; ಒಳಜಗಳ ಬಿಟ್ಟು ಒಗ್ಗಟ್ಟಿನ ಹೆಜ್ಜೆ ಹಾಕೋಣ
Dinner Politics: ಸಿದ್ದರಾಮಯ್ಯ ಬಣದಿಂದ ಡಿ.ಕೆ.ಶಿವಕುಮಾರ್‌ರತ್ತ “ಗುರಿ’!
Protest Happy Ending: “ಆಶಾ’ ಕಾರ್ಯಕರ್ತೆಯರ ಗೌರವಧನ 2 ಸಾವಿರ ರೂ. ಏರಿಕೆ
Daily Horoscope: ಬಹುದಿನದ ಅಪೇಕ್ಷೆಯೊಂದು ಕೈಗೂಡಿದ ಆನಂದ, ಶುಭ ಸಮಾಚಾರ
New Method: ಕಾಣೆಯಾದ ಹೋರಿ ಹುಡುಕಲು “ಜಿಪಿಎಸ್’!
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.