ಭದ್ರತೆಯ ಅಪಾಯ: ಮನೆ ಸ್ಥಳಾಂತರ ಆರಂಭ
Team Udayavani, Oct 26, 2018, 10:43 AM IST
ಉಪ್ಪಿನಂಗಡಿ: ಸತತವಾಗಿ ಮಳೆ ಸುರಿದರೆ ಯಾವ ಬೆಟ್ಟವೂ ಭದ್ರವಲ್ಲ ಎಂಬ ಸತ್ಯ ಈ ಬಾರಿಯ ಮಳೆಗಾಲದಲ್ಲಿ ಗೋಚರಿಸಿದ ಫಲವಾಗಿ ಎತ್ತರೆತ್ತರದಲ್ಲಿ ತಲೆ ಎತ್ತಿರುವ ಕಟ್ಟಡಗಳು ಅಪಾಯದ ಅಂಚಿಗೆ ಸಿಲುಕಿವೆ. ಲಕ್ಷಾಂತರ ರೂ. ಬೆಲೆಬಾಳುವ ಕಟ್ಟಡಗಳು ಧರಾಶಾಯಿಯಾಗುವುದನ್ನು ತಪ್ಪಿಸಲು ಕಟ್ಟಡಗಳನ್ನೇ ಸ್ಥಳಾಂತರಿಸುವ ತಂತ್ರಜ್ಞಾನಕ್ಕೆ ಜನ ಮೊರೆ ಹೋಗುತ್ತಿದ್ದು, ಉಪ್ಪಿನಂಗಡಿಯಲ್ಲಿ ಮನೆಯೊಂದನ್ನು ಸ್ಥಳಾಂತರಿಸುವ ಕಾರ್ಯ ಚಾಲನೆಯಲ್ಲಿದೆ.
ಉಪ್ಪಿನಂಗಡಿ ಮಠ ಎಂಬಲ್ಲಿ ಬಾವ ಕುಂಞಿ ಅವರ ಒಂದು ಮಹಡಿಯ ಸುಮಾರು 2,800 ಚದರ ಅಡಿ ವಿಸ್ತೀರ್ಣದ ಮನೆ ಗುಡ್ಡ ಪ್ರದೇಶದಲ್ಲಿದೆ. ಮನೆಯ ಕೆಳಭಾಗಕ್ಕೆ ಹಾನಿ ಆಗ ಬಾರದೆಂದು ಸುಮಾರು 15 ಲಕ್ಷ ರೂ. ವೆಚ್ಚದಲ್ಲಿ ಭದ್ರವಾದ ತಡೆಗೋಡೆಯನ್ನು ನಿರ್ಮಿಸಲಾಗಿತ್ತು. ಆದರೆ, ಈ ಬಾರಿಯ ಮಳೆಗಾಲದಲ್ಲಿ ಸುರಿದ ಭಾರೀ ಮಳೆಯ ಪರಿಣಾಮ ತಡೆಗೋಡೆಯೇ ಒಂದು ಅಡಿಯಷ್ಟು ವಾಲಿಕೊಂಡು ಮನೆಯೂ ಅಪಾಯಕ್ಕೆ ತುತ್ತಾಗುವ ಸಾಧ್ಯತೆ ಕಂಡು ಬಂದಿತ್ತು. ತಡೆಗೋಡೆ ವಾಲಿಕೊಂಡು ಬಿದ್ದರೆ ಕೆಳಭಾಗದ ಮನೆಯೂ ಸಂಪೂರ್ಣ ಹಾನಿಯಾಗುವ ಭೀತಿ ಒಂದೆಡೆಯಾದರೆ, ಜೀವಮಾನದ ಕನಸಿನ ಸೌಧ ಕುಸಿದರೆ ಎಲ್ಲವೂ ನಾಶವಾಗುವ ಸಂಕಷ್ಟ ಇನ್ನೊಂದೆಡೆ.
ಈ ಎಲ್ಲ ಅಪಾಯವನ್ನು ತಪ್ಪಿಸುವ ಸಲುವಾಗಿ ಮನೆ ಮಾಲಕ ಬಾವ ಕುಂಞಿ ಅವರು ಮನೆಯ ಸ್ಥಳವನ್ನು ತಗ್ಗಿಸಿ, ಸ್ಥಳಾಂತರಗೊಳಿಸುವ ಯೋಜನೆಗೆ ಮುಂದಾದರು. ಹರಿಯಾಣದ ಕಟ್ಟಡ ಸ್ಥಳಾಂತರ ಸಂಸ್ಥೆಯೊಡನೆ ಒಪ್ಪಂದ ಮಾಡಿಕೊಂಡ ಅವರು, ಎರಡು ತಿಂಗಳ ಕಾಲಾವಕಾಶದಲ್ಲಿ ಮನೆಯನ್ನು ತಗ್ಗಿಸಿ ಸ್ಥಳಾಂತರಗೊಳಿಸುವ ಕಾರ್ಯಕ್ಕೆ ಚಾಲನೆ ನೀಡಲಾಗಿದೆ.
ಹರಿಯಾಣದ ಟಿಡಿಬಿ ಸಂಸ್ಥೆ ಹೊಣೆ
ಒಂದು ಮಹಡಿಯ ಮನೆಯನ್ನು 7 ಅಡಿಯಷ್ಟು ಸ್ಥಳಾಂತರಗೊಳಿಸಿ, 10 ಅಡಿಯಷ್ಟು ತಗ್ಗು ಪ್ರದೇಶದಲ್ಲಿ ಯಥಾಸ್ಥಿತಿಯಲ್ಲಿ ಸ್ಥಾಪಿಸಬೇಕಾಗಿದೆ. ಅದಕ್ಕಾಗಿ ಈ ಮನೆಯ ಕರ್ಗಲ್ಲಿನ ಕಲ್ಲಿನ ಅಡಿಪಾಯವನ್ನು ಸಂಪೂರ್ಣವಾಗಿ ತೆಗೆದು, ಪಂಚಾಂಗಕ್ಕೆ ಕಾಂಕ್ರೀಟ್ ಬೀಮ್ ಅಳವಡಿಸಿ, ಸದ್ಯ ಜಾಕ್ ಮೂಲಕ ನಿಲ್ಲಿಸಲಾಗಿದೆ. ಏಳು ಅಡಿಯಷ್ಟು ದೂರದಲ್ಲಿ 10 ಅಡಿ ಆಳಕ್ಕೆ ಸಮತಟ್ಟು ಸ್ಥಳವನ್ನು ನಿರ್ಮಿಸಿ, ಅಲ್ಲಿಗೆ ಮನೆಯನ್ನು ಸ್ಥಳಾಂತರಿಸುವ ಕಾರ್ಯ ಮಾಡಲಾಗುತ್ತಿದೆ. ಹರಿಯಾಣದ ಟಿಡಿಬಿ ಎಂಜಿನಿಯರಿಂಗ್ ಸಂಸ್ಥೆ ಇದರ ಹೊಣೆ ಹೊತ್ತಿದ್ದು, ಪ್ರತಿ ಚದರ ಅಡಿ ವಿಸ್ತೀರ್ಣದ ನೆಲೆಗಟ್ಟಿನ ಆಧಾರದಲ್ಲಿ ಶುಲ್ಕ ವಿಧಿಸಲಾಗುತ್ತಿದೆ.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
MUST WATCH
ದೈವ ನರ್ತಕರಂತೆ ಗುಳಿಗ ದೈವದ ವೇಷ ಭೂಷಣ ಧರಿಸಿ ಕೋಲ ಕಟ್ಟಿದ್ದ ಅನ್ಯ ಸಮಾಜದ ಯುವಕ
ಹಕ್ಕಿಗಳಿಗಾಗಿ ಕಲಾತ್ಮಕ ವಸ್ತುಗಳನ್ನು ತಯಾರಿಸುತ್ತಿರುವ ಪಕ್ಷಿ ಪ್ರೇಮಿ
ಮಂಗಳೂರಿನ ನಿಟ್ಟೆ ವಿಶ್ವವಿದ್ಯಾನಿಲಯದ ತಜ್ಞರ ಅಧ್ಯಯನದಿಂದ ಬಹಿರಂಗ
ಈ ಹೋಟೆಲ್ ಗೆ ಪೂರಿ, ಬನ್ಸ್, ಕಡುಬು ತಿನ್ನಲು ದೂರದೂರುಗಳಿಂದಲೂ ಜನ ಬರುತ್ತಾರೆ
ಹರೀಶ್ ಪೂಂಜ ಪ್ರಚೋದನಾಕಾರಿ ಹೇಳಿಕೆ ವಿರುದ್ಧ ಪ್ರಾಣಿ ಪ್ರಿಯರ ಆಕ್ರೋಶ
ಹೊಸ ಸೇರ್ಪಡೆ
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.